Surya Blessings: ಇಂದು ರವಿವಾರ, ಸೂರ್ಯ ದೇವನ ಆಶೀರ್ವಾದದಿಂದ ಈ 3 ರಾಶಿಯವರಿಗೆ ಅದೃಷ್ಟದ ಸುರಿಮಳೆ
ಸೂರ್ಯ ಭಗವಂತನ ಸಂಚಾರದ ಫಲವಾಗಿ ಕೆಲವು ರಾಶಿಯವರಿಗೆ ಶುಭ ಫಲವಿದೆ. ಸೂರ್ಯದೇವನು ಡಿ.16ರಂದು ಮತ್ತೆ ಸ್ಥಾನ ಪಲ್ಲಟ ಮಾಡಲಿದ್ದು, ಮೂರು ರಾಶಿಯವರ ಅದೃಷ್ಟ ಖುಲಾಯಿಸಲಿದೆ.
(1 / 6)
ನವಗ್ರಹಗಳ ಅಧಿಪತಿಯಾದ ಸೂರ್ಯನೊಂದಿಗೆ ಎಲ್ಲಾ ಗ್ರಹಗಳು ತಟಸ್ಥವಾಗಿ ಕಾರ್ಯನಿರ್ವಹಿಸುತ್ತವೆ ಎಂದು ಹೇಳಲಾಗುತ್ತದೆ. ನವಗ್ರಹಗಳ ಸಂಕ್ರಮಣದಲ್ಲಿ ಭಗವಾನ್ ಸೂರ್ಯನ ಸಂಕ್ರಮಣವನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ.
(2 / 6)
ಸೂರ್ಯ ದೇವನು ತಿಂಗಳಿಗೊಮ್ಮೆ ತನ್ನ ಸ್ಥಾನವನ್ನು ಬದಲಾಯಿಸುತ್ತಾನೆ. ಅನೇಕ ರಾಶಿಚಕ್ರ ಚಿಹ್ನೆಗಳು ಸೂರ್ಯನ ಈ ಸಂಚಾರದಿಂದ ಪ್ರಭಾವಿತವಾಗಿವೆ. ಅಂದಹಾಗೆ ಕಳೆದ ನವೆಂಬರ್ 17 ರಂದು ಸೂರ್ಯ ಭಗವಂತ ವೃಶ್ಚಿಕ ರಾಶಿಗೆ ಪ್ರವೇಶಿಸಿದ್ದಾನೆ. ಆಗ ಕಾರ್ತಿಕ ಮಾಸವೂ ಶುರುವಾಗಿತ್ತು.ಡಿಸೆಂಬರ್ 16 ರಂದು, ಸೂರ್ಯದೇವ ಧನು ರಾಶಿಗೆ ಪ್ರವೇಶಿಸುತ್ತಾರೆ. ಈ ಸ್ಥಾನ ಪಲ್ಲಟದಿಂದ ಎಲ್ಲ ರಾಶಿಯವರ ಮೇಲೆ ಪರಿಣಾಮ ಉಂಟಾಗಲಿದೆ. ಮೂರು ರಾಶಿಯವರಿಗೆ ರಾಜಯೋಗ ಉಂಟಾಗಲಿದೆ.
(3 / 6)
ಮಿಥುನ ರಾಶಿ: ಸೂರ್ಯ ದೇವರು ಈ ರಾಶಿಯಲ್ಲಿ ಏಳನೇ ಮನೆಗೆ ತೆರಳುತ್ತಿದ್ದಾರೆ. ಇದು ಈ ರಾಶಿಯವರ ವೈವಾಹಿಕ ಜೀವನದಲ್ಲಿ ಸಂತೋಷದ ಪರಿಸ್ಥಿತಿಗೆ ಕಾರಣವಾಗುತ್ತದೆ. ಸಂಸಾರದಲ್ಲಿ ನೆಮ್ಮದಿ ಹೆಚ್ಚುತ್ತದೆ. ಪ್ರಗತಿಗೆ ಅವಕಾಶಗಳಿವೆ. ಅವಿವಾಹಿತರಿಗೆ ಶೀಘ್ರದಲ್ಲೇ ವಿವಾಹವಾಗಲಿದೆ. ಜಂಟಿ ಪ್ರಯತ್ನಗಳು ಉತ್ತಮ. ವ್ಯಾಪಾರ ಮತ್ತು ವ್ಯವಹಾರದಲ್ಲಿ ಉತ್ತಮ ಲಾಭವನ್ನು ಪಡೆಯುತ್ತೀರಿ. ಸೂರ್ಯನು ಈ ರಾಶಿಯವರಿಗೆ ಧೈರ್ಯವನ್ನು ನೀಡುತ್ತಾನೆ.
(4 / 6)
ಕನ್ಯಾ ರಾಶಿ: ಈ ರಾಶಿಯ ನಾಲ್ಕನೇ ಮನೆಗೆ ಸೂರ್ಯ ಭಗವಂತ ಸಾಗುತ್ತಾನೆ. ಆಸ್ತಿಗೆ ಸಂಬಂಧಿಸಿದ ಎಲ್ಲ ಸಮಸ್ಯೆಗಳು ದೂರವಾಗುತ್ತವೆ. ಹೊಸ ಮನೆ ಮತ್ತು ವಾಹನವನ್ನು ಖರೀದಿಸುವ ಸಾಧ್ಯತೆ ಹೆಚ್ಚು. ವ್ಯಾಪಾರ ಮತ್ತು ವ್ಯವಹಾರದಲ್ಲಿ ಉತ್ತಮ ಲಾಭವನ್ನು ಪಡೆಯುತ್ತೀರಿ. ಕಚೇರಿಯಲ್ಲಿ ಸಂತಸದ ವಾತಾವರಣ ಇರುತ್ತದೆ. ಪಾಲಕರೊಂದಿಗೆ ಸಂಬಂಧ ಉತ್ತಮವಾಗಿರುತ್ತದೆ. ಇತರರಲ್ಲಿ ಈ ರಾಶಿಯವರ ಕುರಿತಾದ ಗೌರವ ಹೆಚ್ಚಾಗುತ್ತದೆ.
(5 / 6)
ಧನು ರಾಶಿ : ಸೂರ್ಯನು ಈ ರಾಶಿಯ ಮೊದಲ ಮನೆಗೆ ಪ್ರವೇಶಿಸುತ್ತಾನೆ. ಇದು ಈ ರಾಶಿಯವರ ಧೈರ್ಯವನ್ನು ಹೆಚ್ಚಿಸುತ್ತದೆ ಮತ್ತು ಬಹುಕಾಲದ ಆಸೆಯನ್ನು ಪೂರೈಸುತ್ತದೆ. ಹೊಸ ಅವಕಾಶಗಳು ಈ ರಾಶಿಯವರ ದಾರಿಗೆ ಬರಲಿವೆ. ಕುಟುಂಬ ಸದಸ್ಯರ ಬಾಂಧವ್ಯ ಗಟ್ಟಿಯಾಗಲಿದೆ. ಧನು ರಾಶಿಯವರು ಅದೃಷ್ಟದ ಬಲವನ್ನು ಪಡೆಯುತ್ತೀರಿ. ಮಾಡಿದ ಎಲ್ಲ ಕೆಲಸವೂ ಯಶಸ್ವಿಯಾಗುತ್ತದೆ. ವಿದೇಶಕ್ಕೆ ಹೋಗುವ ಸಂಭವವಿದೆ.
(6 / 6)
ಈ ಲೇಖನದಲ್ಲಿರುವ ಮಾಹಿತಿಯನ್ನು ನಂಬಬೇಕೆ ಅಥವಾ ಬೇಡವೇ ಎಂಬುದು ಅವರವರ ನಂಬಿಕೆಗಳಿಗೆ ಬಿಟ್ಟ ವಿಚಾರ. ಇಲ್ಲಿ ಉಲ್ಲೇಖಿಸಲಾದ ಎಲ್ಲಾ ಮಾಹಿತಿ ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ಪ್ರವಚನಗಳು / ಧರ್ಮಗಳು / ಧರ್ಮಗ್ರಂಥಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ನಮ್ಮ ಉದ್ದೇಶ. ಸರಳವಾಗಿ ಹೇಳಬೇಕು ಎಂದರೆ ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
ಇತರ ಗ್ಯಾಲರಿಗಳು