Banashankari jatre 2025: ಈ ಬಾರಿ ಬಾದಾಮಿ ಜಾತ್ರೀಗೆ ಹೊಂಟೀರೇನು, ಡ್ರಾಮಾ ಪಟ್ಟಿ ಬಂದಾವು, ಬೆಸ್ಟ್ 10 ನಾಟಕ ಯಾವುದಿದೆ ನೋಡಿ
Badami Banashankari jatre 2025: ಉತ್ತರ ಕರ್ನಾಟಕದ ಪ್ರಸಿದ್ದ ಜಾತ್ರೆಗಳಲ್ಲಿ ಬಾದಾಮಿ ಬನಶಂಕರಿ ಜಾತ್ರೆಯೂ ಒಂದು. ಸತತ ಒಂದು ತಿಂಗಳ ಕಾಲ ನಡೆಯುವ ಈ ಜಾತ್ರೆ ವಿಶೇಷ ಕಂಪೆನಿಗಳ ನಾಟಕಗಳ ವೈಭವ. ಮೂವತ್ತಕ್ಕೂ ಹೆಚ್ಚು ತಂಡಗಳು ಇಲ್ಲಿ ಪ್ರದರ್ಶಿಸುವ ನಾಟಕಗಳು ಸಹಸ್ರಾರು ಅಭಿಮಾನಿಗಳನ್ನು ಸೆಳೆಯುತ್ತವೆ. ಈ ಬಾರಿ ಆಡಲಿರುವ ಪ್ರಮುಖ ನಾಟಕಗಳ ಪಟ್ಟಿ ಇಲ್ಲಿದೆ.
(1 / 11)
ಬಾಗಲಕೋಟೆ ಜಿಲ್ಲೆ ಬಾದಾಮಿ ಬನಶಂಕರಿ ಜಾತ್ರೆಯ ಚಟುವಟಿಕೆಗಳು ಜನವರಿ 6ರ ಸೋಮವಾರದಿಂದ ಆರಂಭ. ಒಂದು ತಿಂಗಳ ಕಾಲ ನಡೆಯುವ ಜಾತ್ರೆಯ ಭಾಗವಾಗಿ ನಾಟಕಕ್ಕೂ ಸಿದ್ದತೆಗಳು ನಡೆದಿವೆ.
(2 / 11)
ನಟ ಹಾಗೂ ರಂಗಭೂಮಿ ಕಲಾವಿದ ರಾಜುತಾಳೀಕೋಟೆ ಅವರ ಪುತ್ರ ಭರತ್‌ರಾಜ್ ತಾಳೀಕೋಟೆ ಅಭಿನಯದ ಚೈನೀ ಮಾಡಾಕೆ ರೊಕ್ಕ ಬೇಕು, ಪ್ರೀತಿ ಮಾಡಾಕೆ ನಾಟಕ ಈ ಬಾರಿ ಬಾದಾಮಿಯಲ್ಲಿ ಪ್ರದರ್ಶನಗೊಳ್ಳುತ್ತಿದೆ.
(3 / 11)
ಗುಬ್ಬಿಯ ಬಿಎಸ್‌ಆರ್ ನಾಟಕ ಸಂಘ ಪ್ರತಿ ವರ್ಷದಂತೆ ಈ ಬಾರಿಯೂ ವಿಶೇಷ ನಾಟಕ ತಂದಿದ್ದು ಸುಜಾತ ಜೇವರ್ಗಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಿಲಿರುವ ಅಕ್ಕಿ ಅಂಗಾರ, ತಂಗಿ ಬಂಗಾರ ನಾಟಕ ಪ್ರದರ್ಶನವಾಗುತ್ತಿದೆ.
(5 / 11)
ಹಲವು ಪ್ರಮುಖ ಕಲಾವಿದರ ತಂಡದ ನಾ ಡ್ರೈವರಾ ಅಕಿ ನನ್ನ ಲವರಾ ಎನ್ನುವ ನಾಟಕವೂ ಈ ಬಾರಿಯ ಪ್ರದರ್ಶನಕ್ಕೆ ಅಣಿಯಾಗಿದೆ.
(6 / 11)
ಗದಗದ ಶ್ರೀಶೈಲ ಮಲ್ಲಿಕಾರ್ಜುನ ನಾಟ್ಯ ಸಂಘವು ರೊಕ್ಕಿನವ ನಾ ಅಲ್ಲಾ,ಸೊಕ್ಕಿನವ ನಾ ಅಲ್ಲಾ ಎನ್ನುವ ನಾಟಕ ಪ್ರದರ್ಶನ ಮಾಡುತ್ತಿದೆ.
(7 / 11)
ಕಲ್ಲೂರಿನ ಗುರು ಮಲ್ಲಿಕಾರ್ಜುನ ನಾಟಕ ಸಂಘವು ಸುಮ್ನಿರ ಸುಂದ್ರಿ ಎನ್ನುವ ಹಾಸ್ಯ ನಾಟಕ ಪ್ರದರ್ಶನಕ್ಕೆ ಮುಂದಾಗಿದೆ.
(8 / 11)
ಮಂಡಲಗಿರಿಯ ಶ್ರೀ ಗುರು ಸಿದ್ದಲಿಂಗೇಶ್ವರ ನಾಟ್ಯ ಸಂಘವು ನೀ ಹೂ ಅಂದ್ರ ಗಿಚ್ಚ ಆಕ್ಕೇನಿ, ಇಲ್ಲಂದ್ರ ಹುಚ್ಚಕ್ಕೇನಿ ಎನ್ನುವ ನಾಟಕವು ಪ್ರದರ್ಶನವಾಗಲಿದೆ.
(10 / 11)
ಮಂಡಲಗಿರಿ ತೋಂಟದಾರ್ಯ ನಾಟ್ಯ ಸಂಘವು ಸಂದ್ಯಾಗ ಕರಿತಾಳ ಮಂದ್ಯಾಗ ಹೊಡಿತಾಳ ಎನ್ನುವ ಸಂಪೂರ್ಣ ಹಾಸ್ಯ ನಾಟಕ ರೂಪಿಸಿ ಪ್ರದರ್ಶಿಸುತ್ತಿದೆ.
ಇತರ ಗ್ಯಾಲರಿಗಳು