ಸ್ಕೂಟರ್ ರೈಡ್ ಮಾಡಿದ ಕುಮಾರಣ್ಣ, ಆಟೋ ರಿಕ್ಷಾ ಚಾಲನೆಗೂ ಜೈ ಅಂದ್ರು ಎಚ್‌ಡಿ ಕುಮಾರಸ್ವಾಮಿ- ಇವಿ ದಿನದಂದು ಪರಿಸರಸ್ನೇಹಿ ಸವಾರಿ- Photos
- HD Kumaraswamy: ವಿಶ್ವ EV (ಎಲೆಕ್ಟ್ರಿಕ್ ವಾಹನ) ದಿನ ಅಂಗವಾಗಿ ಭಾರತೀಯ ಅಟೋಮೊಬೈಲ್ ಸೊಸೈಟಿ ಹಮ್ಮಿಕೊಂಡಿದ್ದ ಎರಡನೇ ಆವೃತ್ತಿಯ ಎಲೆಕ್ಟ್ರಿಕ್ ವಾಹನಗಳ ರಾಲಿಯನ್ನು ಕೇಂದ್ರದ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ವಿವಿಧ ಎಲೆಕ್ಟ್ರಿಕ್ ವಾಹನಗಳಲ್ಲಿ ಎಚ್‌ಡಿಕೆ ರೈಡ್ ಮಾಡಿದ್ದಾರೆ.
- HD Kumaraswamy: ವಿಶ್ವ EV (ಎಲೆಕ್ಟ್ರಿಕ್ ವಾಹನ) ದಿನ ಅಂಗವಾಗಿ ಭಾರತೀಯ ಅಟೋಮೊಬೈಲ್ ಸೊಸೈಟಿ ಹಮ್ಮಿಕೊಂಡಿದ್ದ ಎರಡನೇ ಆವೃತ್ತಿಯ ಎಲೆಕ್ಟ್ರಿಕ್ ವಾಹನಗಳ ರಾಲಿಯನ್ನು ಕೇಂದ್ರದ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ವಿವಿಧ ಎಲೆಕ್ಟ್ರಿಕ್ ವಾಹನಗಳಲ್ಲಿ ಎಚ್‌ಡಿಕೆ ರೈಡ್ ಮಾಡಿದ್ದಾರೆ.
(1 / 6)
HD Kumaraswamy: ಆಟೋ ಬಿಡಿಭಾಗಗಳ ಮೇಲೆ ಇತರೆ ದೇಶಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿಕೊಳ್ಳಬೇಕು ಎಂದು ಅಟೋ ಉದ್ಯಮಕ್ಕೆ ಸಲಹೆ ನೀಡಿದ ಕೇಂದ್ರ ಭಾರೀ ಕೈಗಾರಿಕಾ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು; ಈ ನಿಟ್ಟಿನಲ್ಲಿ ಸ್ವಾವಲಂಬನೆ ಸಾಧಿಸಲು ದೊಡ್ಡ ಹೆಜ್ಜೆ ಇಡಬೇಕು ಎಂದು ಎಚ್‌ಡಿಕೆ ಕರೆ ನೀಡಿದ್ದಾರೆ. ACMA (The Automotive Component Manufacturers Association of India) 64ನೇ ಸಮಾವೇಶ ಉದ್ಘಾಟಿಸಿದ ಬಳಿಕ ಅವರು "ಅಟೋ ಉದ್ಯಮ ಬಿಡಿಭಾಗಗಳನ್ನು ಹೊರ ದೇಶಗಳಿಂದ ಆಮದು ಮಾಡಿಕೊಳ್ಳುವುದನ್ನು ಕಡಿಮೆ ಮಾಡಲೇಬೇಕು, ಹಾಗೂ ಫೇಮ್ 3 (FAME-III) ಜಾರಿಗೆ ಬರುವ ತನಕ EMPS (Electric Mobility Promotion Scheme) ಯೋಜನೆಯನ್ನು ಮುಂದುವರಿಸಲಾಗುವುದು" ಎಂದು ಹೇಳಿದ್ದಾರೆ.
(2 / 6)
ಸದ್ಯಕ್ಕೆ ಆಟೋ ಬಿಡಿಭಾಗ ತಯಾರಿಕಾ ಘಟಕಗಳು ಜಿಡಿಪಿಗೆ 2.7%ರಷ್ಟು ಕೊಡುಗೆ ನೀಡುತ್ತಿವೆ ಹಾಗೂ ಐದು ದಶಲಕ್ಷಕ್ಕೂ ಹೆಚ್ಚು ಜನರಿಗೆ ಉದ್ಯೋಗಾವಕಾಶ ಕಲ್ಪಿಸಿವೆ ಎಂದ ಅವರು; ಈ ಕ್ಷೇತ್ರದಲ್ಲಿ ಇನ್ನೂ ಉತ್ತಮ ಸಾಧನೆ ಮಾಡಲು ಅವಕಾಶ ಇದೆ. ಪ್ರಧಾನ ಮಂತ್ರಿಗಳ ಆತ್ಮನಿರ್ಭರ್ ಭಾರತ್ ಹಾಗೂ ಮೆಕ್ ಇನ್ ಇಂಡಿಯಾ ಪರಿಕಲ್ಪನೆಗಳ ಪ್ರಕಾರ ನಾವು ವಿಕಸಿತ್ ಭಾರತ್ 2047 ಗುರಿಯನ್ನು ಮುಟ್ಟಲು ಸಾಧ್ಯವಿದೆ ಎಂದು ಅವರು ಹೇಳಿದ್ದಾರೆ.
(3 / 6)
ಜಾಗತಿಕ ಮಟ್ಟದಲ್ಲಿ ದೇಶೀಯ ಆಟೋ ಬಿಡಿಭಾಗ ಉದ್ಯಮ ಅನೇಕ ಸವಾಲುಗಳನ್ನು ಎದುರಿಸುತ್ತಿದೆ. ಅಲ್ಲದೆ; ದುಬಾರಿ ಸಾರಿಗೆ, ವೆಚ್ಚಗಳ ಒತ್ತಡಕ್ಕೆ ಸಿಲುಕಿದೆ. ಇಷ್ಟಾದರೂ ಪ್ರಸಕ್ತ ಹಣಕಾಸು ವರ್ಷದಲ್ಲಿ ಈ ಕ್ಷೇತ್ರದ ರಪ್ತು ವಹಿವಾಟು ಬೆಳವಣಿಗೆಯನ್ನು ಕಂಡಿದೆ ಇಂದು ಅವರು ಹೇಳಿದರು.
(4 / 6)
ಈ ಉದ್ಯಮವನ್ನು ಉತ್ತೇಜಿಸುವ ಸಲುವಾಗಿ ಕೇಂದ್ರ ಸರ್ಕಾರ, ಉತ್ಪಾದನಾ ಸಂಪರ್ಕ ಉಪಕ್ರಮ (PLI) ಗಳನ್ನು ಸಾಕಷ್ಟು ಕೈಗೊಂಡಿದೆ. ಈ ಮೂಲಕ ₹74,850 ಕೋಟಿ ಹೂಡಿಕೆಯನ್ನು ಉತ್ತೇಜಿಸಲಾಗಿದೆ. ಈ ಪೈಕಿ 17,836 ರೂ ಮೊತ್ತ 2024 ಮಾರ್ಚ್ ಹೊತ್ತಿಗೆ ಹೂಡಿಕೆ ಆಗಿದೆ. ಇದರ ಪರಿಣಾಮವಾಗಿ 30,500 ಉದ್ಯೋಗ ಅವಕಾಶಗಳು ಸೃಷ್ಟಿಯಾಗಿವೆ. ಇದು ಉದ್ಯಮಕ್ಕೆ ದೊಡ್ಡ ಶಕ್ತಿಯನ್ನು ತುಂಬಿದೆ ಎಂದು ಸಚಿವರು ಹೇಳಿದರು.
(5 / 6)
ಫೇಮ್ 3 ಯೋಜನೆಯನ್ನು ಶೀಘ್ರವೇ ಜಾರಿಗೆ ತರಲಾಗುವುದು. ಅದುವರೆಗೂ ಆಟೋ ಕ್ಷೇತ್ರಕ್ಕೆ ಉತ್ತಜನ ನೀಡಲು EMPS ಯೋಜನೆಯನ್ನು ಮುಂದುವರಿಸಲಾಗುವುದು ಎಂದು ಅವರು ತಿಳಿಸಿದರು.
ಇತರ ಗ್ಯಾಲರಿಗಳು