Vastu Tips: ಎಲ್ಲೆಂದರಲ್ಲಿ ಗಡಿಯಾರ ತೂಗುಹಾಕಬೇಡಿ, ಬ್ಯಾಡ್ ಟೈಮ್ ಬೇಡ ಅಂದ್ರೆ ಈ ವಿಷಯ ತಿಳಿದಿರಬೇಕು
- Vastu Tips: ವಾಸ್ತು ಪ್ರಕಾರ ಮನೆಯಲ್ಲಿ ಗಡಿಯಾರವನ್ನು ಸರಿಯಾದ ದಿಕ್ಕಿನಲ್ಲಿ ಇಡುವುದು ಬಹಳ ಮುಖ್ಯ. ಗಡಿಯಾರವನ್ನು ಯಾವ ದಿಕ್ಕಿಗೆ ಇಡಬೇಕು, ಯಾವ ರೀತಿಯ ಗಡಿಯಾರ ಮನೆಗೆ ಶುಭ ಎಂಬ ವಿವರ ಇಲ್ಲಿದೆ.
- Vastu Tips: ವಾಸ್ತು ಪ್ರಕಾರ ಮನೆಯಲ್ಲಿ ಗಡಿಯಾರವನ್ನು ಸರಿಯಾದ ದಿಕ್ಕಿನಲ್ಲಿ ಇಡುವುದು ಬಹಳ ಮುಖ್ಯ. ಗಡಿಯಾರವನ್ನು ಯಾವ ದಿಕ್ಕಿಗೆ ಇಡಬೇಕು, ಯಾವ ರೀತಿಯ ಗಡಿಯಾರ ಮನೆಗೆ ಶುಭ ಎಂಬ ವಿವರ ಇಲ್ಲಿದೆ.
(1 / 8)
ಗಡಿಯಾರಕ್ಕೆ ಸಂಬಂಧಿಸಿದ ವಾಸ್ತು ಪರಿಹಾರಗಳುಕಾಲಕ್ಕೆ ಅಪಾರ ಶಕ್ತಿ ಇದೆ ಎಂಬ ಮಾತಿದೆ. ಕಾಲವು ಯಾರನ್ನಾದರೂ ಚಿಂದಿ ಬಟ್ಟೆಯಿಂದ ಐಷಾರಾಮಿ ಬದುಕಿಗೆ ಮತ್ತು ಶ್ರೀಮಂತಿಕೆಯಿಂದ ಬಡತನಕ್ಕೆ ಕರೆದೊಯ್ಯುವ ಶಕ್ತಿಯನ್ನು ಹೊಂದಿದೆ. ಸಮಯ ಚೆನ್ನಾಗಿರುವ ವ್ಯಕ್ತಿಗೆ ಜೀವನದಲ್ಲಿ ಯಾವುದರ ಕೊರತೆಯೂ ಇರುವುದಿಲ್ಲ. ಆದರೆ ಒಮ್ಮೆ ಸಮಯ ಕೆಟ್ಟರೆ ಬದುಕಿನಲ್ಲಿ ಏನು ಬೇಕಾದರೂ ಸಂಭವಿಸಬಹುದು. ವಾಸ್ತು ಶಾಸ್ತ್ರದಲ್ಲಿ, ಕೆಟ್ಟ ಸಮಯವನ್ನೂ ಒಳ್ಳೆಯ ಸಮಯವನ್ನಾಗಿ ಬದಲಿಸಲು ಕೆಲವು ಸೂತ್ರಗಳಿವೆ. ವಾಸ್ತು ಪ್ರಕಾರ, ಮನೆಯ ಗೋಡೆ ಗಡಿಯಾರವು ಜೀವನದಲ್ಲಿ ಒಳ್ಳೆಯ ಸಮಯಗಳನ್ನು ತರುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ವಾಸ್ತು ದೋಷಗಳನ್ನು ತಪ್ಪಿಸಲು ಗಡಿಯಾರದ ದಿಕ್ಕಿಗೆ ವಿಶೇಷ ಗಮನ ನೀಡಬೇಕು. ತಪ್ಪು ದಿಕ್ಕಿನಲ್ಲಿ ಇರಿಸಲಾದ ಗಡಿಯಾರವು ವ್ಯಕ್ತಿಗೆ ಕೆಟ್ಟ ಸಮಯವನ್ನು ತರಬಹುದು. ಮನೆಯ ಗಡಿಯಾರಕ್ಕೆ ಸಂಬಂಧಿಸಿದ ವಾಸ್ತು ಸಲಹೆಗಳನ್ನು ತಿಳಿದುಕೊಳ್ಳಿ.
(istock)(2 / 8)
ಗಡಿಯಾರವನ್ನು ಇಡಲು ಸರಿಯಾದ ದಿಕ್ಕು ಯಾವುದು?ಮನೆಯಲ್ಲಿ ಹಾಳಾದ ಗಡಿಯಾರಗಳಿದ್ದರೆ, ಅವುಗಳನ್ನು ದುರಸ್ತಿ ಮಾಡಿಸಿ. ಮನೆಯಲ್ಲಿ ಹೆಚ್ಚು ಗಡಿಯಾರಗಳಿದ್ದರೆ ಅವುಗಳನ್ನು ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ಇರಿಸಿ. ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಇಡುವ ಅನುಪಯುಕ್ತ ಗಡಿಯಾರಗಳು ನಕಾರಾತ್ಮಕ ಶಕ್ತಿಯನ್ನು ಹರಡುತ್ತವೆ, ಇದರಿಂದಾಗಿ ವ್ಯಕ್ತಿಯು ಕೆಲಸ ಮತ್ತು ಪ್ರಗತಿಯಲ್ಲಿ ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ.
(istock)(3 / 8)
ಗೋಡೆಯ ಮೇಲೆ ಗಡಿಯಾರವನ್ನು ನೇತುಹಾಕಲು ಸರಿಯಾದ ದಿಕ್ಕುವಾಸ್ತು ಪ್ರಕಾರ, ಮನೆಯಲ್ಲಿ ಗಡಿಯಾರವನ್ನು ಇಡಲು ಅತ್ಯಂತ ಮಂಗಳಕರ ದಿಕ್ಕು ಪೂರ್ವ. ಈ ದಿಕ್ಕಿನಲ್ಲಿ ಗಡಿಯಾರವನ್ನು ಇಡುವುದರಿಂದ ಮನೆಗೆ ಸಕಾರಾತ್ಮಕ ಶಕ್ತಿ ಬರುತ್ತದೆ ಮತ್ತು ಲಕ್ಷ್ಮಿ ದೇವಿಯ ಪ್ರವೇಶ ಸುಗಮವಾಗುತ್ತದೆ.
(istock)(4 / 8)
ಗೋಡೆ ಗಡಿಯಾರವನ್ನು ಯಾವ ದಿಕ್ಕಿನಲ್ಲಿ ಇಡಬಾರದು?ವಾಸ್ತು ಪ್ರಕಾರ, ದಕ್ಷಿಣ ದಿಕ್ಕಿನಲ್ಲಿ ಇರಿಸಲಾದ ಗಡಿಯಾರವು ಪ್ರಗತಿ ಮತ್ತು ಅದೃಷ್ಟದಲ್ಲಿ ಅಡೆತಡೆಗಳನ್ನು ಸೃಷ್ಟಿಸುತ್ತದೆ. ಆದ್ದರಿಂದ ಗಡಿಯಾರವನ್ನು ಈ ದಿಕ್ಕಿನಲ್ಲಿ ಇಡಬಾರದು.
(istock)(5 / 8)
ಗಡಿಯಾರವನ್ನು ಯಾವ ದಿಕ್ಕಿನಲ್ಲಿ ಇಡುವುದು ಅಶುಭ?ವಾಸ್ತು ಪ್ರಕಾರ, ಪಶ್ಚಿಮ ದಿಕ್ಕಿನಲ್ಲಿ ಇರಿಸಲಾದ ಗಡಿಯಾರವು ಅನಾರೋಗ್ಯ ಮತ್ತು ಮನೆಯೊಳಗಿನ ಕಲಹಕ್ಕೆ ಕಾರಣವಾಗುತ್ತದೆ. ಹಾಗಾಗಿ ಈ ದಿಕ್ಕಿನಲ್ಲಿ ಗೋಡೆಯ ಮೇಲೆ ಗಡಿಯಾರವನ್ನು ಇಡುವುದು ಅಶುಭವೆಂದು ಪರಿಗಣಿಸಲಾಗುತ್ತದೆ.
(6 / 8)
ವಾಸ್ತು ಪ್ರಕಾರ ಯಾವ ಗಡಿಯಾರ ಉತ್ತಮ?ವಾಸ್ತು ಪ್ರಕಾರ, ದುಂಡಗಿನ ಆಕಾರದ ಗಡಿಯಾರವು ತುಂಬಾ ಮಂಗಳಕರವಾಗಿದೆ. ಇದಲ್ಲದೆ, ಲೋಲಕವಿರುವ ಗಡಿಯಾರವನ್ನು ಸಹ ಶುಭವೆಂದು ಪರಿಗಣಿಸಲಾಗುತ್ತದೆ. ಈ ಗಡಿಯಾರವನ್ನು ಮನೆಯ ಯಾವುದೇ ಕೋಣೆಯಲ್ಲಿ ಇಡಬಹುದು.
(istock)(7 / 8)
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ
ಇತರ ಗ್ಯಾಲರಿಗಳು