ಎಲೆಕ್ಟ್ರಿಕ್ ಸ್ಕೂಟರ್ ಉತ್ತಮವೇ? ಪೆಟ್ರೋಲ್ ಬಿಟ್ಟು ಇ-ಸ್ಕೂಟರ್ ಖರೀದಿಸಲು ಬಯಸುವವರು ಈ 10 ವಿಷಯ ತಿಳಿದುಕೊಳ್ಳಿ
- ಈಗ ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಹೆಚ್ಚಾಗುತ್ತಿದೆ. ದುಬಾರಿ ಪೆಟ್ರೋಲ್ ಕಾಲದಲ್ಲಿ ಬಹುತೇಕರಿಗೆ ಇ ಸ್ಕೂಟರ್‌ಗಳು ಪ್ರಿಯವಾಗುತ್ತಿವೆ. ಎಲೆಕ್ಟ್ರಿಕ್ ಸ್ಕೂಟರ್ ಮತ್ತು ಪೆಟ್ರೋಲ್ ಸ್ಕೂಟರ್‌ಗಳ ನಡುವಿನ ಒಂದಿಷ್ಟು ವ್ಯತ್ಯಾಸ, ಒಂದಿಷ್ಟು ತೊಂದರೆಗಳ ವಿವರ ಇಲ್ಲಿ ನೀಡಲಾಗಿದೆ.
- ಈಗ ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಹೆಚ್ಚಾಗುತ್ತಿದೆ. ದುಬಾರಿ ಪೆಟ್ರೋಲ್ ಕಾಲದಲ್ಲಿ ಬಹುತೇಕರಿಗೆ ಇ ಸ್ಕೂಟರ್‌ಗಳು ಪ್ರಿಯವಾಗುತ್ತಿವೆ. ಎಲೆಕ್ಟ್ರಿಕ್ ಸ್ಕೂಟರ್ ಮತ್ತು ಪೆಟ್ರೋಲ್ ಸ್ಕೂಟರ್‌ಗಳ ನಡುವಿನ ಒಂದಿಷ್ಟು ವ್ಯತ್ಯಾಸ, ಒಂದಿಷ್ಟು ತೊಂದರೆಗಳ ವಿವರ ಇಲ್ಲಿ ನೀಡಲಾಗಿದೆ.
(1 / 9)
ಟ್ಯಾಂಕ್‌ಗೆ ಪ್ರತಿನಿತ್ಯ ಇಂಧನ ತುಂಬಿಸುವವರಿಗೆ ಪೆಟ್ರೋಲ್ ಸ್ಕೂಟರ್ ದುಬಾರಿಯಂತೆ ಕಾಣಬಹುದು. ಇದೇ ಸಮಯದಲ್ಲಿ ಉಚಿತ ಕರೆಂಟ್ ತುಂಬಿಸಿಕೊಂಡು ಅಥವಾ ಕಡಿಮೆ ದರದಲ್ಲಿ ಕರೆಂಟ್ ಚಾರ್ಜ್ ಮಾಡಿಕೊಂಡು ಎಲೆಕ್ಟ್ರಿಕ್ ಸ್ಕೂಟರ್ ಓಡಿಸುವವರಿಗೆ ಎಲೆಕ್ಟ್ರಿಕ್ ಸ್ಕೂಟರ್‌ಗಳು ಕಿಸೆಗೆ ಹಗುರ ಎಣಿಸಬಹುದು.
(2 / 9)
ಕೆಲವು ಉತ್ತಮ ಎಲೆಕ್ಟ್ರಿಕ್ ಸ್ಕೂಟರ್‌ಗಳು ದೀರ್ಘಕಾಲವೂ ನಿಮ್ಮ ಕಿಸೆಗೆ ಹಗುರವೆನಿಸಬಹುದು. ಆದರೆ, ಕೆಲವು ಸ್ಕೂಟರ್‌ಗಳು ಎರಡು ವರ್ಷದ ಬಳಿಕ ಕಷ್ಟಕೊಡಬಹುದು.. ಬ್ಯಾಟರಿ ತೊಂದರೆ ಕಾಣಿಸಿಕೊಂಡರೆ ಖರ್ಚು ಹೆಚ್ಚಾಗಬಹುದು. ಹೊಸ ಬ್ಯಾಟರಿ ದರ ತುಂಬಾ ದುಬಾರಿ ಇರಬಹುದು. ಪೆಟ್ರೊಲ್‌ನಲ್ಲಿ ಉಳಿಸಿದ ಹಣ ಬ್ಯಾಟರಿ ಮೂಲಕ ಹೋಗಬಹುದು. (ಚಿತ್ರ ಸಾಂದರ್ಭಿಕ)
(Bloomberg)(3 / 9)
ಇದೇ ಸಮಯದಲ್ಲಿ ಒಂದು ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಹತ್ತು ಹದಿನೈದು ವರ್ಷ ಯಾರಾದರೂ ಬಳಸುತ್ತಾರೆ ಎಂದುಕೊಳ್ಳುವಂತೆ ಇಲ್ಲ. ಮುಂದಿನ ದಿನಗಳಲ್ಲಿ ಇನ್ನಷ್ಟು ಸುಧಾರಿತ ತಂತ್ರಜ್ಞಾನದ ಎಲೆಕ್ಟ್ರಿಕ್ ಸ್ಕೂಟರ್‌ಗಳು ಬರಬಹುದು. ಆಗ, ನಿಮ್ಮಲ್ಲಿರುವ ಈಗಿನ ಎಲೆಕ್ಟ್ರಿಕ್ ಸ್ಕೂಟರ್‌ಗಳು ಔಟ್‌ಡೇಟೆಡ್ ಅನಿಸಬಹುದು. ಕೆಲವೇ ವರ್ಷಗಳಲ್ಲಿ ಬೇರೆ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಬೇಕಾಗಬಹುದು. ಇದರಿಂದ ನಿಮಗೆ ಎಲೆಕ್ಟ್ರಿಕ್ ಸ್ಕೂಟರ್ ಪೆಟ್ರೋಲ್‌ಗಿಂತ ದುಬಾರಿಯಾಗಿ ಪರಿಣಮಿಸಬಹುದು. (ಚಿತ್ರ ಸಾಂದರ್ಭಿಕ)
(Bloomberg)(4 / 9)
ಈಗ ಬಹುತೇಕರು ಮೊಬೈಲ್ ಫೋನ್ ಖರೀದಿಸುತ್ತಾರೆ. ಮೂರು ನಾಲ್ಕು ವರ್ಷ ಹಳೆಯ ಫೋನ್ ಅನ್ನು ಬಳಸಲು ಸಾಕಷ್ಟು ಜನರು ಇಷ್ಟಪಡುವುದಿಲ್ಲ. ಯಾಕೆಂದರೆ, ಅದರ ಸಾಫ್ಟ್‌ವೇರ್ ಅಪ್‌ಡೇಟ್ ಆಗಿರುವುದಿಲ್ಲ. ಇದೇ ರೀತಿಯ ತೊಂದರೆಯನ್ನು ಎಲೆಕ್ಟ್ರಿಕ್ ಸ್ಕೂಟರ್ ಮಾಲೀಕರು ಅನುಭವಿಸುತ್ತಾರೆ. ಹೆಚ್ಚುವರಿ ಹಣ ನೀಡಿ ಪ್ರತಿವರ್ಷ ಸ್ಕೂಟರ್‌ಗಳ ಸಾಫ್ಟ್‌ವೇರ್ ಅಪ್‌ಡೇಟ್ ಮಾಡಬೇಕಾಗುತ್ತದೆ. (ಚಿತ್ರ ಸಾಂದರ್ಭಿಕ)
(Bloomberg)(5 / 9)
ಕೆಲವು ವರ್ಷಗಳ ಬಳಿಕ ಸಾಫ್ಟ್‌ವೇರ್ ಅಪ್‌ಡೇಟ್ ನೀಡುವುದನ್ನು ಕಂಪನಿಗಳು ನಿಲ್ಲಿಸಬಹುದು. ಮಾರುಕಟ್ಟೆಯಲ್ಲಿರುವ ಹೊಸ ಸ್ಕೂಟರ್ ಖರೀದಿಸುವ ಅನಿವಾರ್ಯತೆ ಎಲೆಕ್ಟ್ರಿಕ್ ಸ್ಕೂಟರ್ ಮಾಲೀಕರಿಗೆ ಬರಬಹುದು. ಆದರೆ, ಪೆಟ್ರೋಲ್ ಸ್ಕೂಟರ್ ಮಾಲೀಕರು ಸುಮಾರು 15 ವರ್ಷ ಯಾವುದೇ ಸಾಫ್ಟ್‌ವೇರ್ ಚಿಂತೆ ಇಲ್ಲದೆ ತಮ್ಮ ಆಕ್ಟಿವಾ, ಜುಪಿಟರ್, ಪ್ಲೆಸರ್ ಮುಂತಾದ ಸ್ಕೂಟರ್‌ಗಳನ್ನು ಓಡಿಸುತ್ತಿರಬಹುದು. (ಚಿತ್ರ ಸಾಂದರ್ಭಿಕ)
(AFP)(6 / 9)
ಕೆಲವು ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಒಬ್ಬರು ಆರಾಮವಾಗಿ ಪ್ರಯಾಣಿಸಬಹುದು. ಇಬ್ಬರು ಕುಳಿತಾಗ ಯಾಕೋ ಹೆವಿ ಅನಿಸಬಹುದು. ಆಫೀಸ್-ಮನೆಗೆ ಪ್ರಯಾಣಕ್ಕೆ ಎಲೆಕ್ಟ್ರಿಕ್ ಸ್ಕೂಟರ್ ಸೂಕ್ತ. ಆದರೆ, ರೇಂಜ್ ಕಡಿಮೆ ಇರುವ ಸ್ಕೂಟರ್‌ಗಳನ್ನು ನಂಬಿ ಹೆಚ್ಚು ದೂರ ಹೋಗುವಂತೆ ಇಲ್ಲ. ಎಲೆಕ್ಟ್ರಿಕ್ ಸ್ಕೂಟರ್ ಬ್ಯಾಟರಿ ಹಳೆಯದಾಗುತ್ತ ಹೋದಂತೆ ರೇಂಜ್ ಕಡಿಮೆಯಾಗುತ್ತ ಹೋಗಬಹುದು. (ಚಿತ್ರ ಸಾಂದರ್ಭಿಕ)
(7 / 9)
ಕೆಲವು ಸ್ಕೂಟರ್‌ಗಳು ಈಗ ತಾಂತ್ರಿಕವಾಗಿ ತೊಂದರೆ ನೀಡಿ ಗ್ರಾಹಕರಿಗೆ ಕಿರಿಕಿರಿ ನೀಡುತ್ತವೆ. ನಿಮ್ಮ ಅದೃಷ್ಟ ಚೆನ್ನಾಗಿದ್ದರೆ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಯಾವುದೇ ಸಮಸ್ಯೆ ಬಾರದು. ಅದೃಷ್ಟ ಕೆಟ್ಟಿದ್ದರೆ ಸದಾ ಎಲೆಕ್ಟ್ರಿಕ್ ಸರ್ವೀಸ್ ಸೆಂಟರ್‌ನತ್ತ ಮುಖ ಮಾಡಬೇಕಾಗಬಹುದು. (ಚಿತ್ರ ಸಾಂದರ್ಭಿಕ)
(8 / 9)
ಉಚಿತ ಕರೆಂಟ್ ಮಿತಿಯೊಳಗೆ ಎಲೆಕ್ಟ್ರಿಕ್ ಸ್ಕೂಟರ್ ಚಾರ್ಜ್ ಮಾಡಲು ಆದ್ರೆ ಉತ್ತಮ. ಇಲ್ಲವಾದರೆ ಈಗ ಬೆಂಗಳೂರಿನಂತಹ ನಗರಗಳಲ್ಲಿ ಕರೆಂಟ್ ಬಿಲ್ ಹೆಚ್ಚು ಬರುತ್ತದೆ. ತಿಂಗಳಿಗೆ ಎರಡು ಸಾವಿರ, ನಾಲ್ಕು ಸಾವಿರ ರೂ ಎಂದೆಲ್ಲ ಕಟ್ಟಬೇಕಾಗುತ್ತದೆ. ಎಲೆಕ್ಟ್ರಿಕ್ ಸ್ಕೂಟರ್ ಈ ದರವನ್ನು ಇನ್ನಷ್ಟು ಹೆಚ್ಚಿಸಬಹುದು. (ಚಿತ್ರ ಸಾಂದರ್ಭಿಕ)
ಇತರ ಗ್ಯಾಲರಿಗಳು