MG Windsor EV: ಬ್ಯಾಟರಿ ಬಾಡಿಗೆ ಆಯ್ಕೆಯೊಂದಿಗೆ ಆಗಮಿಸಿದ ಎಂಜಿ ವಿಂಡ್ಸರ್‌ ಎಲೆಕ್ಟ್ರಿಕ್‌ ವಾಹನ, ದರ 9.99 ಲಕ್ಷ ರೂಪಾಯಿ-automobile news mg windsor ev launched in india with battery rental option priced at rs 9 99 lakh photos pcp ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Mg Windsor Ev: ಬ್ಯಾಟರಿ ಬಾಡಿಗೆ ಆಯ್ಕೆಯೊಂದಿಗೆ ಆಗಮಿಸಿದ ಎಂಜಿ ವಿಂಡ್ಸರ್‌ ಎಲೆಕ್ಟ್ರಿಕ್‌ ವಾಹನ, ದರ 9.99 ಲಕ್ಷ ರೂಪಾಯಿ

MG Windsor EV: ಬ್ಯಾಟರಿ ಬಾಡಿಗೆ ಆಯ್ಕೆಯೊಂದಿಗೆ ಆಗಮಿಸಿದ ಎಂಜಿ ವಿಂಡ್ಸರ್‌ ಎಲೆಕ್ಟ್ರಿಕ್‌ ವಾಹನ, ದರ 9.99 ಲಕ್ಷ ರೂಪಾಯಿ

  • MG Windsor EV launched: ಜೆಎಸ್‌ಡಬ್ಲ್ಯು ಎಂಜಿ ಮೋಟಾರ್‌ ಕಂಪನಿಯ ಎಂಜಿ ವಿಂಡ್ಸರ್‌ ಇವಿ ಎಂಬ ಎಲೆಕ್ಟ್ರಿಕ್‌ ವಾಹನವನ್ನು ಭಾರತಕ್ಕೆ ಪರಿಚಯಿಸಿದೆ. ಬ್ಯಾಟರಿ ಬಾಡಿಗೆ ಆಯ್ಕೆಯೊಂದಿಗೆ ಆರಂಭಿಕ ದರ 9.99 ಲಕ್ಷ ರೂಪಾಯಿಯೊಂದಿಗೆ ಲಭ್ಯವಿದೆ. ಇದರ 38 ಕಿಲೋವ್ಯಾಟ್ ಬ್ಯಾಟರಿಯು ಸಿಂಗಲ್‌ ಚಾರ್ಜ್‌ಗೆ 331 ಕಿ.ಮೀ ದೂರ ಚಲಿಸುತ್ತದೆ.

ಎಂಜಿ ವಿಂಡ್ಸರ್ ಇವಿಯನ್ನು  ಎಂಜಿ ಮೋಟಾರ್‌ ಕಂಪನಿಯು ಮೂರನೇ ಸಂಪೂರ್ಣ ಎಲೆಕ್ಟ್ರಿಕ್‌ ಆವೃತ್ತಿಯಾಗಿ ಬಿಡುಗಡೆ ಮಾಡಿದೆ. ಇದು 9.99 ಲಕ್ಷ ರೂಪಾಯಿ ಆರಂಭಿಕ ಬೆಲೆಯಲ್ಲಿ ಲಭ್ಯವಿದೆ. ಒಂದು ಫುಲ್‌ ಚಾರ್ಜ್‌ಗೆ 331 ಕಿ.ಮೀ. ಪ್ರಯಾಣಿಸುವ ಸಾಮರ್ಥ್ಯವನ್ನು ಹೊಂದಿದೆ. ಅಕ್ಟೋಬರ್‌ 3ರಿಂದ ಈ ಕಾರಿನ ಬುಕ್ಕಿಂಗ್‌ ಆರಂಭವಾಗಲಿದೆ.
icon

(1 / 9)

ಎಂಜಿ ವಿಂಡ್ಸರ್ ಬ್ರಾಂಡ್‌ನ  "ಬ್ಯಾಟರಿ ಆಸ್ ಸರ್ವೀಸ್ (ಬಿಎಎಸ್)" ಕಾರ್ಯಕ್ರಮದ ಅಡಿಯಲ್ಲಿ ನೀಡಲಾಗುವ ಮೊದಲ ಇವಿ ಇದಾಗಿದೆ. ಗ್ರಾಹಕರು ಪ್ರತಿಕಿಲೋಮೀಟರ್‌ ಪ್ರಯಾಣಕ್ಕೆ ಹೆಚ್ಚುವರಿಯಾಗಿ 3.5 ರೂಪಾಯಿ ನೀಡಬೇಕು. ಈ ಮೂಲಕ ಬ್ಯಾಟರಿ ಬಾಡಿಗೆ ಕಾರಾಗಿ ಇದನ್ನು ಬಿಡುಗಡೆ ಮಾಡಲಾಗಿದೆ. 
icon

(2 / 9)

ವಿಂಡ್ಸರ್ ಇವಿಯನ್ನು ಕ್ರಾಸ್ಒವರ್ ಯುಟಿಲಿಟಿ ವೆಹಿಕಲ್ (ಸಿಯುವಿ) ಆಗಿ ವಿನ್ಯಾಸಗೊಳಿಸಲಾಗಿದೆ. ಇದು 18 ಇಂಚಿನ ಡೈಮಂಡ್-ಕಟ್ ಅಲಾಯ್ ವೀಲ್‌ ಹೊಂದಿದೆ. ಮುಂಭಾಗದಲ್ಲಿ ಎಲ್ಇಡಿ ಡಿಆರ್ ಎಲ್ ಮತ್ತು ಹೆಡ್ ಲ್ಯಾಂಪ್ ಗಳನ್ನು ಅಳವಡಿಸಲಾಗಿದ್ದು, ಮುಂಭಾಗದ ಬಲ ಚಕ್ರದ ಮೇಲೆ ಚಾರ್ಜಿಂಗ್ ಇನ್ಲೆಟ್ ಇದೆ.
icon

(3 / 9)

ಎಂಜಿ ವಿಂಡ್ಸರ್‌ನ ಹಿಂಭಾಗದಲ್ಲಿ ಎಲ್ಇಡಿ ಟೈಲ್ ಲ್ಯಾಂಪ್ ಯುನಿಟ್‌ಗಳಿವೆ. ಇವು ಪರಸ್ಪರ ಸಂಪರ್ಕ ಹೊಂದಿವೆ. ಸೆಡಾನ್‌ನ ಆರಾಮದಾಯಕತೆ ಮತ್ತು ಎಸ್‌ಯುವಿ ವಿಶಾಲತೆಯನ್ನು ಈ ಕಾರು ಹೊಂದಿದೆ.
icon

(4 / 9)

ಎಂಜಿ ವಿಂಡ್ಸರ್ ಇವಿ ಇಂಟೀರಿಯರ್‌ ಆಕರ್ಷಕವಾಗಿದೆ. 8.8-ಇಂಚಿನ ಡ್ರೈವರ್ ಡಿಸ್‌ಪ್ಲೇ ಜೊತೆಗೆ 15.6-ಇಂಚಿನ ಟಚ್‌ಸ್ಕ್ರೀನ್‌ ಇನ್ಫೋಟೈನ್ಮೆಂಟ್ ಪರದೆಯನ್ನು ಹೊಂದಿದೆ. ಇದು ವೈರ್‌ಲೆಸ್‌ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇಗೆ ಬೆಂಬಲ ನೀಡುತ್ತದೆ. ಈ ಕಾರು ಲೆವೆಲ್ -2 ಎಡಿಎಎಸ್ ಜೊತೆಗೆ 80 ಕ್ಕೂ ಹೆಚ್ಚು ಸಂಪರ್ಕಿತ ಫೀಚರ್‌ಗಳನ್ನು ಹೊಂದಿದೆ.
icon

(5 / 9)

ವಿಂಡ್ಸರ್ ಇವಿಯ ಮುಂಭಾಗದ ಸಾಲಿನಲ್ಲಿ ಉದ್ದವಾದ ಸೆಂಟರ್ ಆರ್ಮ್‌ರೆಸ್ಟ್‌ ಇದೆ. ಇದು ಇಂಟಿಗ್ರೇಟೆಡ್ ಕಪ್ ಹೋಲ್ಡರ್ ಅನ್ನು ಹೊಂದಿದೆ. ಹಿಂಭಾಗದ ಸೀಟುಗಳು ಕಪ್ ಹೋಲ್ಡರ್‌ಗಳೊಂದಿಗೆ ಮಡಚಬಹುದಾದ ಸೆಂಟರ್ ಆರ್ಮ್‌ರೆಸ್ಟ್‌ ಹೊಂದಿವೆ.
icon

(6 / 9)

ಎಂಜಿ ವಿಂಡ್ಸರ್ ವಿಹಂಗಮ ಸನ್ ರೂಫ್ ಹೊಂದಿದೆ. ಕಂಪನಿಯು ಇದನ್ನು ಇನ್ಫಿನಿಟಿ ವ್ಯೂ ಗ್ಲಾಸ್ ಹೊಂದಿದೆ.  ಪ್ರಯಾಣಿಕರು ಒಂಬತ್ತು ಸ್ಪೀಕರ್ ಸರೌಂಡ್ ಸೌಂಡ್ ಸಿಸ್ಟಮ್ ಮೂಲಕ ಮ್ಯೂಸಿಕ್‌ ಮಸ್ತಿ ಅನುಭವಿಸಬಹುದು.
icon

(7 / 9)

ಎಂಜಿ ವಿಂಡ್ಸರ್ 604 ಲೀಟರ್‌ಗಳ ತಿದೊಡ್ಡ ಇನ್-ಸೆಗ್ಮೆಂಟ್ ಸರಕು ಸ್ಟೋರೇಜ್‌ ಹೊಂದಿದೆ.  ಹಿಂಭಾಗದಲ್ಲಿ ಕುಳಿತುಕೊಳ್ಳುವ ಪ್ರಯಾಣಿಕರಿಗೆ ಸಾಕಷ್ಟು ಸ್ಥಳಾವಕಾಶವಿದೆ.
icon

(8 / 9)

ಎಂಜಿ ವಿಂಡ್ಸರ್ ಇವಿ ಒಂದೇ ಎಲೆಕ್ಟ್ರಿಕ್ ಮೋಟರ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ, ಇದು 134 ಬಿಎಚ್‌ಪಿ ಮತ್ತು 200 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಮೋಟರ್ ಪ್ರಿಸ್ಮ್ಯಾಟಿಕ್ ಸೆಲ್ ಗಳೊಂದಿಗೆ 38 ಕಿಲೋವ್ಯಾಟ್ ಎಲ್ ಎಫ್ ಪಿ ಬ್ಯಾಟರಿ ಪ್ಯಾಕ್ ನಿಂದ ನಿಯಂತ್ರಿಸಲ್ಪಡುತ್ತದೆ.   ಒಮ್ಮೆ ಪೂರ್ತಿ ಚಾರ್ಜ್‌ ಮಾಡಿದ್ರೆ 331 ಕಿ.ಮೀ ಸಾಗಬಹುದು ಎಂದು ಕಂಪನಿ ತಿಳಿಸಿದೆ.
icon

(9 / 9)

ಇತರ ಗ್ಯಾಲರಿಗಳು