Car Care Tips: ಕಾರಿನ ಎಂಜಿನ್ ಅತಿಯಾಗಿ ಬಿಸಿಯಾಗುತ್ತಿದೆಯೇ? ಈ 8 ಕಾರಣಗಳನ್ನು ಪರಿಶೀಲಿಸಿ
- Car Engine Heating: ಕಾರಿನ ಎಂಜಿನ್ ಬಿಸಿಯಾಗಲು ಅನೇಕ ಕಾರಣಗಳಿರಬಹುದು. ಕೆಲವೊಮ್ಮೆ ಮೆಕ್ಯಾನಿಕ್‌ಗಳ ಅಗತ್ಯವಿಲ್ಲದೆ ಕಾರು ಚಾಲಕರು, ಮಾಲೀಕರೇ ಪರಿಶೀಲನೆ ನಡೆಸಬಹುದು. ಕಾರು ಬಿಸಿಯಾಗುವುದನ್ನು ಕಡೆಗಣಿಸಿದರೆ ಇಂಧನ ದಕ್ಷತೆ ಕಡಿಮೆಯಾಗಬಹುದು. ಕಾರಿನ ಎಂಜಿನ್ ಅತಿಯಾಗಿ ಬಿಸಿಯಾಗುತ್ತಿದ್ದರೆ ಈ ಮುಂದಿನ ಅಂಶಗಳನ್ನು ಗಮನಿಸಿ.

(1 / 9)
ಏಸಿ ಪರಿಶೀಲಿಸಿ ಮತ್ತು ಸರ್ವೀಸ್ ಮಾಡಿಸಿ: ಬಿಸಿಲು ಹೆಚ್ಚಾಗಿರುವಾಗ ಏಸಿ ಬಳಕೆ ಹೆಚ್ಚಿರುತ್ತದೆ. ನಿಮ್ಮ ಕಾರಿನ ಏರ್ ಕಂಡಿಷನ್ ವ್ಯವಸ್ಥೆಯನ್ನು ಪರಿಶೀಲಿಸಿ. ಬಿಸಿಲು ಹೆಚ್ಚಾಗಿರುವಾಗ ನೇರವಾಗಿ ಸೂರ್ಯನ ಬೆಳಕು ತಾಗುವಂತೆ ಕಾರು ಪಾರ್ಕಿಂಗ್ ಮಾಡುವುದನ್ನು ತಪ್ಪಿಸಿ. ಕಾರಿನ ಏಸಿಯನ್ನು ಟೆಕ್ನಿಷಿಯನ್ ಬಳಿ ಪರಿಶೀಲನೆ ಮಾಡಿಸಿ. ಅಗತ್ಯವಿದ್ದರೆ ರಿಪೇರಿ ಮಾಡಿಸಿ. ಕಾರಿನ ಕ್ಯಾಬಿನ್ ಏರ್ ಫಿಲ್ಟರ್ ಕ್ಲೀನ್ ಮಾಡಿಸಿ.
(ಸಾಂದರ್ಭಿಕ ಚಿತ್ರ)(2 / 9)
ಫ್ಲೂಯೆಡ್ ಚೆಕ್ ಮಾಡಿ: ಹೆಚ್ಚು ಉಷ್ಣಾಂಶ ಇದ್ದಾಗ ಎಂಜಿನ್ ಆಯಿಲ್ ಬೇಗನೇ ಬರ್ನ್ ಆಗುತ್ತದೆ. ನಿಯಮಿತವಾಗಿ ಎಂಜಿನ್ ಆಯಿಲ್ ಲೆವೆಲ್ ಪರಿಶೀಲನೆ ಮಾಡುತ್ತ ಇರಿ. ಆಯಿಲ್ ಮಟ್ಟ ಸಮರ್ಪಕವಾಗಿದ್ದರೆ ಎಂಜಿನ್‌ಗೆ ಆಗುವ ಹಾನಿ ಕಡಿಮೆ ಇರುತ್ತದೆ.
(3 / 9)
ಕಾರಿನ ಬ್ಯಾಟರಿ ಪರಿಶೀಲನೆ ನಡೆಸಿ: ಕಾರಿನ ಬ್ಯಾಟರಿ ಉತ್ತಮ ಸ್ಥಿತಿಯಲ್ಲಿ ಇರಲಿ. ನಿಯಮಿತವಾಗಿ ಬ್ಯಾಟರಿ ಕೇಬಲ್‌ಗಳನ್ನು ಪರಿಶೀಲನೆ ನಡೆಸಿ. ಇದೇ ಸಮಯದಲ್ಲಿ ಕಾರಿನ ವೈರ್ ಎಲ್ಲವೂ ಸರಿಯಾಗಿ ಇದೆಯೇ, ಸುರಕ್ಷಿತವಾಗಿದೆಯೇ ತಿಳಿಯಿರಿ. ಕೆಲವೊಮ್ಮೆ ವೈರಿಂಗ್ ತೊಂದರೆಯಿಂದ ಕಾರು ಬೆಂಕಿಗೆ ಆಹುತಿಯಾಗುತ್ತದೆ. ಈ ಕುರಿತು ಎಚ್ಚರವಿರಲಿ.
(5 / 9)
ರೇಡಿಯೇಟರ್ ಪರಿಶೀಲನೆ: ರೇಡಿಯೇಟರ್‌ನ ಫ್ಯಾನ್ ಕೂಲೆಂಟ್ ಅನ್ನು ಕೂಲ್ ಮಾಡಲು ಸಹಕರಿಸುತ್ತದೆ. ರೇಡಿಯೇಟರ್‌ಗೆ ಹಾನಿಯಾಗಿದ್ದರೆ ಕಾರಿನ ಎಂಜಿನ್ ಬಿಸಿಯಾಗುತ್ತದೆ.
(8 / 9)
ಏರ್‌ಫ್ಲೋಗೆ ತೊಂದರೆ: ಕಾರು ಚಾಲನೆಯಲ್ಲಿದ್ದಾಗ ಎಂಜಿನ್‌ಗೆ ಸಮರ್ಪಕವಾಗಿ ಗಾಳಿಯಾಡುವುದು ಅಗತ್ಯವಿರುತ್ತದೆ. ಏರ್‌ಫ್ಲೋಗೆ ಅಡೆತಡೆ ಇದೆಯೇ ಗಮನಿಸಿ.
ಇತರ ಗ್ಯಾಲರಿಗಳು