Auto Expo 2025: ವಾಹನ ಪ್ರದರ್ಶನದಲ್ಲಿ ಮನಸೂರೆಗೊಂಡ ಬಿಎಂಡಬ್ಲ್ಯು ಎಫ್450 ಬೈಕ್; ಟಿವಿಎಸ್‌ನಿಂದ ಭಾರತದಲ್ಲಿ ಉತ್ಪಾದನೆ
- Bharat mobility global expo 2025: ನವದೆಹಲಿಯಲ್ಲಿ ಜನವರಿ 17ರಿಂದ 22ರವರೆಗೆ ನಡೆಯುತ್ತಿರುವ ವಾಹನ ಪ್ರದರ್ಶನದಲ್ಲಿ ಹಲವು ವಿನೂತನ ವಾಹನಗಳನ್ನು ವಾಹನ ಪ್ರೇಮಿಗಳು ಕಣ್ತುಂಬಿಕೊಂಡಿದ್ದಾರೆ. ಇಲ್ಲಿ ಬಿಎಂಡಬ್ಲ್ಯು ಎಫ್450 ಎಂಬ ಕಾನ್ಸೆಪ್ಟ್ ಬೈಕನ್ನು ಅನಾವರಣ ಮಾಡಲಾಗಿದೆ. ಈ ಬೈಕನ್ನು ಟಿವಿಎಸ್ ಮೋಟಾರ್ ಸ್ಥಳೀಯವಾಗಿ ಉತ್ಪಾದಿಸಲಿದೆ.

(1 / 6)
Bharat mobility global expo 2025: 2025ರ ವಾಹನ ಪ್ರದರ್ಶನದಲ್ಲಿ ಬಿಎಂಡಬ್ಲ್ಯು ಕಂಪನಿಯು ತನ್ನ ಹೊಸ ಅಡ್ವೆಂಚರ್ ಕಾನ್ಸೆಪ್ಟ್ ಬೈಕ್ ಬಿಎಂಡಬ್ಲ್ಯು ಎಫ್450 ಜಿಎಸ್ ಅನ್ನು ಅನಾವರಣಗೊಳಿಸಿದೆ. ಟಿವಿಎಸ್ ಕಂಪನಿಯು ಈ ಬೈಕನ್ನು ಸ್ಥಳೀಯವಾಗಿ ಉತ್ಪಾದಿಸಲಿದೆ.
(2 / 6)
ಬಿಎಂಡಬ್ಲ್ಯು ಎಫ್ 450 ಜಿಎಸ್ ಕಾನ್ಸೆಪ್ಟ್ ಬೈಕಿನ ಎಂಜಿನ್ ಮತ್ತು ಚಾಸಿಸ್ ಎರಡನ್ನೂ ತಳಮಟ್ಟದಿಂದ (ಲೋ ಲೆವೆಲ್) ಅಭಿವೃದ್ಧಿಪಡಿಸಲಾಗಿದೆ. ಮಿಲನ್ ನಲ್ಲಿ ನಡೆದ ಇಐಸಿಎಂಎ 2024 ವಾಹನ ಪ್ರದರ್ಶನದಲ್ಲಿಯೂ ಈ ಬೈಕನ್ನು ಪ್ರದರ್ಶಿಸಲಾಗಿತ್ತು. ಇದೀಗ ಭಾರತದ ವಾಹನ ಪ್ರದರ್ಶನದಲ್ಲಿಯೂ ಕಾಣಿಸಿಕೊಂಡಿದೆ.
(3 / 6)
ಈ ಬಿಎಂಡಬ್ಲ್ಯು ಬೈಕ್ 175 ಕೆಜಿ ತೂಕವನ್ನು ಹೊಂದಿದೆ. ಮುಂಭಾಗದಲ್ಲಿ ಸಂಪೂರ್ಣವಾಗಿ ಹೊಂದಾಣಿಕೆ ಮಾಡಬಹುದಾದ ಯುಎಸ್‌ಡಿ ಶಾಕ್‌ಗಳು ಇವೆ. ಹಿಂಭಾಗದಲ್ಲಿ ಮೊನೊ-ಶಾಕ್ ಇದೆ.
(4 / 6)
ಈ ಅಡ್ವೆಂಚರ್ ಬೈಕ್ ಬಿಎಂಡಬ್ಲ್ಯು ಮೋಟೊರಾಡ್ ಎಬಿಎಸ್ ಪ್ರೊ (ಲೀನ್-ಸೆನ್ಸಿಟಿವ್ ಎಬಿಎಸ್) ಸೇರಿದಂತೆ ಅನೇಕ ರೈಡರ್ ಸುರಕ್ಷತಾ ಸಾಧನಗಳನ್ನು ಹೊಂದಿರಲಿದೆಯಂತೆ. ಬೈಕಿನಲ್ಲಿ ಮೂರು ವಿಭಿನ್ನ ರೈಡಿಂಗ್ ಮೋಡ್ ಇರಲಿದೆ.
(5 / 6)
ಈ ಬೈಕ್ 6.5-ಇಂಚಿನ ಟಿಎಫ್‌ಟಿ ಡಿಸ್‌ಪ್ಲೇ ಹೊಂದಿದೆ. ಬ್ಲೂಟೂತ್ ಮೂಲಕ ಸ್ಮಾರ್ಟ್‌ಫೋನ್‌ಗೆ ಕನೆಕ್ಟ್ ಮಾಡಬಹುದು. ಕಾಲ್ ಮತ್ತು ಎಸ್‌ಎಂಎಸ್ ಅಲರ್ಟ್‌ಗಳನ್ನು ಈ ಡಿಸ್‌ಪ್ಲೇಯಲ್ಲಿ ಪಡೆಯಬಹುದು. ಇದರ ಜತೆಗೆ ಮೀಡಿಯಾ ಕಂಟ್ರೋಲ್, ಟರ್ನ್ ಬೈ ಟರ್ನ್ ನ್ಯಾವಿಗೇಷನ್ ಮುಂತಾದ ಫೀಚರ್‌ಗಳನ್ನು ಹೊಂದಿದೆ.
ಇತರ ಗ್ಯಾಲರಿಗಳು