ಕನ್ನಡ ಸುದ್ದಿ  /  Photo Gallery  /  Automobile News 625 Km Range Audi Q6 E Tron Quattro Suv Luxury Electric Cars Coming To Market Soon Rmy

ಒಮ್ಮೆ ಚಾರ್ಚ್ ಮಾಡಿದ್ರೆ 625 ಕಿಮೀ ಓಡುವ ಸಾಮರ್ಥ್ಯ; ಮಾರುಕಟ್ಟೆಗೆ ಬರಲಿದೆ ಆಡಿ ಕ್ಯೂ6 ಇ-ಟ್ರಾನ್ ಕ್ವಾಟ್ರೊ ಐಷಾರಾಮಿ ಎಲೆಕ್ಟ್ರಿಕ್ ಕಾರು

  • Audi Q6 e-tron Quattro: ಆಡಿಯಿಂದ ಹೊಚ್ಚ ಹೊಸ ಪ್ರೀಮಿಯಂ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಗೆ ಬರುತ್ತಿದೆ. ಇದರ ಹೆಸರು ಆಡಿ ಕ್ಯೂ 6 ಇ-ಟ್ರಾನ್ ಕ್ವಾಟ್ರೊ. ಒಮ್ಮೆ ಚಾರ್ಜ್ ಮಾಡಿದರೆ 625 ಕಿ.ಮೀ ಪ್ರಯಾಣಿಸಬಹುದು. ಇದರ ವಿವರ ಇಲ್ಲಿದೆ.

ಆಡಿ ಕಂಪನಿಯು ತನ್ನ ಹೊಸ ಪ್ರೀಮಿಯಂ ಪ್ಲಾಟ್‌ಫಾರ್ಮ್ ಎಲೆಕ್ಟ್ರಿಕ್ (ಪಿಪಿಇ) ಆಧಾರಿತ ಕ್ಯೂ 6 ಇ-ಟ್ರಾನ್ ಕ್ವಾಟ್ರೊ ಎಂಬ ಹೊಸ ಎಲೆಕ್ಟ್ರಿಕ್ ವಾಹನವನ್ನು ಅನಾವರಣಗೊಳಿಸಿದೆ.
icon

(1 / 9)

ಈ ಕಾರಿನಲ್ಲಿ ಎಲೆಕ್ಟ್ರಿಕ್ ಮೋಟರ್‌ಗಳು ತುಂಬಾ ಪನರ್‌ಫುಲ್ ಆಗಿವೆ. ಕಾಂಪ್ಯಾಕ್ಟ್ ಮತ್ತು ಸ್ಕೇಲೆಬಲ್ ಆಗಿವೆ ಎಂದು ಆಡಿ ಸಂಸ್ಥೆ ಹೇಳಿದೆ. ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್‌ಗಳನ್ನು ಒಳಗೊಂಡಿದೆ. ಇವು 12 ಮಾಡ್ಯೂಲ್‌ಗಳು ಹಾಗೂ 180 ಪ್ರಿಸ್‌ಮ್ಯಾಟಿಕ್ ಸೆಲ್‌ಗಳಿಂದ ಮಾಡಲಾಗಿದೆ. ಒಟ್ಟು 100 ಕಿಲೋವ್ಯಾಟ್ ಸಾಮರ್ಥ್ಯವನ್ನು ಹೊಂದಿವೆ, ಅವುಗಳಲ್ಲಿ 94.9 ಕಿಲೋವ್ಯಾಟ್ ಬಳಸಬಹುದು.
icon

(2 / 9)

ಒಂದು ಬಾರಿ ಚಾರ್ಜ್ ಮಾಡಿದರೆ, ಬ್ಯಾಟರಿ ಪ್ಯಾಕ್ ಗರಿಷ್ಠ 625 ಕಿ.ಮೀ ವರೆಗೆ ಪ್ರಯಾಣಿಸಬಹುದು. ಈ ಎಲೆಕ್ಟ್ರಿಕ್ ಮೋಟರ್ 382 ಬಿಹೆಚ್ ಪಿ ಪವರ್ ಉತ್ಪಾದಿಸುತ್ತದೆ. ಇದರ ಇಂಜಿನ್ 509 ಬಿ ಹೆಚ್ ಪಿ ಪವರ್ ಉತ್ಪಾದಿಸುತ್ತದೆ.
icon

(3 / 9)

ಆಡಿ ಕ್ಯೂ6 ಇ-ಟ್ರಾನ್ ಕಾರು ಆಲ್ ವೀಲ್ ಡ್ರೈವ್ ಆವೃತ್ತಿಯೊಂದಿಗೆ ಎರಡು ರೂಪಾಂತರಗಳಲ್ಲಿ ಲಭ್ಯವಿರಲಿದೆ. ಭವಿಷ್ಯದಲ್ಲಿ ಇನ್ನೂ ಕೆಲವು ರೂಪಾಂತರಗಳನ್ನು ಬಿಡುಗಡೆ ಮಾಡಲು ಯೋಜಿಸುತ್ತಿದೆ. 
icon

(4 / 9)

ಕ್ಯೂ 6 ಇ-ಟ್ರಾನ್ ಕ್ವಾಟ್ರೊ ಕೇವಲ 5.9 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಸಾಧಿಸುತ್ತದೆ. ಮತ್ತೊಂದೆಡೆ, ಎಸ್ ಕ್ಯೂ 6 ಇ-ಟ್ರಾನ್ ಮಾದರಿಯು ಈ ವೇಗವನ್ನು ಕೇವಲ 4.3 ಸೆಕೆಂಡುಗಳಲ್ಲಿ ಸಾಧಿಸುತ್ತದೆ. ಈ ಎರಡು ವಾಹನಗಳ ಟಾಪ್ ಸ್ಪೀಡ್ ಕ್ರಮವಾಗಿ ಗಂಟೆಗೆ 209 ಕಿ.ಮೀ ಮತ್ತು ಗಂಟೆಗೆ 228 ಕಿ.ಮೀ.
icon

(5 / 9)

ಆಡಿ ಕ್ಯೂ 6 ಇ-ಟ್ರಾನ್ ಪ್ರೀಮಿಯಂ ಮಧ್ಯಮ ಗಾತ್ರದ ಸೆಗ್‌ಮೆಂಟಿನಲ್ಲಿದ್ದು, 4,771 ಎಂಎಂ ಉದ್ದ, 2,193 ಎಂಎಂ ಅಗಲ (ಕನ್ನಡಿ ಸೇರಿದಂತೆ) ಮತ್ತು 1,702 ಎಂಎಂ ಎತ್ತರವನ್ನು ಹೊಂದಿದೆ.
icon

(6 / 9)

ಶಾರ್ಟ್ ಓವರ್ ಹ್ಯಾಂಗ್‌ಗಳನ್ನು ಹೊಂದಿರುವ ಲಾಂಗ್ ವ್ಹೀಲ್ ಬೇಸ್ ಎಲೆಕ್ಟ್ರಿಕ್ ಎಸ್‌ಯುವಿ ಸಕ್ರಿಯ ಸ್ಥಾನವನ್ನು ಹೊಂದಿದ್ದರೆ, ಸೈಡ್ ಏರ್ ಇನ್ ಟೇಕ್ ಹೊಂದಿರುವ ಸಿಂಗಲ್ ಫ್ರೇಮ್ ಕ್ಲೋಸ್ಡ್-ಆಫ್ ಗ್ರಿಲ್ ಕಾರಿನ ದಕ್ಷತೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ.
icon

(7 / 9)

ಆಡಿ ಕ್ಯೂ 6 ಇ-ಟ್ರಾನ್ ಕ್ವಾಟ್ರೊ ಎಲೆಕ್ಟ್ರಿಕ್ ಕಾರಿನಲ್ಲಿರುವ ಉನ್ನತ ಸ್ಥಾನದಲ್ಲಿರುವ ಎಲ್ಇಡಿ ಡಿಆರ್‌ಎಲ್‌ಗಳು  ಕಾರಿನ ಲುಕ್ ಅನ್ನು ಹೆಚ್ಚು ಕ್ರಿಯಾತ್ಮಕವಾಗಿಸಿದೆ. ಉತ್ತಮ ಡ್ರೈವಿಂಗ್ ಡೈನಾಮಿಕ್ಸ್ ಗಾಗಿ, 
icon

(8 / 9)

ಹೊಸ ಆಡಿ ಕ್ಯೂ 6 ಇ-ಟ್ರಾನ್ ನಲ್ಲಿರುವ ಕ್ಯಾಬಿನ್ ಸಂಪೂರ್ಣ ಫ್ಯೂಚರಿಸ್ಚಿಕ್ ಆಗಿ ಕಾಣುತ್ತದೆ, ಇದು ಇತರ ವಾಹನ ತಯಾರಕರಿಗೆ ಹೊಸ ವಿನ್ಯಾಸದ ದಿಕ್ಕನ್ನು ಸೂಚಿಸುತ್ತದೆ. 14.5-ಇಂಚಿನ ಸೆಂಟ್ರಲ್ ಕರ್ವ್ಡ್ ಡಿಸ್‌ಪ್ಲೇ ತನ್ನದೇ ಆದ ಎಐನೊಂದಿಗೆ ಬರುತ್ತದೆ. ಸ್ಟೀರಿಂಗ್ ವ್ಹೀಲ್ ಹಿಂಭಾಗದಲ್ಲಿ 11.9 ಇಂಚಿನ ಡ್ರೈವರ್ ಡಿಸ್‌ಪ್ಲೇ ಇರಲಿದೆ.
icon

(9 / 9)

IPL_Entry_Point

ಇತರ ಗ್ಯಾಲರಿಗಳು