Vastu Tips: ಹಣಕಾಸಿನ ಸಮಸ್ಯೆಯಿಂದ ಕಂಗಾಲಾಗಿದ್ದೀರಾ; ಈ ವಸ್ತುಗಳನ್ನು ಮನೆಯಲ್ಲಿ ಇರಿಸುವುದರಿಂದ ಆರ್ಥಿಕ ಅಭಿವೃದ್ಧಿ ಖಂಡಿತ
ಹಣಕಾಸಿನ ಸಮಸ್ಯೆ ಹಲವರನ್ನು ಕಾಡುವುದು ಸಹಜ. ಕೆಲವೊಮ್ಮೆ ಇದಕ್ಕೆ ಪರಿಹಾರವೇ ಇಲ್ಲವೇ ಅನ್ನಿಸಿ ಬಿಡುತ್ತದೆ. ಆದರೆ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಈ ಐದು ವಸ್ತುಗಳನ್ನು ಮನೆಯಲ್ಲಿಟ್ಟರೆ ಯಾವುದೇ ರೀತಿಯ ಹಣದ ಸಮಸ್ಯೆಗಳು ಎದುರಾಗುವುದಿಲ್ಲ ಎನ್ನಲಾಗುತ್ತದೆ. ಹಾಗಾದರೆ ಆ ಐದು ವಸ್ತುಗಳು ಯಾವುವು ನೋಡಿ.
(1 / 5)
ಕುಬೇರನ ಪ್ರತಿಮೆ: ಕುಬೇರನು ಸಂಪತ್ತಿನ ಅಧಿಪತಿ. ಅವರ ಮೂರ್ತಿಯನ್ನು ಖರೀದಿಸಿ ಮನೆಯ ಉತ್ತರ ಭಾಗದಲ್ಲಿ ಇಟ್ಟರೆ ಹಣದ ಸಮಸ್ಯೆಗಳೆಲ್ಲವೂ ದೂರವಾಗುತ್ತದೆ ಎಂದು ಹೇಳಲಾಗುತ್ತದೆ.
(2 / 5)
ಮನೆಯ ಬಾಗಿಲಿಗೆ ಅಭಿಮುಖವಾಗಿ ಗಣಪತಿ ಕುಳಿತಿರುವಂತೆ ಕಾಣುವ, ಗಣೇಶನ ಮೂರ್ತಿಯನ್ನು ಇಟ್ಟರೆ ಆದಾಯ ಹೆಚ್ಚುತ್ತದೆ ಎಂದು ಹೇಳಲಾಗುತ್ತದೆ.
(3 / 5)
ಶಂಖವು ಲಕ್ಷ್ಮಿಯ ಅತ್ಯಂತ ಪೂಜ್ಯನೀಯ ವಸ್ತುಗಳಲ್ಲಿ ಒಂದಾಗಿದೆ. ಇದನ್ನು ಪೂಜಾ ಕೋಣೆಯಲ್ಲಿ ಇಟ್ಟು ಪೂಜಿಸಿದರೆ ಮನೆಯಲ್ಲಿ ಸಕಲ ಸಂಪತ್ತು ದೊರೆಯುತ್ತದೆ ಎಂದು ಹೇಳಲಾಗುತ್ತದೆ.
(4 / 5)
ತೆಂಗಿನಕಾಯಿಗೆ ಧನಾತ್ಮಕ ಶಕ್ತಿಯನ್ನು ಬಿಡುಗಡೆ ಮಾಡುವ ಸಾಮರ್ಥ್ಯವಿದೆ. ತೆಂಗಿನಕಾಯಿಯನ್ನು ಮನೆ ಅಥವಾ ಕೆಲಸ ಮಾಡುವ ಸ್ಥಳದಲ್ಲಿ ಸದಾ ಇಟ್ಟುಕೊಂಡರೆ ಹಣದ ಸಮಸ್ಯೆ ದೂರವಾಗುತ್ತದೆ ಎಂದು ಹೇಳಲಾಗುತ್ತದೆ.
ಇತರ ಗ್ಯಾಲರಿಗಳು