Turkey-Syria Earthquake: ಟರ್ಕಿ-ಸಿರಿಯಾದಲ್ಲಿ ಭೂಕಂಪಕ್ಕೆ 640 ಮಂದಿ ಬಲಿ.. ಸಹಾಯದ ಭರವಸೆ ನೀಡಿದ ಪಿಎಂ ಮೋದಿ
ಇಂದು ಮುಂಜಾನೆ ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ಪ್ರಬಲ ಭೂಕಂಪದಿಂದಾಗಿ ಬರೋಬ್ಬರಿ 640 ಜನರು ಸಾವನ್ನಪ್ಪಿದ್ದಾರೆ. ರಿಕ್ಟರ್ ಮಾಪಕದಲ್ಲಿ 7.9 ರಷ್ಟು ತೀವ್ರತೆ ದಾಖಲಾಗಿದೆ. ಇನ್ನೂ ನೂರಾರು ಜನರು ಅವಶೇಷಗಳಲ್ಲಿ ಸಿಲುಕಿಕೊಂಡಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ಇತರೆ ರಾಷ್ಟ್ರಗಳ ಸಹಾಯಕ್ಕಾಗಿ ಟರ್ಕಿ ಅಂಗಲಾಚಿದೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಯುಎಸ್ ಅಧ್ಯಕ್ಷ ಜೋ ಬೈಡನ್ ಅವರು ಸಾವಿಗೆ ಸಂತಾಪ ಸೂಚಿಸಿದ್ದಾರೆ ಮತ್ತು ಈ ದುರಂತವನ್ನು ನಿಭಾಯಿಸಲು ಸಾಧ್ಯವಿರುವ ಎಲ್ಲ ನೆರವನ್ನು ಟರ್ಕಿಗೆ ನೀಡುವುದಾಗಿ ಭರವಸೆ ನೀಡಿದ್ದಾರೆ.
(1 / 8)
ಪ್ರಬಲ ಭೂಕಂಪದ ಬಳಿಕ 20 ಬಾರಿ ಭೂಮಿ ಕಂಪಿಸಿದೆ. ನೆರೆಯ ರಾಷ್ಟ್ರಗಳಾದ ಸೈಪ್ರಸ್ ಮತ್ತು ಲೆಬನಾನ್‌ನಲ್ಲಿಯೂ ಭೂಮಿ ಕಂಪಿಸಿದ ಅನುಭವವಾಗಿದೆ. (REUTERS)
(2 / 8)
ದಕ್ಷಿಣ ಟರ್ಕಿಯ ಕಹ್ರಮನ್ಮರಸ್ ಪ್ರಾಂತ್ಯದ ಪಜಾರ್ಸಿಕ್‌ನಲ್ಲಿ ಭೂಕಂಪದ ನಂತರ ಕುಸಿದು ಬಿದ್ದ ಬಹುಮಹಡಿ ಕಟ್ಟಡ. ಹೀಗೆ ಅನೇಕ ಕಟ್ಟಡಗಳು ಅಪಾಯಕಾರಿ ಮಟ್ಟದಲ್ಲಿ ವಾಲಿಕೊಂಡಿದ್ದು, ಬೀಳುವ ಹಂತದಲ್ಲಿವೆ.(AP)
(3 / 8)
ಟರ್ಕಿಯ ದಿಯಾರ್‌ಬಕಿರ್‌ನಲ್ಲಿ ಸಂಭವಿಸಿದ ಭಾರೀ ಭೂಕಂಪದ ನಂತರ ಅವಶೇಷಗಳಡಿ ಇರುವವರನ್ನು ಹುಡುಕುತ್ತಿರುವ ರಕ್ಷಣಾ ಸಿಬ್ಬಂದಿ. ಸಿರಿಯಾ ಯುದ್ಧದ ವೇಳೆ ಅನೇಕ ನಿರಾಶ್ರಿತರು ಟರ್ಕಿಯಲ್ಲಿ ಬಂದು ವಾಸವಾಗಿದ್ದರು. (AP)
(4 / 8)
ಟರ್ಕಿಯ ಅದಾನಾದಲ್ಲಿ ಕುಸಿದು ಬಿದ್ದ ಕಟ್ಟಡಗಳಡಿ ಸಿಲುಕಿರುವ ನಿವಾಸಿಗಳನ್ನು ರಕ್ಷಿಸಲು ಜನರು ಮತ್ತು ರಕ್ಷಣಾ ತಂಡಗಳು ಪ್ರಯತ್ನಿಸುತ್ತಿರುವ ದೃಶ್ಯ. ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಅವರು, ಭೂಕಂಪದಿಂದ ಹಾನಿಗೊಳಗಾದ ಪ್ರದೇಶಗಳಿಗೆ ರಕ್ಷಣಾ ತಂಡಗಳನ್ನು ಕಳುಹಿಸಲಾಗಿದೆ. ಅವಶೇಷಗಳಡಿ ಸಿಲುಕಿರುವ ಜನರನ್ನು ರಕ್ಷಿಸಲು ಕ್ಷಿಪ್ರ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.(AFP)
(5 / 8)
ಸಿರಿಯಾದಲ್ಲಿ ಸಂಭವಿಸಿದ ಭೂಕಂಪದಲ್ಲಿ ಗಾಯಗೊಂಡವರನ್ನು ಆಂಬ್ಯುಲೆನ್ಸ್‌ಗೆ ಸಾಗಿಸುತ್ತಿರುವ ದೃಶ್ಯ. ಟರ್ಕಿಯ ಮತಾತ್ಯ ಪ್ರಾಂತ್ಯವೊಂದರಲ್ಲೇ 130ಕ್ಕೂ ಹೆಚ್ಚು ಕಟ್ಟಡಗಳಿಗೆ ಹಾನಿಯಾಗಿದೆ. (REUTERS)
(6 / 8)
ಇತರೆ ರಾಷ್ಟ್ರಗಳ ಸಹಾಯಕ್ಕಾಗಿ ಟರ್ಕಿ ಅಂಗಲಾಚಿದೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಯುಎಸ್ ಅಧ್ಯಕ್ಷ ಜೋ ಬೈಡನ್ ಅವರು ಸಾವಿಗೆ ಸಂತಾಪ ಸೂಚಿಸಿದ್ದಾರೆ ಮತ್ತು ಈ ದುರಂತವನ್ನು ನಿಭಾಯಿಸಲು ಸಾಧ್ಯವಿರುವ ಎಲ್ಲ ನೆರವನ್ನು ಟರ್ಕಿಗೆ ನೀಡುವುದಾಗಿ ಭರವಸೆ ನೀಡಿದ್ದಾರೆ. (REUTERS)
(7 / 8)
ಕರ್ನಾಟಕದ ಬೆಂಗಳೂರಿನಲ್ಲಿ ನಡೆಯುತ್ತಿರುವ ಇಂಡಿಯಾ ಎನರ್ಜಿ ವೀಕ್ 2023 ಕಾರ್ಯಕ್ರಮದಲ್ಲಿ ಈ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ, ಟರ್ಕಿಯಲ್ಲಿ ಸಂಭವಿಸಿದ ವಿನಾಶಕಾರಿ ಭೂಕಂಪವನ್ನು ನಾವೆಲ್ಲರೂ ನೋಡುತ್ತಿದ್ದೇವೆ. ಹಲವಾರು ಜನರು ಸಾವನ್ನಪ್ಪಿರುವ ವರದಿಗಳು ಬಂದಿವೆ. ಟರ್ಕಿಯ ಸಮೀಪವಿರುವ ದೇಶಗಳಲ್ಲಿಯೂ ಸಹ ಹಾನಿಗಳನ್ನು ಶಂಕಿಸಲಾಗಿದೆ. ಭಾರತದ 140 ಕೋಟಿ ಜನರ ಸಹಾನುಭೂತಿಯು ಎಲ್ಲಾ ಭೂಕಂಪ ಪೀಡಿತ ಜನರೊಂದಿಗೆ ಇದೆ. ಭೂಕಂಪ ಪೀಡಿತ ಜನರಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡಲು ಭಾರತ ಸಿದ್ಧವಾಗಿದೆ ಎಂದು ಹೇಳಿದ್ದಾರೆ. (AFP)
(8 / 8)
ಈಗಾಗಲೇ ಭೂಕಂಪದ ಪರಿಣಾಮ ಟರ್ಕಿ ಮತ್ತು ಸಿರಿಯಾದಲ್ಲಿ ಕನಿಷ್ಠ 640 ಮಂದಿ ಬಲಿಯಾಗಿದ್ದಾರೆ. ಇನ್ನೂ ನೂರಾರು ಜನರು ಅವಶೇಷಗಳಲ್ಲಿ ಸಿಲುಕಿಕೊಂಡಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. (AFP)
ಇತರ ಗ್ಯಾಲರಿಗಳು