Tirumala laddu: 300 ವರ್ಷಗಳ ಇತಿಹಾಸವಿರುವ ತಿರುಮಲ ಲಡ್ಡು ಪ್ರಸಾದ, 7 ಬೆಟ್ಟದೊಡೆಯನ ಪ್ರಸಾದದ ಬಗ್ಗೆ ತಿಳಿದುಕೊಂಡಿರಬೇಕಾದ 7 ವಿಶೇಷಗಳಿವು
Tirumala laddu: ತಿರುಮಲ ಲಡ್ಡು ಪ್ರಸಾದ ಅಥವಾ ತಿರುಪತಿ ಲಡ್ಡು ಪ್ರಸಾದ ಬಹಳ ಪ್ರಸಿದ್ಧವಾದುದು. ಅಂದ ಹಾಗೆ, ಜಗತ್ಪ್ರಸಿದ್ಧವಾದ ತಿರುಮಲ ಲಡ್ಡು ಪ್ರಸಾದಕ್ಕೆ ಸರಿ ಸುಮಾರು 300 ವರ್ಷಗಳ ಇತಿಹಾಸವಿದೆ. 7 ಬೆಟ್ಟದೊಡೆಯನ ಪ್ರಸಾದದ ಬಗ್ಗೆ ತಿಳಿದುಕೊಂಡಿರಬೇಕಾದ 7 ವಿಶೇಷಗಳಿವು.
(1 / 8)
ತಿರುಮಲ ಲಡ್ಡು ಪ್ರಸಾದ ಅಥವಾ ತಿರುಪತಿ ಲಡ್ಡು ಪ್ರಸಾದ ಇಷ್ಟವಾಗದವರು ಯಾರು ಹೇಳಿ. ಲಡ್ಡು ಪ್ರಸಾದ ಬಹಳ ಫೇಮಸ್ಸು. 3 ಶತಮಾನಗಳ ಇತಿಹಾಸವಿರುವ ತಿರುಮಲದ ಲಡ್ಡು ಪ್ರಸಾದ ತಯಾರಿಸುವುದು ಎಲ್ಲಿ, ಯಾರು ತಯಾರಿಸುತ್ತಾರೆ ಎಂಬ ಕುತೂಹಲ ಸಹಜ. ಏಳು ಬೆಟ್ಟದೊಡೆಯನ ಲಡ್ಡು ಪ್ರಸಾದದ ಬಗ್ಗೆ 7 ವಿಶೇಷ ಅಂಶಗಳಿದ್ದು ಅವುಗಳನ್ನು ತಿಳಿಯೋಣ.
(2 / 8)
ಭಾರತದ ದೇವಾಲಯಗಳ ಪ್ರಸಾದಗಳ ಪೈಕಿ ಅತ್ಯಂತ ಪ್ರಸಿದ್ಧವಾದುದು ತಿರುಮಲ ಲಡ್ಡು ಪ್ರಸಾದ ಅಥವಾ ತಿರುಪತಿ ಲಡ್ಡು ಪ್ರಸಾದ. ಇದನ್ನು ತಿರುಮಲದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ತಯಾರಿಸಲಾಗುತ್ತದೆ. ತಿರುಮಲ ಲಡ್ಡು ಪ್ರಸಾದವನ್ನು ಮೊದಲ ಬಾರಿಗೆ 1715ರ ಆಗಸ್ಟ್ 2 ರಂದು ಭಕ್ತರಿಗೆ ನೀಡಲಾಯಿತು ಎಂಬ ಉಲ್ಲೇಖವಿದೆ.
(istockphoto)(3 / 8)
ತಿರುಮಲ ಲಡ್ಡು ಪ್ರಸಾದ ರುಚಿಗೆ ಹೆಸರುವಾಸಿ. ಕಾರಣ ಲಡ್ಡು ಪ್ರಸಾದವನ್ನು ತಯಾರಿಸಲು ಬಳಸುವ ಪದಾರ್ಥಗಳು ಮತ್ತು ತಯಾರಿಸುವ ವಿಧಾನ. ತಿರುಪತಿ ಲಡ್ಡು ಪ್ರಸಾದವವನ್ನು ಬಹಳ ಮುತುವರ್ಜಿಯಿಂದ ಮತ್ತು ಪರಿಶುದ್ಧವಾಗಿ ತಯಾರಿಸಲಾಗುತ್ತದೆ. ದೇವರಿಗೆ ನೈವೇದ್ಯ ಮಾಡುವ ಪ್ರಸಾದವಾದ ಕಾರಣ ಇದನ್ನು ತಯಾರಿಸುವವರು ಕೂಡ ತುಂಬ ಸ್ವಚ್ಛತೆಯನ್ನು ಕಾಪಾಡುತ್ತಾರೆ. ನಿರ್ದಿಷ್ಟ ರೀತಿಯ ಅನುಷ್ಠಾನಗಳನ್ನು ಪಾಲಿಸುತ್ತಾರೆ.
(istockphoto)(4 / 8)
ತಿರುಪತಿಗೆ ಹೋದರೆ ಅಂದರೆ ಸಾಕು, ಲಡ್ಡು ಪ್ರಸಾದ ಎಲ್ಲಿ ಎಂದು ಕೇಳುವಷ್ಟರ ಮಟ್ಟಿಗೆ, ತಿರುಮಲ ಲಡ್ಡು ಪ್ರಪಂಚದಾದ್ಯಂತ ಪ್ರಸಿದ್ಧವಾಗಿದೆ. ತಿರುಮಲಕ್ಕೆ ಹೋಗಿ ತಿಮ್ಮಪ್ಪನ ದರ್ಶನ ಪಡೆದರೆ, ಪ್ರಸಾದವಾಗಿ ಮನೆಗೆ ತಿರುಪತಿ ಲಡ್ಡು ಪ್ರಸಾದವನ್ನು ತರಲೇಬೇಕು. ತಿರುಮಲದಲ್ಲಿ ಲಡ್ಡು ಪ್ರಸಾದವನ್ನು ಉಚಿತವಾಗಿ ಕೊಡುತ್ತಾರೆ. ಅದರೂ, ಹೆಚ್ಚುವರಿ ಲಡ್ಡು ಪ್ರಸಾದ ಬೇಕು ಎನ್ನುವವರು ಟೋಕನ್ ಖರೀದಿಸಿ ಪ್ರಸಾದವನ್ನು ಪಡೆಯುತ್ತಾರೆ. ತಿರುಮಲ ಲಡ್ಡು ಪ್ರಸಾದಕ್ಕೆ 2014 ರಲ್ಲಿ ಭೌಗೋಳಿಕ ಸೂಚಕಗಳ ಟ್ಯಾಗ್ ಅಥವಾ ಜಿಐ ಟ್ಯಾಗ್ ಸಿಕ್ಕಿತು. ತಿರುಮಲ ಲಡ್ಡು ಪ್ರಸಾದ ತಯಾರಿಕೆ ತಿರುಮಲದಲ್ಲಷ್ಟೇ ಎಂದು ಇದರ ಅರ್ಥ,
(istockphoto)(5 / 8)
ತಿರುಮಲ ಲಡ್ಡು ಪ್ರಸಾದ ಅಥವಾ ತಿರುಪತಿ ಲಡ್ಡು ಪ್ರಸಾದ ತಯಾರಿಸಲು ವಿಶೇಷ ವಿಧಾನವಿದೆ. ಇದಕ್ಕೆ ವಿಶೇಷ ಪದಾರ್ಥಗಳನ್ನು ಬಳಸಲಾಗುತ್ತದೆ. ಕಡಲೆ ಹಿಟ್ಟು, ಸಕ್ಕರೆ, ತುಪ್ಪ, ಒಣದ್ರಾಕ್ಷಿ, ಗೋಡಂಬಿ, ಏಲಕ್ಕಿ ಮತ್ತು ಇತರ ಪದಾರ್ಥಗಳನ್ನು ಬಳಸಿ ಲಡ್ಡು ತಯಾರಿಸಲಾಗುತ್ತದೆ, ಕರ್ನಾಟಕದ ಕೆಎಂಎಫ್ ಕೂಡ ತಿರುಮಲಕ್ಕೆ ನಂದಿನಿ ತುಪ್ಪವನ್ನು ಪೂರೈಸುತ್ತದೆ ಎಂಬುದನ್ನು ನೆನಪಿಸಿಕೊಳ್ಳಬಹುದು.
(istockphoto)(6 / 8)
ತಿರುಮಲ ಲಡ್ಡು ಪ್ರಸಾದದಲ್ಲಿ ಮೂರು ವಿಧ, ಕಲ್ಯಾಣಂ ಲಡ್ಡು, ಆಸ್ಥಾನಂ ಲಡ್ಡು ಮತ್ತು ಪ್ರಸಾದಂ ಲಡ್ಡು. ಲಡ್ಡುವನ್ನು ಮೂಲತಃ "ಬೂಂದಿ" ಎಂದು ಕರೆಯಲಾಗುತ್ತಿತ್ತು. 1940 ರಲ್ಲಿ ಬೂಂದಿಯನ್ನು ಉಂಡೆ ಕಟ್ಟಿ ಲಡ್ಡು ಪ್ರಸಾದವನ್ನಾಗಿ ಪರಿವರ್ತಿಸಲಾಯಿತು. ಲಡ್ಡು ಪ್ರಸಾದ ತಯಾರಿಕೆಗೆ ಅಗತ್ಯವಿರುವ ಪದಾರ್ಥಗಳನ್ನು ವಿಶೇಷವಾಗಿ ಆಯ್ಕೆ ಮಾಡಲಾಗುತ್ತದೆ.
(istockphoto)(7 / 8)
ಲಡ್ಡು ಪ್ರಸಾದ ತಯಾರಿಸುವ ಪರಿಣತರನ್ನೇ ಟಿಟಿಡಿ ನೇಮಕ ಮಾಡಿಕೊಂಡಿದೆ. ಪ್ರತಿ ನಿತ್ಯ ಇಲ್ಲಿ ಲಡ್ಡು ಪ್ರಸಾದ ದೇವರಿಗೆ ನೈವೇದ್ಯವಾಗಿ ಸಮರ್ಪಿಸಲಾಗುತ್ತದೆ. ಲಡ್ಡು ಪ್ರಸಾದ ತಿರುಮಲದಲ್ಲಿ ವಿಶೇಷ. ಭಕ್ತರು ಇದನ್ನು ಬಹಳ ಪವಿತ್ರ ಭಾವನೆಯಿಂದ ಸ್ವೀಕರಿಸುತ್ತಾರೆ.
(istockphoto)(8 / 8)
ಪಲ್ಲವ ರಾಜವಂಶದ ಅವಧಿಯಲ್ಲಿ ತಿರುಮಲ ಪ್ರಸಾದವನ್ನು ಪ್ರಾರಂಭಿಸಲಾಯಿತು ಎಂದು ಇತಿಹಾಸ ಹೇಳುತ್ತದೆ. ಆ ಸಮಯದಲ್ಲಿ ಇದನ್ನು "ತಿರುಪೊಂಗಂ" ಎಂದು ಕರೆಯಲಾಗುತ್ತಿತ್ತು, ನಂತರ ಇದನ್ನು "ಮನೋಹರಂ" ಎಂದು ಕರೆಯಲಾಯಿತು. 1940 ರ ದಶಕದಲ್ಲಿ, ಪ್ರಸಾದವನ್ನು ಲಡ್ಡುಗಳ ರೂಪದಲ್ಲಿ ತಯಾರಿಸಿ ವಿತರಿಸಲಾಗುತ್ತಿತ್ತು. ಅಲ್ಲಿಂದೀಚೆಗೆ ಲಡ್ಡು ಪ್ರಸಾದವೇ ಚಾಲ್ತಿಯಲ್ಲಿದೆ.
(istockphoto)ಇತರ ಗ್ಯಾಲರಿಗಳು