Rajayoga : ಇಂದು ಧನು ಸಂಕ್ರಾಂತಿ, ಈ 5 ರಾಶಿಯವರಿಗೆ ಸೂರ್ಯದೇವನ ಆಶೀರ್ವಾದ ಮತ್ತು ಡಬಲ್ ರಾಜಯೋಗದ ಶುಭಫಲ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸೂರ್ಯದೇವನು ಇಂದು (ಡಿ.16) ಧನುರಾಶಿಗೆ ಪ್ರವೇಶಿಸುತ್ತಾನೆ. ಈ ಸಂಕ್ರಮಣ ಕಾಲಘಟ್ಟವನ್ನು ಧನು ಸಂಕ್ರಾಂತಿ ಎಂದು ಕರೆಯಲಾಗುತ್ತದೆ. ಸೂರ್ಯನ ಈ ಸಂಕ್ರಮಣದ ಕಾರಣ ಎರಡು ರಾಜಯೋಗಗಳು ಸಂಭವಿಸುತ್ತಿದ್ದು, ಇದರ ಸಂಪೂರ್ಣ ಪ್ರಯೋಜನವಾಗವುದು ಈ 5 ರಾಶಿಯವರಿಗೆ ನೋಡಿ.
(1 / 7)
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸೂರ್ಯದೇವನು ಇಂದು (ಡಿಸೆಂಬರ್ 16) ಅಪರಾಹ್ನ 3.47 ಕ್ಕೆ ಧನು ರಾಶಿಯಲ್ಲಿ ಸಂಕ್ರಮಿಸಲಿದ್ದಾನೆ. ಈ ಕಾಲಘಟ್ಟವನ್ನು ಧನು ಸಂಕ್ರಾಂತಿ ಎಂದು ಗುರುತಿಸಲಾಗಿದೆ. ಸೂರ್ಯದೇವನ ಈ ಸಂಕ್ರಮಣದಿಂದ ಎರಡು ಮಂಗಳಕರ ರಾಜಯೋಗಗಳು ರೂಪುಗೊಳ್ಳುತ್ತಿವೆ. ಮೊದಲನೇಯದು ಸೂರ್ಯನು ಈಗಾಗಲೇ ಧನು ರಾಶಿಯಲ್ಲಿರುವ ಬುಧನೊಂದಿಗೆ ಬುಧಾದಿತ್ಯ ರಾಜಯೋಗ ರಚಿಸಿದ್ದಾನೆ. ಇಂದು ಸೂರ್ಯನ ಸಂಕ್ರಮಣದ ಸಮಯದಲ್ಲಿ, ಮೇಷದಲ್ಲಿ ಸ್ಥಿತನಾದ ಗುರುವು ಸೂರ್ಯನನ್ನು 9ನೇ ಭಾಗದಿಂದ ನೋಡಿದಾಗ ರಾಜಲಕ್ಷಣ ರಾಜಯೋಗವು ರೂಪುಗೊಳ್ಳುತ್ತದೆ. ವರ್ಷಾಂತ್ಯದ ಈ ಡಬಲ್ ರಾಜಯೋಗದ ಶುಭಫಲ ಈ 5 ರಾಶಿಯವರಿಗೆ ಸಿಗುತ್ತಿದೆ.
(2 / 7)
ಮೇಷ ರಾಶಿ: ಸೂರ್ಯ ಸಂಚಾರದ ಕಾರಣ ಈ ರಾಶಿಯವರ ಬದುಕಿನಲ್ಲಿ ಯಶಸ್ಸಿನ ಅವಧಿ ಶುರುವಾಗುತ್ತದೆ. ಧಾರ್ಮಿಕ ಚಟುವಟಿಕೆಗಳಲ್ಲಿ ಆಸಕ್ತಿ ಹೆಚ್ಚುವುದಲ್ಲದೆ, ವೃತ್ತಿ ಸಂಬಂಧಿತ ಯೋಜನೆಗಳು ಯಶಸ್ವಿಯಾಗಲಿವೆ. ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ, ಸ್ಪರ್ಧೆಗಳಲ್ಲಿ ಯಶಸ್ಸು, ಉದ್ಯೋಗಾರ್ಥಿಗಳಿಗೆ ವಿದೇಶ ಪ್ರವಾಸ ಯೋಗ ಉಂಟಾಗಲಿದೆ, ಶಿಕ್ಷಕ ವೃತ್ತಿಯಲ್ಲಿರುವವರಿಗೂ ಮಂಗಳಕರ ಯೋಗವಿದ್ದು, ಹೊಸ ಸಾಧನೆ ಮೂಲಕ ಆತ್ಮವಿಶ್ವಾಸ ಹೆಚ್ಚಲಿದೆ.
(3 / 7)
ಸಿಂಹ ರಾಶಿ : ಸೂರ್ಯ ಸಂಚಾರದಿಂದಾಗಿ ಈ ರಾಶಿಯವರ ಸಂಪತ್ತು ವೃದ್ಧಿಯಾಗುವುದಲ್ಲದೆ, ಸಮಾಜದಲ್ಲಿ ಪ್ರತಿಷ್ಠೆ ಹೆಚ್ಚಾಗುತ್ತದೆ. ಶಿಕ್ಷಣ ಪಡೆಯುವವರಾಗಿದ್ದರೆ, ಸಂಶೋಧಕರಾಗಿದ್ದರೆ ಈ ರಾಶಿಯವರ ಅಧ್ಯಯನ ಸುಧಾರಣೆ ಕಾಣುತ್ತದೆ. ಉದ್ಯೋಗದಲ್ಲೂ ನಿರೀಕ್ಷಿತ ಯಶಸ್ಸು ಸಿಗಲಿದೆ. ಉದ್ಯೋಗ ಹುಡುಕುತ್ತಿರುವವರಿಗೆ ಉದ್ಯೋಗ, ಈಗಾಗಲೇ ಉದ್ಯೋಗದಲ್ಲಿರುವವರಿಗೆ ಹೊಸ ಉದ್ಯೋಗದ ಅವಕಾಶವೂ ಸಿಗಬಹುದು.
(4 / 7)
ಧನುರಾಶಿ: ಈ ರಾಶಿಯಲ್ಲಿ ಸೂರ್ಯನ ಸಂಚಾರದ ಶುಭ ಫಲ ಹೆಚ್ಚಿದ್ದು, ಈ ರಾಶಿಯವರಿಗೆ ಜೀವನದಲ್ಲಿ ಅದೃಷ್ಟ ದೇವತೆ ಕಣ್ತೆರೆದು ಆಶೀರ್ವದಿಸಲಿದ್ದಾಳೆ. ಧಾರ್ಮಿಕವಾಗಿ ಒಲವು ಹೆಚ್ಚಲಿದ್ದು, ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಸರ್ಕಾರಿ ನೌಕರಿ ಬಯಸುತ್ತಿದ್ದರೆ, ಸ್ಪರ್ಧಾತ್ಮಕ ಪರೀಕ್ಷೆ ಬರೆದು ಯಶಸ್ವಿಯಾಗುವುದಕ್ಕೆ ಸಾಧ್ಯವಿರುವ ಅವಧಿ ಇದು. ಶಿಕ್ಷಕ ವೃತ್ತಿಯಲ್ಲಿರುವವರಿಗೂ ಪ್ರಗತಿ ಇದೆ.
(5 / 7)
ತುಲಾ ರಾಶಿ: ಧನು ಸಂಕ್ರಮಣದ ಬಳಿಕ ತುಲಾ ರಾಶಿಯವರಲ್ಲಿ ಆತ್ಮವಿಶ್ವಾಸ ಹೆಚ್ಚಲಿದೆ. ಮಾತಿನ ಶೈಲಿ ಸುಧಾರಿಸಲ್ಪಟ್ಟು, ವೃತ್ತಿ ರಂಗದಲ್ಲಿ ಬಯಸಿದ ಫಲಿತಾಂಶವನ್ನೂ ಪಡೆಯುವಿರಿ. ಪ್ರಗತಿಯೂ ಇದೆ, ಧನಾಗಮನವನ್ನೂ ನಿರೀಕ್ಷಿಸಬಹುದು. ಸಂಪತ್ತು ಹೆಚ್ಚಳವಾಗಿ, ಸಮಾಜದಲ್ಲಿ ಪ್ರತಿಷ್ಠೆ ಹೆಚ್ಚಾಗಲಿದೆ.
(6 / 7)
ವೃಶ್ಚಿಕ ರಾಶಿ: ಧನು ಸಂಕ್ರಾಂತಿ ನಂತರದಲ್ಲಿ ವೃಶ್ಚಿಕ ರಾಶಿಯವರಿಗೆ ಬಹಳ ಶುಭಫಲವಿದ್ದು, ಅವಿವಾಹಿತರಿಗೆ ವಿವಾಹ ಯೋಗವೂ ಕೂಡಿಬರಲಿದೆ. ಎರಡು ರಾಜಯೋಗಗಳ ಫಲವಾಗಿ ಆರ್ಥಿಕ ಸ್ಥಿತಿ ಸುಧಾರಣೆಗೊಂಡು, ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಲಿದೆ. ಹೊಸ ಆದಾಯ ಮೂಲ ಸೃಷ್ಟಿಯಾಗಬಹುದು. ಮಾತಿನ ಮೇಲೆ ಹಿಡಿತವಿರಲಿ. ವಾಕ್ಸಮರ ಉಂಟಾದರೆ ಆರೋಗ್ಯ ಸಮಸ್ಯೆಯಾದೀತು.
(7 / 7)
ಈ ಲೇಖನದಲ್ಲಿರುವ ಮಾಹಿತಿಯನ್ನು ನಂಬಬೇಕೆ ಅಥವಾ ಬೇಡವೇ ಎಂಬುದು ಅವರವರ ನಂಬಿಕೆಗಳಿಗೆ ಬಿಟ್ಟ ವಿಚಾರ. ಇಲ್ಲಿ ಉಲ್ಲೇಖಿಸಲಾದ ಎಲ್ಲಾ ಮಾಹಿತಿ ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ಪ್ರವಚನಗಳು / ಧರ್ಮಗಳು / ಧರ್ಮಗ್ರಂಥಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ನಮ್ಮ ಉದ್ದೇಶ. ಸರಳವಾಗಿ ಹೇಳಬೇಕು ಎಂದರೆ ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
ಇತರ ಗ್ಯಾಲರಿಗಳು