ಭಾರತದ ವನಿತೆಯರಿಗೆ ಸೋಲುಣಿಸಿ ಸರಣಿ ಗೆದ್ದ ಆಸ್ಟ್ರೇಲಿಯಾ; ಕಳಪೆಯಾಟಕ್ಕೆ ಭಾರೀ ಬೆಲೆತೆತ್ತ ಹರ್ಮನ್ ಪಡೆ
India vs australia 2nd odi: ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲೂ ಟೀಮ್ ಇಂಡಿಯಾ ಸೋಲೊಪ್ಪಿಕೊಂಡಿದೆ. ಈ ಗೆಲುವಿನೊಂದಿಗೆ ಆಸೀಸ್ ವನಿತೆಯರು ಪಂದ್ಯ ಬಾಕಿ ಇರುವಂತೆಯೇ ಸರಣಿಯನ್ನು ವಶಪಡಿಸಿಕೊಂಡಿದ್ದಾರೆ.
(1 / 5)
ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲೂ ಭಾರತ ಮಹಿಳಾ ತಂಡ ಸೋಲಿಗೆ ಶರಣಾಗಿದೆ. ಇದರೊಂದಿಗೆ ಒಂದು ಪಂದ್ಯ ಬಾಕಿ ಇರುವಂತೆಯೇ 3 ಪಂದ್ಯಗಳ ಸರಣಿಯನ್ನು ಕಳೆದುಕೊಂಡಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಮಿಂಚಿದ ಆಸ್ಟ್ರೇಲಿಯಾ ತವರಿನಲ್ಲಿ ಮತ್ತೊಂದು ಸರಣಿಗೆ ಮುತ್ತಿಕ್ಕಿದೆ.
(AFP)(2 / 5)
ಬ್ರಿಸ್ಬೇನ್ನ ಅಲನ್ ಬಾರ್ಡರ್ ಫೀಲ್ಡ್ನಲ್ಲಿ ಜರುಗಿದ ಎರಡನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ ನಿಗದಿತ 50 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 371 ರನ್ಗಳ ಬೃಹತ್ ಮೊತ್ತ ಪೇರಿಸಿತು. ಎಲ್ಲಿಸ್ ಪೆರಿ (105) ಮತ್ತು ಜಾರ್ಜಿಯಾ ವೊಲ್ (101) ಭರ್ಜರಿ ಶತಕ ಸಿಡಿಸಿ ಮಿಂಚಿದರು.
(3 / 5)
ಈ ಬೃಹತ್ ಗುರಿ ಬೆನ್ನಟ್ಟಿದ ಟೀಮ್ ಇಂಡಿಯಾ, ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿತು. ಸ್ಮೃತಿ ಮಂಧಾನ, ಹರ್ಲೀನ್ ಡಿಯೋಲ್, ಜೆಮಿಮಾ ರೊಡ್ರಿಗಸ್, ಹರ್ಮನ್ಪ್ರೀತ್ ಕೌರ್, ದೀಪ್ತಿ ಶರ್ಮಾ ಮತ್ತೆ ನಿರಾಸೆ ಮೂಡಿಸಿದರು. ರಿಚಾ ಘೋಷ್ ಅರ್ಧಶತಕ ಸಿಡಿಸಿದರೆ, ಮಿನ್ನು ಮಣಿ 46 ರನ್ ಸಿಡಿಸಿ ಗಮನ ಸೆಳೆದರು. 44.5 ಓವರ್ಗಳಲ್ಲಿ 249ಕ್ಕೆ ಆಲೌಟ್ ಆಯಿತು.
(4 / 5)
ಆಸ್ಟ್ರೇಲಿಯಾ ಬ್ಯಾಟಿಂಗ್ ಜೊತೆಗೆ ಬೌಲಿಂಗ್ನಲ್ಲೂ ಮಿಂಚಿತು. ಅನ್ನಾಬೆಲ್ ಸದರ್ಲ್ಯಾಂಡ್ 4 ವಿಕೆಟ್ ಪಡೆದರು. ಉಳಿದಂತೆ ಮೇಗನ್ ಸೂಟ್, ಕಿಮ್ ಗಾರ್ತ್, ಆ್ಯಶ್ಲೆ ಗಾರ್ಡನರ್, ಅಲನಾ ಕಿಂಗ್ ತಲಾ ಒಂದು ವಿಕೆಟ್ ಪಡೆದರು. ಆದರೆ ಟೀಮ್ ಇಂಡಿಯಾ ಬೌಲರ್ಗಳು ಎಲ್ಲರೂ 60+ ರನ್ ಬಿಟ್ಟುಕೊಟ್ಟು ದುಬಾರಿ ಬೌಲರ್ಗಳು ಎನಿಸಿಕೊಂಡಿದ್ದಾರೆ. ಮಿನ್ನು ಮಣಿ 2 ವಿಕೆಟ್ ಪಡೆದರು.
ಇತರ ಗ್ಯಾಲರಿಗಳು