Bagalkot Holi 2025: ಬಾಗಲಕೋಟೆಯಲ್ಲಿ ಹೋಳಿ ಹಬ್ಬದ ಜೋಶ್ ಶುರುವಾಯ್ತು, ಕಾಮದಹನ ಆರಂಭ: ನಾಳೆ ರೈನ್ ಡ್ಯಾನ್ಸ್, ಬಣ್ಣದ ಓಕಳಿ
- Bagalkot Holi 2025: ಬಾಗಲಕೋಟೆ ಜಿಲ್ಲೆ ಹೋಳಿಗೆ ಜನಪ್ರಿಯ. ಇಲ್ಲಿ ಆರು ದಿನಗಳ ಕಾಲ ಹೋಳಿ ಹಬ್ಬವನ್ನು ಆಚರಿಸಲಾಗುತ್ತದೆ. ಈಗ ಕಾಮದಹನದೊಂದಿಗೆ ಹೋಳಿ ಹಬ್ಬದ ಈ ವರ್ಷದ ಸಂಭ್ರಮ ಶುರುವಾಗಿದೆ.
- Bagalkot Holi 2025: ಬಾಗಲಕೋಟೆ ಜಿಲ್ಲೆ ಹೋಳಿಗೆ ಜನಪ್ರಿಯ. ಇಲ್ಲಿ ಆರು ದಿನಗಳ ಕಾಲ ಹೋಳಿ ಹಬ್ಬವನ್ನು ಆಚರಿಸಲಾಗುತ್ತದೆ. ಈಗ ಕಾಮದಹನದೊಂದಿಗೆ ಹೋಳಿ ಹಬ್ಬದ ಈ ವರ್ಷದ ಸಂಭ್ರಮ ಶುರುವಾಗಿದೆ.
(1 / 11)
ಬಾಗಲಕೋಟೆ ಬರೀ ಬಿಸಿಲಿನಿಂದ ಗುರುತಿಸಿಕೊಂಡಿಲ್ಲ. ಇಲ್ಲಿನ ಹೋಳಿ ಹಬ್ಬಕ್ಕೆ ತನ್ನದೇ ಆದ ಇತಿಹಾಸ, ವೈವಿಧ್ಯತೆ ಹಾಗೂ ಸಂತಸದ ಮುಖವಿದೆ. ಈಗಾಗಲೇ ಬಾಗಲಕೋಟೆಯಲ್ಲಿ ಈ ವರ್ಷದ ಹೋಳಿ ಸಡಗರಕ್ಕೆ ಚಾಲನೆ ಸಿಕ್ಕಿದೆ.
(2 / 11)
ಹೋಳಿ ಹಬ್ಬಕ್ಕೆ ಚಾಲನೆ ಸಿಗುವುದು ಕಾಮದಹನದಿಂದ. ಬಾಗಲಕೋಟೆಯ ಹಳೆ ಪ್ರದೇಶವಾದ ಖಿಲ್ಲಾ ಬಡಾವಣೆಯಲ್ಲಿ ರಾತ್ರಿಯಿಂದಲೇ ಕಾಮಣ್ಣನನ್ನು ಸಿದ್ದಪಡಿಸಲಾಗುತ್ತದೆ.
(5 / 11)
ಇದಕ್ಕೆ ಆಳೆದತ್ತರದಲ್ಲಿ ಮರ, ತೆಂಗಿನ ಗರಿ, ಏಣಿ ಸಹಿತ ಮರದ ವಸ್ತುಗಳನ್ನು ಹಾಕಲಾಗುತ್ತದೆ, ಮೇಲ್ಭಾಗದಲ್ಲಿ ಮರದ ಕಾಮಣ್ಣನನ್ನು ಕೂರಿಸಲಾಗುತ್ತದೆ.
(7 / 11)
ಕಾಮಣ್ಣನಿಗೆ ಬೆಂಕಿ ಕೊಟ್ಟ ನಂತರ ಅಲ್ಲಿದ್ದವರು ಬಾಯಿ ಬಡಿದುಕೊಂಡು ಕಾಮದಹನ ಆಯಿತು. ಇನ್ನೇನಿದ್ದರೂ ಹೋಳಿ ಹಬ್ಬ ಶುರು ಎಂದು ಸಂಭ್ರಮಿಸುತ್ತಾರೆ, ಮನೆಗಳಲ್ಲೂ ಪೂಜೆಗಳಾಗಿ ಮೂರ್ನಾಲ್ಕು ದಿನ ಹೋಳಿ ಸಡಗರ ಮುಂದುವರಿಯಲಿದೆ.
(8 / 11)
ಹೋಳಿ ಹಬ್ಬದ ಅಂಗವಾಗಿ ಹಲಗಿ ಹೊಡೆತ ಸಹಿತ ವಿಭಿನ್ನ ವಾದನಗಳ ಸಂಗಮ ಖುಷಿ ನೀಡುತ್ತದೆ. ಜತೆಗೆ ಗಣ್ಯರಿಗೆ ಸನ್ಮಾನದಂತಹ ಕಾರ್ಯಕ್ರಮಗಳು ಬಾಗಲಕೋಟೆ ಹೋಳಿ ವಿಶೇಷ
(9 / 11)
ಬಾಗಲಕೋಟೆಯ ಬಸವೇಶ್ವರ ವೃತ್ತದಲ್ಲಿನ ರೈನ್ ಡ್ಯಾನ್ಸ್ ಹೋಳಿ ಹಬ್ಬದ ಮೆರಗು. ಇದಕ್ಕಾಗಿ ನೂರಾರು ಯುವಕ, ಯುವತಿಯರು ಇಲ್ಲಿ ಸೇರುತ್ತಾರೆ. ಈ ಬಾರಿ ಶುಕ್ರವಾರ ರೈನ್ ಡ್ಯಾನ್ಸ್ ಇದೆ.
(10 / 11)
ಬಾಗಲಕೋಟೆ ನಗರದ ವಿವಿಧ ಭಾಗಗಳಲ್ಲಿ ಬಣ್ಣದ ಬಂಡಿಗಳು ಹೊರಡುತ್ತವೆ. ಬಣ್ಣ ಉಗ್ಗುವ, ಅದಕ್ಕೆ ದೇಹ ಒಡ್ಡಿ ಖುಷಿ ಪಡುವ ಕ್ಷಣಗಳು ಅಪರೂಪ.
ಇತರ ಗ್ಯಾಲರಿಗಳು