ಮಾರುಕಟ್ಟೆಗೆ ಬಂತು ಹೋಂಡಾದ ನೂತನ ಎಲೆಕ್ಟ್ರಿಕ್ ಬೈಕ್; ದಿನಬಳಕೆಗೆ ಸೂಪರ್ ಈ ಸ್ಕೂಟರ್, ದರವೂ ಅತ್ಯಂತ ಕಡಿಮೆ!
- ಹೋಂಡಾ ಕ್ಯೂಸಿ1 (QCI EV) ಎಲೆಕ್ಟ್ರಿಕ್ ದ್ವಿಚಕ್ರ ವಾಹನದ ಕುರಿತು ತಿಳಿಯೋಣ. ಅದರ ಫೀಚರ್ಸ್, ದರ, ಎಷ್ಟು ಮೈಲೇಜ್ ಕೊಡುತ್ತದೆ ಎನ್ನುವುದರ ಮೊದಲಾದ ಮಾಹಿತಿ ಇಲ್ಲಿದೆ.
- ಹೋಂಡಾ ಕ್ಯೂಸಿ1 (QCI EV) ಎಲೆಕ್ಟ್ರಿಕ್ ದ್ವಿಚಕ್ರ ವಾಹನದ ಕುರಿತು ತಿಳಿಯೋಣ. ಅದರ ಫೀಚರ್ಸ್, ದರ, ಎಷ್ಟು ಮೈಲೇಜ್ ಕೊಡುತ್ತದೆ ಎನ್ನುವುದರ ಮೊದಲಾದ ಮಾಹಿತಿ ಇಲ್ಲಿದೆ.
(1 / 10)
ಆಟೋ ಮೊಬೈಲ್ ಮಾರುಕಟ್ಟೆಯಲ್ಲಿ ಹೋಂಡಾ ಮೋಟಾರ್ ವೆಹಿಕಲ್ಸ್ಗೆ ತುಸು ಬೇಡಿಕೆಯೇ ಹೆಚ್ಚು. ಏಕೆಂದರೆ ನಂಬಿಕೆಗೆ ಮತ್ತೊಂದು ಹೆಸರೇ ಹೋಂಡಾ ಹೆಗ್ಗಳಿಕೆಗೂ ಪಾತ್ರವಾಗಿದೆ. ಇದೇ ಕಾರಣಕ್ಕೆ ಹೊಸ ಹೊಸ ಅಪ್ಡೇಟ್ಗಳೊಂದಿಗೆ ಕಾಲಕಾಲಕ್ಕೆ ದ್ವಿಚಕ್ರ ವಾಹನಗಳನ್ನು ಬಿಡುಗಡೆ ಮಾಡುವ ಮೂಲಕ ಗಮನ ಸೆಳೆಯುತ್ತದೆ.
(2 / 10)
ಎಲೆಕ್ಟ್ರಿಕ್ (ವಿದ್ಯುತ್ ಚಾಲಿತ) ದ್ವಿಚಕ್ರ ವಾಹನಗಳನ್ನೂ ಮಾರುಕಟ್ಟೆಗೆ ಪರಿಚಯಿಸಿ ಅದರಿಂದಲೂ ವಿಶ್ವಾಸ ಗಳಿಸಿದೆ. ಇದೀಗ ಮತ್ತೊಂದು ಬೈಕ್ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ವಾಹನ ಪ್ರಿಯರನ್ನು ಸೆಳೆದಿದೆ. ಹೋಂಡಾ ಕ್ಯೂಸಿ1, ಆ್ಯಕ್ಟೀವಾ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಹೊಸದಾಗಿ ಪರಿಚಯಿಸುವ ಮೂಲಕ ಸಂಚಲನ ಸೃಷ್ಟಿಸಿದೆ.
(honda)(3 / 10)
ನಾವೀಗ ಕ್ಯೂಸಿ1 (QCI EV) ದ್ವಿಚಕ್ರ ವಾಹನದ ಕುರಿತು ತಿಳಿಯೋಣ. ಅದರ ಫೀಚರ್ಸ್, ದರ, ಎಷ್ಟು ಮೈಲೇಜ್ ಕೊಡುತ್ತದೆ ಎನ್ನುವುದರ ಬಗ್ಗೆ ತಿಳಿಯೋಣ.
(4 / 10)
ನೂತನವಾಗಿ ಬಿಡುಗಡೆಯಾದ ಹೋಂಡಾ QC1 ಇ-ಸ್ಕೂಟರ್ ಬೆಲೆ ರೂ. 90,000 (ಎಕ್ಸ್-ಶೋರೂಂ). ಆಕ್ಟಿವಾ ಎಲೆಕ್ಟ್ರಿಕ್ ಸ್ಕೂಟರ್‌ಗೆ ಹೋಲಿಸಿದರೆ ಇದು ಮನೆಯಲ್ಲಿ ಸುಲಭವಾಗಿ ಚಾರ್ಜ್ ಮಾಡಲು ಫಿಕ್ಸಡ್ ಬ್ಯಾಟರಿ ಆಯ್ಕೆ ಇದೆ. ಇದು ಆಕ್ಟಿವಾ Eಗೆ ಬಹುತೇಕ ಹೋಲುತ್ತದೆ.
(evfy)(5 / 10)
ಆದಾಗ್ಯೂ, ವಿನ್ಯಾಸದಲ್ಲಿ ಕೆಲವು ಸಣ್ಣ ಬದಲಾವಣೆಗಳಿವೆ. ಹೋಂಡಾ QC1 ಇ-ಸ್ಕೂಟರ್ ಮುಂಭಾಗದಲ್ಲಿ ಆಕ್ಟಿವಾ ಸ್ಕೂಟರ್‌ಗೆ ಹೋಲುವ ಹೆಡ್‌ಲೈಟ್ ಅನ್ನು ಹೊಂದಿದೆ. ಇದು ಹ್ಯಾಂಡಲ್‌ಬಾರ್‌ಗಳಲ್ಲಿನ ಡಿಆರ್ಎಲ್ಗಳನ್ನು (DRL) ತೆಗೆದುಹಾಕಿದೆ. ಇದು ಟಿಎಫ್ಟಿ (TFT) ಇನ್ಸ್ಟ್ರುಮೆಂಟ್ ಕ್ಲಸ್ಟರ್ ಬದಲಿಗೆ LCD ಡಿಸ್ಪ್ಲೇ ಹೊಂದಿದೆ.
( ndtv)(6 / 10)
ಸವಾರನ ಸೀಟಿನ ಕೆಳಗೆ ಮತ್ತೊಂದು ಚಾರ್ಜಿಂಗ್ ಪಾಯಿಂಟ್ ಕೂಡ ಇದೆ. ಇದು ಬ್ಯಾಟರಿ ಪ್ಯಾಕ್ ಅನ್ನು ಚಾರ್ಜ್ ಮಾಡಲು ಸುಲಭಗೊಳಿಸುತ್ತದೆ. ಆಕ್ಟಿವಾ ಎಲೆಕ್ಟ್ರಿಕ್ ಸ್ಕೂಟರ್ ಸ್ಮಾರ್ಟ್ ಕೀ ಆಯ್ಕೆಯನ್ನು ಹೊಂದಿದೆ. QC1 ಮಾದರಿಯು ಸಾಮಾನ್ಯ ಅನಲಾಗ್ ಕೀಯನ್ನು ಹೊಂದಿದೆ.
(7 / 10)
ಈ ಎಲೆಕ್ಟ್ರಿಕ್ ಸ್ಕೂಟರ್ 26-ಲೀಟರ್ ಸ್ಟೋರೇಜ್ ಸಾಮರ್ಥ್ಯ ಹೊಂದಿದೆ. ಸಣ್ಣ ಹೆಲ್ಮೆಟ್ ಅಥವಾ ಬ್ಯಾಗ್ ಅನ್ನು ಇಲ್ಲಿ ಸುಲಭವಾಗಿ ಸಂಗ್ರಹಿಸಬಹುದು. ಇದು ಹಿಂಭಾಗದಲ್ಲಿ ಅತ್ಯುತ್ತಮ ಟೈಲ್ ಲೈಟ್‌ಗಳು ಮತ್ತು ಇಂಡಿಕೇಟರ್ಗಳನ್ನು ಹೊಂದಿದೆ. ಹಿಂಭಾಗದ ಸವಾರನು ಗಟ್ಟಿಯಾಗಿ ಹಿಡಿಯಲು ಸಿಂಗಲ್-ಪೀಸ್ ಗ್ರಾಬ್ ಹ್ಯಾಂಡಲ್ ಇರುತ್ತದೆ.
(ndtv)(8 / 10)
ಈ ಎಲೆಕ್ಟ್ರಿಕ್ ಸ್ಕೂಟರ್ 1.5 ಕಿಲೋವ್ಯಾಟ್ (kWh) ಬ್ಯಾಟರಿ ಪ್ಯಾಕ್ ಹೊಂದಿದೆ. ಇದು ಪೂರ್ಣ ಚಾರ್ಜ್ ಆದರೆ 80 ಕಿಮೀ ವ್ಯಾಪ್ತಿಯ ತನಕ ಬರಲಿದೆ. ಇದರ ಬ್ಯಾಟರಿ 330 ವ್ಯಾಟ್ ಆಫ್-ಬೋರ್ಡ್ ಚಾರ್ಜರ್ ಬಳಸಿ ಬಹಳ ನಿಧಾನವಾಗಿ ಚಾರ್ಜ್ ಆಗುತ್ತದೆ. 0 ರಿಂದ 80ರಷ್ಟು ಚಾರ್ಜ್ ಆಗಲು 4 ಗಂಟೆ 30 ನಿಮಿಷ, ಸಂಪೂರ್ಣ ಚಾರ್ಜ್ ಆಗಲು 6 ಗಂಟೆ 50 ನಿಮಿಷಗಳು ಬೇಕಾಗುತ್ತದೆ.
(9 / 10)
ಇದರ ಗರಿಷ್ಠ ವೇಗ ಗಂಟೆಗೆ 50 ಕಿಮೀ. ಇದು ಕೇವಲ 9.1 ಸೆಕೆಂಡುಗಳಲ್ಲಿ 0-40 ಕಿಮೀ/ಗಂ ತಲುಪಬಹುದು. QC1 ಎಲೆಕ್ಟ್ರಿಕ್ ಸ್ಕೂಟರ್ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗದಲ್ಲಿ 5-ಹಂತ ಹೊಂದಾಣಿಕೆ ಮಾಡಬಹುದಾದ ಹೈಡ್ರಾಲಿಕ್ ಟ್ವಿನ್ ಶಾಕ್ ಸಸ್ಪೆನ್ಷನ್ ಸೆಟಪ್ ಇದೆ.
ಇತರ ಗ್ಯಾಲರಿಗಳು