ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ತದಿಗೆ ಅಮಾವಾಸ್ಯೆ; ಹನೂರು ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರದಲ್ಲಿ ಮಾದಪ್ಪ ಸ್ವಾಮಿಗೆ ವಿಶೇಷ ಪೂಜೆ, ಚಿನ್ನದ ರಥೋತ್ಸವ- ಚಿತ್ರನೋಟ

ತದಿಗೆ ಅಮಾವಾಸ್ಯೆ; ಹನೂರು ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರದಲ್ಲಿ ಮಾದಪ್ಪ ಸ್ವಾಮಿಗೆ ವಿಶೇಷ ಪೂಜೆ, ಚಿನ್ನದ ರಥೋತ್ಸವ- ಚಿತ್ರನೋಟ

ವೈಶಾಖ ಅಮಾವಾಸ್ಯೆ ನಿಮಿತ್ತ ಚಾಮರಾಜನಗರ ಜಿಲ್ಲೆ ಹನೂರು ಶ್ರೀ ಮಲೆ ಮಹದೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಬುಧವಾರ (ಮೇ 8) ವಿಶೇಷ ಪೂಜೆ ಪುನಸ್ಕಾರಗಳು ನಡೆದವು. ಕರ್ನಾಟಕ ಮತ್ತು ತಮಿಳುನಾಡಿನ ವಿವಿಧ ಭಾಗಗಳ ಭಕ್ತರು ಕ್ಷೇತ್ರಕ್ಕೆ ಆಗಮಿಸಿ ಮಾದಪ್ಪಸ್ವಾಮಿಯ ದರ್ಶನ ಪಡೆದರು. ಆ ಸಂದರ್ಭದ ಚಿತ್ರನೋಟ ಇಲ್ಲಿದೆ.

ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮಲೆ ಮಹದೇಶ್ವರಬೆಟ್ಟದಲ್ಲಿ ಪವಾಡ ಪುರುಷ ಮಾದಪ್ಪನಿಗೆ ಅಮಾವಾಸ್ಯೆ ಹಿನ್ನೆಲೆಯಲ್ಲಿ ವಿವಿಧ ವಿಶೇಷ ಪೂಜೆಗಳು ನಡೆದವು. ಬುಧವಾರ (ಮೇ8) ಬೆಳಗ್ಗೆ ಮಾದಪ್ಪನಿಗೆ ಎಣ್ಣೆ ಮಜ್ಜನ ಸೇವೆ ನಡೆಯಿತು. ಎಣ್ಣೆಮಜ್ಜನ ಸೇವೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಮಾದಪ್ಪನ ದರ್ಶನ ಪಡೆದರು. 
icon

(1 / 6)

ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮಲೆ ಮಹದೇಶ್ವರಬೆಟ್ಟದಲ್ಲಿ ಪವಾಡ ಪುರುಷ ಮಾದಪ್ಪನಿಗೆ ಅಮಾವಾಸ್ಯೆ ಹಿನ್ನೆಲೆಯಲ್ಲಿ ವಿವಿಧ ವಿಶೇಷ ಪೂಜೆಗಳು ನಡೆದವು. ಬುಧವಾರ (ಮೇ8) ಬೆಳಗ್ಗೆ ಮಾದಪ್ಪನಿಗೆ ಎಣ್ಣೆ ಮಜ್ಜನ ಸೇವೆ ನಡೆಯಿತು. ಎಣ್ಣೆಮಜ್ಜನ ಸೇವೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಮಾದಪ್ಪನ ದರ್ಶನ ಪಡೆದರು. (Male Mahadeshwara Temple )

ಅಮಾವಾಸ್ಯೆ ಹಿನ್ನೆಲೆಯಲ್ಲಿ ಸೋಮವಾರದಿಂದಲೇ ಮೈಸೂರು, ರಾಮನಗರ, ಮಂಡ್ಯ, ಬೆಂಗಳೂರು, ತುಮಕೂರು ಸೇರಿ ಕರ್ನಾಟಕದ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಬೆಟ್ಟಕ್ಕೆ ಆಗಮಿಸಿ ಅಲ್ಲೇ ವಾಸ್ತವ್ಯ ಹೂಡಿದ್ದರು. ತಮಿಳುನಾಡಿನ ಸಾವಿರಾರು ಭಕ್ತರೂ ಸ್ಥಳದಲ್ಲಿದ್ದರು.
icon

(2 / 6)

ಹರಕೆ ಹೊತ್ತ ಭಕ್ತರು ತಮ್ಮ ಹರಕೆಗಳನ್ನು ತೀರಿಸಿದರು. ಹರಕೆ ಹೊತ್ತ ಭಕ್ತರು ಬೆಳ್ಳಿರಥ, ಹುಲಿವಾಹನ, ಬಸವ ವಾಹನ, ರುದ್ರಾಕ್ಷಿಮಂಟಪ ಉತ್ಸವಗಳಲ್ಲಿ ಪಾಲ್ಗೊಂಡು ಹರಕೆ ತೀರಿಸಿದರು. ಅಲ್ಲದೇ ಮುಡಿಸೇವೆಯನ್ನು ನೆರವೇರಿಸಿದರು.
icon

(3 / 6)

ಹರಕೆ ಹೊತ್ತ ಭಕ್ತರು ತಮ್ಮ ಹರಕೆಗಳನ್ನು ತೀರಿಸಿದರು. ಹರಕೆ ಹೊತ್ತ ಭಕ್ತರು ಬೆಳ್ಳಿರಥ, ಹುಲಿವಾಹನ, ಬಸವ ವಾಹನ, ರುದ್ರಾಕ್ಷಿಮಂಟಪ ಉತ್ಸವಗಳಲ್ಲಿ ಪಾಲ್ಗೊಂಡು ಹರಕೆ ತೀರಿಸಿದರು. ಅಲ್ಲದೇ ಮುಡಿಸೇವೆಯನ್ನು ನೆರವೇರಿಸಿದರು.

ಕೆಲವು ಭಕ್ತರು ದೇವಸ್ಥಾನದ ಅಂಗಣದಲ್ಲಿ ಉರುಳುಸೇವೆಯನ್ನೂ ನೆರವೇರಿಸಿದರು. 
icon

(4 / 6)

ಕೆಲವು ಭಕ್ತರು ದೇವಸ್ಥಾನದ ಅಂಗಣದಲ್ಲಿ ಉರುಳುಸೇವೆಯನ್ನೂ ನೆರವೇರಿಸಿದರು. 

ವೈಶಾಖ ಅಮಾವಾಸ್ಯೆ ನಿಮಿತ್ತ ಮಾದಪ್ಪ ಸ್ವಾಮಿಯ ಚಿನ್ನದ ರಥೋತ್ಸವವೂ ನಡೆಯಿತು.
icon

(5 / 6)

ವೈಶಾಖ ಅಮಾವಾಸ್ಯೆ ನಿಮಿತ್ತ ಮಾದಪ್ಪ ಸ್ವಾಮಿಯ ಚಿನ್ನದ ರಥೋತ್ಸವವೂ ನಡೆಯಿತು.

ವಿವಿಧೆಡೆಯಿಂದ ಮಾದಪ್ಪನ ದರ್ಶನಕ್ಕೆ ಆಗಮಿಸಿದ್ದ ಭಕ್ತರು ಸರತಿ ಸಾಲಿನಲ್ಲಿ ನಿಂತುದೇವರ ದರ್ಶನ ಪಡೆದರು. ಭಕ್ತರು ಮಾದಪ್ಪನ ಗೀತೆಗಳನ್ನು ಹಾಡಿ ಉಘೇ ಮಾದಪ್ಪ ಎಂದು ಜೈಕಾರ ಹಾಕಿ ಭಕ್ತಿಮೆರೆದರು. ಬುಧವಾರ ಅಮಾವಾಸ್ಯೆ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದಲೇ ದೇವಸ್ಥಾನದಲ್ಲಿ ಮಾದಪ್ಪನಿಗೆ ವಿವಿಧ ಅಭಿಷೇಕ, ವಿಶೇಷ ಪೂಜಾ ಕಾರ್ಯಗಳು ಜರುಗಿದವು.
icon

(6 / 6)

IPL_Entry_Point

ಇತರ ಗ್ಯಾಲರಿಗಳು