ಸೆಪ್ಟೆಂಬರ್ನಲ್ಲಿ ರೂಪುಗೊಳ್ಳಲಿದೆ ಭದ್ರ ರಾಜಯೋಗ: ಬುಧನಿಂದ ಈ ರಾಶಿಗಳಿಗೆ ಖುಲಾಯಿಸಲಿದೆ ಅದೃಷ್ಟ
- Bhadra Raja Yoga: ದುರ್ಗಾ ಪೂಜೆಯ ಮೊದಲು ಬುಧನು ಭದ್ರಮಹಾಪುರುಷ ಯೋಗವನ್ನು ಸೃಷ್ಟಿಸುತ್ತಾನೆ. ಇದರ ಪರಿಣಾಮವು ಎಲ್ಲಾ ರಾಶಿಗಳ ಮೇಲೆ ಕಂಡುಬರುತ್ತದೆ. ಇದು ಕನ್ಯಾ ರಾಶಿ ಸೇರಿದಂತೆ ಅನೇಕ ರಾಶಿಗಳಿಗೆ ಉತ್ತಮ ಪ್ರಯೋಜನವನ್ನು ನೀಡುತ್ತದೆ.
- Bhadra Raja Yoga: ದುರ್ಗಾ ಪೂಜೆಯ ಮೊದಲು ಬುಧನು ಭದ್ರಮಹಾಪುರುಷ ಯೋಗವನ್ನು ಸೃಷ್ಟಿಸುತ್ತಾನೆ. ಇದರ ಪರಿಣಾಮವು ಎಲ್ಲಾ ರಾಶಿಗಳ ಮೇಲೆ ಕಂಡುಬರುತ್ತದೆ. ಇದು ಕನ್ಯಾ ರಾಶಿ ಸೇರಿದಂತೆ ಅನೇಕ ರಾಶಿಗಳಿಗೆ ಉತ್ತಮ ಪ್ರಯೋಜನವನ್ನು ನೀಡುತ್ತದೆ.
(1 / 6)
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಒಂದು ನಿರ್ದಿಷ್ಟ ಸಮಯದ ನಂತರ ಎಲ್ಲಾ ಗ್ರಹಗಳು ತಮ್ಮ ಸ್ಥಾನವನ್ನು ಬದಲಾಯಿಸುತ್ತವೆ. ಅದರ ಪರಿಣಾಮವಾಗಿ ಅನೇಕ ರಾಶಿಗಳಿಗೆ ಲಾಭವಾಗಲಿದೆ. ಮುಂಬರುವ ಕಲದಲ್ಲಿ ಬುಧನು ಕನ್ಯಾರಾಶಿಗೆ ಪ್ರವೇಶಿಸುತ್ತಾನೆ. ಅದರ ಪರಿಣಾಮದಿಂದ ಅನೇಕ ರಾಶಿಗಳು ಪ್ರಯೋಜನವನ್ನು ಪಡೆಯುತ್ತವೆ. ಕನ್ಯಾ ರಾಶಿಯ ಜೊತೆಗೆ ಉಳಿದ ಯಾವ ರಾಶಿಯವರಿಗೆ ಅದೃಷ್ಟದ ದಿನಗಳು ಎದುರು ನೋಡುತ್ತಿವೆ ನೋಡೋಣ.
(2 / 6)
ಶೀಘ್ರದಲ್ಲೇ ಬುಧನು ಭದ್ರಮಹಾಪುರುಷ ಯೋಗವನ್ನು ಸೃಷ್ಟಿಸುತ್ತಾನೆ. ಇದು ಎಲ್ಲಾ 12 ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಕೆಲವು ರಾಶಿಗಳಿಗೆ ಲಾಭದಾಯಕವೂ ಆಗಿದೆ. ಸೆಪ್ಟೆಂಬರ್ನಲ್ಲಿ ಭದ್ರ ರಾಜ ಯೋಗದಿಂದ ಯಾವ ರಾಶಿಯವರಿಗೆ ಲಾಭವಾಗಲಿದೆ ಎಂಬುದನ್ನು ತಿಳಿದುಕೊಳ್ಳೋಣ.
(3 / 6)
ಕನ್ಯಾ ರಾಶಿ: ಈ ಸಮಯದಲ್ಲಿ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಿರುತ್ತದೆ. ನೀವು ಕೈಗೊಂಡ ಎಲ್ಲಾ ಚಟುವಟಿಕೆಗಳ ಫಲಿತಾಂಶವು ಉತ್ತಮವಾಗಿರುತ್ತದೆ. ದಾಂಪತ್ಯ ಜೀವನ ಮೊದಲಿಗಿಂತ ಉತ್ತಮವಾಗಿರುತ್ತದೆ. ಜೀವನದಲ್ಲಿ ಒಳ್ಳೆಯ ದಿನಗಳು ಬರುತ್ತವೆ. ನಿಮ್ಮ ಮಗುವಿನ ಭವಿಷ್ಯದ ಬಗ್ಗೆ ನೀವು ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು.
(4 / 6)
ಮಿಥುನ ರಾಶಿ: ಈ ಸಮಯದಲ್ಲಿ ಪ್ರಾಪಂಚಿಕ ಆನಂದವು ಲಭಿಸುತ್ತದೆ. ಈ ರಾಜಯೋಗವು ಮಿಥುನ ರಾಶಿಯ ರಾಶಿಚಕ್ರದ ನಾಲ್ಕನೇ ಮನೆಯಲ್ಲಿ ಉಂಟಾಗುತ್ತದೆ. ಉದ್ಯೋಗಿಗಳಿಗೆ ಬಡ್ತಿ ದೊರೆಯಲಿದೆ. ವ್ಯಾಪಾರಸ್ಥರಿಗೆ ಉತ್ತಮ ಲಾಭ ದೊರೆಯಲಿದೆ. ಈ ಸಮಯದಲ್ಲಿ ನೀವು ಕಾರು, ಆಸ್ತಿ ಖರೀದಿಸಬಹುದು. ವ್ಯಾಪಾರದಲ್ಲಿ ಉತ್ತಮ ಲಾಭ ದೊರೆಯಲಿದೆ. ತಾಯಿಯ ಸಹಾಯದಿಂದ ಸಂಪತ್ತು ಸಂಗ್ರಹವಾಗುತ್ತದೆ.
(5 / 6)
ಮಕರ ರಾಶಿ: ಉದ್ಯೋಗಿಗಳಿಗೆ ಹೊಸ ಕಂಪನಿಯಲ್ಲಿ ಉದ್ಯೋಗಾವಕಾಶ ದೊರೆಯಲಿದೆ. ವ್ಯಾಪಾರಕ್ಕಾಗಿ ರೂಪಿಸಿದ ಯೋಜನೆಗಳು ಲಾಭದಾಯಕವಾಗಲಿದೆ. ನೀವು ವಿದೇಶಕ್ಕೆ ಹೋಗಬಹುದು. ಕುಟುಂಬದಲ್ಲಿ ಶುಭ ಕಾರ್ಯಗಳು ನಡೆಯಬಹುದು. ಈ ಶುಭ ರಾಜಯೋಗದ ಫಲವಾಗಿ ಸೆಪ್ಟೆಂಬರ್ನಲ್ಲಿ ಅನೇಕ ಇಷ್ಟಾರ್ಥಗಳು ಈಡೇರುತ್ತವೆ. ನಿಮ್ಮ ಆಸ್ತಿ ಹೆಚ್ಚಾಗಲಿದೆ.
ಇತರ ಗ್ಯಾಲರಿಗಳು