ಸಹಸ್ರಾರು ಭಕ್ತರ ನಡುವೆ ಬಾದಾಮಿ ಬನಶಂಕರಿ ರಥೋತ್ಸವ; ಶಂಭೂಕೋ ನಿನ್ನ ಪಾದಕೆ ಉದ್ಘೋಷದ ನಡುವೆ ತೇರು ಎಳೆದ ಭಕ್ತರು
- ಬಾಗಲಕೋಟೆ ಜಿಲ್ಲೆ ಬಾದಾಮಿಯ ಬನಶಂಕರಿ ರಥೋತ್ಸವ ಭಕ್ತಿಭಾವಗಳ ನಡುವೆ ಸೋಮವಾರ ನೆರವೇರಿತು. ಉತ್ತರ ಕರ್ನಾಟಕದ ಅತೀ ದೊಡ್ಡ ಜಾತ್ರೆಗಳಲ್ಲಿ ಒಂದಾದ ಬನಶಂಕರಿ ಜಾತ್ರೆಯು ಒಂದು ತಿಂಗಳ ಕಾಲ ನಡೆಯಲಿದೆ. ರಥೋತ್ಸವದ ವೈಭವ ಹೀಗಿತ್ತು.
- ಬಾಗಲಕೋಟೆ ಜಿಲ್ಲೆ ಬಾದಾಮಿಯ ಬನಶಂಕರಿ ರಥೋತ್ಸವ ಭಕ್ತಿಭಾವಗಳ ನಡುವೆ ಸೋಮವಾರ ನೆರವೇರಿತು. ಉತ್ತರ ಕರ್ನಾಟಕದ ಅತೀ ದೊಡ್ಡ ಜಾತ್ರೆಗಳಲ್ಲಿ ಒಂದಾದ ಬನಶಂಕರಿ ಜಾತ್ರೆಯು ಒಂದು ತಿಂಗಳ ಕಾಲ ನಡೆಯಲಿದೆ. ರಥೋತ್ಸವದ ವೈಭವ ಹೀಗಿತ್ತು.
(1 / 7)
ಬಾದಾಮಿ ಬನಶಂಕರಿ ಜಾತ್ರೆಗ ಗದಗ ಜಿಲ್ಲೆ ರೋಣ ತಾಲ್ಲೂಕಿನ ಮಾಡಲಗೇರಿಯಿಂದ ಬಣ್ಣದ ಅಲಂಕಾರದೊಂದಿಗೆ ಹೊರಟ ಎತ್ತುಗಳು.
(2 / 7)
ರೋಣ ತಾಲ್ಲೂಕಿನ ಮಾಡಲಗೇರಿ ಗ್ರಾಮದ ಹಳಿಬಂಡಿ ಯ ಎತ್ತುಗಳು ಬಾದಾಮಿ ಬನಶಂಕರಿ ರಥೋತ್ಸವ ದ ತೆರಿನ ಹಗ್ಗವನ್ನು ತೆಗೆದುಕೊಂಡು ಹೋಗುವ ಸಂಪ್ರದಾಯ. ನೂರಾರು ವರ್ಷ್ ಗಳ ನಡೆದು ಬಂದಿದೆ. ಈ ವರ್ಷವೂ ಸಡಗರ ಜೋರಾಗಿತ್ತು.
(3 / 7)
ಎಲ್ಲಿ ನೋಡಿದರೂ ಜನವೋ ಜನ, ಜನಸಾಗರದ ನಡುವೆ ಬಾದಾಮಿ ಬನಶಂಕರಿ ರಥೋತ್ಸವದ ಸಂಭ್ರಮ. ಇಡೀ ದೇಗುಲ ಪ್ರಾಂಗಣ ‘‘ಶಂಭೋಕೋ‘‘ ಜಯಘೋಷಕ್ಕೆ ಸಾಕ್ಷಿಯಾಯಿತು
(4 / 7)
ಕರ್ನಾಟಕದ ಬಾದಾಮಿಯಲ್ಲಿರುವ ಪ್ರಸಿದ್ಧ ಬನಶಂಕರಿ ದೇವಸ್ಥಾನದಲ್ಲಿ ವಾರ್ಷಿಕ ರಥಯಾತ್ರೆಯನ್ನು ಕರ್ನಾಟಕದಲ್ಲಿ ಅನುಸರಿಸುವ ಸಾಂಪ್ರದಾಯಿಕ ಹಿಂದೂ ಕ್ಯಾಲೆಂಡರ್ ಪ್ರಕಾರ ಪೌಶ್ ಪೂರ್ಣಿಮಾ ದಿನದಂದು ಆಚರಿಸಲಾಗುತ್ತದೆ.
(5 / 7)
ರಥೋತ್ಸವಕ್ಕಾಗಿ ಬಾಗಲಕೋಟೆ ಜಿಲ್ಲೆಯಲ್ಲದೇ ಹಲವು ಭಾಗಗಳಿಂದಲೂ ಭಕ್ತರು ಬರುತ್ತಾರೆ. ಅವರ ಸಮ್ಮುಖದಲ್ಲಿ ಸಂಜೆ ರಥೋತ್ಸವ ಜರುಗುತ್ತದೆ.
(6 / 7)
ಉತ್ತರ ಕರ್ನಾಟಕದಲ್ಲಿ ಪ್ರಸಿದ್ಧಿ ಪಡೆದಿರುವ ಈ ಜಾತ್ರೆಗೆ ಹೊರ ಜಿಲ್ಲೆ, ರಾಜ್ಯಗಳು ಭಕ್ತರು ಆಗಮಿಸಿದರು. ರಥೋತ್ಸವ ಸಮಯದಲ್ಲಿ ಭಕ್ತರ ಸಂಭ್ರಮ ಇಮ್ಮಡಿಯಾಗಿತ್ತು. ಜೈಕಾರ ಕೂಗುತ್ತಾ ರಥ ಎಳೆದು ಸಂಭ್ರಮಿಸಿದರು. . ಜನಸಾಗರದ ನಡುವೆ ರಥ ಎಳೆಯುವ ದೃಶ್ಯವಂತೂ ಕಣ್ಣಿಗೊಂಥರಾ ಸೋಜಿಗ ಅನ್ನೋ ರೀತಿಯೇ ಇತ್ತು.
ಇತರ ಗ್ಯಾಲರಿಗಳು