ಫೋಟೋ ಕ್ಲಿಕ್ಕಿಸಿಕೊಳ್ಳಲು ಬಂದ ಅಭಿಮಾನಿಗಳನ್ನು ನಿಂದಿಸಿ ನಂತರ ಹೃದಯ ಗೆದ್ದ ಬಾಬರ್ ಅಜಮ್; ವಿಡಿಯೋ ವೈರಲ್
Babar Azam: ತನ್ನೊಂದಿಗೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಆಗಮಿಸಿದ ಅಭಿಮಾನಿಗಳನ್ನು ನಿಂದಿಸಿದ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ ಅವರು ನಂತರ ಹೃದಯ ಗೆದ್ದಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.
Babar Azam: ಇಂಗ್ಲೆಂಡ್ ವೇಲ್ಸ್ನ ರಾಜಧಾನಿ ಕಾರ್ಡಿಫ್ ನಗರದಲ್ಲಿ ತನ್ನೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಆಗಮಿಸಿದ ಅಭಿಮಾನಿಗಳನ್ನು ಪಾಕಿಸ್ತಾನದ ನಾಯಕ ಬಾಬರ್ ಅಜಮ್ ಅವರು ಓಡಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಪಾಲ್ಗೊಂಡಿರುವ ಪಾಕ್ ಕ್ಯಾಪ್ಟನ್ ಅವರೊಂದಿಗೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಯತ್ನಿಸಿದ ಅಭಿಮಾನಿಗಳನ್ನು ನಿಂದಿಸಿದ್ದಾರೆ. ತದನಂತರ ಫೋಟೋಗೆ ಪೋಸ್ ಕೊಡುವ ಮೂಲಕ ಹೃದಯ ಗೆದ್ದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಬೇಡವೆಂದರೂ ಅಭಿಮಾನಿಗಳು ಮಾತು ಕೇಳದ್ದಕ್ಕೆ ಬಾಬರ್ ಸಿಟ್ಟಿಗೆದ್ದರು.
ಮೇ 30ರಂದು ಇಂಗ್ಲೆಂಡ್ ವಿರುದ್ಧದ 4ನೇ ಟಿ20 ಪಂದ್ಯಕ್ಕೂ ಮುನ್ನಾ ದಿನ ಬಾಬರ್ ಹೋಟೆಲ್ಗೆ ತೆರೆಳುವ ಸಂದರ್ಭದಲ್ಲಿ ಅಭಿಮಾನಿಗಳು ರಸ್ತೆಯಲ್ಲಿ ಮುತ್ತಿಗೆ ಹಾಕಿದರು. ನನ್ನನ್ನು ಬಿಟ್ಟು ಬಿಡಿ. ತೊಂದರೆ ಕೊಡಬೇಡಿ ಎಂದು ಬಾಬರ್ ಮನವಿ ಮಾಡಿದರೂ ಕೇಳದೆ ಸುತ್ತುವರೆದ ಫ್ಯಾನ್ಸ್, ವಿಡಿಯೋ ಚಿತ್ರಿಕರಿಸಿದರು. ಫೋಟೋ ತೆಗೆದುಕೊಳ್ಳಲು ಯತ್ನಿಸಿದರು. ಬೇಡವೆಂದರೂ ಹೀಗೆ ಮಾಡಿದ್ದಕ್ಕೆ ಇದು ಬಾಬರ್ಗೆ ಇದು ಕೋಪ ತರಿಸಿತು. ಬಳಿಕ ಎಲ್ಲರನ್ನೂ ಹೊರ ಕಳುಹಿಸುವಂತೆ ಭದ್ರತಾ ಅಧಿಕಾರಿಗಳಿಗೆ ಬಾಬರ್ ಸೂಚಿಸಿದರು. ತದನಂತರ ಅವರು ಸೆಲ್ಫಿಗೆ ಫೋಸ್ ಕೊಟ್ಟು ಹೃದಯ ಗೆದ್ದರು.
ಬಾಬರ್ ಅಜಮ್ ಅವರ ನೇತೃತ್ವದ ತಂಡವು ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಸಿದ್ಧತೆಯ ಭಾಗವಾಗಿ ನಾಲ್ಕು ಪಂದ್ಯಗಳ ಟಿ20 ಸರಣಿಗೆ ಇಂಗ್ಲೆಂಡ್ ಪ್ರವಾಸ ಕೈಗೊಂಡಿದೆ. ಈಗಾಗಲೇ ಮೂರು ಪಂದ್ಯಗಳು ಮುಗಿದಿದ್ದು, ಅಂತಿಮ ಟಿ20 ಪಂದ್ಯವು ಮೇ 30ರಂದು ಜರುಗಲಿದೆ. ಆದರೆ ಎರಡು ಪಂದ್ಯಗಳು ಮಳೆಗೆ ಆಹುತಿಯಾಗಿದ್ದು, ಆಡಿದೊಂದು ಪಂದ್ಯದಲ್ಲಿ ಬಾಬರ್ ಪಡೆ, ಇಂಗ್ಲೆಂಡ್ ವಿರುದ್ಧ ಸೋಲು ಕಂಡಿದೆ. 23 ರನ್ಗಳಿಂದ ಶರಣಾಗಿತ್ತು.
ನಾಯಕನಾಗಿ ಬಾಬರ್ ಮರು ನೇಮಕ
2023ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಬಾಬರ್ ಅಜಮ್ ಕಳಪೆ ನಾಯಕತ್ವ ನಿರ್ವಹಿಸಿದ್ದ ಕಾರಣ ಪಾಕಿಸ್ತಾನ ತಂಡವು ಲೀಗ್ ಹಂತದಲ್ಲೇ ಹೊರಬಿದ್ದಿತ್ತು. ಹೀಗಾಗಿ, ಸೋಲಿಗೆ ನೇರ ಹೊಣೆ ಹೊತ್ತು ಬಾಬರ್ ನಾಯಕತ್ವದಿಂದ ಕೆಳಗಿಯುತ್ತಾರೆ. ಆ ಬಳಿಕ ಟೆಸ್ಟ್ಗೆ ಶಾನ್ ಮಸೂದ್ ಮತ್ತು ಟಿ20ಗೆ ಶಾಹೀನ್ ಅಫ್ರಿದಿ ನಾಯಕನಾಗಿ ನೇಮಕ ಆಗುತ್ತಾರೆ. ಆದರೆ, ಇವರ ನಾಯಕತ್ವದಲ್ಲಿ ಪಾಕ್ ಮತ್ತಷ್ಟು ಕಳಪೆ ಪ್ರದರ್ಶನ ತೋರಿತು. ಹೀಗಾಗಿ ಟಿ20 ಕ್ರಿಕೆಟ್ಗೆ ಬಾಬರ್ ಅವರನ್ನೇ ಮರು ನೇಮಕ ಮಾಡಿತು ಪಾಕಿಸ್ತಾನ ಕ್ರಿಕೆಟ್ ಮಂಡಳಿ.
ಕೋಚ್ ಆಗಿ ಗ್ಯಾರಿ ಕರ್ಸ್ಟನ್ ನೇಮಕ
2011ರ ಏಕದಿನ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಕೋಚ್ ಆಗಿದ್ದ ಸೌತ್ ಆಫ್ರಿಕಾದ ಗ್ಯಾರಿ ಕರ್ಸ್ಟನ್ ಅವರು ಟಿ20 ವಿಶ್ವಕಪ್ಗೆ ಪಾಕಿಸ್ತಾನ ತಂಡದ ಕೋಚ್ ಆಗಿ ನೇಮಕಗೊಂಡಿದ್ದಾರೆ. ಐಪಿಎಲ್ನಲ್ಲಿ ಗುಜರಾತ್ ಟೈಟಾನ್ಸ್ ತಂಡಕ್ಕೆ ಮಾರ್ಗದರ್ಶಕರಾಗಿದ್ದರು. 2011ರಲ್ಲಿ ಗ್ಯಾರಿ ಅವರು ಭಾರತ ತಂಡವನ್ನು ಚಾಂಪಿಯನ್ ಮಾಡುವಲ್ಲಿ ಯಶಸ್ವಿಯಾಗಿದ್ದರು. ಹೀಗಾಗಿ, ಅವರ ಮಾರ್ಗದರ್ಶನದಲ್ಲಿ ಪಾಕ್ ಮತ್ತೊಮ್ಮೆ ಚಾಂಪಿಯನ್ ಆಗಲು ಸಜ್ಜಾಗಿದೆ.
ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯ ನಂತರ 2024ರ ಐಸಿಸಿ ಪುರುಷರ ಟಿ20 ವಿಶ್ವಕಪ್‌ನಲ್ಲಿ ಉಭಯ ತಂಡಗಳು ಪಾಲ್ಗೊಳ್ಳಲಿವೆ. ಪಾಕಿಸ್ತಾನದ ಮೊದಲ ಪಂದ್ಯವು ಜೂನ್ 6 ರಂದು ಆತಿಥೇಯ ಯುನೈಟೆಡ್ ಸ್ಟೇಟ್ಸ್ ವಿರುದ್ಧ ನಡೆಯಲಿದೆ.
ಆಟಗಾರ (ವಿಶ್ವಕಪ್ ತಂಡ) | ಪಾತ್ರ |
---|---|
ಬಾಬರ್ ಅಜಮ್ (ನಾಯಕ) | ಬ್ಯಾಟರ್ |
ಅಬ್ರಾರ್ ಅಹಮದ್ | ಬೌಲರ್ |
ಆಜಂ ಖಾನ್ | ವಿ. ಕೀಪರ್ |
ಫಖರ್ ಜಮಾನ್ | ಬ್ಯಾಟರ್ |
ಹಾರಿಸ್ ರೌಫ್ | ಬೌಲರ್ |
ಇಫ್ತಿಕರ್ ಅಹಮದ್ | ಆಲ್ರೌಂಡರ್ |
ಇಮಾದ್ ವಾಸಿಂ | ಆಲ್ರೌಂಡರ್ |
ಮೊಹಮ್ಮದ್ ಅಬ್ಬಾಸ್ ಅಫ್ರಿದಿ | ಬೌಲರ್ |
ಮೊಹಮ್ಮದ್ ಅಮೀರ್ | ಬೌಲರ್ |
ಮೊಹಮ್ಮದ್ ರಿಜ್ವಾನ್ | ವಿ. ಕೀಪರ್ |
ನಸೀಮ್ ಶಾ | ಬೌಲರ್ |
ಸೈಮ್ ಅಯೂಬ್ | ಬ್ಯಾಟರ್ |
ಶಾದಾಬ್ ಖಾನ್ | ಆಲ್ರೌಂಡರ್ |
ಶಾಹೀನ್ ಶಾ ಆಫ್ರಿದಿ | ಬೌಲರ್ |
ಉಸ್ಮಾನ್ ಖಾನ್ | ಬೌಲರ್ |