Holi 2024: ಬಾಗಲಕೋಟೆ ಹೋಳಿ; ಹಲಗೆ ಸದ್ದು, ಬಣ್ಣದ ಬಂಡಿ ಸಂಭ್ರಮ Photos
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Holi 2024: ಬಾಗಲಕೋಟೆ ಹೋಳಿ; ಹಲಗೆ ಸದ್ದು, ಬಣ್ಣದ ಬಂಡಿ ಸಂಭ್ರಮ Photos

Holi 2024: ಬಾಗಲಕೋಟೆ ಹೋಳಿ; ಹಲಗೆ ಸದ್ದು, ಬಣ್ಣದ ಬಂಡಿ ಸಂಭ್ರಮ Photos

  • ಉತ್ತರ ಕರ್ನಾಟಕದ ಮುಳುಗಡೆ ನಗರಿ ಬಾಗಲಕೋಟೆ ಎಂದರೆ ಹೋಳಿಗೆ ಪ್ರಸಿದ್ದಿ. ಇಪ್ಪತ್ತು ದಿನ ಮುಂಚೆಯೇ ಇಲ್ಲಿ ಹಲಗಿ ಸದ್ದು ಕಿವಿಗೆ ಬಿದ್ದರೇ ಅದೇನೋ ಸಡಗರ. ಹೋಳಿ ಬಂತು ಎನ್ನುವ ಖುಷಿ. ಬಣ್ಣದ ಬಂಡಿ ಕಟ್ಟಿ ರಂಗಿನ ಹಬ್ಬವನ್ನು ಆಡುವ ಪರಿಯನ್ನು ಒಮ್ಮೆ ಅನುಭವಿಸಲೇಬೇಕು. ಬಾಗಲಕೋಟೆಯ ಬಣ್ಣದ ಹಬ್ಬಗಳ ಬಣ್ಣ ಬಣ್ಣದ ಚಿತ್ರ ನೋಟ ಇಲ್ಲಿದೆ. 

ಉತ್ತರ ಕರ್ನಾಟಕದ ಬಾಗಲಕೋಟೆ ದೇಶದಲ್ಲೇ ಹೋಳಿ ಹಬ್ಬವನ್ನು ಆಚರಿಸುತ್ತದೆ,.ಮನೆಯೊಳಗೆ ಇದ್ದ ಹಲಗೆ ಹೊರಗೆ ತೆಗೆದರೆ ಹೋಳಿ ಬಂದಿದೆ ಎಂದೇ ಅರ್ಥ.
icon

(1 / 8)

ಪ್ರತಿ ಸಂಘದವರೂ ತಮ್ಮ ಹಲಗೆಗಳನ್ನು ತೆಗೆದು ಬೀದಿಗಳಲ್ಲಿ ಬಾರಿಸುತ್ತಾ ಖುಷಿ ಪಡುತ್ತಾರೆ. ಅದೂ ತಂಡೋಪತಂಡವಾಗಿ ಹೋಗುವುದು ವಿಶೇಷ.
icon

(2 / 8)

ಹಲಗೆಗಿಗೆ ಮಕ್ಕಳೂ ಪೂಜೆ ಸಲ್ಲಿಸಿ ಸಡಗರಕ್ಕೆ ಚಾಲನೆ ಕೊಡುತ್ತಾರೆ. ಇದು ಬರೋಬ್ಬರಿ ಇಪ್ಪತ್ತು ದಿನ ಇರುತ್ತದೆ. ಆ ಖುಷಿ ವರ್ಷವಿಡೀ ನೆನಪಿನಲ್ಲಿ ಉಳಿಯುತ್ತದೆ. 
icon

(3 / 8)

ಮಕ್ಕಳು, ಯುವಕರು, ಹಿರಿಯರು ಎನ್ನದೇ ಎಲ್ಲರೂ ಹಲಗಿ ಹೊಡೆದು ಹೋಳಿ ಹಬ್ಬವನ್ನು ಅಕ್ಷರಶಃ ಅನುಭವಿಸುತ್ತಾರೆ ಬಾಗಲಕೋಟೆಯಲ್ಲಿ.
icon

(4 / 8)

ಬಾಗಲಕೋಟೆ ಮಾಧವ ಸೇವಾ ಕೇಂದ್ರದವರು ಈ ಬಾರಿಯೂ ಹೋಳಿ ಅಂಗವಾಗಿ ಹಲಗೆ ಮೇಳವನ್ನು ಆಯೋಜಿಸಿದ್ದರು. ನೂರಕ್ಕೂ ಹೆಚ್ಚು ತಂಡಗಳು ಹಲಗೆ ಬಾರಿಸಿ ಖುಷಿಪಟ್ಟವು.
icon

(5 / 8)

ಹಲಗೆ ಜತೆಗೆ ಬಣ್ಣದ ಬಂಡಿ ಕಟ್ಟಿಕೊಂಡು ಸ್ನೇಹಿತರನ್ನು ಹುಡುಕಿಕೊಂಡು ಹೋಗಿ ಬಣ್ಣ ಹಾಕುವುದು ಇಲ್ಲಿಯ ವಿಶೇಷ. ಸ್ನೇಹಿತರ ಬಾಂಧವ್ಯವನ್ನು ಅದು ಸಾರುತ್ತದೆ. 
icon

(6 / 8)

ಮನೆ. ಕಚೇರಿಗಳಲ್ಲೂ ಬಣ್ಣವನ್ನು ಎರಚಿ ಹೋಳಿಯನ್ನು ಭರ್ಜರಿಯಾಗಿಯೇ ಆಚರಿಸುವುದು ಬಾಗಲಕೋಟೆ ವಿಶೇಷ.
icon

(7 / 8)

ಬಾಗಲಕೋಟೆಯಲ್ಲಿ ಹಲಗೆ ಬಾರಿಸುತ್ತಲೇ ಬಣ್ಣ ಎರಚಿ ಎಲ್ಲರನ್ನೂ ಒಳಗೊಳ್ಳುವುದು ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಇದೊಂದು ಸೌಹಾರ್ದತೆಯ ಹಬ್ಬವೂ ಹೌದು.
icon

(8 / 8)

ಇತರ ಗ್ಯಾಲರಿಗಳು