ಬೆಂಗಳೂರಲ್ಲಿ ಎರಡು ಗಂಟೆಗೂ ಅಧಿಕ ಕಾಲ ಸುರಿದ ಭಾರೀ ಮಳೆಗೆ ರಸ್ತೆಗಳೇ ಆದವು ಚರಂಡಿ: ರಾತ್ರಿ ಸಂಚಾರ ಹರಸಾಹಸ
ಬೆಂಗಳೂರಿನಲ್ಲಿ ಮಂಗಳವಾರ ಮಧ್ಯಾಹ್ನದಿಂದಲೇ ಶುರುವಾಗಿ ರಾತ್ರಿ ವೇಳೆ ಸುರಿದ ಭಾರೀ ಮಳೆಯಿಂದ ನೀರು ರಸ್ತೆಯಲ್ಲಿಯೇ ಹರಿದು ಸಂಚಾರಕ್ಕೆ ಅಡಚಣೆಯಾಯಿತು. ಇದರ ಚಿತ್ರನೋಟ ಇಲ್ಲಿದೆ.
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
(1 / 7)
ಬೆಂಗಳೂರಿನ ಎಚ್‌ಬಿಆರ್ ಬಡಾವಣೆಯಲ್ಲಿ ಸುರಿದ ಭಾರೀ ಮಳೆಯಿಂದ ದ್ವೀಪದ ವಾತಾವರಣ ನಿರ್ಮಾಣವಾಗಿತ್ತು. ನೀರು ಹರಿಯಲು ಸರಿಯಾದ ಚರಂಡಿ ವ್ಯವಸ್ಥೆಯಿಲ್ಲದೇ ರಸ್ತೆಯಲ್ಲಿಯೇ ನೀರು ನಿಂತಿದ್ದರಿಂದ ವಾಹನ ಸವಾರರು ಪರದಾಡಬೇಕಾಯಿತು,
(vikram mailar vijay)(2 / 7)
ಬೆಂಗಳೂರಿನ ಬಿಳೇಕಹಳ್ಳಿ ಬಳಿ ಭಾರೀ ಮಳೆಯಿಂದ ಮಳೆ ನೀರು ರಸ್ತೆಯಲ್ಲಿಯೇ ಹರಿದು ವಾಹನ ಸವಾರರು ಅದರಲ್ಲಿಯೇ ಪ್ರಯಾಸ ಪಟ್ಟುಕೊಂಡು ಮುಂದೆ ಹೋದಬೇಕಾಯಿತು.
(3 / 7)
ಬೆಂಗಳೂರಿನ ಬನ್ನೇರಘಟ್ಟ ರಸ್ತೆಯ ಹಲವು ಭಾಗದಲ್ಲಿ ರಸ್ತೆ ತುಂಬಾ ನೀರೋ ನೀರು. ಮಳೆಯಿಂದ ಸವಾರರು ಹರಸಾಹಸ ಪಟ್ಟುಕೊಂಡೇ ಮುಂದೆ ಹೋದರು.
(4 / 7)
ಬೆಂಗಳೂರಿಕನ ಇಂದಿರಾನಗರದಲ್ಲೂ ಭಾರೀ ಮಳೆಯಿಂದ ಮುಖ್ಯ ರಸ್ತೆಯಲ್ಲೇ ಮರದ ಕೊಂಬೆ ಉರುಳಿ ಬಿದ್ದು ಅನಾಹುತ ತಪ್ಪಿತು.
(5 / 7)
ಬೆಂಗಳೂರಿನ ಹಲವಾರು ಬಡಾವಣೆಗಳಲ್ಲಿ ಮಳೆ ನೀರು ರಸ್ತೆಯಲ್ಲಿಯೇ ಸಂಚರಿಸಿದ ಪರಿಣಾಮವಾಗಿ ಬಿಬಿಎಂಪಿಯವರು ಅಲ್ಲಲ್ಲಿ ನೀರು ಸುಗಮ ಸಂಚಾರಕ್ಕೆ ಮುಂದಾದರು,
(6 / 7)
ಬೆಂಗಳೂರಿನ ಹಲವು ಬಡಾವಣೆಗಳಲ್ಲಿ ಬೃಹತ್ ಗಾತ್ರದ ಮರಗಳು ನೆಲಕ್ಕುರುಳಿವೆ. ಕೆಲವು ಕಡೆ ಕಾರಿನ ಮೇಲೆ ಬಿದ್ದು ಕಾರುಗಳು ಜಖಂಗೊಂಡಿವೆ.
ಇತರ ಗ್ಯಾಲರಿಗಳು