ಬೆಂಗಳೂರಿನಲ್ಲಿ ಭಾರೀ ಮಳೆ,ನಿರಂತರ ಸುರಿದ ಮಳೆಗೆ ಹೊಳೆಯಂತಾದ ರಸ್ತೆಗಳು; ಮನೆಗೂ ನೀರು ನುಗ್ಗಿ ಅನಾಹುತ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಬೆಂಗಳೂರಿನಲ್ಲಿ ಭಾರೀ ಮಳೆ,ನಿರಂತರ ಸುರಿದ ಮಳೆಗೆ ಹೊಳೆಯಂತಾದ ರಸ್ತೆಗಳು; ಮನೆಗೂ ನೀರು ನುಗ್ಗಿ ಅನಾಹುತ

ಬೆಂಗಳೂರಿನಲ್ಲಿ ಭಾರೀ ಮಳೆ,ನಿರಂತರ ಸುರಿದ ಮಳೆಗೆ ಹೊಳೆಯಂತಾದ ರಸ್ತೆಗಳು; ಮನೆಗೂ ನೀರು ನುಗ್ಗಿ ಅನಾಹುತ

ಬೆಂಗಳೂರಿನಲ್ಲಿ ಶನಿವಾರ ಸಂಜೆ ಭಾರೀ ಮಳೆ. ಎರಡು ಗಂಟೆಗೂ ಹೆಚ್ಚು ಕಾಲ ಮಳೆ ಸುರಿದ ಪರಿಣಾಮವಾಗಿ ಬೆಂಗಳೂರಿನ ಹಲವು ಭಾಗದಲ್ಲಿ ತೊಂದರೆಯಾಯಿತು. ಹೇಗಿತ್ತು ಬೆಂಗಳೂರು ಮಳೆಯ ನೋಟ. ಇಲ್ಲಿವೆ ಚಿತ್ರಗಳು.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರಿನಲ್ಲಿ ಶನಿವಾರ ಸಂಜೆ ಎಡಬಿಡದೇ ಸುರಿದ ಭಾರೀ ಮಳೆಯಿಂದಾಗಿ ಬಿಳೇಕಹಳ್ಳಿ ರಸ್ತೆಯೇ ಹೊಳೆಯ ರೂಪ ಪಡೆದಿತ್ತು. ವಾಹನ ಸವಾರರು ಮಳೆ ನೀರಿನಲ್ಲೇ ಸಂಚರಿಸುವಂತಾಯಿತು,
icon

(1 / 10)

ಬೆಂಗಳೂರಿನ ವರ್ತೂರು ಬಳಿಯೂ ಭಾರೀ ಮಳೆ ಸುರಿದು ರಸ್ತೆ ಸಂಚಾರ ನಿಧಾನವಾಯಿತು.
icon

(2 / 10)

ಬೆಂಗಳೂರಿನ ವರ್ತೂರು ಬಳಿಯೂ ಭಾರೀ ಮಳೆ ಸುರಿದು ರಸ್ತೆ ಸಂಚಾರ ನಿಧಾನವಾಯಿತು.

ಕೆಲವು ಬಡಾವಣೆಗಳ ಮುಖ್ಯ ರಸ್ತೆಯಲ್ಲಂತೂ ಮಳೆ ನೀರು ಚರಂಡಿಯ ಬದಲು ರಸ್ತೆಯಲ್ಲಿಯೇ ಹರಿಯುತ್ತಿದುದ್ದು ಕಂಡು ಬಂದಿತು.
icon

(3 / 10)

ಬೆಂಗಳೂರಿನಲ್ಲಿ ಸಂಜೆ ಕೆಲಸ ಮುಗಿಸಿ ಮನೆಗೆ ಹೋಗುವವರು ಮಳೆಯಿಂದ ತೊಂದರೆ ಅನುಭವಿಸಿದರು. ಸಂಚಾರ ದಟ್ಟಣೆ ಎಲ್ಲ ಕಡೆಯೂ ಇತ್ತು.
icon

(4 / 10)

ಬೆಂಗಳೂರಿನಲ್ಲಿ ಮಳೆ ಸುರಿದಿದ್ದರಂದ ಕೆಲವು ಕಡೆ ಬಸ್‌ಗಳು ಕೆಟ್ಟು ಸಂಚಾರಕ್ಕೆ ಅಡಚಣೆಯಾಯಿತು.ಸಂಚಾರ ಪೊಲೀಸರು ವಾಹನ ತೆರವಿಗೆ ಕ್ರಮ ವಹಿಸಿದರು.
icon

(5 / 10)

ಬೆಂಗಳೂರು ನಗರದ ಹಲವು ಭಾಗಗಳಲ್ಲಿ ರಸ್ತೆಯಲ್ಲಿ ನೀರು ನಿಂತು ಸಂಚಾರಕ್ಕೆ ಅಡಣೆಯಾಗಿದ್ದರಿಂದ ಬಿಬಿಎಂಪಿ ಸಿಬ್ಬಂದಿ ಸಹಜ ನೀರು ಹರಿಯಲು ತುರ್ತು ಕ್ರಮ ಕೈಗೊಂಡರು.
icon

(6 / 10)

ಬೆಂಗಳೂರು ಮಳೆಯಿಂದ ನೀರು ಸರಾಗವಾಗಿ ಹರಿಯದೇ ರಸ್ತೆಯಲ್ಲಿ ನಿಂತು ಹಲವು ಮನೆಗಳಿಗೆ ನುಗ್ಗಿ ಅಡಚಣೆಯೂ ಆಯಿತು. ಆಗ ಬಿಬಿಎಂಪಿ ಸಿಬ್ಬಂದಿಯೇ ಧಾವಿಸಿ ನೀರು ಹರಿಯಲು ವ್ಯವಸ್ಥೆ ಮಾಡಿದರು.
icon

(7 / 10)

ಬೆಂಗಳೂರಿನಲ್ಲಿ ಭಾರೀ ಮಳೆಯಿಂದ ಹಲವು ಭಾಗದಲ್ಲಿ ತೊಂದರೆಯಾಗಿರುವ ಮಾಹಿತಿ ಆಧರಿಸಿ ಬಿಬಿಎಂಪಿ ಆಯುಕ್ತ ಮಹೇಶ್ವರರಾವ್‌, ವಿಶೇಷ ಆಯುಕ್ತ ಅವಿನಾಶ್‌ ಮೆನನ್‌ ಹಾಗೂ ಸಿಬ್ಬಂದಿ ಕಂಟ್ರೋಲ್‌ ಮೂಲಕ ಮಾಹಿತಿ ಪಡೆದರು,
icon

(8 / 10)

ಬೆಂಗಳೂರು ನಗರ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಸುರಿದ ಭಾರೀ ಮಳೆಯಿಂದ ಗ್ರಾಮಾಂತರ ಪ್ರದೇಶದಲ್ಲೂ ತೊರೆ, ನದಿಗಳ ಹರಿವಿನ ಪ್ರಮಾಣದಲ್ಲಿ ಏರಿಕೆ ಕಂಡು ಬಂದಿದೆ.
icon

(9 / 10)

ಬೆಂಗಳೂರಿನಲ್ಲಿ ಸದ್ಯಕ್ಕೆ ಮಳೆ ನಿಲ್ಲುವ ಸ್ಥಿತಿಯಿಲ್ಲ. ಭಾನುವಾರವೂ ಬೆಂಗಳೂರಿನಲ್ಲಿ ಮಳೆಯಾಗುವ ಮುನ್ಸೂಚನೆಯಿದೆ. ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣ ಹಲವು ಕಡೆ ಕಂಡು ಬರುತ್ತಿದೆ.
icon

(10 / 10)

ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.

ಇತರ ಗ್ಯಾಲರಿಗಳು