ಹೊಸ ಡಿಜೈರ್‌ ಕಾರಿಗೆ ಕ್ರ್ಯಾಶ್‌ ಟೆಸ್ಟಿಂಗ್‌ನಲ್ಲಿ ಸಿಗ್ತು 5 ಸ್ಟಾರ್‌ ರೇಟಿಂಗ್‌, ಸೇಫ್ಟಿಯಲ್ಲಿ ಗೆದ್ದ ಮಾರುತಿ ಸುಜುಕಿಯ ಮೊದಲ ಕಾರು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಹೊಸ ಡಿಜೈರ್‌ ಕಾರಿಗೆ ಕ್ರ್ಯಾಶ್‌ ಟೆಸ್ಟಿಂಗ್‌ನಲ್ಲಿ ಸಿಗ್ತು 5 ಸ್ಟಾರ್‌ ರೇಟಿಂಗ್‌, ಸೇಫ್ಟಿಯಲ್ಲಿ ಗೆದ್ದ ಮಾರುತಿ ಸುಜುಕಿಯ ಮೊದಲ ಕಾರು

ಹೊಸ ಡಿಜೈರ್‌ ಕಾರಿಗೆ ಕ್ರ್ಯಾಶ್‌ ಟೆಸ್ಟಿಂಗ್‌ನಲ್ಲಿ ಸಿಗ್ತು 5 ಸ್ಟಾರ್‌ ರೇಟಿಂಗ್‌, ಸೇಫ್ಟಿಯಲ್ಲಿ ಗೆದ್ದ ಮಾರುತಿ ಸುಜುಕಿಯ ಮೊದಲ ಕಾರು

  • Maruti Suzuki Dzire: ಮಾರುತಿ ಸುಜುಕಿ ಕಂಪನಿಯ ಕಾರೊಂದು ಇದೇ ಮೊದಲ ಬಾರಿಗೆ ಜಾಗತಿಕ ಕ್ರ್ಯಾಶ್‌ ಟೆಸ್ಟ್‌ ಗ್ಲೋಬಲ್‌ ಎನ್‌ಕ್ಯಾಪ್‌ನಿಂದ 5 ಸ್ಟಾರ್‌ ರೇಟಿಂಗ್‌ ಪಡೆದಿದೆ. 2024ರ ಡಿಜೈರ್ ಸೆಡಾನ್ ಕಾರಿಗೆ ಸುರಕ್ಷತೆಯ ವಿಷಯದಲ್ಲಿ ಐದು ಸ್ಟಾರ್‌ಗಳು ದೊರಕಿವೆ.

ನಾಲ್ಕನೇ ತಲೆಮಾರಿನ ಡಿಜೈರ್ ಗ್ಲೋಬಲ್ ಎನ್‌ಕ್ಯಾಪ್‌ನಿಂದ ಐದು ಸ್ಟಾರ್ ಕ್ರ್ಯಾಶ್ ರೇಟಿಂಗ್ ಪಡೆದ ಮೊದಲ ಮಾರುತಿ ಸುಜುಕಿ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ವಯಸ್ಕರ ಮತ್ತು ಮಕ್ಕಳ ಸುರಕ್ಷತಾ ಅಂಶಗಳ ಆಧಾರದ ಮೇಲೆ ಮತ್ತು  ಪಾದಚಾರಿಗಳ ಸುರಕ್ಷತೆಗಾಗಿ ಗ್ಲೋಬಲ್ ಎನ್‌ಕ್ಯಾಪ್‌ ಜಾಗತಿಕ ಕಾರು ಮಾದರಿಗಳಲ್ಲಿ ಕ್ರ್ಯಾಶ್ ಪರೀಕ್ಷೆಗಳನ್ನು ನಡೆಸುತ್ತದೆ. ಇದೇ ಮೊದಲ ಬಾರಿಗೆ ಕ್ರ್ಯಾಶ್‌ ಟೆಸ್ಟಿಂಗ್‌ನಲ್ಲಿ ಮಾರುತಿಯ ಕಾರೊಂದು ಈ ಸಾಧನೆ ಮಾಡಿದೆ.  
icon

(1 / 7)

ಮಾರುತಿ ಸುಜುಕಿ ಸ್ವಯಂಪ್ರೇರಿತವಾಗಿ ಇತ್ತೀಚಿನ ಡಿಜೈರ್ ಅನ್ನು ಕ್ರ್ಯಾಶ್ ಟೆಸ್ಟ್ ಗಳಿಗೆ ಕಳುಹಿಸಿದೆ ಎಂದು ಗ್ಲೋಬಲ್ ಎನ್‌ಕ್ಯಾಪ್‌ ತಿಳಿಸಿದೆ. ಹೊಸ ಡಿಜೈರ್ ನವೆಂಬರ್ 11 ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ. 
icon

(2 / 7)

ಗ್ಲೋಬಲ್‌ ಎನ್‌ಕ್ಯಾಪ್‌ ಕ್ರ್ಯಾಶ್‌ ಟೆಸ್ಟಿಂಗ್‌ ಮಾಡಿದ ಸಮಯದಲ್ಲಿ ಡಿಜೈರ್‌ನ ಒಳಗಿನ ರಚನೆಯು ಸ್ಥಿರವೆಂದು ರೇಟಿಂಗ್‌ ನೀಡಲಾಗಿದೆ. ಈ ಕಾರಿನ ಎಲ್ಲಾ ಆವೃತ್ತಿಗಳು ಆರು ಏರ್‌ಬ್ಯಾಗ್‌ಗಳನ್ನು ಸ್ಟ್ರ್ಯಾಂಡರ್ಡ್‌ ಫೀಚರ್‌ ಆಗಿ ನೀಡುತ್ತಿದೆ.
icon

(3 / 7)

ಫ್ರಂಟಲ್-ಇಂಪ್ಯಾಕ್ಟ್ ಪರೀಕ್ಷೆಯಲ್ಲಿ(ಮುಂಭಾಗದಿಂದ ಡಿಕ್ಕಿ ಹೊಡೆಸುವ) ಗ್ಲೋಬಲ್ ಎನ್‌ಕ್ಯಾಪ್‌ನ ವಯಸ್ಕ ಪ್ರಯಾಣಿಕರ (ವಾಹನದಲ್ಲಿ ಇರಿಸಲಾದ ಡಮ್ಮಿ) ಎದೆ ಮತ್ತು ತಲೆಗೆ ಸಂಪೂರ್ಣ ರಕ್ಷಣೆ ದೊರಕಿದೆ. ಇದೇ ರೀತಿ ಮಗು ಪ್ರಯಾಣಿಕ (ಡಮ್ಮಿ)ರಿಗೂ ಉತ್ತಮ ರಕ್ಷಣೆ ದೊರಕಿದೆ. 
icon

(4 / 7)

ಅಡ್ಡಪರಿಣಾಮ ಪರೀಕ್ಷೆಗಳಲ್ಲಿ (ಕಾರಿಗೆ ಅಡ್ಡಲಾಗಿ ಡಿಕ್ಕಿ ಹೊಡೆಯುವ ಸಂದರ್ಭ) ಮಾರುತಿ ಸುಜುಕಿಯ ನಾಲ್ಕನೇ ತಲೆಮಾರಿನ ಡಿಜೈರ್ ಕಾರು ಪ್ರಯಾಣಿಕರಿಗೆ (ಡಮ್ಮಿ ಪ್ರಯಾಣಿಕರು) ತಲೆ, ಎದೆ, ಹೊಟ್ಟೆ ಮತ್ತು ಸೊಂಟಕ್ಕೆ 'ಉತ್ತಮ ರಕ್ಷಣೆ' ನೀಡಿತು.
icon

(5 / 7)

ಇದೇ ರೀತಿ ಸೈಡ್-ಪೋಲ್ ಇಂಪ್ಯಾಕ್ಟ್ ಪರೀಕ್ಷೆಯಲ್ಲಿ ತಲೆ, ಹೊಟ್ಟೆ ಮತ್ತು ಸೊಂಟದ ರಕ್ಷಣೆ ಉತ್ತಮವಾಗಿದೆ ಎಂದು ಕಂಡುಬಂದಿದೆ. ಆದರೆ, ಇಲ್ಲಿ ಎದೆಗೆ ರಕ್ಷಣೆ ಅತ್ಯಲ್ಪ ದೊರಕಿದೆ. 
icon

(6 / 7)

ಇದಕ್ಕೂ ಹಿಂದೆ ಆಗಮಿಸಿದ ಮೂರನೇ ತಲೆಮಾರಿನ ಮಾರುತಿ ಸುಜುಕಿ ಡಿಜೈರ್ ಗ್ಲೋಬಲ್ ಎನ್‌ಕ್ಯಾಪ್‌ ಪರೀಕ್ಷೆಯಲ್ಲಿ ಕೇವಲ ಎರಡು ಸ್ಟಾರ್‌ ರೇಟಿಂಗ್‌ ಪಡೆದಿತ್ತು. ಇದೀಗ ನಾಲ್ಕನೇ ತಲೆಮಾರಿನ ಡಿಜೈರ್‌ 5 ಸ್ಟಾರ್‌ ಪಡೆದು ಮಾರುತಿಯ ಸುರಕ್ಷಿತ ಕಾರಾಗಿ ಹೊರಹೊಮ್ಮಿದೆ.
icon

(7 / 7)

ಇತರ ಗ್ಯಾಲರಿಗಳು