ಬೆಂಗಳೂರಿಗೆ ಬೇಕಿದೆ ಆಸರೆ: ಕುಡಿಯುವ ನೀರು ಸಮಸ್ಯೆಗೆ 5 ಸಂಭಾವ್ಯ ಪರಿಹಾರಗಳಿವು -Bengaluru Water Solutions
- ಬೆಂಗಳೂರಿನ ಜನರು ಬಿಸಿಲ ಝಳಕ್ಕೆ ಹೈರಾಣವಾಗುತ್ತಿದ್ದಾರೆ. ಇದರ ನಡುವೆ ಕಳೆದೊಂದು ವಾರದಿಂದ ಕುಡಿಯಲು ನೀರನ ಕೊರೆತೆ ಬೇಸರ ತರಿಸಿದೆ. ಕುಡಿಯುವ ನೀರು ಸಮಸ್ಯೆಗೆ 5 ಸಂಭಾವ್ಯ ಪರಿಹಾರಗಳು ಇಲ್ಲಿ ತಿಳಿಯೋಣ.
- ಬೆಂಗಳೂರಿನ ಜನರು ಬಿಸಿಲ ಝಳಕ್ಕೆ ಹೈರಾಣವಾಗುತ್ತಿದ್ದಾರೆ. ಇದರ ನಡುವೆ ಕಳೆದೊಂದು ವಾರದಿಂದ ಕುಡಿಯಲು ನೀರನ ಕೊರೆತೆ ಬೇಸರ ತರಿಸಿದೆ. ಕುಡಿಯುವ ನೀರು ಸಮಸ್ಯೆಗೆ 5 ಸಂಭಾವ್ಯ ಪರಿಹಾರಗಳು ಇಲ್ಲಿ ತಿಳಿಯೋಣ.
(1 / 7)
ಮಳೆಗಾಲದಲ್ಲಿ ಪ್ರವಾಹ ಪರಿಸ್ಥಿತಿ ಎದುರಿಸಿದ್ದ ಉದ್ಯಾನ ನಗರಿ ಬೆಂಗಳೂರು ಬೇಸಿಗೆಯ ಆರಂಭದಲ್ಲೇ ನೀರಿನ ಕೊರತೆಯನ್ನು ಕಾಣುತ್ತಿದೆ. ಕಳೆದ ಹಲವು ದಿನಗಳಿಂದ ವಿವಿಧ ಪ್ರದೇಶಗಳಲ್ಲಿ ಜನರು ಕುಡಿಯುವ ನೀರನ ಇನ್ನಿಲ್ಲದ ಪರದಾಟ ನಡೆಸುತ್ತಿದ್ದಾರೆ.
(2 / 7)
ಮಳೆ ನೀರು ಸಂಗ್ರಹ - ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಚಟುವಟಿಕೆಗಳಿಗೆ ಹನಿ ನೀರಾವರಿ ಪದ್ಧತಿ ಶೇಕಡಾ 90 ರಷ್ಟು ಯಶಸ್ವಿಯಾಗಿದೆ. ಅದೇ ರೀತಿಯಲ್ಲಿ ಬೆಂಗಳೂರು ನಗರದಲ್ಲೂ ಮಳೆಗಾಲದಲ್ಲಿ ಮಳೆ ನೀರು ವ್ಯರ್ಥವಾಗಿ ಹೋಗದಂತೆ ತಡೆಗಟ್ಟಿ ಆ ನೀರನ್ನು ಸಂಗ್ರಹಿಸಿ ಬಳಕೆ ಮಾಡಿಕೊಳ್ಳಬೇಕಿದೆ.
(3 / 7)
ಕೊಳಚೆ ನೀರು ಮರುಬಳಕೆ - ಬೆಂಗಳೂರಿನಲ್ಲಿ ಸಿಂಗಲ್ ಫ್ಯಾಮಿಲಿಯೊಂದು ತಮ್ಮ ಮನೆಯಲ್ಲಿರುವ ಶೌಚಾಲಯವನ್ನು ಫ್ಲಶ್ ಮಾಡಲು ದಿನಕ್ಕೆ ಸಮಾರು 150 ಲೀಟರ್ ನೀರನ್ನ ಬಳಸುತ್ತದೆ. ಈ ನೀರನ್ನು ಮರುಬಳಕೆ ಮಾಡಿ ಮತ್ತೆ ಶೌಚಾಲಯದಲ್ಲಿ ಫ್ಲಶ್ ಮಾಡಲು, ಕೈತೋಟ, ಮನೆಯ ಹೊರಗಡೆ ತೊಳೆಯಲು ಬಳಸಿಕೊಳ್ಳಬಹುದು.
(4 / 7)
ಸಂಸ್ಕರಿಸಿದ ಕೊಳಚೆ ನೀರಿನಿಂದ ಕೆರೆ, ಕುಂಟೆ ತುಂಬಿಸುವುದು - ನಗರದಲ್ಲಿ ಬಿಲ್ಡರ್‌ಗಳು, ಜನಪ್ರತಿನಿಧಿಗಳ ದುರಾಸೆಯಿಂದ ಕೆರೆ, ಕುಂಟೆಗಳ ಜಾಗದಲ್ಲಿ ಬೃಹತ್ ಕಟ್ಟಡಗಳು ನಿಂತಿವೆ. ಒತ್ತುವರಿ ತೆರೆವು ಮಾಡಿ ಸಂಸ್ಕರಿಸಿದ ಕೊಳಚೆ ನೀರಿನಿಂದ ಕೆರೆ, ಕುಂಟೆಗಳನ್ನು ತುಂಬಿಸಬೇಕು.
(5 / 7)
ಗೃಹ ಬಳಕೆಗೆ ಕಡಿಮೆ ನೀರು ಬಳಕೆ - ಮನೆಗಳಲ್ಲಿ ಅನಾವಶ್ಯಕವಾಗಿ ನೀರನ್ನು ಬಳಸುತ್ತಾರೆ. ಕೆಲವರು ಬಟ್ಟೆ ಒಗೆಯಲು ಹತ್ತಾರು ಬಕೇಟ್ ನೀರನ್ನು ಬಳಸುತ್ತಾರೆ. ಬಟ್ಟೆ ಹೊಗೆಯಲು ನೀರು ಬೇಕೇ ಬೇಕು. ಆದರೆ ಅಗತ್ಯಕ್ಕೆ ತಕ್ಕಂತೆ ನೀರು ಬಳಸಬೇಕಿದೆ
(6 / 7)
ಸೊರಿಕೆ ತಡೆಯವುದು - ಪೈಪ್‌ಲೈನ್‌ನಲ್ಲಿ ನೀರು ಸೋರಿಕೆ, ಪೈಪೈ ಹೊಡೆದು ಅಪಾರ ನೀರು ಪೋಲಾಗುವುದು ನೋಡಿದ್ದೇವೆ. ಈ ರೀತಿ ನೀರು ವ್ಯರ್ಥಮಾಡುವುದನ್ನ ತಡೆಯಬೇಕು. ಅದೇ ರೀತಿಯಲ್ಲಿ ಮನೆಗಳಲ್ಲಿನ ಟ್ಯಾಪ್‌ಗಳಲ್ಲೂ ನೀರು ಸೋರಿಕೆಯನ್ನು ತಡೆಯಬೇಕು.
ಇತರ ಗ್ಯಾಲರಿಗಳು