ಇವರು ಆಂಜನೇಯನ ಒಲುಮೆ ಪಡೆದವರು, ಹನುಮಾನ್ ಚಾಲೀಸಾ ಪಠಣದಿಂದ ಹನುಮಂತನ ಸಂಪ್ರೀತಗೊಳಿಸಬಲ್ಲರು, ನೀವೂ ಈ ರಾಶಿಯವರಾ ಮತ್ತೆ!
Hanuman Favorite Rashi; ಹನುಮಂತನನ್ನು ಪೂಜಿಸಲು ಮಂಗಳವಾರ ಅತ್ಯುತ್ತಮ ದಿನ. ಕೆಲವು ರಾಶಿಚಕ್ರದ ಮೇಲೆ ಯಾವಾಗಲೂ ಹನುಮಂತನ ಆಶೀರ್ವಾದ ಸದಾ ಇರುತ್ತದೆ. ಹಾಗಾಗಿಯೇ, ಇವರು ಆಂಜನೇಯನ ಒಲುಮೆ ಪಡೆದವರು, ಹನುಮಾನ್ ಚಾಲೀಸಾ ಪಠಣದಿಂದ ಹನುಮಂತನ ಸಂಪ್ರೀತಗೊಳಿಸಬಲ್ಲರು ಎನ್ನುತ್ತಾರೆ. ಅಂದ ಹಾಗೆ, ನೀವೂ ಈ ರಾಶಿಯವರಾ ಮತ್ತೆ!
(1 / 7)
Hanuman Favourite Rashi; ಕೆಲವರು ರಾಶಿಯವರು ಆಂಜನೇಯನ ಒಲುಮೆ ಪಡೆದವರಾಗಿರುತ್ತಾರೆ. ಸಂಕಷ್ಟ ಎದುರಾದಾಗ ಹನುಮಾನ್ ಚಾಲೀಸಾ ಪಠಿಸಬೇಕು ಎಂದು ಹಿರಿಯರು ಹೇಳುವುದನ್ನು ಪದೇಪದೆ ಕೇಳುತ್ತಿರುತ್ತೇವಲ್ಲ. ಹಾಗೆ, ಅಂತಹ ಹನುಮಾನ್ ಚಾಲೀಸಾ ಪಠಣದಿಂದಲೇ ಅಂಥವರು ಹನುಮಂತನ ಸಂಪ್ರೀತಗೊಳಿಸಬಲ್ಲರು, ಹನುಮಂತನ ಪ್ರಿಯ ರಾಶಿಚಕ್ರದವರು. ಅಂತಹ ರಾಶಿಚಕ್ರಗಳು ಯಾವುವು ಎಂದು ಗಮನಿಸೋಣ.
(2 / 7)
ಹನುಮಂತನನ್ನು ಪೂಜಿಸಲು ಮಂಗಳವಾರ ಸೂಕ್ತ ದಿನ. ಸ್ಕಂದ ಪುರಾಣದ ಪ್ರಕಾರ, ಮಂಗಳವಾರ ಹನುಮಾನ್ ಜನನವಾಯಿತು. ಹೀಗಾಗಿ ಇಂದಿಗೂ ಜನ ಮಂಗಳವಾರವೇ ಹನುಮಂತನ ಆರಾಧನೆಗೆ ವಿಶೇಷ ಮಹತ್ವ ನೀಡುತ್ತಾರೆ. ಈ ದಿನ ಹನುಮಾನ್ ಚಾಲಿಸಾ ಮತ್ತು ಸುಂದರ ಕಾಂಡ ಪಠಣ ಮಾಡಿದರೆ ಶುಭ ಫಲವಿದೆ ಎಂಬ ನಂಬಿಕೆ ಇದೆ.
(3 / 7)
ಮೇಷ ರಾಶಿ: ಮಂಗಳ ದೇವ (ಮಂಗಳ ಗ್ರಹ) ಮೇಷ ರಾಶಿಯ ಅಧಿಪತಿ. ಮೇಷ ರಾಶಿಯವರು ಯಾರು ಪ್ರತಿ ಮಂಗಳವಾರ ಹನುಮಂತನನ್ನು ಭಕ್ತಿಯಿಂದ ಪೂಜಿಸುತ್ತಾರೋ, ಅಂಥವರ ಎಲ್ಲಾ ಆಸೆಗಳು ಈಡೇರುತ್ತವೆ ಎಂಬ ನಂಬಿಕೆ ಇದೆ. ಅಲ್ಲದೆ, ಮಂಗಳವಾರದಂದು ಹನುಮಂತನನ್ನು ಪೂಜಿಸುವುದರಿಂದ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತವೆ ಮತ್ತು ಅದೃಷ್ಟವನ್ನು ತರುತ್ತವೆ ಎಂದೂ ಆಸ್ತಿಕರು ನಂಬಿದ್ದಾರೆ.
(4 / 7)
ಸಿಂಹ ರಾಶಿ; ಸೂರ್ಯ ದೇವರು ಸಿಂಹ ರಾಶಿಯ ಅಧಿಪತಿ. ಸೂರ್ಯ ದೇವರನ್ನು ಹನುಮಂತ ದೇವರ ಗುರು ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ, ಸಿಂಹ ರಾಶಿಯ ಜನರ ಮೇಲೆ ಹನುಮಾನ್ ದೇವರ ವಿಶೇಷ ಆಶೀರ್ವಾದ ಇದೆ. ಅವರು ಹನುಮಂತನನ್ನು ಪೂರ್ಣ ಹೃದಯದಿಂದ ಪೂಜಿಸಿದರೆ, ಅವರ ಎಲ್ಲಾ ಆಸೆಗಳು ಈಡೇರುತ್ತವೆ. ಅವರ ಜೀವನದಲ್ಲಿನ ಅನೇಕ ಸಮಸ್ಯೆಗಳು ನಿವಾರಣೆಯಾಗುತ್ತವೆ ಎಂಬ ನಂಬಿಕೆ ಇದೆ.
(5 / 7)
ವೃಶ್ಚಿಕ ರಾಶಿ; ಮಂಗಳ ಗ್ರಹವೇ ವೃಶ್ಚಿಕ ರಾಶಿಗೂ ಅಧಿಪತಿ. ಮಂಗಳ ದೇವರು ಅಧಿದೇವತೆ. ವೃಶ್ಚಿಕ ರಾಶಿಯವರು ಯಾವಾಗಲೂ ಹನುಮಂತನ ಆಶೀರ್ವಾದವನ್ನು ಬಯಸುತ್ತಾರೆ. ಆಂಜನೇಯನ ಆಶೀರ್ವಾದದಿಂದ, ಈ ರಾಶಿಚಕ್ರ ಚಿಹ್ನೆಯವರು ಎಲ್ಲದರಲ್ಲೂ ಯಶಸ್ವಿಯಾಗುತ್ತಾರೆ. ಪ್ರತಿ ಮಂಗಳವಾರ ಹನುಮಂತನನ್ನು ಪೂಜಿಸಿದರೆ, ಎಲ್ಲಾ ಅಡೆತಡೆಗಳು ನಿವಾರಣೆಯಾಗುತ್ತವೆ ಎನ್ನುತ್ತಾರೆ ಜ್ಯೋತಿಷ್ಯ ಶಾಸ್ತ್ರ ಪರಿಣತರು.
(6 / 7)
ಕುಂಭ ರಾಶಿ: ಶನಿ ದೇವರು ಕುಂಭ ರಾಶಿಯ ಅಧಿಪತಿ, ಈ ರಾಶಿಚಕ್ರ ಚಿಹ್ನೆಯು ಹನುಮಂತನ ನೆಚ್ಚಿನ ಚಿಹ್ನೆಗಳಲ್ಲಿ ಒಂದಾಗಿದೆ ಮತ್ತು ಪ್ರತಿ ಸಂದರ್ಭದಲ್ಲೂ ಈ ರಾಶಿಯವರನ್ನು ಹನುಮಾನ್ ಬೆಂಬಲಿಸುತ್ತಾನೆ. ಕುಂಭ ರಾಶಿಯವರು ಯಾವಾಗಲೂ ಹನುಮಂತನ ಆಶೀರ್ವಾದವನ್ನು ಬಯಸುತ್ತಾರೆ, ಎಲ್ಲಾ ಕೆಲಸಗಳನ್ನು ಹನುಮಾನ್ ಕೃಪೆಯಿಂದಲೇ ಪೂರ್ಣಗೊಳಿಸುತ್ತಾರೆ. ಆಂಜನೇಯನನ್ನು ಆರಾಧಿಸುವ ಈ ರಾಶಿಯವರಿಗೆ ಎಂದಿಗೂ ಆರ್ಥಿಕ ತೊಂದರೆಗಳನ್ನು ಎದುರಾಗುವುದಿಲ್ಲ ಎನ್ನುತ್ತಾರೆ ಪ್ರಾಜ್ಞರು.
ಇತರ ಗ್ಯಾಲರಿಗಳು