Ayodhya: ಪ್ರಧಾನಿ ನರೇಂದ್ರ ಮೋದಿ ಸ್ವಾಗತಕ್ಕೆ ಹೂವು, ವಿದ್ಯುತ್ ದೀಪಗಳಿಂದ ಅಲಂಕೃತಗೊಂಡ ಅಯೋಧ್ಯೆ
ಪ್ರಧಾನಿ ನರೇಂದ್ರ ಮೋದಿ ಇಂದು ಅಯೋಧ್ಯೆಗೆ ಭೇಟಿ ನೀಡಿರುವ ಹಿನ್ನೆಲೆ ಅಯೋಧ್ಯೆಯ ಪ್ರಮುಖ ರಸ್ತೆಗಳು ಹೂವುಗಳು, ಶಿಲ್ಪಕಲೆ, ವಿದ್ಯುತ್ ದೀಪಗಳಿಂದ ಅಲಂಕೃತಗೊಂಡಿವೆ. ಅಯೋಧ್ಯೆಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ರೈಲ್ವೆ ನಿಲ್ದಾಣದ ಪುನರ್‌ನಿರ್ಮಾಣ ಕಾರ್ಯಗಳಿಗೆ ಪ್ರಧಾನಿ ಮೋದಿ ಚಾಲನೆ ನೀಡಿದ್ದಾರೆ.
(1 / 7)
ಜನವರಿ 22 ರಂದು ರಾಮಮಂದಿರ ಉದ್ಘಾಟನೆಗೆ ಅಯೋಧ್ಯೆ ಈಗಾಗಲೇ ತಯಾರಾಗುತ್ತಿದೆ. ಈ ಸಮಯದಲ್ಲಿ ವಿಮಾನ ನಿಲ್ದಾಣ ಉದ್ಘಾಟನೆ ಜೊತೆಗೆ ಹೊಸದಾಗಿ ನಿರ್ಮಿಸಲಾದೆ, ಪುನರ್‌ನಿರ್ಮಾಣವಾದ 4 ರಸ್ತೆಗಳನ್ನೂ ಪ್ರಧಾನಿ ಉದ್ಘಾಟಿಸುತ್ತಿದ್ದಾರೆ.
(2 / 7)
ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕೃತಗೊಂಡಿರುವ ಅಯೋಧ್ಯೆಯ ಧಾಮ್ ಜಂಕ್ಷನ್. ಜನವರಿ 22 ರಾಮ ಮಂದಿರ ಉದ್ಘಾಟನೆಗೆ ಕೂಡಾ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿದ್ದಾರೆ.
(4 / 7)
ರಸ್ತೆ ಬದಿಗಳಲ್ಲಿ ವ್ಯಾಪಾರ ಮಾಡುವವರು ಹನುಮಂತನ ಚಿತ್ರವಿರುವ ಕೇಸರಿ ಧ್ವಜಗಳನ್ನು ಮಾರಾಟಕ್ಕೆ ಇಟ್ಟಿದ್ದು ರಸ್ತೆ ಪೂರ್ತಿ ಕೇಸರಿಮಯವಾಗಿ ಕಾಣುತ್ತಿತ್ತು.
(5 / 7)
ಪ್ರಧಾನಿ ಮೋದಿ ಆಗಮಿಸುವ ರಸ್ತೆಯಲ್ಲಿ ಕೇಸರಿ ಬಣ್ಣದ ಚೆಂಡು ಹೂಗಳಿಂದ ವಿನ್ಯಾಸ ಮಾಡಿದ ಕಳಶವನ್ನು ಅಲಂಕಾರ ಮಾಡಲಾಗಿತ್ತು. ಈ ರಸ್ತೆಗೆ ರಾಮ್ ಪಥ್ ಎಂದು ನಾಮಕರಣ ಮಾಡಲಾಗಿದೆ.
(6 / 7)
ನಗರದ ವಿವಿಧ ಭಾಗಗಳಲ್ಲಿ ಹೂವಿನ ಅಲಂಕಾರದ ಜವಾಬ್ಧಾರಿಯನ್ನು ಲಲಿತ್ ಕುಮಾರ್ ಸಿಂಗ್ ಎಂಬುವವರು ವಹಿಸಿಕೊಂಡಿದ್ದು, ಜನವರಿ 22ಕ್ಕೆ ಈ ರೀತಿಯ ಅಲಂಕಾರ ಇನ್ನಷ್ಟು ಆಕರ್ಷಕವಾಗಿರುತ್ತದೆ ಎಂದಿದ್ದಾರೆ.
ಇತರ ಗ್ಯಾಲರಿಗಳು