ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Rama Navami 2024: ಕರ್ನಾಟಕದ ಹಲವೆಡೆ ರಾಮಜಪ, ಧರ್ಮಸಭೆ, ಪಾನಕ, ಮಜ್ಜಿಗೆ ಸೇವೆ Photos

Rama Navami 2024: ಕರ್ನಾಟಕದ ಹಲವೆಡೆ ರಾಮಜಪ, ಧರ್ಮಸಭೆ, ಪಾನಕ, ಮಜ್ಜಿಗೆ ಸೇವೆ Photos

  • ರಾಮನವಮಿ ಅಂಗವಾಗಿ ಕರ್ನಾಟಕದ ಹಲವು ಕಡೆ ಚಟುವಟಿಗಳು ಬುಧವಾರ ಜರುಗಿದವು. ಕಾರ್ಯಕ್ರಮದ ಚಿತ್ರನೋಟ ಇಲ್ಲಿದೆ. 

ರಾಮನವಮಿ ಪ್ರಯುಕ್ತ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕು ಹನಿಯೂರು ಶ್ರಿ ಗವಿರಂಗಸ್ವಾಮಿಗೆ  ಬೆಣ್ಣೆ ಅಲಂಕಾರ ಮಾಡಲಾಗಿತ್ತು.
icon

(1 / 7)

ಶ್ರೀ ರಾಮನವಮಿ ಹಿನ್ನೆಲೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಪತ್ನಿ ಉಷಾ ಅವರು ಬೆಂಗಳೂರಿನ ನಾಗರಭಾವಿ, ಜೆ.ಪಿ.ನಾರಾಯಣ ಪಾರ್ಕ್ ಹಾಗೂ ಯಶವಂತಪುರ ಬಡಾವಣೆಯ ವಿವಿಧ ದೇವಾಲಯಗಳಿಗೆ ಭೇಟಿ ನೀಡಿ, ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದರು. 
icon

(2 / 7)

ರಾಮನವಮಿ ಹಿನ್ನೆಲೆಯಲ್ಲಿ ಬಳ್ಳಾರಿಯ ವಿವಿಧ ದೇಗುಲಗಳಿಗೆ ಸ್ಥಳೀಯ ಶಾಸಕ ನಾರಾ ಭರತ್‌ ರೆಡ್ಡಿ ಭೇಟಿ ನೀಡಿ ದರ್ಶನ ಪಡೆದು ಪೂಜೆ ಸಲ್ಲಿಸಿದರು.
icon

(3 / 7)

ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಸುಕ್ಷೇತ್ರ ಹಾರಕೂಡ ಗ್ರಾಮದಲ್ಲಿ ರಾಮನವಮಿ ನಿಮಿತ್ಯ ಜರುಗಿದ ಧರ್ಮಸಭೆಯನ್ನು ಹಾರಕೂಡ ಸಂಸ್ಥಾನ ಹಿರೇಮಠದ ಪೀಠಾಧಿಪತಿಗಳಾದ ಡಾ. ಚನ್ನವೀರ ಶಿವಾಚಾರ್ಯರು ಉದ್ಘಾಟಿಸಿ ಮಾತನಾಡಿದರು. ಶ್ರೀ ರಾಮಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷರು, ಸದಸ್ಯರು ಸೇರಿದಂತೆ ಗ್ರಾಮದ ಸಹಸ್ರಾರು ಭಕ್ತರು ಉಪಸ್ಥಿತರಿದ್ದರು. 
icon

(4 / 7)

 ಶ್ರೀ ರಾಮನವಮಿ ಪ್ರಯುಕ್ತ ಬೆಂಗಳೂರಿನ ನಮ್ಮಚಾಲಕರ ಟ್ರೇಡ್‌ ಯೂನಿಯನ್ ಸಂಘಟನೆ  ಮುಖ್ಯ  ಕಛೇರಿಯಲ್ಲಿ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು, ಸಾವಿರಾರು ಸಾರ್ವಜನಿಕರಿಗೆ ಪಾನಕ ಮಜ್ಜಿಗೆ  ಕೊಸಂಬರಿ ಪ್ರಸಾದ ವಿತರಣೆ ಮಾಡಲಾಯಿತು 
icon

(5 / 7)

ರಾಮನವಮಿ ಹಬ್ಬದ ಪ್ರಯುಕ್ತ ಮೈಸೂರಿನ  ವೀರಾಂಜನೇಯ ಭಕ್ತ ಮಂಡಳಿ ವತಿಯಿಂದ ಸದ್ವಿದ್ಯಾ ವೃತ್ತದಲ್ಲಿರುವ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಮತ್ತು ಸಾರ್ವಜನಿಕರಿಗೆ ಪಾನಕ ಮತ್ತು ಮಜ್ಜಿಗೆಯನ್ನು ವಿತರಿಸಲಾಯಿತು. ಮೈಸೂರು ವಿಭಾಗದ ಬಿಜೆಪಿ ಪ್ರಭಾರಿಗಳಾದ ಮೈ.ವಿ. ರವಿಶಂಕರ್, ನಗರ ಬಿಜೆಪಿ ಉಪಾಧ್ಯಕ್ಷ ಕೆ.ಸೋಮಶೇಖರ್ ರಾಜು, ಮಾಜಿ ನಗರ ಪಾಲಿಕೆ ಸದಸ್ಯ ಚಿಕ್ಕವೆಂಕಟು, ಬಿಜೆಪಿ ಮುಖಂಡ ಆರ್ .ಪರಮೇಶ, ವಾರ್ಡ್ ಅಧ್ಯಕ್ಷ ಸುರೇಂದ್ರ, ಮುಖಂಡರುಗಳಾದ ಪ್ರಮೋದ್, ಶ್ರವಣ್, ದೀಪಕ್ ಗೌಡ, ಕಿರಣ್, ಲಕ್ಷ್ಮೀ, ಮುರುಗೇಶ್, ರವೀಂದ್ರ, ರಾಮು, ಆನಂದ ಮುಂತಾದವರು ಭಾಗವಹಿಸಿದ್ದರು.
icon

(6 / 7)

ಕೊಡಗು ಜಿಲ್ಲೆ ಕುಶಾಲನಗರದ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ರಾಮನವಮಿ ನಿಮಿತ್ತ ವಿಶೇಷ ಪೂಜೆ ನಡೆಯಿತು.
icon

(7 / 7)

ಕೊಡಗು ಜಿಲ್ಲೆ ಕುಶಾಲನಗರದ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ರಾಮನವಮಿ ನಿಮಿತ್ತ ವಿಶೇಷ ಪೂಜೆ ನಡೆಯಿತು.

IPL_Entry_Point

ಇತರ ಗ್ಯಾಲರಿಗಳು