ಮಿಥುನ ರಾಶಿ ಜುಲೈ ತಿಂಗಳ ಭವಿಷ್ಯ; ಆದಾಯಕ್ಕೆ ಕೊರತೆ ಇಲ್ಲ, ಉದ್ಯೋಗ, ವ್ಯಾಪಾರ ಎಲ್ಲವೂ ಸೂಪರ್, ಮತ್ತೇನು ಹೇಳುತ್ತೆ ಮಾಸ ಭವಿಷ್ಯ
ಮಿಥುನ ರಾಶಿ ಜುಲೈ ತಿಂಗಳ ಭವಿಷ್ಯ; ಪ್ರತಿ ತಿಂಗಳ ಆರಂಭದಲ್ಲಿ 'ಮಾಸ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಜ್ಯೋತಿಷ್ಯ ಶಾಸ್ತ್ರವನ್ನು ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಅವರು ಎಲ್ಲ ರಾಶಿಗಳ ಭವಿಷ್ಯವನ್ನು ಅಂಥವರಿಗಾಗಿ ಶ್ರದ್ಧೆಯಿಂದ ಬರೆಯುತ್ತಾರೆ. ಅದನ್ನು ಆಧರಿಸಿದ ಮಿಥುನ ರಾಶಿಯವರ ಜುಲೈ ತಿಂಗಳ ಮಾಸ ಭವಿಷ್ಯ ಹೀಗಿದೆ
(1 / 7)
ಮಿಥುನ ರಾಶಿಯವರಿಗೆ ಜುಲೈ ತಿಂಗಳು ಕೈಯಲ್ಲಿ ಸಾಕಷ್ಟು ಹಣ ಓಡಾಡುತ್ತೆ. ಆದಾಯದಲ್ಲಿ ಕೊರತೆ ಇರದು. ಆದಾಗ್ಯೂ, ದುಡ್ಡಿದೆ ಅಂತ ದುಂದು ವೆಚ್ಚ ಮಾಡಬೇಡಿ. ಸರಳವಾಗಿ ಹೇಳಬೇಕು ಅಂದ್ರೆ ಅನಾವಶ್ಯಕ ಖರ್ಚು ವೆಚ್ಚಗಳನ್ನು ಕಡಿಮೆ ಮಾಡಿರಿ.
(2 / 7)
ಮಿಥುನ ರಾಶಿಯವರ ಪೈಕಿ ವಿವಿಧ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ಅರ್ಹ ಉದ್ಯೋಗಿಗಳಿಗೆ ಉದ್ಯೋಗದಲ್ಲಿ ಭಡ್ತಿ ದೊರೆಯುತ್ತದೆ. ಅಂತರರಾಷ್ಟ್ರೀಯ ಸಂಸ್ಥೆಯಲ್ಲಿ ಕೆಲಸ ಮಾಡುವವರಿಗೆ ಮೇಲಧಿಕಾರಿಗಳಿಂದ ಉತ್ತಮ ಪ್ರಶಂಸೆ ದೊರೆಯುತ್ತದೆ.
(3 / 7)
ಮಿಥುನ ರಾಶಿಯವರು ವೈದ್ಯಕೀಯ ಕ್ಷೇತ್ರಕ್ಕೆ ಬೇಕಾದ ಪೂರಕ ವ್ಯವಸ್ಥೆಯನ್ನು ನೀಡುವ ವ್ಯಾಪಾರದಲ್ಲಿ ತೊಡಗಿಸಿದ್ದರೆ ಅಂಥವರಿಗೆ ಜುಲೈ ತಿಂಗಳು ಲಾಭವಿದೆ.
(4 / 7)
ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವ ಮಿಥುನರಾಶಿಯವರಿಗೆ, ಜುಲೈ ತಿಂಗಳು ಉತ್ತಮ ಆದಾಯ ದೊರೆಯಲಿದೆ. ಲಾಭಾಂಶ ಹೆಚ್ಚಾಗಲಿದೆ.
ಇತರ ಗ್ಯಾಲರಿಗಳು