ಈ ಕಾರನ್ನು ಚಲಾಯಿಸೋದು ಹೇಗೆ, ಇದ್ರಲ್ಲಿ ಸ್ಟೇರಿಂಗ್, ಗೇರ್ ಬಾಕ್ಸ್ ಏನೂ ಇಲ್ಲ; ಟೆಸ್ಲಾ ಸೈಬರ್‌ಕ್ಯಾಬ್‌ ಚಿತ್ರನೋಟ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಈ ಕಾರನ್ನು ಚಲಾಯಿಸೋದು ಹೇಗೆ, ಇದ್ರಲ್ಲಿ ಸ್ಟೇರಿಂಗ್, ಗೇರ್ ಬಾಕ್ಸ್ ಏನೂ ಇಲ್ಲ; ಟೆಸ್ಲಾ ಸೈಬರ್‌ಕ್ಯಾಬ್‌ ಚಿತ್ರನೋಟ

ಈ ಕಾರನ್ನು ಚಲಾಯಿಸೋದು ಹೇಗೆ, ಇದ್ರಲ್ಲಿ ಸ್ಟೇರಿಂಗ್, ಗೇರ್ ಬಾಕ್ಸ್ ಏನೂ ಇಲ್ಲ; ಟೆಸ್ಲಾ ಸೈಬರ್‌ಕ್ಯಾಬ್‌ ಚಿತ್ರನೋಟ

ಅಟೋಮೊಬೈಲ್ ಕ್ಷೇತ್ರದಲ್ಲಿ ನಿತ್ಯವೂ ಹೊಸ ಹೊಸ ಪ್ರಯೋಗ, ನವೋನ್ವೇಷಣೆಗಳು ನಡೆಯುತ್ತಲೇ ಇದೆ. ಈ ವಿಚಾರದಲ್ಲಿ ಅಮೆರಿಕದ ಟೆಸ್ಲಾ ಮುಂಚೂಣಿಯಲ್ಲಿದೆ. ಅದು ಇತ್ತೀಚೆಗೆ ಬಿಡುಗಡೆ ಮಾಡಿದ ಕಾರಿನ ಚಿತ್ರ ನೋಡಿದವರು “ಈ ಕಾರನ್ನು ಚಲಾಯಿಸೋದು ಹೇಗೆ, ಇದ್ರಲ್ಲಿ ಸ್ಟೇರಿಂಗ್, ಗೇರ್ ಬಾಕ್ಸ್ ಏನೂ ಇಲ್ಲ” ಎಂದು ಹೌಹಾರಿದ್ದಾರೆ. ಟೆಸ್ಲಾ ಸೈಬರ್‌ಕ್ಯಾಬ್‌ ಚಿತ್ರನೋಟ ಇಲ್ಲಿದೆ.

ಇದೊಂಥರಾ ವಿಚಿತ್ರ ಕಾರು. ಈ ಕಾರನ್ನು ಚಲಾಯಿಸೋದು ಹೇಗೆ, ಇದ್ರಲ್ಲಿ ಸ್ಟೇರಿಂಗ್, ಗೇರ್ ಬಾಕ್ಸ್ ಏನೂ ಇಲ್ಲ ಅಂತ ಗಾಬರಿಯಾಗಬೇಡಿ. ಇದು ರೋಬೋ ಟ್ಯಾಕ್ಸಿ.ಇದರ ಹೆಸರು ಟೆಸ್ಲಾ ಸೈಬರ್‌ಕ್ಯಾಬ್‌. ಟೆಸ್ಲಾ ಕಂಪನಿ ಮುಖ್ಯಸ್ಥ ಎಲಾನ್ ಮಸ್ಕ್‌ ಈ ಕ್ಯಾಬ್‌ನ ಚಿತ್ರಗಳನ್ನು ಅನಾವರಣಗೊಳಿಸಿದ್ದಾರೆ. 2026ರಲ್ಲಿ ಇದರ ಉತ್ಪಾದನೆ ಶುರುವಾಗಲಿದೆ ಎಂದೂ ಅವರು ಪ್ರಕಟಿಸಿದ್ದಾರೆ.
icon

(1 / 6)

ಎಲಾನ್ ಮಸ್ಕ್ ಅವರ ಬಹಳ ಹಳೆಯ ಕನಸು ಈ ಟೆಸ್ಲಾ ಸೈಬರ್‌ಕ್ಯಾಬ್‌. ಇದು ಈಗ ನನಸಾಗುತ್ತಿದ್ದು, ಇದರ ಮೌಲ್ಯ 30,000 ಅಮೆರಿಕನ್ ಡಾಲರ್‌ಗಿಂತ ಕಡಿಮೆ ಇರಲಿದೆ ಎಂದು ಅಂದಾಜಿಸಲಾಗುತ್ತಿದೆ. ಟೆಸ್ಲಾ ಮಾಡೆಲ್ 3 ಗಿಂತ ಅಗ್ಗದಲ್ಲಿ ಈ ಕಾರು ಸಿಗುವ ಸಾಧ್ಯತೆ ಇದೆ ಎನ್ನಲಾಗಿದೆ.
icon

(2 / 6)

ಟೆಸ್ಲಾ ಸೈಬರ್ ಕ್ಯಾಬ್‌ ಕಂಪ್ಲೀಟ್ ಆಗಿ ಸ್ವಯಂ ಚಾಲಿತವಾಗಿರಲಿದ್ದು, ಸಂಚಾರಕ್ಕೆ ಕ್ಯಾಮೆರಾ ಮತ್ತು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಅನ್ನೇ ಅವಲಂಬಿಸಲಿದೆ. ಇದು ಇವಿ ಮಾದರಿಯ ಫೀಚರ್‌ಗಳನ್ನು ಹೊಂದಿರಲಿದೆ ಎಂದು ಮಸ್ಕ್‌ ವಿವರಿಸಿದ್ದಾರೆ.
icon

(3 / 6)

ಟೆಸ್ಲಾ ಸೈಬರ್ ಕ್ಯಾಬ್‌ನಲ್ಲಿ ಎರಡು ಆಸನ ಸಾಮರ್ಥ್ಯದ್ದಾಗಿದ್ದು ಹಿಂಬದಿಯಲ್ಲಿ ಕಾರ್ಗೊ ಸ್ಪೇಸ್ ಹೆಚ್ಚಿದೆ. ಇದು ನಗರ ಸಂಚಾರಕ್ಕೆ ಉತ್ತಮ ಆಯ್ಕೆಯಾಗಿದ್ದು, ಹೆಚ್ಚಿನ ವಿವರ ಬಹಿರಂಗವಾಗಿಲ್ಲ. ಸದ್ಯ ಲಭ್ಯ ಮಾಹಿತಿ ಪ್ರಕಾರ, ಇದರಲ್ಲಿ ಪ್ರಯಾಣಿಸಲು ಪ್ರಯಾಣಿಕರು 1.6 ಕಿ.ಮೀ. 13 ರೂಪಾಯಿ ( 20 ಸೆಂಟ್ಸ್‌) ಪಾವತಿಸಬೇಕಾಗಬಹುದು.
icon

(4 / 6)

ಟೆಸ್ಲಾ ಸೈಬರ್‌ಕ್ಯಾಬ್‌ನ ಬಾಗಿಲು ಮೇಲಕ್ಕೆ ಚಿಟ್ಟೆಯ ರೆಕ್ಕೆ ತರ ತೆರೆದುಕೊಳ್ಳುತ್ತದೆ., ದೊಡ್ಡ ಡಿಸ್ಕ್ ರೀತಿಯ ವ್ಹೀಲ್ ಕ್ಯಾಪ್‌ ಕಾರಿನ ಆಕರ್ಷಣೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ. 
icon

(5 / 6)

ಟೆಸ್ಲಾ ಸೈಬರ್‌ಕ್ಯಾಬ್‌ನ ಒಳಾಂಗಣ ವಿನ್ಯಾಸವೂ ಆಕರ್ಷಕವಾಗಿದೆ. ಎರಡು ಆಸನಗಳು ಕೂಡ ಆಕರ್ಷಕ ನೋಟ ಹೊಂದಿದ್ದು, ಆಯತಾಕಾರದ ಇನ್ಫೋಟೈನ್‌ಮೆಂಟ್ ಸ್ಕ್ರೀನ್ ಕೂಡ ಇದೆ.
icon

(6 / 6)

ಇತರ ಗ್ಯಾಲರಿಗಳು