ಫೋಟೋಗ್ರಫಿ ಅಂದ್ರೆ ಬಹಳ ಇಷ್ಟಾನಾ; ಹಾಗಾದ್ರೆ ಈ 6 ರಾಶಿಯವರಲ್ಲಿ ನೀವೂ ಇರಬಹುದು, ಯಾವ ರಾಶಿಯವರಿಗೆಲ್ಲ ಛಾಯಾಗ್ರಹಣ ಇಷ್ಟ ನೋಡಿ
ಎಲ್ಲರಿಗೂ ಫೋಟೋಗ್ರಫಿ ಇಷ್ಟ ಆಗಲ್ಲ. ಫೋಟೋಗ್ರಫಿ ಅಂದ್ರೆ ಬಹಳ ಇಷ್ಟಾನಾ; ಹಾಗಾದ್ರೆ ಈ 6 ರಾಶಿಯವರಲ್ಲಿ ನೀವೂ ಇರಬಹುದು, ಯಾವ ರಾಶಿಯವರಿಗೆಲ್ಲ ಛಾಯಾಗ್ರಹಣ ಇಷ್ಟ ನೋಡಿ.
(1 / 7)
ರಾಶಿಚಕ್ರ ಚಿಹ್ನೆಗಳಿಗೆ ಅದರದ್ದೇ ಆದ ಗುಣಸ್ವಭಾವಗಳನ್ನು ಹೊಂದಿವೆ. ಇದರಂತೆ, ಆಯಾ ರಾಶಿಗಳಲ್ಲಿ ಜನಿಸಿದವರೂ ಗುಣ ಸ್ವಭಾವಗಳನ್ನು ಹೊಂದುತ್ತಾರೆ. ಈಗ ಫೋಟೋಗ್ರಫಿ ಬಗ್ಗೆ ಗಮನಿಸುವುದಾದರೆ, ಇದರ ಬಗ್ಗೆ ಒಲವು ಇರುವಂಥ ಕೆಲವು ರಾಶಿಗಳಿವೆ. ಅಂತಹ 6 ರಾಶಿಗಳ ವಿವರ ಇಲ್ಲಿದೆ.
(2 / 7)
ವೃಷಭ ರಾಶಿ: ಈ ರಾಶಿಯವರು ಬಹಳ ಜಾಗರೂಕ ಪ್ರವೃತ್ತಿಯವರು. ಪ್ರವಾಸ, ಪ್ರಯಾಣ ಇಷ್ಟಪಡುವವರು. ಕುತೂಹಲಿಗಳು. ಹೊಸ ವಿಷಯ ಕಲಿಯಲು ಇಷ್ಟಪಡುತ್ತಾರೆ. ಛಾಯಾಗ್ರಹಣ ಅಂದ್ರೆ ಅಚ್ಚುಮೆಚ್ಚು. ಫೋಟೋಗಳ ಮೂಲಕ ಕಥೆ ಹೇಳಲು ಬಯಸುತ್ತಾರೆ.
(3 / 7)
ಕಟಕ ರಾಶಿ: ಸೂಕ್ಷ್ಮ ಸಂವೇದನೆಯುಳ್ಳವರು. ಸಂವೇದನಾಶೀಲರಾಗಿದ್ದು, ಭಾವನಾತ್ಮಕ ಕ್ಷಣಗಳನ್ನು ಸೆರೆ ಹಿಡಿದಿಡಲು ಬಯಸುವವರು. ಇದಕ್ಕಾಗಿ ಫೋಟೋಗ್ರಫಿ ಮಾಡ್ತಾರೆ.
(4 / 7)
ಸಿಂಹ ರಾಶಿ: ಈ ರಾಶಿಯವರು ಭಾವಜೀವಿಗಳು. ಸೃಜನಶೀಲರು, ಫೋಟೋಗ್ರಫಿಯ ಮೂಲಕ ತಮ್ಮ ಸೃಜನಶೀಲ ಚಿಂತನೆಯನ್ನು ಪ್ರಸ್ತುತಿ ಮಾಡಲು ಪ್ರಯತ್ನಿಸುತ್ತಾರೆ. ಆಹಾರ, ಫ್ಯಾಷನ್, ಪ್ರಕೃತಿ ಸೌಂದರ್ಯವನ್ನೂ ಆಸ್ವಾದಿಸುತ್ತ, ಸೆರೆಹಿಡಿಯುತ್ತಾರೆ.
(5 / 7)
ಧನುರಾಶಿ: ಧೈರ್ಯಶಾಲಿಗಳು, ಹೊಸ ಸ್ಥಳ, ಪ್ರವಾಸ, ಪ್ರಯಾಣದ ಬಗ್ಗೆ ಉತ್ಸುಕರು. ಅನುಭವಗಳನ್ನು ದಾಖಲಿಸಲು ಛಾಯಾಗ್ರಹಣವನ್ನು ಬಳಸುತ್ತಾರೆ. ಸಂಸ್ಕೃತಿ, ಪ್ರಕೃತಿ ಕಡೆಗೆ ಒಲವುಳ್ಳವರು. ಎಲ್ಲವನ್ನೂ ಫೋಟೋಗ್ರಫಿಯಲ್ಲಿ ಸೆರೆಹಿಡಿದು ಪ್ರಸ್ತುತಿ ಮಾಡಬಯಸುತ್ತಾರೆ.
(6 / 7)
ಮಕರ ರಾಶಿ: ಸಾಮರಸ್ಯ ಮತ್ತು ಸೌಂದರ್ಯದ ಆರಾಧಕರು. ಸೃಜನಶೀಲರಾಗಿದ್ದು, ಮಧುರ ಭಾವ ಹೊಂದಿರುವಂಥವರು. ಛಾಯಾಗ್ರಹಣದ ಮೂಲಕ ಎಲ್ಲ ಅನುಭವಗಳನ್ನೂ ಸೆರೆಹಿಡಿಯಲು ಪ್ರಯತ್ನಿಸುತ್ತಾರೆ. ಹೆಚ್ಚಾಗಿ ಪ್ರಕೃತಿ ಚಿತ್ರ, ಆಸಕ್ತಿದಾಯಕ ಚಿತ್ರಗಳನ್ನು ಸೆರೆಹಿಡಿಯುತ್ತಾರೆ.
ಇತರ ಗ್ಯಾಲರಿಗಳು