Hero Xoom 160: ಹೊಸ ಹೀರೋ ಕ್ಸೂಮ್‌ 160 ಸ್ಕೂಟರ್‌ ಬಿಡುಗಡೆ, ಹೀರೋ ಮೋಟೊಕಾರ್ಪ್‌ನ ಹೊಸ ಫ್ಲೆಕ್ಸಿ ಸ್ಕೂಟಿಯಲ್ಲಿ ಏನೇನಿದೆ ವಿಶೇಷ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Hero Xoom 160: ಹೊಸ ಹೀರೋ ಕ್ಸೂಮ್‌ 160 ಸ್ಕೂಟರ್‌ ಬಿಡುಗಡೆ, ಹೀರೋ ಮೋಟೊಕಾರ್ಪ್‌ನ ಹೊಸ ಫ್ಲೆಕ್ಸಿ ಸ್ಕೂಟಿಯಲ್ಲಿ ಏನೇನಿದೆ ವಿಶೇಷ

Hero Xoom 160: ಹೊಸ ಹೀರೋ ಕ್ಸೂಮ್‌ 160 ಸ್ಕೂಟರ್‌ ಬಿಡುಗಡೆ, ಹೀರೋ ಮೋಟೊಕಾರ್ಪ್‌ನ ಹೊಸ ಫ್ಲೆಕ್ಸಿ ಸ್ಕೂಟಿಯಲ್ಲಿ ಏನೇನಿದೆ ವಿಶೇಷ

  • ಹೀರೋ ಕ್ಸೂಮ್‌ 160 ಎಂಬ ಹೊಸ ಸ್ಕೂಟರನ್ನು ಹೀರೋ ಮೊಟೊಕಾರ್ಪ್‌ ಬಿಡುಗಡೆ ಮಾಡಿದೆ. ದೆಹಲಿಯಲ್ಲಿ ನಡೆಯುತ್ತಿರುವ ಭಾರತ್‌ ಮೊಬಿಲಿಟಿ ಗ್ಲೋಬಲ್‌ ಎಕ್ಸ್‌ಪೋ 2025 ಎಂಬ ವಾಹನ ಪ್ರದರ್ಶನದಲ್ಲಿ ಈ ಸ್ಕೂಟರನ್ನು ಬಿಡುಗಡೆ ಮಾಡಲಾಗಿದೆ. ಹೀರೋ ಕ್ಸೂಮ್ 160 ಬೈಕ್ ಲಿಕ್ವಿಡ್ ಕೂಲ್ಡ್ ಎಂಜಿನ್ ಸಹಾಯದಿಂದ 14.6 ಬಿಎಚ್‌ಪಿ ಮತ್ತು 14 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಹೀರೋ ಕ್ಸೂಮ್ 160 ಬೈಕ್ ಅನ್ನು ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್ ಪೋ 2025ರಲ್ಲಿ ಬಿಡುಗಡೆಗೊಳಿಸಲಾಗಿದೆ. ಇದು ಮ್ಯಾಕ್ಸಿ-ಸ್ಕೂಟರ್ ಆಗಿದೆ. ಈ ಸ್ಕೂಟರ್ ಅನ್ನು ಮೊದಲ ಬಾರಿಗೆ ಇಐಸಿಎಂಎ 2023ರಲ್ಲಿ ಪರಿಚಯಿಸಲಾಯಿಸಲಾಗಿತ್ತು.
icon

(1 / 10)

ಹೀರೋ ಕ್ಸೂಮ್ 160ನಲ್ಲಿ 14 ಇಂಚಿನ ಅಲಾಯ್  ವೀಲ್‌ಗಳನ್ನು ಅಗಲವಾದ ಬ್ಲಾಕ್ ಮಾದರಿಯ ಟೈರ್‌ಗಳಿಗೆ ಅಳವಡಿಸಲಾಗಿದೆ. ಮುಂಭಾಗದ ಟೈರ್ 120/70 ಅಳತೆ ಹೊಂದಿದ್ದರೆ, ಹಿಂಭಾಗದ ಟೈರ್ 140/60 ಗಾತ್ರವನ್ನು ಹೊಂದಿದೆ. 
icon

(2 / 10)

ಕ್ಸೂಮ್ 160 ಬೈಕ್ ಸಿಂಗಲ್ ಸಿಲಿಂಡರ್, ಲಿಕ್ವಿಡ್ ಕೂಲ್ಡ್ ಎಂಜಿನ್ ಹೊಂದಿದ್ದು, 8,000 ಆರ್‌ಪಿಎಂನಲ್ಲಿ 14.6 ಬಿಎಚ್‌ಪಿ ಪವರ್ ಮತ್ತು 6,500 ಆರ್‌ಪಿಎಂನಲ್ಲಿ 14 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಬಾಕ್ಸ್ ಡ್ರೈ ಸೆಂಟ್ರಿಫ್ಯೂಗಲ್ ಕ್ಲಚ್ ಹೊಂದಿರುವ ಸಿವಿಟಿ ಗಿಯರ್‌ ಬಾಕ್ಸ್‌ ಇದರಲ್ಲಿದೆ. 
icon

(3 / 10)

ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಹೈಡ್ರಾಲಿಕ್ ಶಾಕ್ ಅಬ್ಸಾರ್ಬರ್‌ಗಳು ಇವೆ.  ಹಿಂಭಾಗದಲ್ಲಿ ಡ್ಯುಯಲ್ ಶಾಕ್ ಅಬ್ಸಾರ್ಬರ್‌ಗಳು ಸಸ್ಪೆನ್ಷನ್‌ ಕರ್ತವ್ಯಗಳನ್ನು ನಿರ್ವಹಿಸುತ್ತವೆ.  ಐ3ಎಸ್ ಸೈಲೆಂಟ್ ಸ್ಟಾರ್ಟ್ ಟೆಕ್ನಾಲಜಿಯನ್ನೂ ಈ ಸ್ಕೂಟರ್‌ ಹೊಂದಿದೆ. 
icon

(4 / 10)

ಈ ಸ್ಕೂಟರ್ ಡ್ಯುಯಲ್ ಚೇಂಬರ್ ಹೆಡ್ ಲ್ಯಾಂಪ್‌ಗಳು ಮತ್ತು ಪೊಸಿಷನ್ ಲ್ಯಾಂಪ್‌ಗಳನ್ನು ಹೊಂದಿದೆ. ಹಿಂಭಾಗದ ಟೈಲ್ ಲ್ಯಾಂಪ್ ಸೇರಿದಂತೆ ಎಲ್ಲವೂ ಎಲ್‌ಇಡಿ ಲ್ಯಾಂಪ್‌ಗಳಾಗಿವೆ.
icon

(5 / 10)

ಹೀರೋ ಸ್ಕೂಟರ್‌ನಲ್ಲಿ ಬ್ಲೂಟೂತ್ ಕನೆಕ್ಟಿವಿಟಿ ಮತ್ತು ಟರ್ನ್-ಬೈ-ಟರ್ನ್ ನ್ಯಾವಿಗೇಷನ್ ಅನ್ನು ಬೆಂಬಲಿಸುವ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಇದೆ.
icon

(6 / 10)

ಹೀರೋ ಕ್ಸೂಮ್ 160 ರಿಮೋಟ್ ಸೀಟ್ ಓಪನಿಂಗ್ ಹೊಂದಿರುವ ಸ್ಮಾರ್ಟ್ ಕೀಯನ್ನು ಹೊಂದಿದೆ.  ಸೀಟಿನ ಕೆಳಗೆ ವಸ್ತುಗಳನ್ನು ಸಂಗ್ರಹಿಸಲು ಇದು ಸಹಾಯಕ. ರಾತ್ರಿಯಲ್ಲಿ ಉಪಯಕ್ತವಾದ ಬೂಟ್‌ ಲೈಟ್‌ ಕೂಡ ಇದರಲ್ಲಿದೆ.
icon

(7 / 10)

ಹೀರೋ ಕ್ಸೂಮ್ 160 ಬೈಕನ್ನು ಮ್ಯಾಟ್ ರೈನ್ ಫಾರೆಸ್ಟ್ ಗ್ರೀನ್, ಸಮ್ಮಿಟ್ ವೈಟ್, ಕ್ಯಾನ್ಯನ್ ಗ್ರೀನ್ ಮತ್ತು ಮ್ಯಾಟ್ ವೊಲ್ಕಾನಿಕ್ ಗ್ರೀನ್ ಎಂಬ ನಾಲ್ಕು ಬಣ್ಣಗಳಲ್ಲಿ ಮಾರಾಟ ಮಾಡಲಾಗುವುದು ಎಂದು ಕಂಪನಿ ತಿಳಿಸಿದೆ. 
icon

(8 / 10)

ಹೀರೋ ಕ್ಸೂಮ್ 160 ಬೈಕ್ 142 ಕೆಜಿ ತೂಕವನ್ನು ಹೊಂದಿದೆ.  7 ಲೀಟರ್ ಇಂಧನ ಟ್ಯಾಂಕ್ ಹೊಂದಿದೆ. ಹೀರೋ ಕ್ಸೂಮ್ 160 ಬೈಕ್ 1,983 ಎಂಎಂ ಉದ್ದ, 772 ಎಂಎಂ ಅಗಲ ಮತ್ತು 1,214 ಎಂಎಂ ಎತ್ತರವನ್ನು ಹೊಂದಿದೆ.
icon

(9 / 10)

ಈ ಸ್ಕೂಟರ್ 1,348 ಎಂಎಂ ವ್ಹೀಲ್ ಬೇಸ್ ಮತ್ತು 787 ಎಂಎಂ ಸೀಟ್ ಎತ್ತರವನ್ನು ಹೊಂದಿದೆ. ಗ್ರೌಂಡ್ ಕ್ಲಿಯರೆನ್ಸ್ ಅಳತೆ 155 ಮಿಮೀ ಇದೆ. ಬ್ರೇಕಿಂಗ್‌ಗಾಗಿ ಎರಡೂ ಕಡೆ ಡಿಸ್ಕ್ ಬ್ರೇಕ್‌ಗಳು ಇವೆ. ಸಿಂಗಲ್-ಚಾನೆಲ್ ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಂ ಕೂಡ ಇದೆ.
icon

(10 / 10)

ಇತರ ಗ್ಯಾಲರಿಗಳು