Honda Bike: ಹೋಂಡಾ ಎಸ್‌ಬಿ 160 ಬೈಕ್‌ ಭಾರತದಲ್ಲಿ ಬಿಡುಗಡೆ, ದರ 1.12 ಲಕ್ಷ ರೂಪಾಯಿ, ಈ ಬೈಕ್‌ನಲ್ಲಿ ಏನೇನಿದೆ ವಿಶೇಷ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Honda Bike: ಹೋಂಡಾ ಎಸ್‌ಬಿ 160 ಬೈಕ್‌ ಭಾರತದಲ್ಲಿ ಬಿಡುಗಡೆ, ದರ 1.12 ಲಕ್ಷ ರೂಪಾಯಿ, ಈ ಬೈಕ್‌ನಲ್ಲಿ ಏನೇನಿದೆ ವಿಶೇಷ

Honda Bike: ಹೋಂಡಾ ಎಸ್‌ಬಿ 160 ಬೈಕ್‌ ಭಾರತದಲ್ಲಿ ಬಿಡುಗಡೆ, ದರ 1.12 ಲಕ್ಷ ರೂಪಾಯಿ, ಈ ಬೈಕ್‌ನಲ್ಲಿ ಏನೇನಿದೆ ವಿಶೇಷ

  • 2025 Honda SP 160: ಹೋಂಡಾ ಫ್ಯಾಕ್ಟರಿಯಿಂದ ಹೊಸ ಬೈಕೊಂದು ಬಿಡುಗಡೆಯಾಗಿದೆ. 2025ರ ಹೋಂಡಾ ಎಸ್ ಪಿ160 ಬೈಕ್‌ನ ಆರಂಭಿಕ ದರ 1.22 ಲಕ್ಷ ರೂಪಾಯಿ. ಈ ಬೈಕ್‌ನಲ್ಲಿ ಏನಿದೆ ವಿಶೇಷ, ಪವರ್‌ ಎಷ್ಟು ನೀಡುತ್ತದೆ ಇತ್ಯಾದಿ ವಿವರ ಪಡೆಯೋಣ.

ಹೋಂಡಾ ಇಂಡಿಯಾವು 2025ರ ಹೋಂಡಾ ಎಸ್ ಪಿ160 ಬೈಕನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಸಿಂಗಲ್ ಡಿಸ್ಕ್ ಮಾದರಿಯ ಎಕ್ಸ್‌ ಶೋರೂಂ ದರ 1,21,951 ರೂಪಾಯಿ ಇದೆ. ಡ್ಯೂಯೆಲ್‌ ಡಿಸ್ಕ್‌ ಮಾದರಿಯ ಎಕ್ಸ್‌ ಶೋರೂಂ ದರ 1,27,956 ರೂಪಾಯಿ ಇದೆ.
icon

(1 / 6)

2025ರ ಮಾದರಿಯ ವಿನ್ಯಾಸ ಹೇಗಿದೆ ನೋಡೋಣ. ಬೈಕಿನ ಮುಂಭಾಗದ ವಿನ್ಯಾಸವನ್ನು ಮೊದಲಿಗಿಂತ ತೀಕ್ಷ್ಣವಾಗಿ ಮತ್ತು ಹೆಚ್ಚು ಆಕರ್ಷಕವಾಗಿ ಮಾಡಲಾಗಿದೆ. ಹೊಸ ಹೆಡ್ ಲ್ಯಾಂಪ್‌ಗಳು ಬೈಕ್‌ಗೆ ಹೆಚ್ಚು ಸ್ಟೈಲಿಶ್ ನೋಟವನ್ನು ನೀಡುತ್ತವೆ. ಉಳಿದಂತೆ ಯಾವುದೇ ಪ್ರಮುಖ ಬದಲಾವಣೆ ಮಾಡಲಾಗಿಲ್ಲ.  ಈ ಬೈಕ್ ಈಗ ರೇಡಿಯಂಟ್ ರೆಡ್ ಮೆಟಾಲಿಕ್, ಪರ್ಲ್ ಇಗ್ನೆಸ್ ಬ್ಲ್ಯಾಕ್, ಪರ್ಲ್ ಡೀಪ್ ಗ್ರೌಂಡ್ ಗ್ರೇ ಮತ್ತು ಅಥ್ಲೆಟಿಕ್ ಬ್ಲೂ ಮೆಟಾಲಿಕ್ ಸೇರಿದಂತೆ ನಾಲ್ಕು ಬಣ್ಣಗಳಲ್ಲಿ ಲಭ್ಯವಿದೆ.
icon

(2 / 6)

ಹೋಂಡಾ ಎಸ್ ಪಿ 160ನಲ್ಲಿ 4.2 ಇಂಚಿನ ಟಿಎಫ್‌ಟಿ ಪರದೆ ಅಳವಡಿಸಲಾಗಿದೆ. ಬ್ಲೂಟೂತ್ ಸಂಪರ್ಕ ಮತ್ತು ಹೋಂಡಾ ರೋಡ್ ಸಿಂಕ್ ಅಪ್ಲಿಕೇಶನ್  ಈ ಪರದೆಯಲ್ಲಿ ದೊರಕುತ್ತದೆ. ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ಕರೆಗಳು ಮತ್ತು ಎಸ್ಎಂಎಸ್ ಅಲರ್ಟ್‌, ಮ್ಯೂಸಿಕ್‌ ಪ್ಲೇಬ್ಯಾಕ್‌ನಂತಹ ಫೀಚರ್‌ಗಳನ್ನು ಹೊಂದಿದೆ. ಯುಎಸ್‌ಬಿ ಟೈಪ್‌ ಸಿ ಚಾರ್ಜಿಂಗ್‌ ಕಿಂಡಿ ಕೂಡ ಇದೆ. ದೂರ ಪ್ರಯಾಣದ ಸಂದರ್ಭದಲ್ಲಿ ಮೊಬೈಲ್‌ ಚಾರ್ಜ್‌ ಮಾಡಲು ಅನುಕೂಲಕರ. 
icon

(3 / 6)

ಹೋಂಡಾ ಎಸ್ ಪಿ 160 ಬೈಕಿನಲ್ಲಿ 162.71 ಸಿಸಿ ಏರ್ ಕೂಲ್ಡ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 13 ಬಿಎಚ್‌ಪಿ ಪವರ್ ಮತ್ತು 14.8 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.
icon

(4 / 6)

ಹೋಂಡಾ ಎಸ್ ಪಿ 160 ಬೈಕ್‌ ಬಿಡುಗಡೆಯಾದ ಒಂದೇ ವರ್ಷದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದಿದೆ. ಹೀಗಾಗಿ ಈ ಬೈಕ್‌ನ ಹೊಸ ಮಾದರಿ ಪರಿಚಯಿಸಿದ್ದೇವೆ. ಇದರಲ್ಲಿ ಒಂದಿಷ್ಟು ಅಡ್ವಾನ್ಸಡ್‌ ಫೀಚರ್‌ ಅಳವಡಿಸಲಾಗಿದೆ ಎಂದು ಎಚ್‌ಎಂಎಸ್‌ಇನ ಎಂಡಿ, ಪ್ರೆಸಿಡೆಂಟ್‌, ಸಿಇಒ ತುಟುಸುಮು ಒಟಾನಿ ಹೇಳಿದ್ದಾರೆ.
icon

(5 / 6)

"ಯುವ ರೈಡರ್‌ಗಳನ್ನು ಗಮನದಲ್ಲಿಟ್ಟುಕೊಂಡು ಈ ಸುಂದರ ವಿನ್ಯಾಸದ ಬೈಕ್‌ ಬಿಡುಗಡೆ ಮಾಡಲಾಗಿದೆ. ಆಧುನಿಕ ವಿನ್ಯಾಸ, ತಂತ್ರಜ್ಞಾನ ಆಧರಿತ ಫೀಚರ್‌ಗಳು ಇತ್ಯಾದಿಗಳಿಂದ ಟೆಕ್‌ ಸೇವಿ ಗ್ರಾಹಕರಿಗೆ ಉತ್ತಮ ಆಯ್ಕೆಯಾಗಿರಲಿದೆ" ಏಂದು ಎಚ್‌ಎಂಎಸ್‌ಐನ ಸೇಲ್ಸ್‌ ಆಂಡ್‌ ಮಾರ್ಕೆಟಿಂಗ್‌ ವಿಭಾಗದ ನಿರ್ದೇಶಕ ಯೋಗೇಶ್‌ ಮಾಥೂರ್‌ ಹೇಳಿದ್ದಾರೆ. 
icon

(6 / 6)

ಇತರ ಗ್ಯಾಲರಿಗಳು