ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Bagalkot Green Mission: ಬಾಗಲಕೋಟೆ ಮೀಸಲು ಪಡೆ ಅರಣ್ಯ ಕೇಂದ್ರವಾಯ್ತು ಹಸಿರು ತಾಣ, ಪೊಲೀಸ್‌ ಅಧಿಕಾರಿ ಕಾಡಿನ ಪ್ರೀತಿ ಅನಾವರಣ Photos

Bagalkot Green Mission: ಬಾಗಲಕೋಟೆ ಮೀಸಲು ಪಡೆ ಅರಣ್ಯ ಕೇಂದ್ರವಾಯ್ತು ಹಸಿರು ತಾಣ, ಪೊಲೀಸ್‌ ಅಧಿಕಾರಿ ಕಾಡಿನ ಪ್ರೀತಿ ಅನಾವರಣ photos

  • Police Forester ಇವರು ಪೊಲೀಸ್‌ ಅಧಿಕಾರಿ. ಆದರೆ ಅರಣ್ಯ ಇಲಾಖೆ ಅಧಿಕಾರಿಗಳಿಗೂ ಮಿಗಿಲಾಗಿ ನಾಲ್ಕು ಎಕರೆಯಲ್ಲಿ ಮಿನಿ ಅರಣ್ಯ ಬೆಳೆಸಿದ್ದಾರೆ. ಬಾಗಲಕೋಟೆ ನಗರದ ಕೆಎಸ್‌ಆರ್‌ಪಿ ಆವರಣ ಹಸುರಿನಿಂದ ಕಂಗೊಳಿಸುತ್ತಿದ್ದು, ಬಿಸಿಲಿಗೆ ಇನ್ನಿಲ್ಲದ ತಂಪು ನೀಡುತ್ತಿದೆ. ಪೊಲೀಸ್‌ ಅಧಿಕಾರಿ ಭರತ ತಳವಾರ ಅವರ ಅರಣ್ಯ ಪ್ರೀತಿಯ ಚಿತ್ರ ನೋಟ ಇಲ್ಲಿದೆ. 

ಬಾಗಲಕೋಟೆಯ ಪೋಲಿಸ್ ಇಲಾಖೆಯ ಬಂಗಾರದ ಮನುಷ್ಯ ಎಂದೇ ಕರೆಯಿಸಿಕೊಳ್ಳುವ ಡಿವೈಎಸ್ಪಿ ಭರತ ತಳವಾರ ತಮ್ಮ ಕಚೇರಿ ಆವರಣದಲ್ಲಿಯೇ ಹಸಿರು ವಾತಾವರಣ ಸೃಷ್ಟಿಸಿದ್ದಾರೆ. 
icon

(1 / 7)

ಬಾಗಲಕೋಟೆಯಲ್ಲಿರುವ ಕರ್ನಾಟಕ ಮೀಸಲು ಪಡೆಯ ತರಬೇತಿ ಕೇಂದ್ರವದು. ಹುಲ್ಲೂ ಹುಟ್ಟದ ಕಲ್ಲು ಮಸಾರಿಯಲ್ಲಿ ಸುಮಾರು 4ಎಕರೆ ಜಮೀನಿನಲ್ಲಿ 2ವರ್ಷದಲ್ಲಿ ಅತೀದಟ್ಟವಾದ 20 ಅಡಿ ಎತ್ತರದ  ಕಾಡನ್ನು ಭರತ್‌ ಬೆಳೆಸಿದ್ದಾರೆ.
icon

(2 / 7)

ಡ್ರಿಪ್ ಅಳವಡಿಸಿಕೊಂಡು ಕಲ್ಲು ಜಮೀನಿನಲ್ಲಿ ವಿವಿಧ ಬಗೆಯ ಹೆಣ್ಣಿನ ಮರಗಳನ್ನು ಮತ್ತು ಕಾಡಿನ ಮರಗಳನ್ನು ವಿಶೇಷ ಕಾಳಜಿಯಿಂದ  ಬೆಳೆಸಿ ಪಕ್ಷಿಗಳಿಗೆ ಗೂಡು,ನೀರಿನ ವ್ಯವಸ್ಥೆ ಮಾಡಿದ್ದಾರೆ. ಇಲಾಖೆಯ ಸಿಬ್ಬಂದಿಯ ಸೇವೆಯನ್ನು ಬಳಸಿಕೊಂಡಿದ್ದಾರೆ. 
icon

(3 / 7)

ಕಾಡಿನ ಮಧ್ಯೆ ಪರಗೋಲಾ ನಿರ್ಮಾಣ ಮಾಡಿ ಮೇಲೆ ನೀರು ಬೀಳುವಾಗ ಮಳೆಯ ಅನುಭವ ನೀಡುತ್ತದೆ. ಅರಣ್ಯ ಇಲಾಖೆಯವರೂ ಈ ರೀತಿಯ ಕಾರ್ಯ ಎಲ್ಲಿಯೂ ಮಾಡಿಲ್ಲ. ಅವರಿಗೂ ಇದು ಮಾದರಿ. 
icon

(4 / 7)

ಸರ್ಕಾರ ಮತ್ತು ಸಮಾಜ ಇಂಥ ನಿಸ್ವಾರ್ಥ ಸೇವೆಯ ಅಧಿಕಾರಿಗಳನ್ನು ಪುರಸ್ಕರಿಸಿ ಇನ್ನೂ ಹೆಚ್ಚಿನ ಸೇವೆಗೆ ಅನುವು ಮಾಡಿಕೊಡುವದಾಗಬೇಕು. ಬಾಗಲಕೋಟೆ ಪ್ರವಾಸದಲ್ಲಿ ಅವಶ್ಯಕವಾಗಿ ನೋಡಲೇಬೇಕಾದ ಸ್ಥಳ ಎನ್ನುವುದು ಅರಣ್ಯ ಇಲಾಖೆಯ ಬಾಗಲಕೋಟೆ ಅಧಿಕಾರಿಗಳು ನೀಡುವ ಮಾಹಿತಿ.
icon

(5 / 7)

ಭರತ್‌ ತಳವಾರ್‌ ಅವರಿಗೆ ಎಳವೆಯಿಂದಲೂ ಹಸಿರಿನ ಬಗ್ಗೆ ಪ್ರೀತಿ. ಪೊಲೀಸ್‌ ಇಲಾಖೆ ಸೇರಿದ ಮೇಲೆ ನಾನಾ ಕಡೆ ಕೆಲಸ ಮಾಡಿದಲ್ಲಿ ಇಂತಹ ವಾತಾವರಣ ಸೃಷ್ಟಿಸಿದ್ದಾರೆ. ಆದರೆ ಬಾಗಲಕೋಟೆಯಲ್ಲಿ ವಿಶಾಲ ಜಾಗ ಇದ್ದುದರಿಂದ ಅದನ್ನು ಮಿನಿ ಅರಣ್ಯವಾಗಿಯೇ ಪರಿವರ್ತಿಸಿ ಭಾರೀ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ತಾವು ಬೆಳೆಸಿದ ಗಿಡಗಳ ಎದುರು ಫೋಟೋ ತೆಗೆಸಿಕೊಂಡ ಭರತ್‌. 
icon

(6 / 7)

ಅರಣ್ಯ ಇಲಾಖೆ, ಪೊಲೀಸ್‌ ಇಲಾಖೆಯವರು ಮಾತ್ರವಲ್ಲದೇ ಬಾಗಲಕೋಟೆಗೆ ಬಂದವರು ಕೂಡ ಈ ಮಿನಿ ಅರಣ್ಯ ವೀಕ್ಷಣೆಗೆ ಆಗಮಿಸುತ್ತಾರೆ. ಬಾಗಲಕೋಟೆ ಎಸಿಎಫ್‌ ಸಂಗಮೇಶ್‌ ಪ್ರಭಾಕರ್‌ ಅವರೂ ಭರತ್‌ ಶ್ರಮ, ಸಾಕಾರಗೊಳಿಸಿದ ರೀತಿಗೆ ಮೆಚ್ಚುಗೆಯನ್ನು ಸೂಚಿಸಿದ್ದಾರೆ. 
icon

(7 / 7)

IPL_Entry_Point

ಇತರ ಗ್ಯಾಲರಿಗಳು