ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Mercury Transits: ಜೂನ್‌ನಲ್ಲಿ ಎರಡು ಬಾರಿ ಸ್ಥಾನ ಬದಲಿಸಲಿದ್ದಾನೆ ಬುಧ; ಈ ನಾಲ್ಕು ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ

Mercury Transits: ಜೂನ್‌ನಲ್ಲಿ ಎರಡು ಬಾರಿ ಸ್ಥಾನ ಬದಲಿಸಲಿದ್ದಾನೆ ಬುಧ; ಈ ನಾಲ್ಕು ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ

  • Mercury transit 2023: ಜೂನ್‌ ತಿಂಗಳಿನಲ್ಲಿ ಬುಧ ಗ್ರಹವು ಎರಡು ಬಾರಿ ತನ್ನ ಸ್ಥಾನವನ್ನು ಬದಲಿಸಲಿದೆ. ಈ ಬದಲಾವಣೆಯು ಕೆಲವು ರಾಶಿಯವರ ಅದೃಷ್ಟ ಬದಲಾವಣೆಗೆ ಕಾರಣವಾಗಲಿದೆ. ಹಾಗಾದರೆ ಯಾವೆಲ್ಲಾ ರಾಶಿಯವರಿಗೆ ಶುಭವಾಗಲಿದೆ ನೋಡಿ.

ವೈದಿಕ ಜ್ಯೋತಿಷ್ಯದ ಪ್ರಕಾರ, ಪ್ರತಿಯೊಂದು ಗ್ರಹವು ಸಮಯಕ್ಕೆ ಅನುಗುಣವಾಗಿ ತನ್ನ ಸ್ಥಾನ ಪಲ್ಲಟ ಮಾಡುತ್ತದೆ. ಗ್ರಹಗಳ ಈ ಸಂಚಾರವು ರಾಶಿಚಕ್ರದ ಚಿಹ್ನೆಗಳ ಮೇಲೆ ಧನಾತ್ಮಕ ಮತ್ತು ಋಣಾತ್ಮಕ ಪರಿಣಾಮಗಳನ್ನು ಬೀರುತ್ತದೆ. ಜೂನ್‌ನಲ್ಲಿ ಗ್ರಹಗಳ ಚಲನೆಗಳು ಬದಲಾಗಲಿವೆ. ಬುಧವು ಜೂನ್‌ನಲ್ಲಿ ಎರಡು ಬಾರಿ ಸ್ಥಾನಪಲ್ಲಟ ಮಾಡಲಿದೆ. ಬುಧವು ಜೂನ್ 7 ರಂದು ಒಮ್ಮೆ ಸ್ಥಾನಪಲ್ಲಟ ಮಾಡಿದರೆ, ಮತ್ತೊಮ್ಮೆ ಜೂನ್ 24 ರಂದು ಸ್ಥಾನ ಬದಲಿಸದ್ದಾನೆ. ಪ್ರಸ್ತುತ ಬುಧನು ಮೇಷ ರಾಶಿಯಲ್ಲಿದ್ದಾನೆ.
icon

(1 / 6)

ಬುಧ ಗ್ರಹವು ಜೂನ್‌ನಲ್ಲಿ ಎರಡು ಬಾರಿ ಸ್ಥಾನಪಲ್ಲಟವಾಗಲಿದೆ. ಜೂನ್ 7, 2023 ರಂದು 07:45 ಕ್ಕೆ ಮೊದಲು ವೃಷಭ ರಾಶಿಯನ್ನು ಪ್ರವೇಶಿಸಲಿರುವ ಬುಧ, 24ನೇ ಜೂನ್ 2023 ರಂದು ಮಿಥುನ ರಾಶಿಗೆ ಮರು ಪ್ರವೇಶಿಸಲಿದ್ದಾನೆ.
icon

(2 / 6)

ವೃಷಭ: ಜೂನ್ ತಿಂಗಳು ವೃಷಭ ರಾಶಿಯವರಿಗೆ ಅನುಕೂಲಕರವಾಗಿದೆ. ಈ ಅವಧಿಯಲ್ಲಿ ಅನಿರೀಕ್ಷಿತ ಆರ್ಥಿಕ ಲಾಭಗಳು ಸಾಧ್ಯ. ವ್ಯಾಪಾರಸ್ಥರಿಗೆ ವ್ಯಾಪಾರದಲ್ಲಿ ಲಾಭ ಮತ್ತು ನಿರುದ್ಯೋಗಿಗಳಿಗೆ ಹೊಸ ಉದ್ಯೋಗಾವಕಾಶಗಳು ದೊರೆಯಲಿವೆ. ಮತ್ತೊಂದೆಡೆ, ಈಗಾಗಲೇ ಸೇವೆಯಲ್ಲಿರುವವರಿಗೆ ಬಡ್ತಿ ಮತ್ತು ವೇತನ ಹೆಚ್ಚಳ ಸಾಧ್ಯತೆ. 
icon

(3 / 6)

ಮಿಥುನ: ವೃಷಭ ರಾಶಿಯ ನಂತರ ಬುಧ ಮಿಥುನ ರಾಶಿಯನ್ನು ಪ್ರವೇಶಿಸುತ್ತಾನೆ. ಈ ತಿಂಗಳು ನಿಮಗೂ ಅನುಕೂಲಕರವಾಗಿರುತ್ತದೆ. ಈ ಅವಧಿಯಲ್ಲಿ, ನೀವು ವೃತ್ತಿ ಮತ್ತು ವ್ಯವಹಾರದಲ್ಲಿ ಉತ್ತಮ ಲಾಭವನ್ನು ಪಡೆಯುತ್ತೀರಿ. ಎಲ್ಲಾ ಕಾರ್ಯಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸುವಿರಿ. ನೀವು ಉಳಿಸಲು ಮತ್ತು ಹಣವನ್ನು ಗಳಿಸಲು ಸಾಧ್ಯವಾಗುತ್ತದೆ.
icon

(4 / 6)

ಸಿಂಹ: ಸಿಂಹ ರಾಶಿಯವರಿಗೆ ಈ ತಿಂಗಳು ಲಾಭದಾಯಕ. ವೈವಾಹಿಕ ಜೀವನದಲ್ಲಿ ನೀವು ಒಡನಾಟ ಮತ್ತು ಸಂತೋಷವನ್ನು ಪಡೆಯುತ್ತೀರಿ. ಈ ಸಮಯದಲ್ಲಿ ಜೀವನದಲ್ಲಿ ಅನೇಕ ಸಕಾರಾತ್ಮಕ ಬದಲಾವಣೆಗಳು ಸಹ ಆಗುತ್ತವೆ, ಇದರಿಂದ ನಿಮ್ಮ ಮನಸ್ಸು ಸಂತೋಷವಾಗಿರುತ್ತದೆ.
icon

(5 / 6)

ಧನು ರಾಶಿ: ಧನು ರಾಶಿಯವರಲ್ಲಿ ಜೂನ್‌ ತಿಂಗಳಿನಲ್ಲಿ ಧೈರ್ಯ ಮತ್ತು ಶಕ್ತಿ ಹೆಚ್ಚಾಗುತ್ತದೆ. ವಿವಾಹಿತರು ತಮ್ಮ ಜೀವನದಲ್ಲಿ ಸಂತೋಷವನ್ನು ಹೊಂದಿರುತ್ತಾರೆ. ಅವಿವಾಹಿತರಿಗೆ ಕಂಕಣಭಾಗ್ಯ ಕೂಡಿ ಬರಲಿದೆ. 
icon

(6 / 6)

ಇತರ ಗ್ಯಾಲರಿಗಳು