Skoda Elroq EV: ಅಂದದ ಸ್ಕೋಡಾ ಎಲ್ರೋಕ್ ಇವಿ ನೋಡಿರಣ್ಣ; 28 ನಿಮಿಷದಲ್ಲಿ ಶೇ 80 ಚಾರ್ಜಿಂಗ್‌, ಫುಲ್‌ ಚಾರ್ಜ್‌ಗೆ 560 ಕಿಮೀ ರೇಂಜ್‌
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Skoda Elroq Ev: ಅಂದದ ಸ್ಕೋಡಾ ಎಲ್ರೋಕ್ ಇವಿ ನೋಡಿರಣ್ಣ; 28 ನಿಮಿಷದಲ್ಲಿ ಶೇ 80 ಚಾರ್ಜಿಂಗ್‌, ಫುಲ್‌ ಚಾರ್ಜ್‌ಗೆ 560 ಕಿಮೀ ರೇಂಜ್‌

Skoda Elroq EV: ಅಂದದ ಸ್ಕೋಡಾ ಎಲ್ರೋಕ್ ಇವಿ ನೋಡಿರಣ್ಣ; 28 ನಿಮಿಷದಲ್ಲಿ ಶೇ 80 ಚಾರ್ಜಿಂಗ್‌, ಫುಲ್‌ ಚಾರ್ಜ್‌ಗೆ 560 ಕಿಮೀ ರೇಂಜ್‌

  • ಜೆಕ್ ಗಣರಾಜ್ಯದ ವಾಹನ ತಯಾರಕ ಕಂಪನಿ ಸ್ಕೋಡಾದ ಮೊದಲ ಎಲೆಕ್ಟ್ರಿಕ್ ಕಾಂಪ್ಯಾಕ್ಟ್ ಎಸ್‌ಯುವಿ ಸ್ಕೋಡಾ ಎಲ್ರೋಕ್. ಈ ಇವಿಯ ಫ್ರೆಶ್‌ ಡಿಸೈನ್‌ ಸೇರಿದಂತೆ ಹಲವು ಅಂಶಗಳು ವಾಹನಪ್ರಿಯರನ್ನು ಸೆಳೆದಿವೆ. ಹೊಸ ಸ್ಕೋಡಾ ಎಲ್ರೋಕ್‌ ಇವಿಯ ಚಿತ್ರಗಳನ್ನು ನೋಡುತ್ತ ಹೆಚ್ಚಿನ ವಿವರ ಪಡೆಯೋಣ.

ಸ್ಕೋಡಾ ತನ್ನ ಎಲ್ರೋಕ್ ಇವಿಯನ್ನು ಭಾರತದಲ್ಲಿ ಬಿಡುಗಡೆ ಮಾಡುವ ಮುನ್ನ ಜಾಗತಿಕ ಮಾರುಕಟ್ಟೆಯಲ್ಲಿ ಲಾಂಚ್‌ ಮಾಡಿದೆ. ಭಾರತಕ್ಕೆ ಮುಂದಿನ ವರ್ಷ ಆಗಮಿಸಲಿದೆ.  ಸ್ಕೋಡಾ ಎಲ್ರಾಕ್ ಇವಿ ಕಂಪನಿಯ ಮೊದಲ ಆಲ್-ಎಲೆಕ್ಟ್ರಿಕ್ ಕಾಂಪ್ಯಾಕ್ಟ್ ಎಸ್‌ಯುವಿಯಾಗಿದೆ. ಎಲ್ರೋಕ್ ಸಂಪೂರ್ಣವಾಗಿ ಹೊಸ ವಿನ್ಯಾಸ ತತ್ವವನ್ನು ಹೊಂದಿದೆ. ಕಂಪನಿಯ ಸಾಂಪ್ರದಾಯಿಕ ವಿನ್ಯಾಸ ಶೈಲಿಯನ್ನು ಬಿಟ್ಟು ಹೊಸಬಗೆಯ ವಿನ್ಯಾಸವನ್ನು ಈ ಇವಿ ಹೊಂದಿದೆ. 
icon

(1 / 5)

ಇತರೆ ಸ್ಕೋಡಾ ಕಾರುಗಳಿಗೆ ಹೋಲಿಸಿದರೆ ಕಡಿಮೆ ಲೈನ್‌ಗಳನ್ನು ಇದು ಹೊಂದಿದೆ. ಇದು ಆಧುನಿಕ ಸ್ಲೈಡ್‌ ವಿನ್ಯಾಸ ಪರಿಭಾಷೆಯಲ್ಲಿ ಮೂಡಿಬಂದಿದೆ. ಮುಂಭಾಗದ ಪ್ರೊಫೈಲ್ ಟೆಕ್ ಡೆಕ್ ಫೇಸ್ ಹೊಂದಿದೆ. ಎಲ್ಲವೂ ಎಲ್‌ಇಡಿ ಹೆಡ್‌ಲೈಟ್‌ಗಳಾಗಿವೆ. ಸೈಡ್ ಪ್ರೊಫೈಲ್ ಮತ್ತು ಹಿಂಭಾಗದಲ್ಲಿ ಕಪ್ಪು ಕ್ಲಾಡಿಂಗ್‌ನಿಂದಾಗಿ ಈ ಕಾರಿಗೆ ಬೋಲ್ಡ್‌ ಲುಕ್‌ ಬಂದಿದೆ.  
icon

(2 / 5)

ಸ್ಕೋಡಾ ಎಲ್ರೋಕ್ ವಿನ್ಯಾಸ ಸರಳವಾಗಿ ಮತ್ತು ಸುವ್ಯವಸ್ಥಿತವಾಗಿ ಕಾಣುತ್ತದೆ. ಮಧ್ಯದಲ್ಲಿ ದೊಡ್ಡ 13 ಇಂಚಿನ ಫ್ಲೋಟಿಂಗ್ ಟಚ್ ಸ್ಕ್ರೀನ್ ಇನ್ಫೋಟೈನ್ ಮೆಂಟ್ ಸಿಸ್ಟಂ ಇದೆ. ಸಂಪೂರ್ಣ ಡಿಜಿಟಲ್ ಇನ್‌ಸ್ಟ್ರುಮೆಂಟ್‌ಕ್ಲಸ್ಟರ್‌ ಮತ್ತು ಲೇಯರ್ಡ್ ಡ್ಯಾಶ್ ಬೋರ್ಡ್  ಆಕರ್ಷಕವಾಗಿದೆ. ಈ ಕಾರಿನಲ್ಲಿ ಕ್ಯಾಬಿನ್‌ ಸ್ಥಳಾವಕಾಶ ಉತ್ತಮವಾಗಿದೆ. ಆರಾಮದಾಯಕ ಸವಾರಿಗೆ ಪೂರಕವಾಗಿದೆ. 1,580-ಲೀಟರ್ ಬೂಟ್ ಸ್ಪೇಸ್ ಇದರ ಕ್ಯಾಬಿನ್‌ನ ಪ್ರಮುಖ ಆಕರ್ಷಣೆ ಎನ್ನಬಹುದು. 
icon

(3 / 5)

ಸ್ಕೋಡಾ ಎಲ್ರೋಕ್ ಸ್ಟ್ಯಾಂಡರ್ಡ್ ಮತ್ತು ಸ್ಪೋರ್ಟ್‌ಲೈನ್‌ ಆವೃತ್ತಿಗಳಲ್ಲಿ ಲಭ್ಯವಿದೆ. ಫೋಕ್ಸ್ ವ್ಯಾಗನ್ ಗ್ರೂಪ್ ನ ಎಂಇಬಿ ಪ್ಲಾಟ್ ಫಾರ್ಮ್ ಅನ್ನು ಆಧರಿಸಿ, ಎಲ್ರೋಕ್ ವಿವಿಧ ಪವರ್ ಟ್ರೇನ್  ಆಯ್ಕೆಗಳನ್ನು ಹೊಂದಿದೆ. 55 ಕಿಲೋವ್ಯಾಟ್, 63 ಕಿಲೋವ್ಯಾಟ್ ಮತ್ತು 82 ಕಿಲೋವ್ಯಾಟ್ ಎಂಬ ಮೂರು ಬ್ಯಾಟರಿ ಆಯ್ಕೆಗಳಲ್ಲಿ ದೊರಕುತ್ತದೆ. ಎಂಟ್ರಿ ಲೆವೆಲ್ ಮಾದರಿ ಎಲ್ರಾಕ್ 50 168 ಬಿಎಚ್‌ಪಿ ಮೋಟಾರ್ ಹೊಂದಿದ್ದು, 370 ಕಿ.ಮೀ ರೇಂಜ್‌ ನೀಡುತ್ತದೆ. ಉನ್ನತ ಶ್ರೇಣಿಯ ಎಲ್ರೋಕ್ 85 282 ಬಿಎಚ್‌ಪಿ ಮೋಟರ್ ಹೊಂದಿದ್ದು, 560 ಕಿ.ಮೀ ರೇಂಜ್‌ ನೀಡುತ್ತದೆ. ಇದು ಆಲ್‌ ವೀಲ್‌ ಡ್ರೈವ್‌ ಕಾರಾಗಿದೆ. 
icon

(4 / 5)

ಈ ಮೂರು ಆವೃತ್ತಿಗಳು ಫಾಸ್ಟ್ ಚಾರ್ಜಿಂಗ್ ಸಾಮರ್ಥ್ಯ ಹೊಂದಿವೆ. ಎಲ್ರಾಕ್ 50 ಮತ್ತು ಎಲ್ರಾಕ್ 60 ಕ್ರಮವಾಗಿ 145 ಕಿಲೋವ್ಯಾಟ್ ಮತ್ತು 165 ಕಿಲೋವ್ಯಾಟ್ ಫಾಸ್ಟ್ ಚಾರ್ಜಿಂಗ್ ಗೆ ಅವಕಾಶ ನೀಡುತ್ತದೆ. ಎಲ್ರಾಕ್ 85 ಟ್ರಿಮ್  175 ಕಿಲೋವ್ಯಾಟ್ ಫಾಸ್ಟ್ ಚಾರ್ಜರ್‌ವರೆಗೆ ಚಾರ್ಜ್ ಮಾಡಬಹುದು, ಕೇವಲ 28 ನಿಮಿಷಗಳಲ್ಲಿ ಶೇಕಡ 80ರಷ್ಟು ಚಾರ್ಜ್‌ ಆಗುತ್ತದೆ.  
icon

(5 / 5)

ಇತರ ಗ್ಯಾಲರಿಗಳು