ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ರಾಶಿಗೆ ಅನುಗುಣವಾದ ಗುಣಲಕ್ಷಣ, ಅಸೂಯೆ ಅಭದ್ರತೆಗಳಿಗೆ ಸಿಲುಕಿ ಒದ್ದಾಡುತ್ತಾರೆ ವೃಷಭ, ಕನ್ಯಾ ಸೇರಿ 6 ರಾಶಿಗಳವರು

ರಾಶಿಗೆ ಅನುಗುಣವಾದ ಗುಣಲಕ್ಷಣ, ಅಸೂಯೆ ಅಭದ್ರತೆಗಳಿಗೆ ಸಿಲುಕಿ ಒದ್ದಾಡುತ್ತಾರೆ ವೃಷಭ, ಕನ್ಯಾ ಸೇರಿ 6 ರಾಶಿಗಳವರು

ಗ್ರಹಗತಿಗಳು ಪದೇಪದೆ ಬದಲಾಗುತ್ತಿರುತ್ತವೆ. ಇದರ ಪರಿಣಾಮ ರಾಶಿಚಕ್ರಗಳ ಮೇಲೂ ಆಗುತ್ತವೆ. ಈ ಪರಿಣಾಮಗಳಿಗೆ ಅನುಗುಣವಾಗಿ ಅಸೂಯೆ ಅಭದ್ರತೆಗಳಿಗೆ ಸಿಲುಕಿ ಒದ್ದಾಡುತ್ತಾರೆ ವೃಷಭ, ಕನ್ಯಾ ಸೇರಿ 6 ರಾಶಿಗಳವರು. ಯಾವ ರಾಶಿಯವರಲ್ಲಿ ಯಾವ ಗುಣ ಕಾಣಿಸಿಕೊಳ್ಳುತ್ತದೆ ಎಂಬುದನ್ನು ಅರಿಯೋಣ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗತಿಗಳು ಬದಲಾಗುತ್ತಿರುತ್ತದೆ. ಗ್ರಹ ಸಂಚಾರವು ರಾಶಿಚಕ್ರಗಳ ಮೇಲೆ ಪರಿಣಾಮ ಬೀರುತ್ತದೆ. ಕೆಲವು ರಾಶಿಗಳಿಗೆ ಒಳಿತಾದರೆ ಇನ್ನು ಕೆಲವು ರಾಶಿಯವರಿಗೆ ಕೆಟ್ಟ ಫಲ. ಉಳಿದ ರಾಶಿಗಳಿಗೆ ಮಿಶ್ರ ಫಲ. ಇದು ಸಾಮಾನ್ಯ. ಇಂತಹ ಗ್ರಹಗತಿಗಳಿಗೆ ಅನುಗುಣವಾಗಿ ವೃಷಭ, ಕನ್ಯಾ ಸೇರಿ 6 ರಾಶಿಗಳವರು ಅಸೂಯೆ ಅಭದ್ರತೆಗಳಿಗೆ ಸಿಲುಕಿ ಒದ್ದಾಡುತ್ತಾರೆ.  ಅವರಿಗೆ ಅಂತರಂಗದಲ್ಲಿ ಅಭದ್ರತೆ, ಭಯ, ಆತಂಕ, ಅಸೂಯೆ ಈ ರೀತಿ ಭಾವಗಳು ಹೆಚ್ಚು ತೊಂದರೆ ಕೊಡುತ್ತವೆ.
icon

(1 / 8)

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗತಿಗಳು ಬದಲಾಗುತ್ತಿರುತ್ತದೆ. ಗ್ರಹ ಸಂಚಾರವು ರಾಶಿಚಕ್ರಗಳ ಮೇಲೆ ಪರಿಣಾಮ ಬೀರುತ್ತದೆ. ಕೆಲವು ರಾಶಿಗಳಿಗೆ ಒಳಿತಾದರೆ ಇನ್ನು ಕೆಲವು ರಾಶಿಯವರಿಗೆ ಕೆಟ್ಟ ಫಲ. ಉಳಿದ ರಾಶಿಗಳಿಗೆ ಮಿಶ್ರ ಫಲ. ಇದು ಸಾಮಾನ್ಯ. ಇಂತಹ ಗ್ರಹಗತಿಗಳಿಗೆ ಅನುಗುಣವಾಗಿ ವೃಷಭ, ಕನ್ಯಾ ಸೇರಿ 6 ರಾಶಿಗಳವರು ಅಸೂಯೆ ಅಭದ್ರತೆಗಳಿಗೆ ಸಿಲುಕಿ ಒದ್ದಾಡುತ್ತಾರೆ.  ಅವರಿಗೆ ಅಂತರಂಗದಲ್ಲಿ ಅಭದ್ರತೆ, ಭಯ, ಆತಂಕ, ಅಸೂಯೆ ಈ ರೀತಿ ಭಾವಗಳು ಹೆಚ್ಚು ತೊಂದರೆ ಕೊಡುತ್ತವೆ.(Canva)

ವೃಷಭ ರಾಶಿ, ಅಚಲವಾದ ನಿಷ್ಠೆ ಮತ್ತು ಬದ್ಧತೆಯನ್ನು ಹೊಂದಿರುವ ದೃಢ ಕಾವಲುಗಾರರು ಈ ರಾಶಿಯವರು. ಆದಾಗ್ಯೂ, ಬದಲಾವಣೆಗೆ ಸಜ್ಜಾಗುವುದಕ್ಕೆ ಹಿಂಜರಿಯುತ್ತಾರೆ ಮತ್ತು ಅಭದ್ರತೆಯ ಭಯವನ್ನು ಹೊಂದಿದ್ದಾರೆ. ಎಲ್ಲರಿಂದೂ ಮೆಚ್ಚುಗೆಯನ್ನು ಬಯಸುತ್ತಿರುತ್ತಾರೆ. ಎಲ್ಲರೂ ತನ್ನಂತೆ ಇರಬೇಕು. ತನಗೆ ಬೇಕಾದಂತೆ ನಡೆದುಕೊಳ್ಳಬೇಕು ಎಂಬ ಭಾವದೊಂದಿಗೆ ಬದುಕುತ್ತಾರೆ. ಸಂಗಾತಿಯ ವಿಚಾರದಲ್ಲಿ, ತನ್ನವರ ವಿಚಾರದಲ್ಲಿ ಬಹಳ ಪೊಸೆಸಿವ್‌ನೆಸ್ ಹೊಂದಿರುತ್ತಾರೆ. ಅವರ ಮೇಲೆ ನಿಯಂತ್ರಣ ಸಾಧಿಸಲು ಬಯಸುತ್ತಿರುತ್ತಾರೆ. ನಿಯಂತ್ರಣ ಹೋದರೆ ಎಂಬ ಹೆದರಿಕೆಯೊಂದಿಗೆ ಅಸೂಯೆ, ಅಭದ್ರತೆಗಳನ್ನು ಮನಸ್ಸಿನಲ್ಲಿ ತುಂಬಿಕೊಂಡಿರುತ್ತಾರೆ. 
icon

(2 / 8)

ವೃಷಭ ರಾಶಿ, ಅಚಲವಾದ ನಿಷ್ಠೆ ಮತ್ತು ಬದ್ಧತೆಯನ್ನು ಹೊಂದಿರುವ ದೃಢ ಕಾವಲುಗಾರರು ಈ ರಾಶಿಯವರು. ಆದಾಗ್ಯೂ, ಬದಲಾವಣೆಗೆ ಸಜ್ಜಾಗುವುದಕ್ಕೆ ಹಿಂಜರಿಯುತ್ತಾರೆ ಮತ್ತು ಅಭದ್ರತೆಯ ಭಯವನ್ನು ಹೊಂದಿದ್ದಾರೆ. ಎಲ್ಲರಿಂದೂ ಮೆಚ್ಚುಗೆಯನ್ನು ಬಯಸುತ್ತಿರುತ್ತಾರೆ. ಎಲ್ಲರೂ ತನ್ನಂತೆ ಇರಬೇಕು. ತನಗೆ ಬೇಕಾದಂತೆ ನಡೆದುಕೊಳ್ಳಬೇಕು ಎಂಬ ಭಾವದೊಂದಿಗೆ ಬದುಕುತ್ತಾರೆ. ಸಂಗಾತಿಯ ವಿಚಾರದಲ್ಲಿ, ತನ್ನವರ ವಿಚಾರದಲ್ಲಿ ಬಹಳ ಪೊಸೆಸಿವ್‌ನೆಸ್ ಹೊಂದಿರುತ್ತಾರೆ. ಅವರ ಮೇಲೆ ನಿಯಂತ್ರಣ ಸಾಧಿಸಲು ಬಯಸುತ್ತಿರುತ್ತಾರೆ. ನಿಯಂತ್ರಣ ಹೋದರೆ ಎಂಬ ಹೆದರಿಕೆಯೊಂದಿಗೆ ಅಸೂಯೆ, ಅಭದ್ರತೆಗಳನ್ನು ಮನಸ್ಸಿನಲ್ಲಿ ತುಂಬಿಕೊಂಡಿರುತ್ತಾರೆ. (Canva)

ಮಿಥುನ ರಾಶಿ- ಈ ರಾಶಿಯವರು ಕುತೂಹಲಿಗಳು. ಬಹುಬೇಗನೆ ಎಲ್ಲರ ಗಮನಸೆಳೆಯಬಲ್ಲವರು. ಎಲ್ಲರ ಮೆಚ್ಚುಗೆ ಪಾತ್ರರಾಗುವ ಭರದ ನಡುವೆ, ಅಂತರಂಗದಲ್ಲಿ ಕಡೆಗಣಿಸಲ್ಪಟ್ಟರೆ ಎಂಬ ಆತಂಕವೂ ಅವರನ್ನು ಕಾಡುತ್ತಿರುತ್ತದೆ. ಈ ಅಭದ್ರತೆಯು ಸಂಗಾತಿಯ ವಿಚಾರದಲ್ಲಿ ಅಸೂಯೆಯನ್ನು ಹುಟ್ಟುಹಾಕಬಹುದು. ಹೊಂದಾಣಿಕೆ ಮಾಡಿಕೊಳ್ಳಲು ತ್ರಾಸ ಪಡುತ್ತಾರೆ. 
icon

(3 / 8)

ಮಿಥುನ ರಾಶಿ- ಈ ರಾಶಿಯವರು ಕುತೂಹಲಿಗಳು. ಬಹುಬೇಗನೆ ಎಲ್ಲರ ಗಮನಸೆಳೆಯಬಲ್ಲವರು. ಎಲ್ಲರ ಮೆಚ್ಚುಗೆ ಪಾತ್ರರಾಗುವ ಭರದ ನಡುವೆ, ಅಂತರಂಗದಲ್ಲಿ ಕಡೆಗಣಿಸಲ್ಪಟ್ಟರೆ ಎಂಬ ಆತಂಕವೂ ಅವರನ್ನು ಕಾಡುತ್ತಿರುತ್ತದೆ. ಈ ಅಭದ್ರತೆಯು ಸಂಗಾತಿಯ ವಿಚಾರದಲ್ಲಿ ಅಸೂಯೆಯನ್ನು ಹುಟ್ಟುಹಾಕಬಹುದು. ಹೊಂದಾಣಿಕೆ ಮಾಡಿಕೊಳ್ಳಲು ತ್ರಾಸ ಪಡುತ್ತಾರೆ. (Canva)

ಕರ್ಕಾಟಕ ರಾಶಿ - ಈ ರಾಶಿಯವರು ತೀವ್ರ ರಕ್ಷಣಾತ್ಮಕ ಸ್ವಭಾವದವರು. ಜೊತೆಗಿರುವವರನ್ನು ಚೆನ್ನಾಗಿ ಆರೈಕೆ ಮಾಡುತ್ತಾರೆ. ಆದಾಗ್ಯೂ, ಅವರಿಗೆ ಅಂತರಂಗದಲ್ಲಿ ಅದೊಂದು ರೀತಿಯ ಎಲ್ಲರಿಂದ ನಿರಾಕರಿಸಲ್ಪಡುವ ಭಾವ, ಎಲ್ಲರನ್ನೂ ಕಳೆದುಕೊಳ್ಳುವ ಭಾವ ಹೆಚ್ಚು ಕಂಡುಬರುತ್ತದೆ. ಹೀಗಾಗಿ ಅವರು ಅಸೂಯೆ ಮತ್ತು ಅಭದ್ರತೆಯ ಭಾವಕ್ಕೆ ಒಳಗಾಗಿರುತ್ತಾರೆ. ಅದನ್ನು ಸೂಕ್ಷ್ಮ ಸ್ವಭಾವದವರು ಬಹುಬೇಗ ಕಂಡುಕೊಳ್ಳುತ್ತಾರೆ. ಮರೆಮಾಚುವುದು ಕಷ್ಟ. ಸಂಗಾತಿಯ ವಿಚಾರದಲ್ಲಿ ಹೆದರುತ್ತಾರೆ. ಅವರೇನಾದರೂ ಅಲೆದಾಡುವ ಸ್ವಭಾವದರಾಗಿದ್ದರೆ, ಸಮಾಜಮುಖಿಯಾಗಿದ್ದರೆ ಅದನ್ನು ಅರಗಿಸಿಕೊಳ್ಳುವುದಕ್ಕೆ ಸಾಹಸಪಡುತ್ತಾರೆ. 
icon

(4 / 8)

ಕರ್ಕಾಟಕ ರಾಶಿ - ಈ ರಾಶಿಯವರು ತೀವ್ರ ರಕ್ಷಣಾತ್ಮಕ ಸ್ವಭಾವದವರು. ಜೊತೆಗಿರುವವರನ್ನು ಚೆನ್ನಾಗಿ ಆರೈಕೆ ಮಾಡುತ್ತಾರೆ. ಆದಾಗ್ಯೂ, ಅವರಿಗೆ ಅಂತರಂಗದಲ್ಲಿ ಅದೊಂದು ರೀತಿಯ ಎಲ್ಲರಿಂದ ನಿರಾಕರಿಸಲ್ಪಡುವ ಭಾವ, ಎಲ್ಲರನ್ನೂ ಕಳೆದುಕೊಳ್ಳುವ ಭಾವ ಹೆಚ್ಚು ಕಂಡುಬರುತ್ತದೆ. ಹೀಗಾಗಿ ಅವರು ಅಸೂಯೆ ಮತ್ತು ಅಭದ್ರತೆಯ ಭಾವಕ್ಕೆ ಒಳಗಾಗಿರುತ್ತಾರೆ. ಅದನ್ನು ಸೂಕ್ಷ್ಮ ಸ್ವಭಾವದವರು ಬಹುಬೇಗ ಕಂಡುಕೊಳ್ಳುತ್ತಾರೆ. ಮರೆಮಾಚುವುದು ಕಷ್ಟ. ಸಂಗಾತಿಯ ವಿಚಾರದಲ್ಲಿ ಹೆದರುತ್ತಾರೆ. ಅವರೇನಾದರೂ ಅಲೆದಾಡುವ ಸ್ವಭಾವದರಾಗಿದ್ದರೆ, ಸಮಾಜಮುಖಿಯಾಗಿದ್ದರೆ ಅದನ್ನು ಅರಗಿಸಿಕೊಳ್ಳುವುದಕ್ಕೆ ಸಾಹಸಪಡುತ್ತಾರೆ. (Canva)

ಸಿಂಹ ರಾಶಿ - ಈ ರಾಶಿಯವರು ರಾಜನಂತೆ ಮತ್ತು ಕಾಂತೀಯ ವರ್ಚಸ್ಸಿನೊಂದಿಗೆ ಎಲ್ಲರ ಗಮನಸೆಳೆಯುತ್ತಾರೆ. ಇದು ಅವರ ಬದುಕನ್ನು ಹಗುರಗೊಳಿಸುತ್ತದೆ. ಆದಾಗ್ಯೂ, ಅಂತರಂಗದಲ್ಲಿ ಅವರಿಗೆ ಅಳುಕು ಇದ್ದೇ ಇರುತ್ತದೆ. ಅದಕ್ಕೆ ಕಾರಣ ಇತರರು ಏನನ್ನುತ್ತಾರೋ ಎಂಬ ಅನುಮಾನ, ಅವರಿಗೆ ಮೆಚ್ಚುಗೆಗೆ ಪಾತ್ರರಾಗಬೇಕು ಎಂಬ ಹಪಹಪಿ ಇದ್ದು, ಅದು ಅಸೂಯೆ, ಅಭದ್ರತೆಯನ್ನು ಹೆಚ್ಚುವಂತೆ ಮಾಡುತ್ತದೆ. 
icon

(5 / 8)

ಸಿಂಹ ರಾಶಿ - ಈ ರಾಶಿಯವರು ರಾಜನಂತೆ ಮತ್ತು ಕಾಂತೀಯ ವರ್ಚಸ್ಸಿನೊಂದಿಗೆ ಎಲ್ಲರ ಗಮನಸೆಳೆಯುತ್ತಾರೆ. ಇದು ಅವರ ಬದುಕನ್ನು ಹಗುರಗೊಳಿಸುತ್ತದೆ. ಆದಾಗ್ಯೂ, ಅಂತರಂಗದಲ್ಲಿ ಅವರಿಗೆ ಅಳುಕು ಇದ್ದೇ ಇರುತ್ತದೆ. ಅದಕ್ಕೆ ಕಾರಣ ಇತರರು ಏನನ್ನುತ್ತಾರೋ ಎಂಬ ಅನುಮಾನ, ಅವರಿಗೆ ಮೆಚ್ಚುಗೆಗೆ ಪಾತ್ರರಾಗಬೇಕು ಎಂಬ ಹಪಹಪಿ ಇದ್ದು, ಅದು ಅಸೂಯೆ, ಅಭದ್ರತೆಯನ್ನು ಹೆಚ್ಚುವಂತೆ ಮಾಡುತ್ತದೆ. 

ವೃಶ್ಚಿಕ ರಾಶಿ: ಈ ರಾಶಿಯವರು ನಿಗೂಢ ಆಕರ್ಷಣೆಯೊಂದಿಗೆ, ತೀವ್ರವಾದ ಉತ್ಸಾಹ ಮತ್ತು ಹುಮ್ಮಸ್ಸುಗಳೊಂದಿಗೆ ಕಾಣಿಸಿಕೊಳ್ಳುತ್ತಾರೆ.ಆದರೆ ಅಂತರಂಗದಲ್ಲಿ ಬಹಳ ದುರ್ಬಲವಾಗಿರುತ್ತಾರೆ. ಅವರಲ್ಲಿ ಸೋಲುವ ಭಯ ಬಹಳವಾಗಿ ಕಾಡುತ್ತಿರುತ್ತದೆ. ಜೊತೆಗೆ ಇರುವವರು ಬಿಟ್ಟುಹೋಗಬಹುದು ಎಂಬ ಆತಂಕ ಅವರಿಗೆ ಇರುತ್ತದೆ. ಹೀಗಾಗಿ ಈ ಆತಂಕ ಹೆಚ್ಚಾದಂತೆ ಅಸೂಯೆ ಗುಣವನ್ನು ಪ್ರದರ್ಶನ ಮಾಡುತ್ತಾರೆ. ಸಂಗಾತಿಯ ವಿಚಾರಕ್ಕೆ ಬಂದರೆ ಅತೀವ ಭಾವನಾತ್ಮಕವಾಗಿ ವರ್ತಿಸುತ್ತ ಅವರಿಗೆ ರಕ್ಷಾ ಕವಚದಂತೆ ಇರುತ್ತಾರೆ.
icon

(6 / 8)

ವೃಶ್ಚಿಕ ರಾಶಿ: ಈ ರಾಶಿಯವರು ನಿಗೂಢ ಆಕರ್ಷಣೆಯೊಂದಿಗೆ, ತೀವ್ರವಾದ ಉತ್ಸಾಹ ಮತ್ತು ಹುಮ್ಮಸ್ಸುಗಳೊಂದಿಗೆ ಕಾಣಿಸಿಕೊಳ್ಳುತ್ತಾರೆ.ಆದರೆ ಅಂತರಂಗದಲ್ಲಿ ಬಹಳ ದುರ್ಬಲವಾಗಿರುತ್ತಾರೆ. ಅವರಲ್ಲಿ ಸೋಲುವ ಭಯ ಬಹಳವಾಗಿ ಕಾಡುತ್ತಿರುತ್ತದೆ. ಜೊತೆಗೆ ಇರುವವರು ಬಿಟ್ಟುಹೋಗಬಹುದು ಎಂಬ ಆತಂಕ ಅವರಿಗೆ ಇರುತ್ತದೆ. ಹೀಗಾಗಿ ಈ ಆತಂಕ ಹೆಚ್ಚಾದಂತೆ ಅಸೂಯೆ ಗುಣವನ್ನು ಪ್ರದರ್ಶನ ಮಾಡುತ್ತಾರೆ. ಸಂಗಾತಿಯ ವಿಚಾರಕ್ಕೆ ಬಂದರೆ ಅತೀವ ಭಾವನಾತ್ಮಕವಾಗಿ ವರ್ತಿಸುತ್ತ ಅವರಿಗೆ ರಕ್ಷಾ ಕವಚದಂತೆ ಇರುತ್ತಾರೆ.(Canva)

ಕನ್ಯಾರಾಶಿ- ಈ ರಾಶಿಯವರು ಶ್ರೇಷ್ಠವಾದುದನ್ನು ಸಾಧಿಸಲು ಬಯಸುತ್ತಾರೆ. ಅದರಲ್ಲಿ ವಿವೇಚನೆಯೂ ಇರುತ್ತದೆ. ಆದಾಗ್ಯೂ, ಸಂಬಂಧಗಳ ವಿಚಾರಕ್ಕೆ ಬಂದಾಗ, ಅಲ್ಲಿ ವಿಫಲರಾಗುವ, ಹೊಂದಿಕೊಳ್ಳುವುದಕ್ಕೆ ಸಾಧ್ಯವಾಗದ ಅಸಮರ್ಪಕ ಸಂಬಂಧಗಳಿಗೆ ಭಯ ಪಡುತ್ತಾರೆ. ಈ ಭಯವು ತಮ್ಮ ಮಾನದಂಡಗಳಿಗೆ ಅಳೆಯುವ ಅವರ ಉಪಪ್ರಜ್ಞೆ ಬಯಕೆಯಿಂದಾಗಿ ಅಸೂಯೆಯಾಗಿ ಪ್ರಕಟವಾಗುತ್ತದೆ. ವದಂತಿ, ಊಹಾಪೋಹಗಳಿಗೆ ಅನುಗುಣವಾಗಿ ಸಂಬಂಧಗಳು ಕೆಡುವಂತಹ ನಡೆ, ನುಡಿಗಳು ವ್ಯಕ್ತವಾಗುತ್ತವೆ.  
icon

(7 / 8)

ಕನ್ಯಾರಾಶಿ- ಈ ರಾಶಿಯವರು ಶ್ರೇಷ್ಠವಾದುದನ್ನು ಸಾಧಿಸಲು ಬಯಸುತ್ತಾರೆ. ಅದರಲ್ಲಿ ವಿವೇಚನೆಯೂ ಇರುತ್ತದೆ. ಆದಾಗ್ಯೂ, ಸಂಬಂಧಗಳ ವಿಚಾರಕ್ಕೆ ಬಂದಾಗ, ಅಲ್ಲಿ ವಿಫಲರಾಗುವ, ಹೊಂದಿಕೊಳ್ಳುವುದಕ್ಕೆ ಸಾಧ್ಯವಾಗದ ಅಸಮರ್ಪಕ ಸಂಬಂಧಗಳಿಗೆ ಭಯ ಪಡುತ್ತಾರೆ. ಈ ಭಯವು ತಮ್ಮ ಮಾನದಂಡಗಳಿಗೆ ಅಳೆಯುವ ಅವರ ಉಪಪ್ರಜ್ಞೆ ಬಯಕೆಯಿಂದಾಗಿ ಅಸೂಯೆಯಾಗಿ ಪ್ರಕಟವಾಗುತ್ತದೆ. ವದಂತಿ, ಊಹಾಪೋಹಗಳಿಗೆ ಅನುಗುಣವಾಗಿ ಸಂಬಂಧಗಳು ಕೆಡುವಂತಹ ನಡೆ, ನುಡಿಗಳು ವ್ಯಕ್ತವಾಗುತ್ತವೆ.  (Canva)

ಗಮನಿಸಿ: ಜನಪ್ರಿಯ ನಂಬಿಕೆಗಳು ಮತ್ತು ಶಾಸ್ತ್ರದ ಆಧಾರದ ಮೇಲೆ ಈ ಬರಹವನ್ನು ಪ್ರಕಟಿಸಲಾಗಿದೆ. ಈ ಬರಹವು ಓದುಗರಿಗೆ ಮಾಹಿತಿ ನೀಡುವ ಉದ್ದೇಶವನ್ನು ಮಾತ್ರ ಹೊಂದಿದೆ. ಅನುಸರಿಸುವ ಮೊದಲು ವಿಷಯತಜ್ಞರ ಸಲಹೆ ಪಡೆಯುವುದು ಒಳ್ಳೆಯದು
icon

(8 / 8)

ಗಮನಿಸಿ: ಜನಪ್ರಿಯ ನಂಬಿಕೆಗಳು ಮತ್ತು ಶಾಸ್ತ್ರದ ಆಧಾರದ ಮೇಲೆ ಈ ಬರಹವನ್ನು ಪ್ರಕಟಿಸಲಾಗಿದೆ. ಈ ಬರಹವು ಓದುಗರಿಗೆ ಮಾಹಿತಿ ನೀಡುವ ಉದ್ದೇಶವನ್ನು ಮಾತ್ರ ಹೊಂದಿದೆ. ಅನುಸರಿಸುವ ಮೊದಲು ವಿಷಯತಜ್ಞರ ಸಲಹೆ ಪಡೆಯುವುದು ಒಳ್ಳೆಯದು


ಇತರ ಗ್ಯಾಲರಿಗಳು