ನಿಮಗೆ ಯಾವ ಆಹಾರ ಇಷ್ಟ, ಜನ್ಮರಾಶಿಗೆ ಅನುಗುಣವಾಗಿ ಇಷ್ಟಪಡುವ ಊಟೋಪಹಾರಗಳು, ಆಹಾರ ಕ್ರಮಗಳ ವಿವರ ಹೀಗಿದೆ ನೋಡಿ
ನಿಮಗೆ ಯಾವ ಆಹಾರ ಇಷ್ಟ ಎಂದು ಕೇಳಿದರೆ ಥಟ್ಟಂತ ಹೇಳಿಬಿಡಬಹುದು. ಆದರೆ, ಜನ್ಮರಾಶಿಗೆ ಅನುಗುಣವಾಗಿ ಇಷ್ಟವಾಗುವ ಊಟೋಪಹಾರಗಳು, ಆಹಾರ ಕ್ರಮಗಳು ಕೂಡ ಇವೆ. ನಿಖರವಾಗಿ ಹೀಗೆಯೇ ಎನ್ನಲಾಗದು. ಆದಾಗ್ಯೂ, ಶಾಸ್ತ್ರಗಳಲ್ಲಿರುವ ವಿಷಯಗಳನ್ನು ಆಧರಿಸಿ ಗ್ರಹಿಸಿದ ಅಂಶಗಳನ್ನು ಇಲ್ಲಿ ಮಾಹಿತಿಗಾಗಿ ನೀಡಲಾಗಿದೆ.
(1 / 14)
ಜನ್ಮರಾಶಿಗೆ ಅನುಗುಣವಾಗಿ ಇಷ್ಟವಾಗುವ ಊಟೋಪಹಾರಗಳು, ಆಹಾರ ಕ್ರಮಗಳು ಕೂಡ ಇವೆ. ನಿಖರವಾಗಿ ಇದು ಹೀಗೆಯೇ ಎಂದು ದೃಢೀಕರಿಸುವುದು ಅಸಾಧ್ಯ. ಆದಾಗ್ಯೂ, ಶಾಸ್ತ್ರಗಳಲ್ಲಿರುವ ವಿಷಯಗಳನ್ನು ಆಧರಿಸಿ ಗ್ರಹಿಸಿದ ಅಂಶಗಳನ್ನು ಇಲ್ಲಿ
(2 / 14)
ಮೇಷ ರಾಶಿಯವರು ನಿರ್ಭೀತ ಮತ್ತು ಸಾಹಸಮಯ ಸ್ವಭಾವದವರು. ಆಹಾರದ ವಿಷಯದಲ್ಲಿ ಸಂಕೋಚ ಇಲ್ಲದೇ ಬೇಕೆನಿಸಿದ್ದನ್ನು ತಿನ್ನಲು ಬಯಸುವವರು. ಅದರಲ್ಲೂ ಸ್ಪೈಸಿ ಆಹಾರಗಳು ಅಚ್ಚುಮೆಚ್ಚು. ಸ್ಪೈಸಿ ಮೆಕ್ಸಿಕನ್ ಆಹಾರ ಒಮ್ಮೆಯಾದರೂ ತಿನ್ನಬೇಕೆಂದು ಬಯಸುವವರು.
(3 / 14)
ಉತ್ತಮ ಗುಣಮಟ್ಟದ, ಐಷಾರಾಮಿ ಭಕ್ಷ್ಯ ಭೋಜ್ಯಗಳೇ ಬೇಕು ಎಂದು ಬಯಸಿ ಅದನ್ನು ಸವಿದು ಆನಂದಿಸುವವರು ವೃಷಭ ರಾಶಿಯವರು. ಜೀವನದಲ್ಲಿ ಊಟ, ಉಪಾಹಾರ, ಉಪಚಾರದ ವಿಚಾರದಲ್ಲಿ ರಾಜೀ ಇರಬಾರದು ಎನ್ನುವವರು. ಸಂತೃಪ್ತಿ ನೀಡುವ ಆಹಾರ, ಊಟೋಪಾಹಾರವನ್ನೇ ಬಯಸುತ್ತಾರೆ. ಹಲವು ಬಗೆಯ ಭಕ್ಷ್ಯಗಳನ್ನು ಒಳಗೊಂಡ ಊಟ, ನಸು ಸಿಹಿಯಾದ ತಿನಿಸುಗಳು, ಚಾಟ್ಸ್, ಪಾಸ್ತಾದಂತಹ ಆಹಾರಗಳೆಂದರೆ ಅಚ್ಚುಮೆಚ್ಚು.
(Canva)(4 / 14)
ಲೋಕ ಸಂಚಾರ ಇಷ್ಟಪಡುವವರು ಮಿಥುನ ರಾಶಿಯವರು. ಪ್ರವಾಸ ಎಂದರೆ ಕೇಳಬೇಕಾ, ಆಹಾರ ವೈವಿಧ್ಯ ಬಯಸುವುದು ಅಷ್ಟೇ ಸಹಜ. ಹಲವು ಮಾದರಿಯ ಊಟೋಪಹಾರ, ಸ್ನ್ಯಾಕ್ಸ್, ಚಾಟ್ಸ್, ಕುರುಕಲು ತಿನಿಸುಗಳು ಎಲ್ಲವೂ ಬೇಕು ಇವರಿಗೆ. ಸ್ವಲ್ಪ ಸ್ವಲ್ಪವಾದರೂ ಸರಿ ಫಂಕ್ಷನ್ ಊಟದ ಹಾಗೆ ಇರಬೇಕಪ್ಪಾ ಎನ್ನುವವರು.
(Canva)(5 / 14)
ಮನೆಯ ಊಟ ಅಂದ್ರೆ ಆಯಿತು ಕರ್ಕಾಟಕ ರಾಶಿಯವರಿಗೆ. ಹಿತ ಮಿತ ಭೋಜನಕ್ಕೆ ಆದ್ಯತೆ ನೀಡುತ್ತಾರೆ ಇವರು. ಮನೆಯಲ್ಲಿಯೇ ತಯಾರಿಸಿದ ಊಟೋಪಾಹಾರಗಳನ್ನೇ ಸವಿಯುತ್ತಾರೆ. ಅದು ಮನಸ್ಸಿಗೆ ಹಿತವೆನಿಸುತ್ತದೆ. ನಾರ್ತ್ ಇಂಡಿಯನ್ ಇರಲಿ, ಸೌತ್ ಇಂಡಿಯನ್ ಇರಲಿ, ಎಲ್ಲವನ್ನೂ ಮನೆಯಲ್ಲೇ ಮಾಡಿ ಸವಿಯುವವರು.
(Canva)(6 / 14)
ರಾಶಿಯ ಹೆಸರೇ ಸೂಚಿಸುವಂತೆ ರಾಜಮರ್ಜಿಯವರು. ಉತ್ಕೃಷ್ಟ ಭೋಜನವೇ ಬೇಕು. ರುಚಿಯನ್ನು ಆಸ್ವಾದಿಸುವುದರಲ್ಲಿ ಇವರನ್ನು ಮೀರಿಸುವವರಿಲ್ಲ. ವಿಶೇಷ ಭೋಜನಗಳೆಂದರೆ ಅಚ್ಚುಮೆಚ್ಚು. ವಿಲಕ್ಷಣ ಪಾಕಪದ್ಧತಿಯ ಆಹಾರ, ಟ್ರಫಲ್ಸ್ ಮತ್ತುಚಾಕೊಲೇಟ್ ಮುಂತಾದವುಗಳನ್ನು ಇಷ್ಟಪಡುತ್ತಾರೆ.
(Canva)(7 / 14)
ಆರೋಗ್ಯದ ಬಗ್ಗೆ ಕಾಳಜಿ ಹೊಂದಿದವರು ಕನ್ಯಾರಾಶಿಯವರು. ಆರೋಗ್ಯಕರ ಆಹಾರಗಳಿಗೆ ಆದ್ಯತೆ ನೀಡುತ್ತಾರೆ. ಅವರು ಆರೋಗ್ಯಕರ, ಜಟಿಲವಲ್ಲದ ಊಟವನ್ನು ತಿನ್ನುವುದರಲ್ಲಿ ಸಂತೋಷಪಡುತ್ತಾರೆ. ಸಲಾಡ್‌ಗಳು, ಕ್ವಿನೋವಾ ಮತ್ತು ಹಸಿರು ಸ್ಮೂಥಿಗಳು ಆರೋಗ್ಯಕರ, ಸಾವಯವ ಮತ್ತು ಪೌಷ್ಟಿಕ-ದಟ್ಟವಾದ ಆಹಾರಗಳ ಉದಾಹರಣೆಗಳಾಗಿವೆ.
(Canva )(8 / 14)
ನಾಲಗೆ ರುಚಿ ಈಡೇರಿಸದೇ ಬಿಡುವವರಲ್ಲ ಈ ತುಲಾ ರಾಶಿಯವರು. ಆರೋಗ್ಯಕರ ಮಾತ್ರವಲ್ಲ, ರುಚಿಕರವೂ ಆಗಿರುವ ಊಟೋಪಹಾರಗಳನ್ನೆ ಬಯಸುತ್ತಾರೆ. ಉತ್ತಮ ರುಚಿ ಹೊಂದಿರುವ ಇವರು, ಆಹಾರ ರುಚಿಕರವಷ್ಟೇ ಅಲ್ಲ, ಕಲಾತ್ಮಕವಾಗಿಯೂ ಇರಬೇಕು ಎಂದು ಬಯಸುವವರು. ಉತ್ತಮ ಭಕ್ಷ್ಯ ಭೋಜನಗಳ ಜೊತೆಗೆ ಪ್ಲ್ಯಾಟರ್‌ಗಳನ್ನೂ ಹೊಂದಿರುವ ಸಮತೋಲನದ ಆಹಾರವನ್ನು ಇಷ್ಟಪಡುತ್ತಾರೆ.
(Canva)(9 / 14)
ಸಂಕೀರ್ಣ ಮತ್ತು ಶ್ರೀಮಂತ ಪಾಕಪದ್ಧತಿಯನ್ನು ಆನಂದಿಸುವಂತಹ ಭಾವನೆಗಳು ಇರುವಂಥವರು ವೃಶ್ಚಿಕ ರಾಶಿಯವರು. ಆಕರ್ಷಕ ಮತ್ತು ಹೆಚ್ಚು ಸುವಾಸನೆಯುಳ್ಳ ಆಹಾರಗಳನ್ನೇ ಬಯಸುತ್ತಾರೆ. ಘಮಘಮವೆನ್ನುವ ಊಟ, ಡಾರ್ಕ್ ಚಾಕೊಲೇಟ್, ಮಸಾಲೆಯುಕ್ತ ಊಟೋಪಹಾರ, ವಿರಳ ಹಣ್ಣುಗಳನ್ನು ತಿನ್ನಲು ಬಯಸುತ್ತಾರೆ.
(Canva )(10 / 14)
ಅಭಿರುಚಿ ಮತ್ತು ಸಂಸ್ಕೃತಿಗೆ ಅನುಗುಣವಾಗಿ ಧನು ರಾಶಿಯವರು ಆಹಾರವನ್ನು ಬಯಸುತ್ತಾರೆ. ಹೊಸ ಹೊಸ ರುಚಿ ಅನ್ವೇಷಿಸುತ್ತ ಏನೆಲ್ಲ ತಿನ್ನಬಹುದೋ ಅದೆಲ್ಲವನ್ನೂ ತಿಂದು ಅರಗಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಥಾಯ್ ಕರಿ ಅಥವಾ ಭಾರತದ ಆಹಾರಗಳು ಅಥವಾ ಫ್ಯೂಷನ್ ಆಹಾರಗಳನ್ನು ಇಷ್ಟಪಡುತ್ತಾರೆ.
(Canva )(11 / 14)
ನಾನ್ ವೆಜ್ ತಿನ್ನುವವರಾದರೆ, ಹಿಸುಕಿದ ಆಲೂಗಡ್ಡೆ ಮತ್ತು ರೋಸ್ಟ್ ಭೀಫ್ ಮುಂತಾದ ಆಹಾರವನ್ನು ಬಯಸುತ್ತಾರೆ. ಉಳಿದಂತೆ ಹೊಟ್ಟೆ ಕೆಡದಂತಹ ಆರಾಮದಾಯಕ ಆಹಾರ, ಹಳೆಯ ಪಾಕಪದ್ಧತಿಯ ಆಹಾರಗಳನ್ನು ಇಷ್ಟಪಡುತ್ತಾರೆ.
(12 / 14)
ಆಹಾರದ ವಿಚಾರಕ್ಕೆ ಬಂದರೆ ಸಾಹಸಿಗಳು ಇವರು. ವಿಭಿನ್ನ ಪಾಕಪದ್ಧತಿಗಳನ್ನು ಪ್ರಯತ್ನಿಸುವುದನ್ನು ಆನಂದಿಸುತ್ತಾರೆ. ಅವರು ತಮ್ಮ ಪ್ರಗತಿಪರ ಆದರ್ಶಗಳನ್ನು ಪ್ರತಿಬಿಂಬಿಸುವ ಕಾಲ್ಪನಿಕ ಭೋಜನ ಕೂಟಗಳಲ್ಲಿ ಭಾಗವಹಿಸಲು ಇಷ್ಟಪಡುತ್ತಾರೆ. ಫ್ಯೂಷನ್ ಮೀಲ್ಸ್, ಸಸ್ಯಾಹಾರಿ ಪಾಕಪದ್ಧತಿ ಮತ್ತು ಪ್ರಾಯೋಗಿಕ ಪಾಕವಿಧಾನಗಳ ಆಹಾರ ಮತ್ತು ವಿರಳ ಪಾಕಪದ್ಧತಿಯ ಆಹಾರಗಳನ್ನೂ ಇಷ್ಟಪಡುತ್ತಾರೆ.
(Canva )(13 / 14)
ನಾನ್ ವೆಜ್ ತಿನ್ನುವವರಿಗೆ ಬಹುತೇಕರಿಗೆ ಸಮುದ್ರಾಹಾರ ಇಷ್ಟವಾಗಿಬಿಡುತ್ತದೆ. ಆದಾಗ್ಯೂ, ಊಟೋಪಹಾರಗಳು ಹಿತ ಮಿತವಾಗಿದ್ದರೆ ಖುಷಿಪಡುತ್ತಾರೆ. ಚೀಸ್, ಚಾಟ್ಸ್, ಸಿಹಿ ತಿನಿಸು, ಖಾರ ಎಲ್ಲವನ್ನೂ ಬಯಸುತ್ತಾರೆ. ಆರೋಗ್ಯದ ಕಡೆಗೂ ಗಮನಹರಿಸುತ್ತಾರೆ.
(Canva )ಇತರ ಗ್ಯಾಲರಿಗಳು