ಬಾಬಾ ವಂಗಾ ಭವಿಷ್ಯ 2025: ಹೊಸ ವರ್ಷದಲ್ಲಿ 5 ರಾಶಿಯವರಿಗೆ ಹಣದ ಕೊರತೆ ಇರಲ್ಲ, ಅನ್ಯಗ್ರಹದ ಜೀವಿಗಳು ಬರಲಿವೆಯಂತೆ ಭೂಮಿಗೆ
- 2025 ರಲ್ಲಿ 5 ರಾಶಿಯವರಿಗೆ ಹಣದ ಮಳೆ ಸುರಿಯಲಿದೆ ಎಂದು ಬಾಬಾ ವಂಗಾ ಭವಿಷ್ಯ ನುಡಿದಿರುವುದು ಖುಷಿಯ ವಿಚಾರ. ಆದರೆ ಇದರ ಜೊತೆಗೆ ಕೆಲವೊಂದು ಭಯಾನಕ ವಿಷಯಗಳನ್ನು ಸಹ ಹೇಳಿದ್ದಾರೆ. ಅನ್ಯಗ್ರಹ ಜೀವಿಗಳು ಭೂಮಿಗೆ ಬರುತ್ತವೆ ಎಂದು 2025ರ ಭವಿಷ್ಯ ನುಡಿದಿದ್ದಾರೆ.
- 2025 ರಲ್ಲಿ 5 ರಾಶಿಯವರಿಗೆ ಹಣದ ಮಳೆ ಸುರಿಯಲಿದೆ ಎಂದು ಬಾಬಾ ವಂಗಾ ಭವಿಷ್ಯ ನುಡಿದಿರುವುದು ಖುಷಿಯ ವಿಚಾರ. ಆದರೆ ಇದರ ಜೊತೆಗೆ ಕೆಲವೊಂದು ಭಯಾನಕ ವಿಷಯಗಳನ್ನು ಸಹ ಹೇಳಿದ್ದಾರೆ. ಅನ್ಯಗ್ರಹ ಜೀವಿಗಳು ಭೂಮಿಗೆ ಬರುತ್ತವೆ ಎಂದು 2025ರ ಭವಿಷ್ಯ ನುಡಿದಿದ್ದಾರೆ.
(1 / 9)
ಮೂರು ದಿನಗಳ ನಂತರ 2024 ಅನ್ನು ದಾಟಿ 2025 ಕ್ಕೆ ಕಾಲಿಡುವ ಸಮಯ ಬಂದಿದೆ. ಹೊಸ ವರ್ಷ ಬಂದಾಗ, ಹೇಗೆಲ್ಲಾ ಎಂಜಾಯ್ ಮಾಡಬೇಕು, ಖುಷಿಯನ್ನು ಹಂಚಿಕೊಳ್ಳಬೇಕು ಎಂಬುದರ ಬಗ್ಗೆ ಜನರ ಮನಸ್ಸಿನಲ್ಲಿ ಹಲವು ಪ್ರಶ್ನೆಗಳು ಮೂಡುತ್ತವೆ. ಕೆಲವರು ಹೊಸ ವರ್ಷದಲ್ಲಿ ತಮ್ಮ ಭವಿಷ್ಯವನ್ನು ತಿಳಿಯಲು ಕಾತುರರಾಗಿರುತ್ತಾರೆ. ಬಲ್ಗೇರಿಯಾದ ಬಾಬಾ ವಂಗಾ 2025 ರ ಬಗ್ಗೆ ಕೆಲವೊಂದು ಅಚ್ಚರಿಯ ಭವಿಷ್ಯವನ್ನು ನುಡಿದಿದ್ದಾರೆ.
(2 / 9)
ಬಾಬಾ ವಂಗಾ ಅವರ ಗಮನಾರ್ಹ ಭವಿಷ್ಯವಾಣಿಗಳಲ್ಲಿ 9/11 ರಂದು ಅಮೆರಿಕದ ಅವಳಿ ಗೋಪುರಗಳ ಮೇಲಿನ ದಾಳಿಯೂ ಒಂದು. ರಾಜಕುಮಾರಿ ಡಯಾನಾ ಸಾವು, ಕರೋನಾ ಸೋಂಕು ಇವು ಕೂಡ ನಿಜವಾಗಿವೆ. ಯುರೋಪಿನಲ್ಲಿ ಅನೇಕ ಪ್ರಕ್ಷುಬ್ಧತೆ ಹಾಗೂ ಅಸ್ಥಿರ ಪರಿಸ್ಥಿತಿಗಳು ಇರುತ್ತವೆ ಎಂದು ಭವಿಷ್ಯ ನುಡಿದ್ದರು. ಪರಿಸ್ಥಿತಿ ಹೇಗಿರುತ್ತದೆ ಎಂದರೆ ಬಹಳಷ್ಟು ಜೀವಗಳನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ ಎಂದಿದ್ದರು. ಜಗತ್ತಿನ ಬಗ್ಗೆ ಇವರ ಬಹುತೇಕ ಭವಿಷ್ಯಗಳು ನಿಜವಾಗಿವೆ.
(3 / 9)
ಆದರೆ ಎಲ್ಲವೂ ಕೆಟ್ಟದಾಗಿರುವುದಿಲ್ಲ. ಬದಲಾಗಿ, 2025 ರಲ್ಲಿ ಕ್ಯಾನ್ಸರ್ ಔಷಧ ಆವಿಷ್ಕಾರದಂತಹ ಹಲವು ವಿಚಾರಗಳಲ್ಲಿ ವಿಜ್ಞಾನವು ಗಮನಾರ್ಹವಾಗಿ ಸುಧಾರಿಸುತ್ತದೆ ಎಂದಿದ್ದಾರೆ. ಮಾರಣಾಂತಿಕ ರೋಗದ ಔಷಧಿಗಳ ಆವಿಷ್ಕಾರದಲ್ಲಿ ವಿಜ್ಞಾನಿಗಳು ದೊಡ್ಡ ಪ್ರಗತಿಯನ್ನು ಕಾಣಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.
(4 / 9)
ಆದರೆ ಅತ್ಯಂತ ಮಹತ್ವದ ಭವಿಷ್ಯವಾಣಿ ಅನ್ಯಗ್ರಹ ಜೀವಿಗಳ ಭೇಟಿಯಾಗುವುದು. ಭೂಮಿಯ ಮೇಲಿನ ಜನರು ಇತರ ಗ್ರಹಗಳ ಜೀವಿಗಳೊಂದಿಗೆ ಸಂಪರ್ಕದಲ್ಲಿರುತ್ತಾರೆ ಎಂದು ಹೇಳಿದ್ದಾರೆ.
(5 / 9)
ಈಗ ಪ್ರಶ್ನೆ ಇರುವುದು ಈ ಅನ್ಯಗ್ರಹ ಜೀವಿಗಳು ಪ್ರಪಂಚದ ಸ್ನೇಹಿತರಾಗುತ್ತಾರ ಅಥವಾ ಶತ್ರುಗಳಾಗುತ್ತಾರಾ ಎಂಬುದು. ಇದು ಜನರಿಗೆ ನೋವಿನ ವಿಷಯವೇ ಅಥವಾ ಉತ್ತಮ ಬೆಳವಣಿಗೆಗೆ ದಾರಿ ಮಾಡಿಕೊಡುತ್ತದೆಯೇ ಎಂಬುದನ್ನು ತಿಳಿಯಬೇಕಿದೆ.
(6 / 9)
ಅನ್ಯಗ್ರಹ ಜೀವಿಗಳೊಂದಿಗಿನ ಮನುಷ್ಯರ ಭೇಟಿ ಒಳ್ಳೆಯದಲ್ಲ ಎಂದು ಬಾಬಾ ವಂಗಾ ಹೇಳಿದ್ದಾರೆ. ವಾಸ್ತವವಾಗಿ, ಇದು ಪ್ರಪಂಚದ ವಿನಾಶದ ಪ್ರಾರಂಭ ಎಂದು ಅವರು ಹೇಳಿದ್ದಾರೆ.
(7 / 9)
5079 ಕ್ಕಿಂತ ಮೊದಲು ಜಗತ್ತು ನಾಶವಾಗುವುದಿಲ್ಲ. ಅಂದರೆ ಇನ್ನೂ ಸಾಕಷ್ಟು ಸಮಯವಿದೆ. 2025 ವಿಶೇಷವಾಗಿ 5 ರಾಶಿಚಕ್ರ ಚಿಹ್ನೆಗಳಿಗೆ ಶುಭವಾಗಿರುತ್ತದೆ. ಕುಂಭ, ಮೇಷ, ವೃಷಭ, ಮಿಥುನ ಮತ್ತು ಕಟಕ ರಾಶಿಯವರು ಆರ್ಥಿಕವಾಗಿ ಸ್ಥಿರವಾಗಿರುತ್ತಾರೆ. ಕೆಲಸದಲ್ಲಿ ಯಶಸ್ಸು ಸಿಗಲಿದೆ. ವ್ಯಾಪಾರದಲ್ಲಿ ಪ್ರಗತಿ ಕಂಡುಬರಲಿದೆ. ಲಾಟರಿ ಗೆಲ್ಲುವ ಸಾಧ್ಯತೆಗಳೂ ಇರುತ್ತವೆ. ಹಣಕಾಸಿನ ಸಮಸ್ಯೆ ಇರುವುದಿಲ್ಲ ಎಂದಿದ್ದಾರೆ.
(8 / 9)
ಬಾಬಾ ವಂಗಾ, 1911 ರಲ್ಲಿ ಬಲ್ಗೇರಿಯಾದ ಪಾಂಡೆವಾ ಡಿಮಿಟ್ರೋವಾದಲ್ಲಿ ಜನಿಸಿದರು. ಆಕೆಯ ಮೊದಲ ಹೆಸರು ವಾಂಜೆಲಿಯಾ ಪಾಂಡೆವಾ ಡಿಮಿಟ್ರೋವಾ. 12 ನೇ ವಯಸ್ಸಿನಲ್ಲಿ ಭಾರೀ ಚಂಡಮಾರುತದಿಂದಾಗಿ ದೃಷ್ಟಿ ಕಳೆದುಕೊಂಡರು. 1996ರಲ್ಲಿ ವಂಗಾ ನಿಧನರಾದರೂ 5079ನೇ ಇಸವಿವರೆಗೆ ಏನಾಗಲಿದೆ ಎಂಬುದನ್ನು ಭವಿಷ್ಯ ನುಡಿದಿದ್ದಾರೆ ಎನ್ನಲಾಗಿದೆ.
ಇತರ ಗ್ಯಾಲರಿಗಳು