ರೋಲ್ಸ್ ರಾಯ್ಸ್ ಘೋಸ್ಟ್ ಸೀರಿಸ್ II ಭಾರತದಲ್ಲಿ ಬಿಡುಗಡೆ, ದರ 8.95 ಕೋಟಿ; 5 ಬಾಗಿಲಿನ ಈ ಐಷಾರಾಮಿ ಕಾರಿಗೆ ಏನಿದೆ ಸಾಟಿ?
- Rolls-Royce Ghost Series II: 6.75 ಲೀಟರ್‌ನ ವಿ12 ಎಂಜಿನ್ ಹೊಂದಿರುವ ರೋಲ್ಸ್ ರಾಯ್ಸ್ ಘೋಸ್ಟ್ ಸೀರಿಸ್ II ವಿಲಾಸಿ ಕಾರು ಭಾರತಕ್ಕೆ ಆಗಮಿಸಿದೆ. ಇದರ ಆರಂಭಿಕ ದರ 8.95 ಕೋಟಿ ರೂಪಾಯಿ ಇದೆ. ಈ ಕಾರಿನಲ್ಲಿ ಏನೆಲ್ಲ ವಿಶೇಷಗಳಿವೆ ಎಂದು ತಿಳಿಯೋಣ.
- Rolls-Royce Ghost Series II: 6.75 ಲೀಟರ್‌ನ ವಿ12 ಎಂಜಿನ್ ಹೊಂದಿರುವ ರೋಲ್ಸ್ ರಾಯ್ಸ್ ಘೋಸ್ಟ್ ಸೀರಿಸ್ II ವಿಲಾಸಿ ಕಾರು ಭಾರತಕ್ಕೆ ಆಗಮಿಸಿದೆ. ಇದರ ಆರಂಭಿಕ ದರ 8.95 ಕೋಟಿ ರೂಪಾಯಿ ಇದೆ. ಈ ಕಾರಿನಲ್ಲಿ ಏನೆಲ್ಲ ವಿಶೇಷಗಳಿವೆ ಎಂದು ತಿಳಿಯೋಣ.
(1 / 6)
Rolls-Royce Ghost Series II: 6.75 ಲೀಟರ್‌ನ ವಿ12 ಎಂಜಿನ್ ಹೊಂದಿರುವ ರೋಲ್ಸ್ ರಾಯ್ಸ್ ಘೋಸ್ಟ್ ಸೀರಿಸ್ II ವಿಲಾಸಿ ಕಾರು ಭಾರತಕ್ಕೆ ಆಗಮಿಸಿದೆ. ಇದರ ದರ 8.95 ಕೋಟಿ ರೂಪಾಯಿ ಇದೆ. ಈ ಐದು ಡೋರ್‌ನ ಕಾರು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಳೆದ ವರ್ಷ ಬಿಡುಗಡೆಯಾಗಿತ್ತು. ಇದೀಗ ಭಾರತಕ್ಕೆ ಪರಿಚಯಿಸಲಾಗಿದೆ.
(2 / 6)
ಹಳೆಯ ರೋಲ್ಸ್ ರಾಯ್ಸ್ ಘೋಸ್ಟ್‌ಗೆ ಹೋಲಿಸಿದರೆ ನೂತನ ಕಾರಿನಲ್ಲಿ ಆಗಿರುವ ಅನೇಕ ಬದಲಾವಣೆಗಳು ಮೇಲ್ನೋಟಕ್ಕೆ ಗೋಚರಿಸುತ್ತವೆ. ಇದರ ಹೆಡ್‌ಲ್ಯಾಂಪ್ ಹೊಸ ವಿನ್ಯಾಸದೊಂದಿಗೆ ಬMದಿದೆ. ಟಾಪ್ನಲ್ಲಿ ಎಲ್ ಆಕಾರದ ಎಲ್‌ಇಡಿ ಡಿಆರ್‌ಎಲ್‌ಗಳು ಇವೆ. ಬಂಪರ್ ಮರು ವಿನ್ಯಾಸ ಮಾಡಲಾಗಿದೆ. ಮುಂಭಾಗದ ಗ್ರಿಲ್‌ಗಳ ವಿನ್ಯಾಸವೂ ಬದಲಾಗಿದೆ.
(3 / 6)
ಕಾರಿನ ಹಿಂಭಾಗದಲ್ಲಿಯೂ ಸಾಕಷ್ಟು ಬದಲಾವಣೆಗಳನ್ನು ಗುರುತಿಸಬಹುದು. ಕ್ಲಾಸಿಕ್ ಘೋಸ್ಟ್ ಆಕಾರದ ಎಲ್‌ಇಡಿ ಟೇಲ್‌ಲ್ಯಾಂಪ್‌ಗಳು ಇವೆ. ಆದರೆ, ಹಿಂಭಾಗದಲ್ಲಿ ವರ್ಟಿಕಲ್ ಗೆರಗಳು ಸೇರಿದಂತೆ ಒಂದಿಷ್ಟು ಮಾರ್ಪಾಡುಗಳನ್ನು ಗುರುತಿಸಬಹುದು.
(4 / 6)
ಕಾರಿನ ಒಟ್ಟಾರೆ ಗಾಂಭೀರ್ಯತೆಯಲ್ಲಿ ಹೆಚ್ಚು ಬದಲಾವಣೆಯಾಗಿಲ್ಲ. ಆದರೆ, ಹೊಸ ಅಲಾಯ್ ವೀಲ್‌ಗಳು ಸೇರಿದಂತೆ ಕೆಲವೊಂದು ಮಾರ್ಪಾಡುಗಳನ್ನು ಗುರುತಿಸಬಹುದು. ಹೆಚ್ಚು ಪರ್ಫಾಮೆನ್ಸ್ ಬಯಸುವವರಿಗೆ ಈ ಕಾರಿನ ಬ್ಲ್ಯಾಕ್ ಬ್ಯಾಡ್ಜ್ ಆವೃತ್ತಿಯೂ ಲಭ್ಯವಿದೆ.
(5 / 6)
ರೋಲ್ಸ್ ರಾಯ್ಸ್ ಘೋಸ್ಟ್ ಸೀರಿಸ್ IIನಲ್ಲಿ 6.75 ಲೀಟರ್‌ನ ಟ್ವಿನ್ ಟರ್ಬೊ ವಿ12 ಎಂಜಿನ್ ಇದೆ. ಇದು 555 ಬಿಎಚ್‌ಪಿ ಮತ್ತು 850 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಬ್ಲ್ಯಾಕ್ ಬ್ಯಾಡ್ಜ್‌ಆವೃತ್ತಿಯು 584 ಬಿಎಚ್‌ಪಿ ಮತ್ತು 900 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.
ಇತರ ಗ್ಯಾಲರಿಗಳು