Royal Enfield: ರಾಯಲ್ ಎನ್‌ಫೀಲ್ಡ್ ಶಾಟ್‌ಗನ್ 650 ಮೊಟೊವರ್ಸ್ ಹೊಸ ಬೈಕ್ ಬಿಡುಗಡೆ; ಫೋಟೊಸ್ ಸಹಿತಿ ಬೆಲೆ, ವಿನ್ಯಾಸ ಹೀಗಿದೆ
ರಾಯಲ್ ಎನ್‌ಫೀಲ್ಡ್ ಶಾಟ್‌ಗನ್ 650 ಮೊಟೊವರ್ಸ್ ಆವೃತ್ತಿಯ ಬೈಕ್ ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ಸೂಪರ್ ಮೆಟಿಯೊ 650 ಪ್ಲಾಟ್‌ಫಾರ್ಮ್‌ನಲ್ಲಿ ಈ ಬೈಕ್ ಅನ್ನು ವಿನ್ಯಾಸಗೊಳಿಸಲಾಗಿದೆ.
(1 / 9)
ರಾಯಲ್ ಎನ್‌ಫೀಲ್ಡ್ ಶಾಟ್‌ಗನ್ 650 ಮೋಟೋವರ್ಸ್ ಆವೃತ್ತಿಯನ್ನು 2023 ಮೋಟೋವರ್ಸ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಹೊಸ ವಿಶೇಷ ಆವೃತ್ತಿಯ ಎಕ್ಸ್ ಶೋ ರೂಂ ಬೆಲೆ 4.25 ಲಕ್ಷ ರೂಪಾಯಿ ಇದೆ. ಕೇವಲ 25 ಬೈಕ್‌ಗಳಿಗೆ ಮಾತ್ರ ಸೀಮಿತವಾಗಿರುತ್ತದೆ. Motoverse 2023 ನಲ್ಲಿ ಪಾಲ್ಗೊಳ್ಳುವವರು ಮಾತ್ರ ಈ ವಿಶೇಷ ಆವೃತ್ತಿಯನ್ನು ಖರೀದಿಸಲು ಅವಕಾಶವನ್ನು ಹೊಂದಿರುತ್ತಾರೆ. ಆ 25 ವಿಜೇತರನ್ನು ಲಕ್ಕಿ ಡ್ರಾ ಮೂಲಕ ಆಯ್ಕೆ ಮಾಡಲಾಗುತ್ತದೆ.
(2 / 9)
ಇತರ 650 ಸಿಸಿ ಬೈಕ್‌ಗಳಂತೆಯೇ ಎಲ್‌ಇಡಿ ಹೆಡ್‌ಲ್ಯಾಂಪ್ ಹೊಂದಿದೆ. ಹೆಡ್‌ಲ್ಯಾಂಪ್ ಕೌಲ್ ಹೊಸದು. ಟ್ರಿಪ್ಪರ್ ನ್ಯಾವಿಗೇಷನ್‌ನೊಂದಿಗೆ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಸೂಪರ್ ಮೆಟಿಯರ್ 650 ಅನ್ನು ರಾಯಲ್ ಎನ್‌ಫೀಲ್ಡ್ ಶಾಟ್‌ಗನ್ ಹೋಲುತ್ತದೆ.
(3 / 9)
ಶಾಟ್‌ಗನ್ 650 ಮೊಟೊವರ್ಸ್ ಆವೃತ್ತಿಯು ಬಾರ್-ಎಂಡ್ ಮಿರರ್‌ಗಳು ಮತ್ತು ಎಲ್ಇಡಿ ಟರ್ನ್ ಸೂಚಕಗಳೊಂದಿಗೆ ಬರುತ್ತದೆ. ಹ್ಯಾಂಡಲ್‌ಬಾರ್ ಹೊಸ ಶೈಲಿಯಲ್ಲಿ ಬರುತ್ತಿದೆ.
(5 / 9)
ಶಾಟ್‌ಗನ್ 650 ಮುಂಭಾಗದಲ್ಲಿ ಯುಎಸ್‌ಡಿ ಫೋರ್ಕ್ಸ್ ಸಸ್ಪೆನ್ಷನ್, ಹಿಂಭಾಗದಲ್ಲಿ ಟ್ವಿನ್ ಗ್ಯಾಸ್-ಚಾರ್ಜ್ಡ್ ಶಾಕ್ ಅಬ್ಸಾರ್ಬರ್‌ಗಳು ಇವೆ. ಸೂಪರ್ ಮೆಟಿಯರ್ 650 ರ ಸಸ್ಪೆನ್ಶನ್ ಸೆಟಪ್ ಕೂಡ ಈ ಬೈಕ್‌ನಲ್ಲಿದೆ.
(6 / 9)
ಈ ಬೈಕ್ ಮುಂಭಾಗ ಮತ್ತು ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್‌ಗಳಿವೆ. ಡ್ಯುಯಲ್-ಚಾನೆಲ್ ಎಬಿಎಸ್ ಹೊಂದಿದೆ. ಅಲ್ಲದೆ, ಶಾಟ್‌ಗನ್ 650 ಬೈಕ್‌ನ ಚಕ್ರಗಳ ಗಾತ್ರ ಸೂಪರ್ ಮೀಟಿಯರ್ 650 ಗಿಂತ ಭಿನ್ನವಾಗಿವೆ.
(7 / 9)
ಈ ಬೈಕ್ ಪಿಲಿಯನ್ ಸೀಟ್‌ನೊಂದಿಗೆ ಬರುತ್ತಿದ್ದು, ಇದನ್ನು ಸುಲಭವಾಗಿ ಅಳವಡಿಸಬಹುದಾಗಿದೆ. ಪಿಲಿಯನ್ ಸೀಟಿನ ಮೇಲಿನ ಗ್ರಾಬ್ ರೇಯಲ್ಸ್ ವಿಭಿನ್ನವಾಗಿದೆ.
(8 / 9)
ಶಾಟ್‌ಗನ್ 650 ನಲ್ಲಿ ಎಕ್ಸಾಸ್ಟ್ ಡಿಸೈನ್ ರಾಯಲ್ ಎನ್‌ಫೀಲ್ಡ್‌ನ ಇತರೆ 650 ಸಿಸಿ ಬೈಕ್‌ಗಳಿಗಿಂತ ಭಿನ್ನವಾಗಿದೆ. ಎಂಜಿನ್ 648 ಸಿಸಿ ಪ್ಯಾರಲಲ್ ಟ್ವಿನ್ ಯೂನಿಟ್ ಇದ್ದು, 270 ಡಿಗ್ರಿ ಕ್ರ್ಯಾಂಕ್ ಹೊಂದಿದೆ. ಅಸಿಸ್ಟ್ ಕ್ಲಚ್‌ನೊಂದಿಗೆ 6 ಸ್ಪೀಡ್ ಗೇರ್‌ಬಾಕ್ಸ್ ಇದೆ.
ಇತರ ಗ್ಯಾಲರಿಗಳು