Bajaj Pulsar N125: ಹೊಸ ಬಜಾಜ್ ಪಲ್ಸರ್ ಎನ್ 125 ಆಗಮನ, ಬೋಲ್ಡ್ ಲುಕ್‌ನಿಂದ ಹಳೆ ಚಾರ್ಮ್ ಕಳೆದೋಯ್ತ? ಓದಿ ಬೈಕ್ ವಿಮರ್ಶೆ
- Bajaj Pulsar N125: ಬಜಾಜ್ ಪಲ್ಸರ್ ಎನ್ 125 ಆಗಮಿಸಿದೆ. . ಸುಮಾರು 1 ಲಕ್ಷ ರೂಪಾಯಿ ಎಕ್ಸ್ ಶೋರೂಂ ದರದ ಈ ಪಲ್ಸರ್ ಬೋಲ್ಡ್ ಲುಕ್ ಪಡೆದಿದೆ. ಎಲ್‌ಇಡಿ ಹೆಡ್‌ಲ್ಯಾಂಪ್ ಮತ್ತು ಬ್ಲೂಟೂಥ್ ಕನೆಕ್ಟಿವಿಟಿ ಹೊಂದಿದೆ. ಈ ಹೊಸ ಪಲ್ಸರ್ ಬೈಕ್‌ನ ಚಿತ್ರಗಳನ್ನು ನೋಡುತ್ತ ವಿಮರ್ಶೆ ಮಾಡೋಣ ಬನ್ನಿ.
- Bajaj Pulsar N125: ಬಜಾಜ್ ಪಲ್ಸರ್ ಎನ್ 125 ಆಗಮಿಸಿದೆ. . ಸುಮಾರು 1 ಲಕ್ಷ ರೂಪಾಯಿ ಎಕ್ಸ್ ಶೋರೂಂ ದರದ ಈ ಪಲ್ಸರ್ ಬೋಲ್ಡ್ ಲುಕ್ ಪಡೆದಿದೆ. ಎಲ್‌ಇಡಿ ಹೆಡ್‌ಲ್ಯಾಂಪ್ ಮತ್ತು ಬ್ಲೂಟೂಥ್ ಕನೆಕ್ಟಿವಿಟಿ ಹೊಂದಿದೆ. ಈ ಹೊಸ ಪಲ್ಸರ್ ಬೈಕ್‌ನ ಚಿತ್ರಗಳನ್ನು ನೋಡುತ್ತ ವಿಮರ್ಶೆ ಮಾಡೋಣ ಬನ್ನಿ.
(1 / 9)
ಸ್ಪೋರ್ಟ್ಸ್ ಕಮ್ಯೂಟರ್ ಬೈಕ್ ವಿಭಾಗದಲ್ಲಿ ಬಜಾಜ್ ಪಲ್ಸರ್ ಎನ್ 125 ಬಿಡುಗಡೆಯಾಗಿದೆ. ಆದರೆ, ಈ ಬೈಕ್ ಬಗ್ಗೆ ಸಾಕಷ್ಟು ಜನರು ಅಪಸ್ವರ ಎತ್ತಿದ್ದಾರೆ.ಒಳ್ಳೆಯ ಡಿಸೈನ್‌ಗೆ ಹೆಸರಾಗಿದ್ದ ಪಲ್ಸರ್ ವಿನ್ಯಾಸವನ್ನೇ ಇದು ಹೋಲುತ್ತಿಲ್ಲ ಎನ್ನುವವರೂ ಇದ್ದಾರೆ. ಈ ಬೈಕ್ ಇಲ್‌ಇಡಿ ಡಿಸ್ಕ್ ಮತ್ತು ಎಲ್‌ಇಡಿ ಡಿಸ್ಕ್ ಬಿಟಿ ಎಂಬ ವರ್ಷನ್‌ಗಳಲ್ಲಿ ದೊರಕುತ್ತಿದೆ. ಇದರ ಬೋಲ್ಡ್ ಲುಕ್ ಕುರಿತು ಕೆಲವರು ಪಾಸಿಟೀವ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಡಿಸೈನ್ ಹೆಸರಲ್ಲಿ ಪಲ್ಸರ್ ಹೆಸರು ಹಾಳಾಗದೆ ಇದ್ರೆ ಸಾಕು ಎಂಬ ಅಭಿಪ್ರಾಯವೂ ಬಂದಿದೆ.
(2 / 9)
ಹೊಸ ಪಲ್ಸರ್ ಬೋಲ್ಡ್ ವಿನ್ಯಾಸವನ್ನು ಹೊಂದಿದೆ. ಇದು ಇತರ ಎನ್ ಸರಣಿಯ ಮಾದರಿಗಳಿಗಿಂತ ಭಿನ್ನವಾಗಿದೆ. ನಾವು ಟೆಸ್ಟ್ ರೈಡ್ ಮಾಡಿದ್ದು ಪರ್ಪಲ್ ಫ್ಯೂರಿ ಬಣ್ಣದ ಬೈಕ್. ಇದು ಕಾಕ್ಟೈಲ್ ವೈನ್ ರೆಡ್, ಸಿಟ್ರಸ್ ರಶ್, ಎಬೊನಿ ಬ್ಲ್ಯಾಕ್, ಕೆರಿಬಿಯನ್ ಬ್ಲೂ ಮತ್ತು ಪರ್ಲ್ ಮೆಟಾಲಿಕ್ ವೈಟ್ ಬಣ್ಣಗಳಲ್ಲಿಯೂ ದೊರಕುತ್ತದೆ. ಟ್ಯಾಂಕ್‌ನಲ್ಲಿ ಹಳದಿ ಬಣ್ಣದಲ್ಲಿ ಪಲ್ಸರ್ ಎಂದು ಬರೆದಿರುವ ವಿನ್ಯಾಸ ಗಮನಿಸಿ.
(3 / 9)
ಬಜಾಜ್ ಕಂಪನಿಯು ಎನ್ ಸೀರಿಸ್ ಶೈಲಿಯಿಂದ ಸ್ಪೂರ್ತಿ ಪಡೆದಂತೆ ಇದೆ. ಹೆಡ್ ಲ್ಯಾಂಪ್ ಘಟಕವನ್ನು ಸುತ್ತುವರೆದಿರುವ ಈ ಕವರ್ ಎಕ್ಸ್ ಟೆನ್ಷನ್ ಗಳೊಂದಿಗೆ ಬರುವ ಫ್ಯೂಯಲ್ ಟ್ಯಾಂಕ್ ಗಮನ ಸೆಳೆಯುತ್ತದೆ.
(4 / 9)
ಬಜಾಜ್ ಪಲ್ಸರ್ ಎನ್ 125 ಬೈಕಿನಲ್ಲಿ ಎಲ್ಇಡಿ ಹೆಡ್ ಲ್ಯಾಂಪ್ ಗಳು, ಟೂ ಪೀಸ್ ಎಲ್ಇಡಿ ಟೈಲ್ ಲ್ಯಾಂಪ್ ಮತ್ತು ಹ್ಯಾಲೋಜೆನ್ ಬಲ್ಬ್ ಟರ್ನ್ ಇಂಡಿಕೇಟರ್ ಗಳನ್ನು ಅಳವಡಿಸಲಾಗಿದೆ.
(5 / 9)
ಹೊಸ ಸ್ಪೋರ್ಟ್ಸ್ ಬೈಕ್‌ನಲ್ಲಿ ಸ್ಪ್ಲಿಟ್-ಸೀಟ್ ಸೆಟಪ್ ಇದೆ. ಹಿಂಬದಿ ಸವಾರರಿಗೆ ಸಿಂಗಲ್-ಪೀಸ್ ಗ್ರಾಬ್ ರೈಲ್ ನೀಡಲಾಗಿದೆ.
(6 / 9)
ಎನ್ 125 ಸಮಗ್ರ ಟೆಕ್ ಪ್ಯಾಕೇಜ್ ಜತೆ ಆಗಮಿಸಿದೆ. ಆಲ್-ಡಿಜಿಟಲ್ ಎಲ್ ಸಿಡಿ ಇನ್ಸ್ ಟ್ರೂಮೆಂಟ್ ಕನ್ಸೋಲ್ ಹೊಂದಿದೆ. ವೇಗ, ಟ್ರಿಪ್ ಮೀಟರ್, ಫ್ಯೂಯಲ್ ಗೇಜ್, ಓಡೋಮೀಟರ್ ಮತ್ತು ಹೆಚ್ಚಿನ ಮಾಹಿತಿಯನ್ನು ಇದು ತೋರಿಸುತ್ತದೆ. ಎಲ್ಇಡಿ ಡಿಸ್ಕ್ ಬಿಟಿ ಆವೃತ್ತಿಯು ಬ್ಲೂಟೂತ್ ಕನೆಕ್ಟಿವಿಟಿ ಹೊಂದಿದೆ.
(7 / 9)
ಪವರ್ ಟ್ರೇನ್ ಮತ್ತು ಪರ್ಫಾಮೆನ್ಸ್ ಅಂಕಿಅಂಶಗಳ ವಿವರಗಳು ಇನ್ನೂ ಹೊರಬಂದಿಲ್ಲ. ಇದರ ಎಂಜಿನ್ 11.8 ಬಿಹೆಚ್ ಪಿ ಮತ್ತು 11 ಎನ್ಎಂ ಪೀಕ್ ಟಾರ್ಕ್ ನೀಡಬಹುದು. ಪಲ್ಸರ್ ಎನ್ 125 ಬೈಕಿನಲ್ಲಿ 125 ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಎಂಜಿನ್ ಹೊಂದಿದೆ. ಈ ಬೈಕ್ ಹಗುರವಾಗಿರುವುದರಿಂದ ಪವರ್ ಟು ವೇ ಅನುಪಾತ ಗಮನಿಸಬೇಕಿದೆ.
(8 / 9)
ಬಜಾಜ್ ಕಂಪನಿಯು ಪಲ್ಸರ್ ಎನ್ 125 ಬೈಕಿನಲ್ಲಿ ಸ್ಟ್ಯಾಂಡರ್ಡ್ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್, ರಿಯರ್ ಮೊನೊಶಾಕ್ ಸಸ್ಪೆಂಷನ್ ಮತ್ತು ಬಾಕ್ಸ್ ಸೆಕ್ಷನ್ ಸ್ವಿಂಗ್ ಆರ್ಮ್ ಅನ್ನು ಸ್ಟ್ಯಾಂಡರ್ಡ್ ಆಗಿ ಅಳವಡಿಸಿದೆ. ಈ ಬೈಕಿನ ಮುಂಭಾಗದಲ್ಲಿ 240 ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್ ಅನ್ನು ಅಳವಡಿಸಲಾಗಿದೆ.
(9 / 9)
ಎನ್ 125 ಇತ್ತೀಚೆಗೆ ನವೀಕರಿಸಿದ ಎನ್ 160 ಮತ್ತು ಎನ್ 250 ಮೋಟಾರ್ ಬೈಕ್‌ಗಳನ್ನು ಬಿಡುಗಡೆ ಮಾಡಿತ್ತು. ಇದೀಗ ಈ ಸ್ಪೋರ್ಟ್ ಬೈಕ್ ಪರಿಚಯಿಸಿತ್ತು. ಈ ಬೈಕ್ ಬಜಾಜ್ ಪಲ್ಸರ್‌ನ ಉನ್ನತ್ತ ಆವೃತ್ತಿಗಳನ್ನ ರೈಡ್ ಮಾಡಿದವರಿಗೆ ಇಷ್ಟವಾಗುವುದು ಕಷ್ಟ ಎಂಬ ಅಭಿಪ್ರಾಯ ಇದೆ. ಆದರೆ, ಕಡಿಮೆ ದರದಲ್ಲಿ ಪಲ್ಸರ್ ಬೈಕ್ ಖರೀದಿಸಲು ಬಯಸುವವರಿಗೆ ಈ ಸ್ಪೋರ್ಟ್ಸ್ ಲುಕ್‌ನ ಬೈಕ್ ಇಷ್ಟವಾಗಬಹುದು.
ಇತರ ಗ್ಯಾಲರಿಗಳು