Bagalkot News: ಮಲಪ್ರಭಾ ನದಿಗೆ ನೀರು, ಬಾಗಲಕೋಟೆ ಜಿಲ್ಲೆ ಜನರಿಗೆ ಯುಗಾದಿ ಖುಷಿ photos
- Summer ಬೇಸಿಗೆಯಿಂದ ಬಳಲಿದ್ದ ಬಾಗಲಕೋಟೆ ಜನರಿಗೆ ತಂಪೆರೆಯುವಂತೆ ಹಿಡಕಲ್ ಜಲಾಶಯದ ಮೂಲಕ ಮಲಪ್ರಭಾ ನದಿಗೆ ನೀರು ಹರಿಸಲಾಗಿದೆ. ಇದರ ಚಿತ್ರ ನೋಟ ಇಲ್ಲಿದೆ.
- Summer ಬೇಸಿಗೆಯಿಂದ ಬಳಲಿದ್ದ ಬಾಗಲಕೋಟೆ ಜನರಿಗೆ ತಂಪೆರೆಯುವಂತೆ ಹಿಡಕಲ್ ಜಲಾಶಯದ ಮೂಲಕ ಮಲಪ್ರಭಾ ನದಿಗೆ ನೀರು ಹರಿಸಲಾಗಿದೆ. ಇದರ ಚಿತ್ರ ನೋಟ ಇಲ್ಲಿದೆ.
(1 / 6)
ಬೆಳಗಾವಿ ಜಿಲ್ಲೆಯ ಹಿಡಕಲ್ ಜಲಾಶಯದಿಂದ ಬಾಗಲಕೋಟೆ ಜಿಲ್ಲೆಗೆ ಮಲಪ್ರಭಾ ನದಿ ಮೂಲಕ 2.20 ಟಿಎಂಸಿ ನೀರನ್ನು ಹರಿ ಬಿಡಲಾಗಿದೆ.
(2 / 6)
ಒಣಗಿ ಹೋಗಿದ್ದ ಮಲಪ್ರಭಾ ನದಿಗೆ ನೀರು ಹರಿಸಿರುವುದರಿಂದ ಬಾಗಲಕೋಟೆ ಜಿಲ್ಲೆಯ ಹಲವು ಭಾಗಗಳಿಗೆ ನೀರಿನ ಸಮಸ್ಯೆ ಸದ್ಯದ ಮಟ್ಟಿಗೆ ನೀಗಲಿದೆ.
(3 / 6)
ಜನರಿಗೆ ಕುಡಿಯುವ ನೀರಿನ ಜತೆಗೆ ಜಾನುವಾರುಗಳಿಗೂ ಸಹಾಯಕವಾಗಲೆಂದು ನೀರನ್ನು ಹರಿಸಲಾಗಿದೆ. ಇದರಿಂದ ಮುಧೋಳ, ರಬಕವಿ ಬನಹಟ್ಟಿ, ಬೀಳಗಿ ಹಾಗೂ ಬಾಗಲಕೋಟೆ ತಾಲ್ಲೂಕಿನ ಜನರಿಗೆ ನೀರು ಸಿಗಲಿದೆ.
(4 / 6)
ಮಲಪ್ರಭಾ ನದಿ ಮೂಲಕ ನೀರು ಹರಿ ಬಿಟ್ಟಿರುವುದರಿಂದ ಮುಧೋಳ ತಾಲ್ಲೂಕಿನ ಅವರಾದಿ ಬ್ಯಾರೇಜ್ ಬಳಿ ಮಳೆಗಾಲದ ವಾತಾವರಣವೇ ಕಂಡು ಬಂದಿತು.
(5 / 6)
ಮಲಪ್ರಭಾ ನದಿಗೆ ನೀರು ಹರಿದು ಬಂದಿದ್ದರಿಂದ ಜನ ರಬಕವಿ ಬನಹಟ್ಟಿ ಭಾಗದಲ್ಲಿ ಖುಷಿಯಿಂದಲೇ ಈಜಿ ಬಿಸಿಲ ಬೇಗೆ ತೀರಿಸಿಕೊಂಡರು.
ಇತರ ಗ್ಯಾಲರಿಗಳು