ಮೂರು ಫಾರ್ಮಾಟ್ ಸರಣಿಗಳಲ್ಲೂ 100ಕ್ಕೂ ಸರಾಸರಿ; ಮಹಿಳಾ ಕ್ರಿಕೆಟ್​ನಲ್ಲಿ ನೂತನ ವಿಶ್ವದಾಖಲೆ ನಿರ್ಮಿಸಿದ ಸ್ಮೃತಿ ಮಂಧಾನ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮೂರು ಫಾರ್ಮಾಟ್ ಸರಣಿಗಳಲ್ಲೂ 100ಕ್ಕೂ ಸರಾಸರಿ; ಮಹಿಳಾ ಕ್ರಿಕೆಟ್​ನಲ್ಲಿ ನೂತನ ವಿಶ್ವದಾಖಲೆ ನಿರ್ಮಿಸಿದ ಸ್ಮೃತಿ ಮಂಧಾನ

ಮೂರು ಫಾರ್ಮಾಟ್ ಸರಣಿಗಳಲ್ಲೂ 100ಕ್ಕೂ ಸರಾಸರಿ; ಮಹಿಳಾ ಕ್ರಿಕೆಟ್​ನಲ್ಲಿ ನೂತನ ವಿಶ್ವದಾಖಲೆ ನಿರ್ಮಿಸಿದ ಸ್ಮೃತಿ ಮಂಧಾನ

  • Indian Women vs South Africa Women: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೂರು ಮಾದರಿಯ ಕ್ರಿಕೆಟ್​ನ ಸರಣಿಗಳಲ್ಲಿ ಸ್ಮೃತಿ ಮಂಧಾನ ವಿಶ್ವದಾಖಲೆ ನಿರ್ಮಿಸಿದ್ದಾರೆ. 

ಸ್ಮೃತಿ ಮಂಧಾನ ಪಾಲಿಗೆ ಸೌತ್ ಆಫ್ರಿಕಾ ಮಹಿಳಾ ತಂಡದ ವಿರುದ್ಧದ ಸರಣಿ ಅತ್ಯಂತ ಸ್ಮರಣೀಯವಾಗಿದೆ. ಜೂನ್ 16 ರಿಂದ ಜುಲೈ 9ರ ತನಕ ನಡೆದ ಭಾರತ ಮತ್ತು ಸೌತ್ ಆಫ್ರಿಕಾ ನಡುವಿನ ಟೆಸ್ಟ್​, ಏಕದಿನ, ಟಿ20ಐ ಸ್ವರೂಪಗಳ ಸರಣಿಗಳಲ್ಲಿ ಸ್ಮೃತಿ ಮಂಧಾನ 100 ಅಥವಾ ಅದಕ್ಕಿಂತ ಹೆಚ್ಚಿನ ಬ್ಯಾಟಿಂಗ್ ಸರಾಸರಿ ಹೊಂದುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ.
icon

(1 / 5)

ಸೌತ್ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಮಂಧಾನ ಸರಾಸರಿ 149, ಏಕದಿನ ಸರಣಿಯಲ್ಲಿ ಸರಾಸರಿ 114.3. ಮತ್ತು ಟಿ20ಐ ಸರಣಿಯಲ್ಲಿ 100ರ ಬ್ಯಾಟಿಂಗ್ ಸರಾಸರಿ ಹೊಂದಿದ್ದಾರೆ. ಅಂತಾರಾಷ್ಟ್ರೀಯ ಪ್ರವಾಸದ ಎಲ್ಲಾ 3 ಸ್ವರೂಪಗಳಲ್ಲಿ ಸರಾಸರಿ 100+ ರನ್ ಗಳಿಸಿದ ವಿಶ್ವದ ಮೊದಲ ಮಹಿಳಾ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
icon

(2 / 5)

ದಕ್ಷಿಣ ಆಫ್ರಿಕಾ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಸ್ಮೃತಿ ಮಂಧಾನ 40 ಎಸೆತಗಳಲ್ಲಿ ಅಜೇಯ 54 ರನ್ ಗಳಿಸಿದರು. ಈ ಇನ್ನಿಂಗ್ಸ್​ನಲ್ಲಿ 8 ಬೌಂಡರಿ, 2 ಸಿಕ್ಸರ್​​​​ಗಳು ಸೇರಿವೆ. ತಂಡ ಗೆಲ್ಲಿಸುವುದರ ಜತೆಗೆ ವಿಶಿಷ್ಟ ದಾಖಲೆಯನ್ನೂ ನಿರ್ಮಿಸಿದರು.
icon

(3 / 5)

ದಕ್ಷಿಣ ಆಫ್ರಿಕಾ ವಿರುದ್ಧದ 3ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಭಾರತ ಭರ್ಜರಿ ಗೆಲುವು ಸಾಧಿಸಿತು. ಮೂರು ಪಂದ್ಯಗಳ ಟಿ20ಐ ಸರಣಿಯಲ್ಲಿ ಹರ್ಮನ್​ಪ್ರೀತ್​ ಕೌರ್ ಪಡೆ 1-1ರಲ್ಲಿ ಸಮಬಲ ಸಾಧಿಸಿತು. ಚೆನ್ನೈನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಭಾರತ, 100ಕ್ಕಿಂತ ಕಡಿಮೆ ರನ್​​ಗಳಿಗೆ ಆಲೌಟ್ ಮಾಡಿತು. ಭಾರತ ತಂಡ ವಿಕೆಟ್ ನಷ್ಟವಿಲ್ಲದೆ ಗೆಲುವಿನ ಗುರಿ ತಲುಪಿತು. 
icon

(4 / 5)

ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ದಕ್ಷಿಣ ಆಫ್ರಿಕಾ 17.1 ಓವರ್​ಗಳಲ್ಲಿ 84 ರನ್​ಗಳಿಗೆ ಆಲೌಟ್ ಆಯಿತು. ಭಾರತದ ಪರ ಪೂಜಾ ವಸ್ತ್ರಾಕರ್ 4 ವಿಕೆಟ್ ಪಡೆದರು. ರಾಧಾ ಯಾದವ್ 3 ವಿಕೆಟ್ ಪಡೆದರು. ಗುರಿ ಬೆನ್ನಟ್ಟಿದ ಭಾರತ 10.5 ಓವರ್​​ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 88 ರನ್ ಗಳಿಸಿತು. ಸ್ಮೃತಿ ಅರ್ಧಶತಕ ಮತ್ತು ಶಫಾಲಿ ವರ್ಮಾ 25 ಎಸೆತಗಳಲ್ಲಿ 27 ರನ್ ಗಳಿಸಿದರು. 
icon

(5 / 5)

ಇತರ ಗ್ಯಾಲರಿಗಳು