Kudalasangama: ಸೊರಗಿದ್ದ ಕೂಡಲ ಸಂಗಮಕ್ಕೆ ಬಂತು ಜಲ ಕಳೆ, ಕೃಷ್ಣಾ ನದಿಯಲ್ಲಿ ಬಂತು ಭಾರೀ ನೀರು photos
- Bagalkot News ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮದಲ್ಲಿ ನೀರಿನ ಪ್ರಮಾಣ ನಿಧಾನವಾಗಿ ಏರಿಕೆ ಕಾಣುತ್ತಿದೆ. ಆಲಮಟ್ಟಿಯಿಂದ ನೀರು ಹೆಚ್ಚು ಹೊರ ಬಿಡುತ್ತಿರುವುದರಿಂದ ಕೃಷ್ಣಾ ನದಿ ಉಕ್ಕಿ ಹರಿಯುತ್ತಿದೆ.
- Bagalkot News ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮದಲ್ಲಿ ನೀರಿನ ಪ್ರಮಾಣ ನಿಧಾನವಾಗಿ ಏರಿಕೆ ಕಾಣುತ್ತಿದೆ. ಆಲಮಟ್ಟಿಯಿಂದ ನೀರು ಹೆಚ್ಚು ಹೊರ ಬಿಡುತ್ತಿರುವುದರಿಂದ ಕೃಷ್ಣಾ ನದಿ ಉಕ್ಕಿ ಹರಿಯುತ್ತಿದೆ.
(1 / 6)
ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಆಲಮಟ್ಟಿ ಜಲಾಶಯಕ್ಕೆ ಹೆಚ್ಚಿನನೀರು ಬಂದು ಕೃಷ್ಣಾ ನದಿ ಮೂಲಕ ಹೊರ ಬಿಡಲಾಗುತ್ತಿದೆ. ಇದರಿಂದ ಕೂಡಲಸಂಗಮಕ್ಕೆ ಜೀವ ಕಳೆ ಬಂದಿದೆ.(ಎಸ್ ಜಿ ಗೌಡರ್ ಕೂಡಲಸಂಗಮ)
(2 / 6)
ಕೂಡಲಸಂಗಮ ಪ್ರಮುಖ ಪ್ರವಾಸಿ ಸ್ಥಳ. ಇಲ್ಲಿ ಕೃಷ್ಣ ಹಾಗೂ ಮಲಪ್ರಭ ನದಿ ಸಂಗಮವಾಗುತ್ತದೆ. ಕೃಷ್ಣಾ ನದಿ ಪ್ರಮುಖ ನದಿ.
(3 / 6)
ಕಳೆದ ಬಾರಿ ನೀರಿನ ಕೊರತೆಯಿಂದ ಕೂಡಲಸಂಗಮ ಆಕರ್ಷಣೆ ಕಳೆದುಕೊಂಡಿತ್ತು. ಈಗ ನಿಧಾನವಾಗಿ ಮುಂಗಾರು ಚುರುಕುಗೊಂಡಿದ್ದರಿಂದ ನೀರು ಹರಿದು ಬಂದಿದೆ.
(4 / 6)
ಕೂಡಲ ಸಂಗಮ ಬಸವಣ್ಣನ ಐಕ್ಯ ಮಂಟಪ ಪ್ರಮುಖ ತಾಣ. ನೀರಿನ ನಡುವೆಯೇ ಐಕ್ಯ ಮಂಟಪ ರೂಪುಗೊಂಡಿದೆ. ಈ ಬಾರಿ ನೀರಿನ ಪ್ರಮಾಣ ಐಕ್ಯಮಂಟಪದಲ್ಲಿ ಏರಿಕೆ ಕಂಡಿದೆ.
(5 / 6)
ಎರಡೂ ದಶಕದ ಹಿಂದೆ ಕೂಡಲ ಸಂಗಮದಲ್ಲಿನ ಐಕ್ಯಮಂಟಪಕ್ಕೆ ಹೊಸ ರೂಪ ನೀಡಲಾಗಿದೆ. ಇಲ್ಲಿನ ನೀರಿನ ವಾತಾವರಣದ ಕಾರಣಕ್ಕೆ ಪ್ರವಾಸಿಗರನ್ನು ಸೆಳೆಯುತ್ತಿದೆ.
ಇತರ ಗ್ಯಾಲರಿಗಳು