Bagalkot News: ರೇಷ್ಮೆ, ಕೃಷಿ ತಜ್ಞ, ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾನಿಲಯ ಕಟ್ಟಿದ ವಿಜ್ಞಾನಿ ಡಾ.ದಂಡಿನ್‌ಗೆ ಅಭಿನಂದನೆ ಮಹಾಪೂರ
- Felicitation to Scientist ಬಾಗಲಕೋಟ ತೋಟಗಾರಿಕೆ ವಿಜ್ಞಾನ ವಿವಿಯನ್ನು ಸಮರ್ಥವಾಗಿ ಕಟ್ಟಿದ ಕೃಷಿ, ತೋಟಗಾರಿಕೆ, ರೇಷ್ಮೆ, ವನಕೃಷಿಯಲ್ಲಿ ಅಂತರಾಷ್ಟ್ರೀಯ ತಜ್ಞರಾಗಿರುವ ಡಾ.ಎಸ್.ಬಿ.ದಂಡಿನ್ ಅವರನ್ನು ಆತ್ಮೀಯವಾಗಿ ಅಭಿನಂದಿಸಲಾಯಿತು.
- Felicitation to Scientist ಬಾಗಲಕೋಟ ತೋಟಗಾರಿಕೆ ವಿಜ್ಞಾನ ವಿವಿಯನ್ನು ಸಮರ್ಥವಾಗಿ ಕಟ್ಟಿದ ಕೃಷಿ, ತೋಟಗಾರಿಕೆ, ರೇಷ್ಮೆ, ವನಕೃಷಿಯಲ್ಲಿ ಅಂತರಾಷ್ಟ್ರೀಯ ತಜ್ಞರಾಗಿರುವ ಡಾ.ಎಸ್.ಬಿ.ದಂಡಿನ್ ಅವರನ್ನು ಆತ್ಮೀಯವಾಗಿ ಅಭಿನಂದಿಸಲಾಯಿತು.
(1 / 10)
ಇದು ಬಾಗಲಕೋಟೆಯಲ್ಲಿರುವ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಲಯ. ಆರು ವರ್ಷ ಕಾಲ ವಿವಿ ವಿಶೇಷಾಧಿಕಾರಿ ಹಾಗೂ ಕುಲಪತಿಯಾಗಿ ಪ್ರೊ.ಎಸ್.ಬಿ.ದಂಡಿನ್ ಅವರು ಸಮರ್ಥವಾಗಿ ಕಟ್ಟಿ ಮುನ್ನಡೆಸಿದರು. ಈಗ ಹೆಮ್ಮರವಾಗಿಯೇ ವಿವಿ ಬೆಳೆದಿದೆ.
(2 / 10)
ತಮಗೆ 75 ವರ್ಷ ತುಂಬಿದ ಸಂದರ್ಭದಲ್ಲಿ ವಿಶ್ವವಿದ್ಯಾನಿಲಯ ಬಾಗಲಕೋಟೆಯಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮಕ್ಕೂ ಮುನ್ನ ವಿವಿ ಆವರಣದಲ್ಲಿ ಪ್ರೊ.ಎಸ್.ಬಿ.ದಂಡಿನ್ ಶನಿವಾರ ಬೆಳಿಗ್ಗೆ ಸುತ್ತು ಹಾಕಿ ಬಂದರು.
(3 / 10)
ಡಾ.ಎಸ್.ಬಿ.ದಂಡಿನ್ ಅವರ 75 ನೇ ವರ್ಷದ ಜನುಮ ದಿನದ ಸಂದರ್ಭದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರ ಶಿಷ್ಯರು, ವಿದ್ಯಾರ್ಥಿಗಳು ಬಾಗಲಕೋಟೆ ತೋಟಗಾರಿಕೆ ವಿವಿಯಲ್ಲಿ ಬಿಡಿಸಿದ್ದ ಅಭಿಮಾನದ ರಂಗೋಲಿ.
(4 / 10)
ದಂಡಿನ್ ಅವರ 75 ನೇ ವರ್ಷದ ನೆನಪಿನಲ್ಲಿ ಆರಂಭಿಸಿರುವ ಡಾ.ಎಸ್.ಬಿ.ದಂಡಿನ ಶಿಕ್ಷಣ ಹಾಗೂ ಸಂಶೋಧನಾ ಪ್ರತಿಷ್ಠಾನ ಸಂಸ್ಥೆಗೆ ಶನಿವಾರ ಬಾಗಲಕೋಟೆಯಲ್ಲಿ ಚಾಲನೆ ನೀಡಲಾಯಿತು.
(5 / 10)
ಡಾ.ಎಸ್.ಬಿ.ದಂಡಿನ್ ಅವರಿಗೆ 75 ವರ್ಷ ತುಂಭಿದ ಸಂದರ್ಭದಲ್ಲಿ ದೇಶದ ನಾನಾ ಭಾಗಗಳಿಂದ ಆಗಮಿಸಿದ್ದ ಅವರ ಶಿಷ್ಯರು, ವಿಜ್ಞಾನಿಗಳು, ನಾನಾ ಕ್ಷೇತ್ರದ ಸಾಧಕರು ಆತ್ಮೀಯವಾಗಿ ಅಭಿನಂದಿಸಿದರು.
(7 / 10)
ದಂಡಿನ ಅವರ 75 ವರ್ಷದ ಜನುಮ ದಿನದ ಅಭಿನಂದನಾ ಕಾರ್ಯಕ್ರಮದಲ್ಲಿ ಇಳಕಲ್ ಚಿತ್ತರಗಿ ಮಠದ ಶ್ರೀಗುರು ಮಹಾಂತ ಸ್ವಾಮೀಜಿ ಮಾತನಾಡಿದರು.
(8 / 10)
ಬಾಗಲಕೋಟ ತೋಟಗಾರಿಕೆ ವಿವಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಣ್ಣುಗಳ ಮೂಲಕ ಡಾ.ದಂಡಿನ್ ಅವರಿಗೆ ತುಲಾಭಾರ ಮಾಡಿದ್ದು ವಿಶೇಷವಾಗಿತ್ತು.
ಇತರ ಗ್ಯಾಲರಿಗಳು