ಕನ್ನಡ ಸುದ್ದಿ  /  Photo Gallery  /  Astrology These Are The Characteristics Of Those Born Under Rohini Nakshatra People Rich In Unique Qualities Mnk

Rohini Nakshatra: ಕಷ್ಟದಲ್ಲೂ ಕುಗ್ಗದ ಮನಸ್ಥಿತಿ, ಹಣದ ವಿಚಾರದಲ್ಲಿ ಕ್ಲೀನ್‌ ಹ್ಯಾಂಡ್‌; ಈ ನಕ್ಷತ್ರದಲ್ಲಿ ಹುಟ್ಟಿದವರೇ ಹೀಗೆ

  • Rohini Nakshatra: ಒಬ್ಬ ವ್ಯಕ್ತಿಯ ವಿಚಾರವನ್ನು ಕೇವಲ ನಕ್ಷತ್ರದಿಂದ ತಿಳಿಯಲು ಸಾಧ್ಯವಿಲ್ಲ. ಲಗ್ನ, ನವಾಂಶ, ಹುಟ್ಟಿರುವ ಸ್ಥಿತಿ ಇನ್ನೂ ಮುಂತಾದವು ತುಂಬ ಮುಖ್ಯವಾಗುತ್ತವೆ. ನಕ್ಷತ್ರದಿಂದಲೂ ಹತ್ತು ಹಲವು ವಿಚಾರಗಳು ತಿಳಿಯುತ್ತವೆ. ಇಲ್ಲಿ ರೋಹಿಣಿ ನಕ್ಷತ್ರದಲ್ಲಿ ಜನಿಸಿದವರ ಗುಣಾವಗುಣಗಳ ಬಗ್ಗೆ ಜ್ಯೋತಿಷಿ ಎಚ್‌. ಎಸ್‌. ಸತೀಶ್‌ ವಿವರಿಸಿದ್ದಾರೆ.

ಶ್ರೀ ಕೃಷ್ಣನ ಜನನವಾದದ್ದು ಇದೇ ನಕ್ಷತ್ರದಲ್ಲಿ. ದುರ್ಯೋಧನನ ಅವಸಾನ ಮತ್ತು ಭೀಮನ ಜನನ ಇದೇ ನಕ್ಷತ್ರದಲ್ಲಿ ಆಗಿದೆ. ಈ ನಕ್ಷತ್ರದಲ್ಲಿ ಜನಿಸಿದವರಿಗೆ ಸ್ಥಿರವಾದ ಬುದ್ದಿ ಇರುತ್ತದೆ. ಧೈರ್ಯ ಮತ್ತು ಬುದ್ದಿವಂತಿಕೆಗೆ ಕೊರತೆ ಇರುವುದಿಲ್ಲ. ಧಾರ್ಮಿಕವಾದಿಗಳು. ಯಾವುದೇ ಕಷ್ಟ ನಷ್ಟದ ಸಂದರ್ಭದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವಿರುತ್ತದೆ. 
icon

(1 / 6)

ಶ್ರೀ ಕೃಷ್ಣನ ಜನನವಾದದ್ದು ಇದೇ ನಕ್ಷತ್ರದಲ್ಲಿ. ದುರ್ಯೋಧನನ ಅವಸಾನ ಮತ್ತು ಭೀಮನ ಜನನ ಇದೇ ನಕ್ಷತ್ರದಲ್ಲಿ ಆಗಿದೆ. ಈ ನಕ್ಷತ್ರದಲ್ಲಿ ಜನಿಸಿದವರಿಗೆ ಸ್ಥಿರವಾದ ಬುದ್ದಿ ಇರುತ್ತದೆ. ಧೈರ್ಯ ಮತ್ತು ಬುದ್ದಿವಂತಿಕೆಗೆ ಕೊರತೆ ಇರುವುದಿಲ್ಲ. ಧಾರ್ಮಿಕವಾದಿಗಳು. ಯಾವುದೇ ಕಷ್ಟ ನಷ್ಟದ ಸಂದರ್ಭದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವಿರುತ್ತದೆ. 

ರೋಹಿಣಿ ನಕ್ಷತ್ರದಲ್ಲಿ ಹುಟ್ಟಿದವರು ಮಾಡುವ ಕೆಲಸ ಕಾರ್ಯವಾಗಲಿ ಅಥವಾ ಆಡುವ ಮಾತಾಗಲಿ ಯಾರ ಮನಸ್ಸನ್ನು ನೋಯಿಸುವಂತೆ ಇರುವುದಿಲ್ಲ. ಬರವಣಿಗೆಯಲ್ಲಿ ಉನ್ನತ ಮಟ್ಟ ತಲುಪುತ್ತಾರೆ. ಯಾವುದೇ ಕಾರಣಕ್ಕೂ ತೆಗೆದುಕೊಂಡ ನಿರ್ಧಾರಗಳನ್ನು ಬದಲಾಯಿಸುವುದಿಲ್ಲ. ಆರೋಗ್ಯದಲ್ಲಿ ಚಿಂತೆಯನ್ನು ಕಾಪಾಡಿಕೊಳ್ಳಲು ಯೋಗ ಪ್ರಾಣಾಯಾಮದಂತಹ ಪ್ರಾಚೀನ ಪದ್ಧತಿಗಳನ್ನು ಅನುಸರಿಸುತ್ತಾರೆ.
icon

(2 / 6)

ರೋಹಿಣಿ ನಕ್ಷತ್ರದಲ್ಲಿ ಹುಟ್ಟಿದವರು ಮಾಡುವ ಕೆಲಸ ಕಾರ್ಯವಾಗಲಿ ಅಥವಾ ಆಡುವ ಮಾತಾಗಲಿ ಯಾರ ಮನಸ್ಸನ್ನು ನೋಯಿಸುವಂತೆ ಇರುವುದಿಲ್ಲ. ಬರವಣಿಗೆಯಲ್ಲಿ ಉನ್ನತ ಮಟ್ಟ ತಲುಪುತ್ತಾರೆ. ಯಾವುದೇ ಕಾರಣಕ್ಕೂ ತೆಗೆದುಕೊಂಡ ನಿರ್ಧಾರಗಳನ್ನು ಬದಲಾಯಿಸುವುದಿಲ್ಲ. ಆರೋಗ್ಯದಲ್ಲಿ ಚಿಂತೆಯನ್ನು ಕಾಪಾಡಿಕೊಳ್ಳಲು ಯೋಗ ಪ್ರಾಣಾಯಾಮದಂತಹ ಪ್ರಾಚೀನ ಪದ್ಧತಿಗಳನ್ನು ಅನುಸರಿಸುತ್ತಾರೆ.(HT)

ಹೆತ್ತವರನ್ನು ಮತ್ತು ಹಿರಿಯರನ್ನು ಗೌರವದಿಂದ ನೋಡುತ್ತಾರೆ. ಸಮಾಜದಲ್ಲಿ ಗೌರವಯುತ ಸ್ಥಾನಮಾನ ದೊರೆಯುತ್ತದೆ. ಪ್ರಖ್ಯಾತ ಹಣಕಾಸಿನ ವಾಣಿಜ್ಯ ಸಂಸ್ಥೆಯಲ್ಲಿ ಉದ್ಯೋಗ ಲಭಿಸುತ್ತದೆ. ಹಣಕಾಸಿನ ವ್ಯವಹಾರದ ಸಂಸ್ಥೆಯ ಒಡೆಯರಾಗುವ ಸಾಧ್ಯತೆಯೂ ಇರುತ್ತದೆ. ಮಧುರವಾದ ಮಾತುಕತೆಯಿಂದ ಎಲ್ಲರ ಮನ  ಗೆಲ್ಲುವರು. ದಾಂಪತ್ಯದಲ್ಲಿ ಸುಖ ಸಂತಸಕ್ಕೆ ಪಾರವೇ ಇರದು.  
icon

(3 / 6)

ಹೆತ್ತವರನ್ನು ಮತ್ತು ಹಿರಿಯರನ್ನು ಗೌರವದಿಂದ ನೋಡುತ್ತಾರೆ. ಸಮಾಜದಲ್ಲಿ ಗೌರವಯುತ ಸ್ಥಾನಮಾನ ದೊರೆಯುತ್ತದೆ. ಪ್ರಖ್ಯಾತ ಹಣಕಾಸಿನ ವಾಣಿಜ್ಯ ಸಂಸ್ಥೆಯಲ್ಲಿ ಉದ್ಯೋಗ ಲಭಿಸುತ್ತದೆ. ಹಣಕಾಸಿನ ವ್ಯವಹಾರದ ಸಂಸ್ಥೆಯ ಒಡೆಯರಾಗುವ ಸಾಧ್ಯತೆಯೂ ಇರುತ್ತದೆ. ಮಧುರವಾದ ಮಾತುಕತೆಯಿಂದ ಎಲ್ಲರ ಮನ  ಗೆಲ್ಲುವರು. ದಾಂಪತ್ಯದಲ್ಲಿ ಸುಖ ಸಂತಸಕ್ಕೆ ಪಾರವೇ ಇರದು.  (HT)

ಸಂಗಾತಿಯಿಂದ ಮಾಡುವ ಎಲ್ಲಾ ಕೆಲಸ ಕಾರ್ಯದಲ್ಲಿಯೂ ಉತ್ತಮ ಸಹಾಯ ಸಹಕಾರ ಇರುತ್ತದೆ. ಸೋದರ ಮಾವನಿಂದ ಹಣದ ಸಹಾಯವು ಲಭಿಸುತ್ತದೆ. ಸಾಮಾನ್ಯವಾಗಿ ಇವರು ಬೇರೆಯವರ ಅಧೀನದಲ್ಲಿ ಕೆಲಸ ಮಾಡಲು ಇಚ್ಚಿಸುವುದಿಲ್ಲ. ಚಿಕ್ಕದಾದರೂ ಚೊಕ್ಕವಾದ ತಮ್ಮದೇ ಆದ ವ್ಯಾಪಾರವನ್ನು ಆರಂಭಿಸುತ್ತಾರೆ. ನಿಜಕ್ಕೂ ಇವರದ್ದು ಹೆಂಗರುಳು.
icon

(4 / 6)

ಸಂಗಾತಿಯಿಂದ ಮಾಡುವ ಎಲ್ಲಾ ಕೆಲಸ ಕಾರ್ಯದಲ್ಲಿಯೂ ಉತ್ತಮ ಸಹಾಯ ಸಹಕಾರ ಇರುತ್ತದೆ. ಸೋದರ ಮಾವನಿಂದ ಹಣದ ಸಹಾಯವು ಲಭಿಸುತ್ತದೆ. ಸಾಮಾನ್ಯವಾಗಿ ಇವರು ಬೇರೆಯವರ ಅಧೀನದಲ್ಲಿ ಕೆಲಸ ಮಾಡಲು ಇಚ್ಚಿಸುವುದಿಲ್ಲ. ಚಿಕ್ಕದಾದರೂ ಚೊಕ್ಕವಾದ ತಮ್ಮದೇ ಆದ ವ್ಯಾಪಾರವನ್ನು ಆರಂಭಿಸುತ್ತಾರೆ. ನಿಜಕ್ಕೂ ಇವರದ್ದು ಹೆಂಗರುಳು.(HT)

ಯಾರಿಗೂ ಮುಖ್ಯವಾಗಿ ಹಣದ ವಿಚಾರದಲ್ಲಿ ಮೋಸ ಮಾಡುವುದಿಲ್ಲ. ಪರಿಚಯ ಇರುವವರ ಜೊತೆಯಲ್ಲಿ ಅಥವಾ ಸಂಬಂಧದಲ್ಲಿ ವಿವಾಹವಾಗುತ್ತದೆ. ಐಷಾರಾಮಿ ಜೀವನವನ್ನು ಇಷ್ಟಪಟ್ಟರು ಖರ್ಚು ವೆಚ್ಚದಲ್ಲಿ ತಮ್ಮದೇ ಆದ ಮಿತಿಯನ್ನು ಹಾಕಿಕೊಂಡಿರುತ್ತಾರೆ. ಇಳಿ ವಯಸ್ಸಿನಲ್ಲಿಯೂ ಸ್ವತಂತ್ರ ಜೀವನ ನಡೆಸುತ್ತಾರೆ. ಸಾಮಾನ್ಯವಾಗಿ ಇವರು  ಅತಿಯಾದ ಆಹಾರ ಸೇವನೆಯಿಂದ ಅನಾರೋಗ್ಯಕ್ಕೆ ತುತ್ತಾಗುತ್ತಾರೆ. 
icon

(5 / 6)

ಯಾರಿಗೂ ಮುಖ್ಯವಾಗಿ ಹಣದ ವಿಚಾರದಲ್ಲಿ ಮೋಸ ಮಾಡುವುದಿಲ್ಲ. ಪರಿಚಯ ಇರುವವರ ಜೊತೆಯಲ್ಲಿ ಅಥವಾ ಸಂಬಂಧದಲ್ಲಿ ವಿವಾಹವಾಗುತ್ತದೆ. ಐಷಾರಾಮಿ ಜೀವನವನ್ನು ಇಷ್ಟಪಟ್ಟರು ಖರ್ಚು ವೆಚ್ಚದಲ್ಲಿ ತಮ್ಮದೇ ಆದ ಮಿತಿಯನ್ನು ಹಾಕಿಕೊಂಡಿರುತ್ತಾರೆ. ಇಳಿ ವಯಸ್ಸಿನಲ್ಲಿಯೂ ಸ್ವತಂತ್ರ ಜೀವನ ನಡೆಸುತ್ತಾರೆ. ಸಾಮಾನ್ಯವಾಗಿ ಇವರು  ಅತಿಯಾದ ಆಹಾರ ಸೇವನೆಯಿಂದ ಅನಾರೋಗ್ಯಕ್ಕೆ ತುತ್ತಾಗುತ್ತಾರೆ. (Ht)

ಮಧುಮೇಹ ರೋಗವು ಕೆಲವರನ್ನು ಕಾಡಬಹುದು. ರುಚಿಕರವಾದ ಆಹಾರವನ್ನು ಇಷ್ಟಪಡುತ್ತಾರೆ. ನೋಡಲು ಚೆನ್ನಾಗಿರುವ ವಸ್ತುಗಳನ್ನಾಗಲಿ ಅಥವಾ ವಾಹನಗಳನ್ನಾಗಲಿ ಕೊಳ್ಳುತ್ತಾರೆ. ಉತ್ತಮ ನಟನಾ ಕೌಶಲ್ಯ ಇರುವ ನೀವು ನಾಟಕ ಅಥವಾ ಸಿನಿಮಾ ರಂಗದಲ್ಲಿ ಒಳ್ಳೆಯ ಹೆಸರನ್ನು ಗಳಿಸುವಿರಿ. ಮಧುರವಾದ ಕಂಠವಿರುವ ಕಾರಣ ಸಂಗೀತ ಕ್ಷೇತ್ರದಲ್ಲಿ ಹೆಸರನ್ನು ಮಾಡಬಹುದು.
icon

(6 / 6)

ಮಧುಮೇಹ ರೋಗವು ಕೆಲವರನ್ನು ಕಾಡಬಹುದು. ರುಚಿಕರವಾದ ಆಹಾರವನ್ನು ಇಷ್ಟಪಡುತ್ತಾರೆ. ನೋಡಲು ಚೆನ್ನಾಗಿರುವ ವಸ್ತುಗಳನ್ನಾಗಲಿ ಅಥವಾ ವಾಹನಗಳನ್ನಾಗಲಿ ಕೊಳ್ಳುತ್ತಾರೆ. ಉತ್ತಮ ನಟನಾ ಕೌಶಲ್ಯ ಇರುವ ನೀವು ನಾಟಕ ಅಥವಾ ಸಿನಿಮಾ ರಂಗದಲ್ಲಿ ಒಳ್ಳೆಯ ಹೆಸರನ್ನು ಗಳಿಸುವಿರಿ. ಮಧುರವಾದ ಕಂಠವಿರುವ ಕಾರಣ ಸಂಗೀತ ಕ್ಷೇತ್ರದಲ್ಲಿ ಹೆಸರನ್ನು ಮಾಡಬಹುದು.(HT)


ಇತರ ಗ್ಯಾಲರಿಗಳು