ರತನ್ ಟಾಟಾ ನಿಧನಕ್ಕೂ ಮುನ್ನ ಬಡವರಿಗಾಗಿ ಕಡಿಮೆ ದರಕ್ಕೆ ಕೊಟ್ಟ ಕಾರು ಇದು; ಟಾಟಾ ನ್ಯಾನೋ ಕಾರಂತೂ ಅಲ್ವೇ ಅಲ್ಲ!
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ರತನ್ ಟಾಟಾ ನಿಧನಕ್ಕೂ ಮುನ್ನ ಬಡವರಿಗಾಗಿ ಕಡಿಮೆ ದರಕ್ಕೆ ಕೊಟ್ಟ ಕಾರು ಇದು; ಟಾಟಾ ನ್ಯಾನೋ ಕಾರಂತೂ ಅಲ್ವೇ ಅಲ್ಲ!

ರತನ್ ಟಾಟಾ ನಿಧನಕ್ಕೂ ಮುನ್ನ ಬಡವರಿಗಾಗಿ ಕಡಿಮೆ ದರಕ್ಕೆ ಕೊಟ್ಟ ಕಾರು ಇದು; ಟಾಟಾ ನ್ಯಾನೋ ಕಾರಂತೂ ಅಲ್ವೇ ಅಲ್ಲ!

  • ಅತ್ಯಂತ ಗುಣಮಟ್ಟತೆಗೆ ಹೆಸರು ಪಡೆದಿರುವ ಟಾಟಾ ಕರ್ವ್​ ಕಾರು ಹೇಗಿದೆ? ಅದರ ಬೆಲೆ ಎಷ್ಟು, ಮೈಲೇಜ್, ಸುರಕ್ಷತಾ ರೇಟಿಂಗ್ ಎಷ್ಟಿದೆ, ಏನೆಲ್ಲಾ ಸೌಲಭ್ಯಗಳಿವೆ ಸೇರಿ ಇತ್ಯಾದಿಗಳ ಮಾಹಿತಿ ಇಲ್ಲಿದೆ.

ದೇಶದಲ್ಲಿ ಟಾಟಾ ಮೋಟಾರ್ಸ್​ ಕಂಪನಿಯ ವಾಹನಗಳಿಗೆ ಬೇಡಿಕೆ ತುಸು ಹೆಚ್ಚೇ ಇರುತ್ತದೆ. ಅದಕ್ಕೆ ಕಾರಣ ಗುಣಮಟ್ಟತೆ, ವೈಶಿಷ್ಟ್ಯಗಳು ಮತ್ತು ಸುಧಾರಣೆ. ಪ್ರಯಾಣಿಕರ ಸುರಕ್ಷತೆಯನ್ನೇ ಮೊದಲ ಆದ್ಯತೆ ಮಾಡಿಕೊಂಡಿರುವ ಟಾಟಾ ಈ 3 ವಿಚಾರಗಳಲ್ಲೂ ರಾಜಿಯಾಗುವುದೇ ಇಲ್ಲ! ಮತ್ತೊಂದು ವಿಚಾರ ಏನೆಂದರೆ ಬಡವರಿಗೂ ಅಗ್ಗದ ದರದಲ್ಲಿ ಕಾರು ದೊರೆಯುವಂತೆ ಮಾಡುತ್ತದೆ ಈ ಕಂಪನಿ.
icon

(1 / 11)

ಅಂತಹ ಕಾರುಗಳ ಒಂದರ ಕುರಿತು ವಿಶ್ಲೇಷಿಸುವ ಕೆಲಸಕ್ಕೆ ನಾವಿಂದು ಕೈ ಹಾಕಿದ್ದೇವೆ. ಕಡಿಮೆ ದರದಲ್ಲಿ ಮಾರುಕಟ್ಟೆಯಲ್ಲಿ ಅತ್ಯಂತ ಬೇಡಿಕೆ ಹೊಂದಿರುವ ಕಾರು ಎಂದರೆ 'ಟಾಟಾ ಕರ್ವ್​ ಎಸ್​ಯುಪಿ ಕೂಪೆ'. ಇದು ಎಸ್​​ಯುಪಿ ಕೂಪೆ ವಿನ್ಯಾಸ ಹೊಂದಿರುವ ಭಾರತದ ಮೊಟ್ಟ ಮೊದಲ ಮಿಡ್​ಸೈಜ್ ಎಸ್​ಯುವಿ ಎಂದೂ ಪ್ರಸಿದ್ಧಿ ಪಡೆದಿರುವುದು ವಿಶೇಷ.
icon

(2 / 11)

ಉದ್ಯಮಿ ರತನ್ ಟಾಟಾ ನಿಧನಕ್ಕೂ ಮುನ್ನ ಅವರ ಕಂಪನಿಯಿಂದ ಬಿಡುಗಡೆಗೊಂಡ ಕೊನೆಯ ಕಾರು ಇದಾಗಿದೆ. ಟಾಟಾ ಕರ್ವ್​ 2024ರ ಆಗಸ್ಟ್​ 7ರ ಮಾರುಕಟ್ಟೆಯಲ್ಲಿ ಬಿಡುಗಡೆಯಾದರೆ, ಇದಾಗಿ ಎರಡು ತಿಂಗಳು ಅಂದರೆ 2024ರ ಅಕ್ಟೋಬರ್ 9ರಂದು ರತನ್ ಟಾಟಾ ಅವರನ್ನು ಕೊನೆಯುಸಿರೆಳೆದರು. ಮಾರುಕಟ್ಟೆಗೆ ಲಭ್ಯವಾದಾಗಿನಿಂದ ಈ ಕಾರಿಗೆ ಹೆಚ್ಚು ಬೇಡಿಕೆ ಉಂಟಾಗಿದೆ.
icon

(3 / 11)

ಎಲೆಕ್ಟ್ರಿಕ್ (ವಿದ್ಯುತ್ ಚಾಲಿತ) ಮತ್ತು ಐಸಿಇ (ಇಂಧನ ಚಾಲಿತ) ಆವೃತ್ತಿಗಳಲ್ಲಿ ಪರಿಚಯಿಸಿದ ಟಾಟಾ ಕರ್ವ್​, ಮೊದಲಿಗೆ ಆಟೋ ಮೊಬೈಲ್​ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು ಎಲೆಕ್ಟ್ರಿಕ್​ ಟಾಟಾ ಕರ್ವ್​ ಕಾರನ್ನು. ಆಮೇಲೆ ಇಂಧನ ಚಾಲಿತ ಟಾಟಾ ಕರ್ವ್ ಕಾರಿನ ಬಿಡುಗಡೆ ಮಾಡಲಾಯಿತು. ಆದರೆ ಎರಡೂ ಕಾರುಗಳಿಗೆ ಅತ್ಯುತ್ತಮ ಬೇಡಿಕೆ ವ್ಯಕ್ತವಾಗಿದೆ. ಅತಿ ಹೆಚ್ಚು ಮಾರಾಟವೂ ಆಗಿದೆ.
icon

(4 / 11)

ಅತ್ಯಂತ ಗುಣಮಟ್ಟತೆಗೆ ಹೆಸರು ಪಡೆದಿರುವ ಟಾಟಾ ಕರ್ವ್​ ಕಾರು ಹೇಗಿದೆ? ಅದರ ಬೆಲೆ ಎಷ್ಟು, ಮೈಲೇಜ್, ಸುರಕ್ಷತಾ ರೇಟಿಂಗ್ ಎಷ್ಟಿದೆ, ಏನೆಲ್ಲಾ ಸೌಲಭ್ಯಗಳಿವೆ ಸೇರಿ ಇತ್ಯಾದಿಗಳ ಮಾಹಿತಿ ಇಲ್ಲಿದೆ.
icon

(5 / 11)

ಭಾರತ್ ನ್ಯೂಕಾರ್ ಅಸೆಸ್​ಮೆಂಟ್ ಪ್ರೋಗ್ರಾಂ ಈ ಹಿಂದೆ ನೂತನ ಟಾಟಾ ಕರ್ವ್​ ಎಸ್​ಯುವಿಯನ್ನು ಕ್ರಾಶ್ ಟೆಸ್ಟ್​​ಗೆ ಒಳಪಡಿಸಿತ್ತು. ಆಗ ವಯಸ್ಕರ ರಕ್ಷಣೆಗೆ ಸಂಬಂಧಿಸಿ 32 ಅಂಕಕ್ಕೆ 29.5 ಅಂಕ ಪಡೆದಿತ್ತು. ಜೊತೆಗೆ ಮಕ್ಕಳ ರಕ್ಷಣೆಗೆ ಸಂಬಂಧಿಸಿ 49ಕ್ಕೆ 43.66 ಅಂಕ ಪಡೆದಿತ್ತು. ಇದೆಲ್ಲದರ ಜೊತೆಗೆ ಫೈವ್​ ಸ್ಟಾರ್ ಸುರಕ್ಷತಾ ರೇಟಿಂಗ್ ಕೂಡ ಪಡೆದಿರುವುದು ಮತ್ತೊಂದು ವಿಶೇಷ.
icon

(6 / 11)

ಟಾಟಾ ಕರ್ವ್​​ನಲ್ಲಿ ಇಂಧನ ಚಾಲಿತ ಬೇಸ್​ ಹೊಂದಿರುವ ಕಾರಿನ ಬೆಲೆ 10 ಲಕ್ಷ ರೂಪಾಯಿಯಿಂದ ಆರಂಭಗೊಂಡು 19.52 ಲಕ್ಷ ರೂ ತನಕ ಇರುತ್ತದೆ. ಇದನ್ನು 42 ವೇರಿಯೆಂಟ್​ಗಳಲ್ಲಿ ನೀಡಲಾಗುತ್ತದೆ. ಕರ್ವ್​​ನ ಬೇಸಿಕ್ ಮಾಡೆಲ್ ಸ್ಮಾರ್ಟ್​ ಮತ್ತು ಟಾಪ್ ಮಾಡೆಲ್ ಅಕಂಪ್ಲಿಷ್ಡ್​​ ಪ್ಲಸ್​ ಎ ಡಾರ್ಕ್​ ಡೀಸೆಲ್ ಡಿಸಿಎ ಆಗಿರುತ್ತದೆ.
icon

(7 / 11)

ಟಾಟಾ ಕರ್ವ್​ ಎಸ್​​ಯುಪಿ ಕೂಪೆ ಬೇಸ್​ ಇವಿ ವೇರಿಯೆಂಟ್ ಕಾರಿನ ಬೆಲೆಯು 17.49 ಲಕ್ಷದಿಂದ ರೂಪಾಯಿಂದ 21.99 ಲಕ್ಷದ ತನಕ ಇರಲಿದೆ. 8 ವೇರಿಯೆಂಟ್‌ಗಳಲ್ಲಿ 5 ಬಣ್ಣಗಳಲ್ಲಿ ಲಭ್ಯವಿರುವ ಇದು ಕರ್ವ್ ಇವಿ ಸಿಂಗಲ್ ಚಾರ್ಜ್‌ನಲ್ಲಿ 471.14 ಕಿಲೋಮೀಟರ್ ಡ್ರೈವಿಂಗ್ ರೇಂಜ್ ನೀಡುತ್ತದೆ ಎಂದು ವರದಿಯಾಗಿದೆ.
icon

(8 / 11)

ಟಾಟಾ ಕರ್ವ್​ ಡೀಸೆಲ್​ ಮ್ಯಾನ್ಯುವಲ್ ಗಂಟೆಗೆ 15 ಕಿಮೀ, ಆಟೋಮ್ಯಾಟಿಕ್ 13 ಕಿಮೀ ಮತ್ತು ಟಾಟಾ ಕರ್ವ್​ ಪೆಟ್ರೋಲ್​ ಮ್ಯಾನ್ಯುವಲ್​ 12 ಕಿಮೀ, ಆಟ್ಯೋಮ್ಯಾಟಿಕ್ 11 ಕಿಮೀ ಮೈಲೈಜ್ ಕೊಡುತ್ತದೆ. ನಗರದಲ್ಲಿ ಚಾಲನೆ ಮಾಡಿದರೆ ಕಡಿಮೆ ಮೈಲೇಜ್, ಹೆದ್ದಾರಿಯಲ್ಲಿ ಚಾಲನೆ ಮಾಡುವುದರಿಂದ ದೊರೆಯುತ್ತದೆ.
icon

(9 / 11)

ಟಾಟಾ ಕರ್ವ್​​ 5 ಸೀಟ್​ಗಳ ಕಾರು 7-ಸೀಟರ್ ಕಾನ್ಫಿಗರೇಶನ್‌ನಲ್ಲಿ ಲಭ್ಯವಿಲ್ಲ. ಚಾರ್ಜಿಂಗ್ ಕರ್ವ್​​ ಇವಿ 45 ರಿಂದ 55 ಕಿಲೋವ್ಯಾಟ್ ನಡುವೆ ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ. ಆಕರ್ಷಕ ವಿನ್ಯಾಸವನ್ನೂ ಹೊಂದಿರುವ ಕರ್ವ್​ ಕಾರಿಗೆ ಬೇಡಿಕೆ ಹೆಚ್ಚಾಗಿದೆ.
icon

(10 / 11)

ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಟಾಟಾ ಕರ್ವ್​, 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಹೊಂದಿದೆ. ಇಳಿಜಾರಾದ ಛಾವಣಿ ಹೊಂದಿದೆ. ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ಗಳೊಂದಿಗೆ ಲಭ್ಯವಿದೆ, ಜೊತೆಗೆ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗಳ ಆಯ್ಕೆಯನ್ನೂ ಹೊಂದಿದೆ. ಸ್ವಯಂಚಾಲಿತ ತುರ್ತು ಬ್ರೇಕಿಂಗ್ ವ್ಯವಸ್ಥೆಯೂ ಇದೆ.
icon

(11 / 11)

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.

ಇತರ ಗ್ಯಾಲರಿಗಳು