ರಾಯಲ್‌ ಎನ್‌ಫೀಲ್ಡ್‌ ಗೋವಾ ಕ್ಲಾಸಿಕ್‌ 350 ನೋಡಿದ್ದೀರಾ? ಫಂಕಿ ಶೇಡ್‌ನಿಂದ ವರ್ಣರಂಜಿತವಾದ ಬೈಕ್‌ನ ಚಿತ್ರಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ರಾಯಲ್‌ ಎನ್‌ಫೀಲ್ಡ್‌ ಗೋವಾ ಕ್ಲಾಸಿಕ್‌ 350 ನೋಡಿದ್ದೀರಾ? ಫಂಕಿ ಶೇಡ್‌ನಿಂದ ವರ್ಣರಂಜಿತವಾದ ಬೈಕ್‌ನ ಚಿತ್ರಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ

ರಾಯಲ್‌ ಎನ್‌ಫೀಲ್ಡ್‌ ಗೋವಾ ಕ್ಲಾಸಿಕ್‌ 350 ನೋಡಿದ್ದೀರಾ? ಫಂಕಿ ಶೇಡ್‌ನಿಂದ ವರ್ಣರಂಜಿತವಾದ ಬೈಕ್‌ನ ಚಿತ್ರಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ

  • ರಾಯಲ್ ಎನ್‌ಫಲ್ಡ್‌ ಕ್ಲಾಸಿಕ್ 350 ಬೈಕಿನ ಹಿಪ್ ಆವೃತ್ತಿ ಗೋವಾ ಕ್ಲಾಸಿಕ್ 350 ಬಿಡುಗಡೆಯಾಗಿದೆ. ಈ ಬೈಕ್‌ನ ದರವನ್ನು ಕಂಪನಿಯು ನವೆಂಬರ್ 23 ರಂದು ಆರ್ ಇ ವಾರ್ಷಿಕ ಮೋಟೊವರ್ಸ್ ಉತ್ಸವದಲ್ಲಿ ಘೋಷಿಸಲಿದೆ.

ರಾಯಲ್ ಎನ್‌ಫೀಲ್ಡ್ ಗೋವಾ ಕ್ಲಾಸಿಕ್ 350 ಬೈಕ್ ಇದೀಗ ಅನಾವರಣಗೊಂಡಿರುವುದಷ್ಟೇ. ಅಧಿಕೃತಕವಾಗಿ ನವೆಂಬರ್ 23, 2024ರಂದು ರಾಯಲ್ ಎನ್ ಫೀಲ್ಡ್ ಮೋಟೊವರ್ಸ್ ಉತ್ಸವದಲ್ಲಿ ಬಿಡುಗಡೆಯಾಗಲಿದೆ. 
icon

(1 / 8)

ಹೊಸ ಗೋವಾ ಕ್ಲಾಸಿಕ್ 350 ಬೈಕಿನಲ್ಲಿ ಕ್ಲಾಸಿಕ್ 250 ಬೈಕಿನ ಟೈರ್ ಡ್ರಾಪ್ ಆಕಾರದ ಟ್ಯಾಂಕ್ ಅನ್ನು ವಿಭಿನ್ನವಾಗಿ ವಿನ್ಯಾಸಗೊಳಿಸಲಾಗಿದೆ. ಈ ದ್ವಿಚಕ್ರ ವಾಹನವು ಟ್ರಿಪ್ ಟೀಲ್, ರೇವ್ ರೆಡ್, ಪರ್ಪಲ್ ಹೇಜ್ ಮತ್ತು ಶಾಕ್ ಬ್ಲ್ಯಾಕ್ ಸೇರಿದಂತೆ ನಾಲ್ಕು ಹೊಸ ಬಣ್ಣಗಳಲ್ಲಿ ಗೋಲ್ಡ್ ಅಥವಾ ಸಿಲ್ವರ್ ಫಿನಿಶ್ ರಾಯಲ್ ಎನ್ ಫೀಲ್ಡ್ ಬ್ಯಾಡ್ಜ್‌ಗಳೊಂದಿಗೆ ಲಭ್ಯವಿದೆ.
icon

(2 / 8)

ಹೆಚ್ಚು ಆರಾಮದಾಯಕ ಸವಾರಿಗೆ ಅನುವಾಗುವಂತೆ ಗೋವಾದ ಹ್ಯಾಂಡಲ್‌ಬಾರ್‌ಗಳನ್ನು ಎತ್ತರ ಮಾಡಲಾಗಿದೆ. ಯು-ಆಕಾರದ, ಎತ್ತರದ ಹ್ಯಾಂಡಲ್ ಬಾರ್ ಗಳು ಕ್ಲಾಸಿಕ್ 350 ಬದಲು ಅಮೆರಿಕನ್‌ ಸ್ಟೈಲ್‌ನಂತೆ ಕಾಣಿಸುತ್ತದೆ. ರಾಯಲ್ ಎನ್ ಫೀಲ್ಡ್ ಈ ಬೈಕನ್ನು ಹಿಪ್ಪಿ ಬೈಕಾಗಿ ಬದಲಾಯಿಸಿದ್ದು ಸಾಮಾನ್ಯ ಕ್ಲಾಸಿಕ್ 350 ಬೈಕಿಗಿಂತ ಭಿನ್ನವಾಗಿ ಕಾಣಿಸುತ್ತದೆ. 
icon

(3 / 8)

ಬೈಕಿನ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮೊದಲಿನಂತೆಯೇ ಇದೆ. ವೇಗಕ್ಕಾಗಿ ಮಧ್ಯದಲ್ಲಿ ರೌಂಡ್ ಡಯಲ್ ಮತ್ತು ಇಂಧನ ಸೂಚಕ, ಗೇರ್ ಸ್ಥಾನ ಮತ್ತು ಓಡೋಮೀಟರ್ ರೀಡಿಂಗ್‌ಗೆ  ಡಿಜಿಟಲ್ ಡಿಸ್‌ಪ್ಲೇ ಇದೆ.  ಸಣ್ಣ ನ್ಯಾವಿಗೇಷನ್ ಡಿಸ್‌ಪ್ಲೇ ಕೂಡ ಆಯ್ಕೆಯಾಗಿ ಲಭ್ಯವಿದೆ.
icon

(4 / 8)

ಡಿಆರ್‌ಎಲ್‌ಗಳಂತೆ  ಕಾರ್ಯನಿರ್ವಹಿಸುವ ಎಲ್‌ಇಡಿ ಹೆಡ್ ಲ್ಯಾಂಪ್ ಮತ್ತು ಪಾರ್ಕಿಂಗ್ ಲೈಟ್‌ಗಳು ಇವೆ. ಬೈಕಿನ ಟೈಲ್ ಲ್ಯಾಂಪ್ ಮತ್ತು ಟರ್ನ್ ಸಿಗ್ನಲ್‌ಗಳು ಕೂಡ ಎಲ್‌ಇಡಿಯದ್ದು. ಮುಂಭಾಗ ಮತ್ತು ಹಿಂಭಾಗದ ಮಡ್ ಗಾರ್ಡ್‌ಗಳಿಗೆ ಫಂಕಿ ಶೇಡ್‌ ನೀಡಲಾಗಿದೆ.
icon

(5 / 8)

ಈ ಬೈಕ್ 2,130 ಎಂಎಂ ಉದ್ದ ಮತ್ತು 825 ಎಂಎಂ ಅಗಲವನ್ನು ಹೊಂದಿದೆ. ವ್ಹೀಲ್ ಬೇಸ್ 1,400 ಎಂಎಂ ಅಳತೆಯನ್ನು ಹೊಂದಿದೆ. ಗೋವಾ ಕ್ಲಾಸಿಕ್ ಎತ್ತರವು (ಕನ್ನಡಿಗಳಿಲ್ಲದೆ) 1,200 ಎಂಎಂ ಆಗಿದೆ.
icon

(6 / 8)

ಈ ಬೈಕ್ 348 ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಎಂಜಿನ್ ಹೊಂದಿದೆ. ಇದು 6,100 ಆರ್‌ಪಿಎಂನಲ್ಲಿ 20.2 ಬಿಎಚ್‌ಪಿ ಪವರ್ ಮತ್ತು 4,000 ಆರ್‌ಪಿಎಂನಲ್ಲಿ 27 ಎನ್ಎಂ ಟಾರ್ಕ್ ನ್ನು ಉತ್ಪಾದಿಸುತ್ತದೆ. 5 ಸ್ಪೀಡ್ ಗೇರ್ ಬಾಕ್ಸ್  ಇದೆ.
icon

(7 / 8)

ಗೋವಾ ಕ್ಲಾಸಿಕ್ 350 ಬೈಕ್ ವಿಶೇಷ ಬಿಳಿ ಗೆರೆಯ ಟೈರ್‌ಗಳನ್ನು ಹೊಂದಿದೆ. ಮುಂಭಾಗದಲ್ಲಿ ಯುಎಸ್ಡಿ ಟೆಲಿಸ್ಕೋಪಿಕ್ ಫೋರ್ಕ್‌ಗಳನ್ನು ಹೊಂದಿದೆ.  ಹಿಂಭಾಗದಲ್ಲಿ ಟ್ವಿನ್-ಟ್ಯೂಬ್ ಎಮಲ್ಷನ್ ಶಾಕ್‌ಗಳಿವೆ. ಈ ಬೈಕಿನ ಮುಂಭಾಗದಲ್ಲಿ 300 ಎಂಎಂ ಬ್ರೇಕ್ ಡಿಸ್ಕ್ ಮತ್ತು ಹಿಂಭಾಗದಲ್ಲಿ 230 ಎಂಎಂ ಡಿಸ್ಕ್ ಬ್ರೇಕ್  ಇದೆ.  ಈ ಬ್ರೇಕಿಂಗ್ ಸೆಟಪ್ ಡ್ಯುಯಲ್-ಚಾನೆಲ್ ಎಬಿಎಸ್ ವ್ಯವಸ್ಥೆಯನ್ನು ಸಹ ಹೊಂದಿದೆ.
icon

(8 / 8)

ಇತರ ಗ್ಯಾಲರಿಗಳು