Tomorrow Horoscope: ಕೋಪದ ಕೈಗೆ ಬುದ್ಧಿ ಕೊಡಬೇಡಿ, ಪಡೆದ ಸಾಲ ತೀರಿಸಿದರೆ ನೆಮ್ಮದಿ ಖಚಿತ; ನಾಳಿನ ದಿನಭವಿಷ್ಯ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Tomorrow Horoscope: ಕೋಪದ ಕೈಗೆ ಬುದ್ಧಿ ಕೊಡಬೇಡಿ, ಪಡೆದ ಸಾಲ ತೀರಿಸಿದರೆ ನೆಮ್ಮದಿ ಖಚಿತ; ನಾಳಿನ ದಿನಭವಿಷ್ಯ

Tomorrow Horoscope: ಕೋಪದ ಕೈಗೆ ಬುದ್ಧಿ ಕೊಡಬೇಡಿ, ಪಡೆದ ಸಾಲ ತೀರಿಸಿದರೆ ನೆಮ್ಮದಿ ಖಚಿತ; ನಾಳಿನ ದಿನಭವಿಷ್ಯ

  • Tomorrow Horoscope for 26th July: ಪ್ರತಿಯೊಬ್ಬರ ಜೀವನದಲ್ಲಿ ನಾಳೆಯ ದಿನ ಏನೆಲ್ಲ ಸಂಭವಿಸಬಹುದು ಎಂಬುದನ್ನು ಗ್ರಹ ಹಾಗೂ ನಕ್ಷತ್ರಪುಂಜಗಳ ಚಲನೆಯ ಆಧಾರದಲ್ಲಿ ಲೆಕ್ಕಹಾಕಬಹುದು. ಪ್ರತಿ ದಿನ ನಿಮ್ಮ ರಾಶಿ ಭವಿಷ್ಯ ಹೇಗಿದೆ ಎಂದು ಆಸಕ್ತಿಯಿಂದ ನೋಡುವವರಿಗೆ ನಾಳಿನ (ಜುಲೈ 26 ಶುಕ್ರವಾರ) ರಾಶಿಭವಿಷ್ಯ ಇಲ್ಲಿದೆ.

ಜುಲೈ 26ರ ಶುಕ್ರವಾರವು ಕೆಲವು ರಾಶಿಚಕ್ರ ಚಿಹ್ನೆಗಳಿಗೆ ಶುಭವಾಗಲಿದೆ. ಈ ದಿನ ಕೆಲವು ರಾಶಿಚಕ್ರ ಚಿಹ್ನೆಗಳ ಜನರು ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಜುಲೈ 26ರಂದು ಯಾವ ರಾಶಿಚಕ್ರ ಚಿಹ್ನೆಗಳ ರಾಶಿಭವಿಷ್ಯ ಹೇಗಿದೆ ಎಂಬುದನ್ನು ತಿಳಿಯಲು, ಮೇಷ ರಾಶಿಯಿಂದ ಮೀನ ರಾಶಿಯವರೆಗಿನ ನಾಳಿನ ದಿನಭವಿಷ್ಯವನ್ನು ಓದಿ.
icon

(1 / 13)

ಮೇಷರಾಶಿ: ಆರೋಗ್ಯ ವಿಚಾರವಾಗಿ ತುಸು ಕಾಳಜಿ ವಹಿಸಬೇಕು. ಭವಿಷ್ಯದ ಹಿತದೃಷ್ಟಿಯಿಂದ ಈ ಹಿಂದೆ ಹೂಡಿಕೆ ಮಾಡಿದ ಎಲ್ಲಾ ಹಣವು ಇಂದು ಫಲಪ್ರದ ಫಲಿತಾಂಶಗಳನ್ನು ನೀಡುತ್ತವೆ. ಹೊಸ ಸ್ನೇಹಿತರನ್ನು ಪಡೆಯುವ ಸಾಧಯತೆ ಇದೆ. ನಿಮ್ಮ ಪ್ರಿಯತಮೆಯೊಂದಿಗೆ ಭಿನ್ನಾಭಿಪ್ರಾಯ ಉಂಟಾಗಬಹುದು. ಸಂಗಾತಿಗೆ ನಿಮ್ಮ ಸ್ಥಾನವನ್ನು ಅರ್ಥಮಾಡಿಸಲು ನಿಮಗೆ ಕಷ್ಟವಾಗುತ್ತದೆ.
icon

(2 / 13)

ವೃಷಭ ರಾಶಿ: ದೀರ್ಘಕಾಲದ ಅನಾರೋಗ್ಯದಿಂದ ಕೊನೆಗೂ ಮುಕ್ತಿ ಸಿಗಬಹುದು. ಹಣದ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಳ್ಳುವಿರಿ. ಅನಗತ್ಯ ಖರ್ಚು ಭವಿಷ್ಯದ ಮೇಲೆ ಹೇಗೆ ಋಣಾತ್ಮಕ ಪರಿಣಾಮ ಬೀರುತ್ತದೆ ಎಂಬುದು ತಿಳಿಯುತ್ತದೆ. ಪ್ರೀತಿಪಾತ್ರರೊಂದಿಗಿನ ವಾದ ಮಾಡುವುದನ್ನು ತಪ್ಪಿಸಿ. ನಿಮ್ಮ ಉತ್ಸಾಹ ಇಮ್ಮಡಿಗೊಳಿಸಲು ಪ್ರವಾಸಕ್ಕೆ ಹೋಗುವ ಸಾಧ್ಯತೆಯಿದೆ. 
icon

(3 / 13)

ಮಿಥುನ: ಆಧ್ಯಾತ್ಮಿಕ ಮತ್ತು ದೈಹಿಕ ಆರೋಗ್ಯಕ್ಕಾಗಿ ಧ್ಯಾನ ಮತ್ತು ಯೋಗವನ್ನು ಅಭ್ಯಾಸ ಮಾಡಿದರೆ ಉತ್ತಮ. ಯಾರ ನೆರವೂ ಇಲ್ಲದೆ ಹಣ ಗಳಿಸಲು ಸಾಧ್ಯವಿದೆ. ಬಾಕಿ ಉಳಿದಿರುವ ಮನೆ ಕೆಲಸಗಳಿಗಾಗಿ ನಿಮ್ಮ ಸಮಯ ವಿನಿಯೋಗವಾಗಬಹುದು. ನಿಮ್ಮ ಹಳೆಯ ಸ್ನೇಹಿತರನ್ನು ಭೇಟಿಯಾಗಿ ದಿನವನ್ನು ಸ್ಮರಣೀಯವಾಗಿಸುವ ಸಾಧ್ಯತೆ ಇದೆ.
icon

(4 / 13)

ಕರ್ಕಾಟಕ ರಾಶಿ: ಅನಗತ್ಯ ಸಂಘರ್ಷವನ್ನು ತಪ್ಪಿಸಿ. ಅದು ನಿಮ್ಮ ಅನಾರೋಗ್ಯವನ್ನು ಇನ್ನಷ್ಟು ಹದಗೆಡಿಸಬಹುದು. ಕುಟುಂಬದ ಸದಸ್ಯರಿಂದ ನೀವು ಹಣವನ್ನು ಸಾಲವಾಗಿ ಪಡೆದಿದ್ದರೆ, ಅದನ್ನು ಇಂದು ಹಿಂದಿರುಗಿಸುವುದು ಉತ್ತಮ. ಇಲ್ಲದಿದ್ದರೆ ಸಮಸ್ಯೆ ಎದುರಿಸಬೇಕಾಗಬಹುದು. ಪ್ರಿಯತಮೆಯ ಕಠೋರ ಮಾತುಗಳಿಂದ ನಿಮ್ಮ ಮನಸ್ಥಿತಿಯು ವಿಚಲಿತವಾಗಬಹುದು.
icon

(5 / 13)

ಸಿಂಹ ರಾಶಿ: ಸಂಗಾತಿಯೊಂದಿಗೆ ಸಿನಿಮಾ ಅಥವಾ ರಾತ್ರಿಯ ಭೋಜನವು ನಿಮಗೆ ಖುಷಿ ತರಿಸುತ್ತದೆ. ಮನೆಯಲ್ಲಿ ಆಯೋಜಿಸಲಾದ ಕಾರ್ಯಕ್ರಮದಿಂದಾಗಿ ಸಾಕಷ್ಟು ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಇದು ನಿಮ್ಮ ಆರ್ಥಿಕ ಸ್ಥಿತಿ ಮೇಲೆ ಋಣಾತ್ಮಕವಾಗಿ ಪರಿಣಾಮ ಬೀರಬಹುದು. ಕೆಲಸದಲ್ಲಿ ಇಂದು ಎಲ್ಲವೂ ನಿಮ್ಮ ಪರವಾಗಿ ಕಾಣುತ್ತದೆ.
icon

(6 / 13)

ಕನ್ಯಾರಾಶಿ: ಅನಗತ್ಯ ಖರೀದಿಯನ್ನು ತಪ್ಪಿಸಿ. ಅದರ ಬದಲಿಗೆ ಈಗಾಗಲೇ ನೀವು  ಹೊಂದಿರುವುದನ್ನು ಬಳಸಿ. ವಯಸ್ಸಾದವರು ಆರೋಗ್ಯವು ಸ್ವಲ್ಪ ಚಿಂತೆಗೆ ಕಾರಣವಾಗುತ್ತದೆ. ನಿಮ್ಮ ಅಪರಿಮಿತ ಪ್ರೀತಿ ನಿಮ್ಮ ಪ್ರಿಯಕರ ಅಥವಾ ಪ್ರಿಯತಮೆಗೆ ತುಂಬಾ ಮೌಲ್ಯಯುತವಾಗಿದೆ. ಕೆಲಸದಲ್ಲಿ ನಿಮ್ಮ ಪ್ರತಿಸ್ಪರ್ಧಿಗಳು ಅವರ ಕೆಟ್ಟ ಕಾರ್ಯಕ್ಕೆ ತಕ್ಕ ಫಲಿತಾಂಶ ಪಡೆಯುತ್ತಾರೆ.
icon

(7 / 13)

ತುಲಾ ರಾಶಿ: ನಿಮ್ಮನ್ನು ಕಟ್ಟಿಹಾಕುವ ಭಾವನಾತ್ಮಕ ಮನಸ್ಥಿತಿಯಿಂದ ಹೊರಬರಲು ನೀವು ಪ್ರಯತ್ನಿಸಬೇಕು. ನಿಮ್ಮ ಭವಿಷ್ಯವನ್ನು ಸಮೃದ್ಧಗೊಳಿಸಲು ನೀವು ಹಿಂದೆ ಹೂಡಿಕೆ ಮಾಡಿದ ಎಲ್ಲಾ ಹಣವು ಈ ದಿನ ಉತ್ತಮ ಫಲಿತಾಂಶಗಳನ್ನು ತಂದುಕೊಡುತ್ತದೆ. ನಿಮ್ಮ ಸೋಲುಗಳಿಂದ ನೀವು ಪಾಠಗಳನ್ನು ಕಲಿಯಬೇಕು.
icon

(8 / 13)

ವೃಷ್ಚಿಕ ರಾಶಿ: ಒತ್ತಡದ ಕೆಲಸದ ವೇಳಾಪಟ್ಟಿಯು ನಿಮ್ಮ ತಾಳ್ಮೆಯನ್ನು ಪರಿಶೀಲಿಸಬಹುದು. ಹಿಂದೆ ಉಳಿತಾಯ ಮಾಡಿದ್ದರೆ ಈಗಿನ ಪರಿಸ್ಥಿತಿಯನ್ನು ನಿಭಾಯಿಸಲು ನಿಮಗೆ ಸಹಾಯ ಮಾಡುತ್ತಿತ್ತು ಎಂಬುದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುವಿರಿ. ಹೀಗಾಗಿ ಇಂದಿನಿಂದಲೇ ಉಳಿತಾಯ ಯೋಜನೆ ಆರಂಭಿಸಿ ಮತ್ತು ಅತಿಯಾದ ಖರ್ಚು ತಪ್ಪಿಸಿ. 
icon

(9 / 13)

ಧನು ರಾಶಿ: ನಿರಂತರ ಕೆಲಸದ ನಡುವೆ ವಿಶ್ರಾಂತಿ ಪಡೆಯಿರಿ ಪ್ರಯತ್ನಿಸಿ. ತಡರಾತ್ರಿಯವರೆಗೂ ಕೆಲಸ ಮಾಡುವುದನ್ನು ತಪ್ಪಿಸಿ. ಯಾವುದೇ ಬದ್ಧತೆಗೆ ಮುಂದುವರೆಯುವಾಗ ಅದರ ಸಾಧಕ-ಬಾಧಕಗಳನ್ನು ಎಚ್ಚರಿಕೆಯಿಂದ ಪರಾಮರ್ಶಿಸಿ. ಕುಟುಂಬದ ಜವಾಬ್ದಾರಿಯನ್ನು ಮರೆಯಬೇಡಿ. ನಿಮ್ಮ ಸಂಗಾತಿಯೊಂದಿಗೆ ಹೊರಗೆ ಹೋಗುವಾಗ ಸರಿಯಾಗಿ ವರ್ತಿಸಿ.
icon

(10 / 13)

ಮಕರ ರಾಶಿ: ಈ ದಿನ ನಿಮ್ಮ ಆರೋಗ್ಯ ಮತ್ತು ವೈಕ್ತಿಕ ಕೆಲಸಗಳಿಗೆ ಸಾಕಷ್ಟು ಸಮಯ ಪಡೆಯುತ್ತೀರಿ. ಮನರಂಜನೆಗಾಗಿ ಹೆಚ್ಚು ಖರ್ಚು ಮಾಡುವ ನಿಮ್ಮ ಪ್ರವೃತ್ತಿಯನ್ನು ಮತ್ತೊಮ್ಮೆ ಪರಿಶೀಲಿಸಿ. ನಿಮ್ಮ ಯೋಜನೆಗಳಿಗೆ ಅಂಟಿಕೊಳ್ಳುವಂತೆ ನಿಮ್ಮ ಪಾಲುದಾರರನ್ನು ಮನವೊಲಿಸುವಲ್ಲಿ ನಿಮಗೆ ಸಮಸ್ಯೆಗಳು ಎದುರಾಗುತ್ತವೆ. ಟಿವಿಯಲ್ಲಿ ನಿಮಗೆ ಇಷ್ಟವಾಗುವ ಚಲನಚಿತ್ರಗಳು ಮತ್ತು ಕಾರ್ಯಕ್ರಮಗಳನ್ನು ವೀಕ್ಷಿಸಬಹುದು. 
icon

(11 / 13)

ಕುಂಭ: ದೀರ್ಘಾವಧಿಯ ಗುರಿಯೊಂದಿಗೆ ಹೂಡಿಕೆ ಮಾಡಿದರೆ ಗಣನೀಯ ಲಾಭ ಗಳಿಸುವಿರಿ. ಇಂದು ನೀವು ಸೀಮಿತ ತಾಳ್ಮೆಯನ್ನು ಹೊಂದಿರುತ್ತೀರಿ. ಆದರೆ ಬಾಯ್ತಪ್ಪಿ ಬರುವ ಪದಗಳು ನಿಮ್ಮ ಸುತ್ತಲಿನ ಜನರನ್ನು ಅಸಮಾಧಾನಗೊಳಿಸಬಹುದು. ಅಚ್ಚರಿಯ ಸಂದೇಶವು ನಿಮಗೆ ಖುಷಿ ತರುತ್ತದೆ. ನಿಮ್ಮ ಕೆಲಸ ಮತ್ತು ನಿಮ್ಮ ಆದ್ಯತೆಗಳ ಮೇಲೆ ಕೇಂದ್ರೀಕರಿಸಿ.
icon

(12 / 13)

ಮೀನ ರಾಶಿ: ಧಾರ್ಮಿಕ ಸ್ಥಳಕ್ಕೆ ಭೇಟಿ ನೀಡಿ ಧಾರ್ಮಿಕ ಭಾವನೆ ವೃದ್ಧಿಸುವ ಸಂದರ್ಭ ಬರಬಹುದು. ಖರ್ಚುಗಳಲ್ಲಿ ಅನಿರೀಕ್ಷಿತ ಏರಿಕೆಯಿಂದ ಮನಸ್ಸಿನ ಶಾಂತಿಗೆ ಭಂಗ ತರುತ್ತದೆ. ನಿಮ್ಮ ಕುಟುಂಬಕ್ಕೆ ಸರಿಯಾದ ಸಮಯವನ್ನು ಮೀಸಲಿಡಿ. ನೀವು ಅವರ ಬಗ್ಗೆ ಕಾಳಜಿ ವಹಿಸುತ್ತೀರಿ ಎಂದು ಅವರು ಭಾವಿಸಲಿ. ಅವರೊಂದಿಗೆ ನಿಮ್ಮ ಗುಣಮಟ್ಟದ ಸಮಯವನ್ನು ಕಳೆಯಿರಿ. ದೂರು ನೀಡಲು ಯಾವುದೇ ಅವಕಾಶ ನೀಡಬೇಡಿ.
icon

(13 / 13)

ಇತರ ಗ್ಯಾಲರಿಗಳು